Just In
Don't Miss!
- Finance
ಬಜೆಟ್ 2021: ಸ್ಟ್ಯಾಂಡರ್ಡ್ ಡಿಡಕ್ಷನ್ ರು. 1 ಲಕ್ಷಕ್ಕೆ ಹೆಚ್ಚಳ ನಿರೀಕ್ಷೆ
- Sports
ಬೈರ್ಸ್ಟೋವ್ಗೆ 2 ಪಂದ್ಯಗಳ ವಿಶ್ರಾಂತಿ ನೀಡಿರುವುದನ್ನು ಸಮರ್ಥಿಸಿದ ಇಂಗ್ಲೆಂಡ್ ಕೋಚ್
- Education
WCD Chitradurga Recruitment 2021: ಅಂಗನವಾಡಿಯಲ್ಲಿ 129 ಹುದ್ದೆಗಳಿಗೆ ಅರ್ಜಿ ಆಹ್ವಾನ
- News
ಕೊರೊನಾ ಬಂದಿದ್ದು ಚೀನಾದಿಂದ ಅಲ್ಲ... ಶಿವನಿಂದ, ನಾನೇ ಶಿವ!
- Movies
'ಬೆಲ್ ಬಾಟಂ-2' ಟೈಟಲ್ ಪೋಸ್ಟರ್ ಅನಾವರಣ: ಡಿಟೆಕ್ಟಿವ್ ದಿವಾಕರ್ ಈಸ್ ಬ್ಯಾಕ್
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮತ್ತಷ್ಟು ತಡವಾಗಲಿದೆ ಐಕಾನಿಕ್ ಆಫ್-ರೋಡರ್ ಫೋರ್ಡ್ ಬ್ರೊಂಕೊ ಬಿಡುಗಡೆ
ಎರಡು ದಶಕಗಳ ಬಳಿಕ ಅಮೇರಿಕಾ ಮಾರುಕಟ್ಟೆಯಲ್ಲಿ ಹೊಸ ಐಕಾನಿಕ್ ಫೋರ್ಡ್ ಬ್ರೊಂಕೊ ಎಸ್‍ಯುವಿಯನ್ನು ಇತ್ತೀಚೆಗೆ ಅನಾವರಣಗೊಳಿಸಿತ್ತು. ಈ ಹೊಸ ಫೋರ್ಡ್ ಬ್ರೊಂಕೊ ಆಫ್-ರೋಡ್ ಎಸ್‍ಯುವಿಯು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ವರದಿಯಾಗಿತ್ತು.

ಆದರೆ ಕರೋನಾ ಸೋಂಕಿನ ಪರಿಣಾಮದಿಂದ ಎರಡು ತಿಂಗಳ ಕಾಲ ಪೋರ್ಡ್ ತನ್ನ ಕಾರ್ಖಾನೆ ಸ್ಥಗಿತಗೊಳಿಸದ್ದಾಗ ಬಿಡುಗಡೆಯನ್ನು ಮುಂದೂಡಿದ್ದರು. ಇದೀಗ ಮತ್ತೊಮ್ಮೆ ಎರಡನೇ ಬಾರಿ ಬ್ರೊಂಕೊ ಎಸ್‍ಯುವಿಯ ಬಿಡುಗಡೆಯನ್ನು ಫೋರ್ಡ್ ಮುಂದೂಡಿದೆ. ಬ್ರೊಂಕೊ ಎಸ್‍ಯುವಿಯ ಬಿಡುಗಡೆಯನ್ನು ಫೋರ್ಡ್ ಕಂಪನಿಯು 2021ರ ವರ್ಷಾಂತ್ಯಕ್ಕೆ ಮುಂದೂಡಿದ್ದಾರೆ.

ಸರಬರಾಜುದಾರರ ಕೊರತೆಯಿಂದಾಗಿ ಹೊಸ ಬ್ರೊಂಕೊ ಎಸ್‍ಯುವಿಯ ಬಿಡುಗಡೆಯನ್ನು ಮುಂದುಡಲಾಗಿದೆ ಫೋರ್ಡ್ ಅಧಿಕೃತವಾಗಿ ಹೇಳಿಕೊಂಡಿದೆ. ಆದರೆ ಪೋರ್ಡ್ ಕಂಪನಿಯು ಬ್ರೊಂಕೊ ಎಸ್‍ಯುವಿಯ ಸ್ಪೋರ್ಟ್ ಮಾದರಿಯನ್ನು ಸೀಮಿತ ಸಂಖ್ಯೆಯಲ್ಲಿ ಅಮೆರಿಕದಲ್ಲಿ ಕಳೆದ ತಿಂಗಳು ಮಾರಾಟ ಮಾಡಿದ್ದಾರೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಇನ್ನು ಈ ಹೊಸ ಫೋರ್ಡ್ ಬ್ರೊಂಕೊ ಎಸ್‍ಯುವಿಯ 1.5-ಲೀಟರ್ ಮೂರು ಸಿಲಿಂಡರ್‌ನಿಂದ ಎಂಜಿನ್ ಅನ್ನು ಬದಲಾಯಿಸಿ 2.7-ಲೀಟರ್ ವಿ6 ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 310 ಬಿಹೆಚ್‌ಪಿ ಪವರ್ ಮತ್ತು 542 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಫೋರ್ಡ್ ಬ್ರೊಂಕೊ ಆಫ್-ರೋಡರ್ ಎಫ್‌ಸಿಎ ಗ್ರೂಪ್‌ನ ಜೀಪ್ ರ‍್ಯಾಂಗ್ಲರ್ ಎಸ್‍ಯುವಿಗೆ ಪೈಪೋಟಿ ನೀಡಲು ಇದನ್ನು ಮತ್ತೊಮ್ಮೆ ಅಭಿವೃದ್ದಿಪಡಿಸಲಾಗಿದೆ. ಜೀಪ್ ರ‍್ಯಾಂಗ್ಲರ್ ಅಮೇರಿಕಾ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸುತ್ತಿತ್ತು.
MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಬ್ರೊಂಕೊ ಎಸ್‍ಯುವಿಯ 2-ಡೋರ್ ಮತ್ತು 4-ಡೋರ್‌ನ ಆರು ಸ್ಟ್ಯಾಂಡರ್ಡ್ ಮಾದರಿಗಳ ಜೊತೆ ಲಿಮಿಟೆಡ್ ಎಡಿಷನ್ ಸ್ಪೋರ್ಟ್ ಆವೃತ್ತಿಯನ್ನು ಇತ್ತೀಚೆಗೆ ಪರಿಚಯಿಸಿತು. ಈ ಮಾದರಿಯನ್ನು ಪರಿಚಯಿಸಿದ ಆರಂಭದಲ್ಲಿ 3,500 ಯುನಿಟ್‌ಗಳನ್ನು ಮಾತ್ರ ತಯಾರಿಸಿದ್ದರು.

ಈ ಐಕಾನಿಕ್ ಆಫ್-ರೋಡರ್ ಎಸ್‍ಯುವಿಯು ಮತ್ತೊಮ್ಮೆ ಅಮೇರಿಕಾ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದೆ. ಆದರೆ ಇದೀಗ ಹೊಸ ಫೋರ್ಡ್ ಬ್ರೊಂಕೊ ಎಸ್‍ಯುವಿಯ ಬಿಡುಗಡೆಯನ್ನು ಮುಂದೂಡಿರುವುದು ಆಫ್-ರೋಡ್ ಅಭಿಮಾನಿಗಳಿಗೆ ನಿರಾಸೆಯಾಗಿದೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ಆರನೇ ತಲೆಮಾರಿನ ಫೋರ್ಡ್ ಬ್ರೊಂಕೊ ಆಫ್-ರೋಡರ್ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಜಿ.ಒ.ಎ.ಟಿ ಎಂಬ ಟೆರಿಯನ್ ಮೋಡ್ ಗಳನ್ನು ಹೊಂದಿದೆ. ಈ ಎಸ್‍ಯುವಿಯು ಕಠಿಣ ಭೂಪ್ರದೇಶಗಳಲ್ಲಿಯು ಸಲಿಸಾಗಿ ಸಾಗುತ್ತದೆ.

ಇನ್ನು ಈ ಫೋರ್ಡ್ ಬ್ರೊಂಕೊ ಎಸ್‍ಯುವಿಯು ಟ್ರಯಲ್ ಕಂಟ್ರೋಲ್(ಆಫ್ರೋಡ್ ಕ್ರೂಸ್ ಕಂಟ್ರೋಲ್), ಟ್ರಯಲ್ ಟರ್ನ್ ಅಸಿಸ್ಟ್, ಟ್ರಯಲ್ 1-ಪೆಡಲ್ ಡ್ರೈವ್ ಮತ್ತು 4×4 ಸಿಸ್ಟಮ್ ಪ್ಯಾಕ್‌ಗಳು 2-ಸ್ಪೀಡ್ ಎಲೆಕ್ಟ್ರೋಮೆಕಾನಿಕಲ್ ಟ್ರಾನ್ಸ್ಫರ್ ಕೇಸ್(ಇಎಂಟಿಸಿ) ನಂತಹ ಹಲವು ಆಫ್ ರೋಡ್ ಫೀಚರುಗಳನ್ನು ಈ ಎಸ್‍ಯುವಿಯು ಹೊಂದಿದೆ.