ಎಲೆಕ್ಟ್ರಿಕ್ ಬಸ್ ಅನಾವರಣಗೊಳಿಸಿದ ಫೋರ್ಸ್ ಮೋಟಾರ್ಸ್

ಫೋರ್ಸ್ ಮೋಟಾರ್ಸ್ ತನ್ನ ಟಿ 1ಎನ್ ಎಲೆಕ್ಟ್ರಿಕ್ ಬಸ್ ಅನ್ನು ಅನಾವರಣಗೊಳಿಸಿದೆ. ಇತ್ತೀಚಿಗೆ ಈ ಎಲೆಕ್ಟ್ರಿಕ್ ಬಸ್ ಅನ್ನು ಸ್ಪಾಟ್ ಟೆಸ್ಟ್ ಮಾಡಲಾಗಿತ್ತು. ಫೋರ್ಸ್ ಮೋಟಾರ್ಸ್ ಕಂಪನಿಯು ಟಿ 1ಎನ್ ಎಲೆಕ್ಟ್ರಿಕ್ ಬಸ್ ಅನ್ನು ಕಳೆದ 4 ವರ್ಷಗಳಿಂದ ಅಭಿವೃದ್ಧಿಪಡಿಸುತ್ತಿದೆ.

ಎಲೆಕ್ಟ್ರಿಕ್ ಬಸ್ ಅನಾವರಣಗೊಳಿಸಿದ ಫೋರ್ಸ್ ಮೋಟಾರ್ಸ್

ಫೋರ್ಸ್ ಟಿ 1ಎನ್ ಎಲೆಕ್ಟ್ರಿಕ್ ಬಸ್ ಅನ್ನು ಮೊನೊಕಾಕ್ ಪ್ಲಾಟ್‍‍ಫಾರಂನ ಮೇಲೆ ಅಭಿವೃದ್ಧಿಪಡಿಸಲಾಗಿದೆ. ಈ ಪ್ಲಾಟ್‍‍ಫಾರಂನಲ್ಲಿ ವಾಹನದ ಚಾಸೀಸ್ ಅನ್ನು ಎಕ್ಸ್ ಟಿರಿಯರ್‍‍ಗೆ ಅಳವಡಿಸಲಾಗಿರುತ್ತದೆ. ಮೊನೊಕಾಕ್ ಚಾಸೀಸ್‍‍ಗಳು ಕಡಿಮೆ ತೂಕವನ್ನು ಹೊಂದಿರುತ್ತವೆ. ಇವುಗಳನ್ನು ಚಿಕ್ಕ ರೈಲುಗಳಲ್ಲಿ ಬಳಸಲಾಗುತ್ತದೆ.

ಎಲೆಕ್ಟ್ರಿಕ್ ಬಸ್ ಅನಾವರಣಗೊಳಿಸಿದ ಫೋರ್ಸ್ ಮೋಟಾರ್ಸ್

ಈಗಿರುವ ಹಳೆಯ ಬಸ್ಸುಗಳ ಬದಲಿಗೆ ಈ ಎಲೆಕ್ಟ್ರಿಕ್ ಬಸ್ಸುಗಳು ಬರಲಿವೆ ಎಂದು ಫೋಸ್ ಕಂಪನಿಯು ಹೇಳಿದೆ. ಈ ಎಲೆಕ್ಟ್ರಿಕ್ ಬಸ್ ಅನ್ನು 100 ಪರಿಣಿತ ಎಂಜಿನಿಯರ್‍‍ಗಳ ತಂಡ ಹಾಗೂ ಪ್ರಪಂಚದ ವಿವಿಧ ದೇಶಗಳ ಆಟೋಮೊಬೈಲ್ ಪರಿಣಿತರ ತಂಡವು ಅಭಿವೃದ್ಧಿಪಡಿಸಿದೆ.

ಎಲೆಕ್ಟ್ರಿಕ್ ಬಸ್ ಅನಾವರಣಗೊಳಿಸಿದ ಫೋರ್ಸ್ ಮೋಟಾರ್ಸ್

ಫೋರ್ಸ್ ಟಿ 1ಎನ್ ಕ್ರಾಶ್ ಟೆಸ್ಟ್ ನಲ್ಲಿ ಭಾಗವಹಿಸಿದ ಭಾರತದ ಮೊದಲ ಎಲೆಕ್ಟ್ರಿಕ್ ಪ್ಯಾಸೆಂಜರ್ ಬಸ್ ಆಗಿದೆ. ಫೋರ್ಸ್ ಕಂಪನಿಯು ಈ ಬಸ್ಸಿನ ಇಂಟಿರಿಯರ್ ಅನ್ನು ತೋರಿಸುವ ಅಧಿಕೃತ ಚಿತ್ರಗಳನ್ನು ಬಿಡುಗಡೆಗೊಳಿಸಿಲ್ಲ.

ಎಲೆಕ್ಟ್ರಿಕ್ ಬಸ್ ಅನಾವರಣಗೊಳಿಸಿದ ಫೋರ್ಸ್ ಮೋಟಾರ್ಸ್

ಫೋರ್ಸ್ ಕಂಪನಿಯು ಈ ಬಸ್ಸಿನಲ್ಲಿ ಕಾರುಗಳಲ್ಲಿರುವಂತಹ ಫೀಚರ್‍‍ಗಳನ್ನು ಅಳವಡಿಸುವುದಾಗಿ ತಿಳಿಸಿದೆ. ಈ ಫೀಚರ್‍‍ಗಳಲ್ಲಿ ಏರ್‍‍ಬ್ಯಾಗ್‍‍ಗಳು, ಡ್ರೈವರ್ ಹಾಗೂ ಪ್ಯಾಸೆಂಜರ್‍‍ಗಳಿಗಾಗಿ ಅಡ್ಜಸ್ಟಬಲ್ ಟೆಲಿಸ್ಕೊಪಿಕ್ ಸ್ಟೀಯರಿಂಗ್ ವ್ಹೀಲ್‍‍ಗಳು ಸೇರಿವೆ.

ಎಲೆಕ್ಟ್ರಿಕ್ ಬಸ್ ಅನಾವರಣಗೊಳಿಸಿದ ಫೋರ್ಸ್ ಮೋಟಾರ್ಸ್

ಟಿ 1ಎನ್ ಎಲೆಕ್ಟ್ರಿಕ್ ಬಸ್ ಎ‍‍ಬಿ‍ಎಸ್, ಇ‍‍ಬಿ‍‍ಡಿ, ವೆಂಟಿಲೇಟೆಡ್ ಡಿಸ್ಕ್ ಬ್ರೇಕ್ ಸೇರಿದಂತೆ ವಿವಿಧ ಸುರಕ್ಷತಾ ಫೀಚರ್‍‍ಗಳನ್ನು ಹೊಂದಿದೆ. ಈ ಸೆಗ್‍‍ಮೆಂಟಿನಲ್ಲಿಯೇ ಮೊದಲ ಬಾರಿಗೆ ಈ ಬಸ್ಸಿನಲ್ಲಿ ಟ್ರಾನ್ಸ್ ವರ್ಸ್ ಪ್ಯಾರಾಬೊಲಿಕ್ ಸಸ್ಪೆಂಷನ್‍‍ಗಳನ್ನು ಅಳವಡಿಸಲಾಗಿದೆ.

ಎಲೆಕ್ಟ್ರಿಕ್ ಬಸ್ ಅನಾವರಣಗೊಳಿಸಿದ ಫೋರ್ಸ್ ಮೋಟಾರ್ಸ್

ಫೋರ್ಸ್ ಮೋಟಾರ್ಸ್ ಈ ಪ್ಲಾಟ್‍‍ಫಾರಂ ಅನ್ನು ಡೀಸೆಲ್ - ಪೆಟ್ರೋಲ್ ಎಂಜಿನ್ ಹಾಗೂ ಎಲೆಕ್ಟ್ರಿಕ್ ವಾಹನಗಳಿಗಾಗಿ ಮಾತ್ರ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದೆ. ಫೋರ್ಸ್ ಕಂಪನಿಯು ಈ ಬಸ್ ಅನ್ನು ಬಿ‍ಎಸ್ 6 ಡೀಸೆಲ್ ಎಂಜಿನ್, ಎಲೆಕ್ಟ್ರಿಕ್ ಹಾಗೂ ಸಿ‍ಎನ್‍‍ಜಿ ಮಾದರಿಗಳಲ್ಲಿ ಮಾರಾಟ ಮಾಡಲಿದೆ.

ಎಲೆಕ್ಟ್ರಿಕ್ ಬಸ್ ಅನಾವರಣಗೊಳಿಸಿದ ಫೋರ್ಸ್ ಮೋಟಾರ್ಸ್

ಫೋರ್ಸ್ ಮೋಟಾರ್ಸ್ ಟಿ 1ಎನ್ ಎಲೆಕ್ಟ್ರಿಕ್ ಪ್ಯಾಸೆಂಜರ್ ಬಸ್ ಅನ್ನು ಮುಂದಿನ ತಿಂಗಳು ದೆಹಲಿಯಲ್ಲಿ ನಡೆಯಲಿರುವ 2020ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಿದೆ. ಈ ಎಲೆಕ್ಟ್ರಿಕ್ ಬಸ್ ಬಗೆಗಿನ ಹೆಚ್ಚಿನ ಮಾಹಿತಿಗಳು ಆಟೋ ಎಕ್ಸ್ ಪೋದಲ್ಲಿ ತಿಳಿಯಲಿವೆ.

ಎಲೆಕ್ಟ್ರಿಕ್ ಬಸ್ ಅನಾವರಣಗೊಳಿಸಿದ ಫೋರ್ಸ್ ಮೋಟಾರ್ಸ್

ಫೋರ್ಸ್ ಮೋಟಾರ್ಸ್ ಹೊಸ ತಲೆಮಾರಿನ ಟ್ರಾವೆಲರ್ ಬಸ್ಸುಗಳನ್ನು ಭಾರತದಲ್ಲಿ ಮಾತ್ರವಲ್ಲದೇ ಮಧ್ಯ ಏಷ್ಯಾ, ಆಸಿಯಾನ್, ದಕ್ಷಿಣ ಅಮೇರಿಕಾ ಹಾಗೂ ಆಫ್ರಿಕಾ ದೇಶಗಳಲ್ಲಿ ಮಾರಾಟ ಮಾಡುವ ಯೋಜನೆಯನ್ನು ಹೊಂದಿದೆ.

Most Read Articles

Kannada
English summary
Force Motors unveils T 1N electric bus. Read in Kannada.
Story first published: Thursday, January 23, 2020, 14:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X