ಮೂಲ ಸ್ವರೂಪದಲ್ಲಿಯೇ ರಿಸ್ಟೋರ್ ಆದ ಫೋರ್ಡ್ ಜೀಪ್

ಇತ್ತೀಚಿನ ದಿನಗಳಲ್ಲಿ ಯಾವುದೇ ವಾಹನವಾಗಲಿ ಅವುಗಳನ್ನು ರಿಸ್ಟೋರ್ ಅಥವಾ ಮೊದಲಿನಂತೆ ಮಾಡುವುದು ಭಾರತದಲ್ಲಿ ಸಾಮಾನ್ಯವಾಗಿದೆ. ಈ ಮೊದಲು ಸಹ ರಿಸ್ಟೋರ್ ಮಾಡಲಾದ ಅನೇಕ ವಾಹನಗಳ ಬಗ್ಗೆ ಹೇಳಲಾಗಿತ್ತು.

ಮೂಲ ಸ್ವರೂಪದಲ್ಲಿಯೇ ರಿಸ್ಟೋರ್ ಆದ ಫೋರ್ಡ್ ಜೀಪ್

ಹಲವಾರು ದಶಕಗಳ ಹಿಂದೆ ಬಿಡುಗಡೆಯಾದ ಜೀಪ್ ಅನ್ನು ಜನ ಈಗಲೂ ಸಹ ಇಷ್ಟ ಪಡುತ್ತಾರೆ. ಅದು ಜೀಪ್ ಎಂಬ ವಾಹನ ಜನರ ಮೇಲೆ ಮಾಡಿದ್ದ ಮೋಡಿ. ಈಗ ಅದೇ ಜೀಪ್ ಅನ್ನು ರಿಸ್ಟೋರ್ ಮಾಡಲಾಗಿದೆ. ರಿಸ್ಟೋರ್ ಮಾಡಲಾದ 1946ರ ಫೋರ್ಡ್ ಜಿಪಿಡಬ್ಲ್ಯೂ ಬಗೆಗಿನ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ಮೂಲ ಸ್ವರೂಪದಲ್ಲಿಯೇ ರಿಸ್ಟೋರ್ ಆದ ಫೋರ್ಡ್ ಜೀಪ್

ರಿಸ್ಟೋರ್ ಮಾಡಲಾಗದ ಈ ಜೀಪಿನ ವಿಡಿಯೋವನ್ನು ಯೂಲಾಗ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಈ ವೀಡಿಯೊದ ಆರಂಭದಲ್ಲಿ ರಿಸ್ಟೋರ್ ಮಾಡಿರುವ ಫೋರ್ಡ್ ಜಿಪಿಡಬ್ಲ್ಯೂ ವಿಂಟೇಜ್ ಜೀಪ್ ಅನ್ನು ತೋರಿಸಲಾಗುತ್ತದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಮೂಲ ಸ್ವರೂಪದಲ್ಲಿಯೇ ರಿಸ್ಟೋರ್ ಆದ ಫೋರ್ಡ್ ಜೀಪ್

ಜೀಪ್ ನ ಹಲವು ಭಾಗಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದ್ದು, 1946ರ ಜೀಪ್ ನಲ್ಲಿದ್ದ ಲುಕ್ ಅನ್ನು ನೀಡಲಾಗಿದೆ. ಫಿಯರ್ಡ್‌ನ ಜಿಪಿಡಬ್ಲ್ಯೂ ಎಡ ಭಾಗದಲ್ಲಿ ಸ್ಟಿಯರಿಂಗ್ ಹೊಂದಿತ್ತು. ರಿಸ್ಟೋರ್ ಮಾಡಲಾದ ಜೀಪ್ ನಲ್ಲೂ ಎಡ ಭಾಗದಲ್ಲಿಯೇ ಸ್ಟಿಯರಿಂಗ್ ನೀಡಲಾಗಿದೆ. ಸ್ಟಿಯರಿಂಗ್ ವ್ಹೀಲ್ ಸಹ ಹಳೆಯ ಜೀಪ್‌ನಂತಿದೆ.

ಮೂಲ ಸ್ವರೂಪದಲ್ಲಿಯೇ ರಿಸ್ಟೋರ್ ಆದ ಫೋರ್ಡ್ ಜೀಪ್

ಮುಂಭಾಗದಲ್ಲಿ ವರ್ಟಿಕಲ್ ಸ್ಲೇಟ್ ಗ್ರಿಲ್ ನೀಡಲಾಗಿದ್ದು, ರೌಂಡ್ ಶೇಪಿನ ಹೆಡ್‌ಲ್ಯಾಂಪ್‌ಗಳನ್ನು ಎರಡೂ ಬದಿಯಲ್ಲಿರಿಸಲಾಗಿದೆ. ರೇಡಿಯೇಟರ್ ಪ್ಲುಯಡ್ ಅನ್ನು ಗ್ರಿಲ್‌ನಲ್ಲಿಯೇ ಮೌಂಟ್ ಮಾಡಲಾಗಿದ್ದು, ಸುಲಭವಾಗಿ ಫಿಲ್ ಮಾಡಬಹುದಾಗಿದೆ. ರಿಸ್ಟೋರ್ ಮಾಡುವಾಗ ಜೀಪಿನ ಭಾಗಗಳನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಳ್ಳಲಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಈ ಜೀಪ್ ಅನ್ನು ರಿಸ್ಟೋರ್ ಮಾಡಿರುವವರು ಜೀಪಿನಲ್ಲಿ ಮಹೀಂದ್ರಾ ಬೊಲೆರೊ ಎಂಜಿನ್ ಅನ್ನು ಅಳವಡಿಸಿದ್ದಾರೆ. ಸಾಮಾನ್ಯವಾಗಿ ಫೋರ್ಡ್ ಜಿಪಿಡಬ್ಲ್ಯೂ 4x4 ಡ್ರೈವ್ ಸಿಸ್ಟಂ ಹೊಂದಿರುತ್ತದೆ. ಆದರೆ ರಿಸ್ಟೋರ್ ನಂತರ ಈ ಜೀಪ್ 4-ವ್ಹೀಲ್ ಡ್ರೈವ್ ಆಗಿ ಉಳಿದಿಲ್ಲ.

ಮೂಲ ಸ್ವರೂಪದಲ್ಲಿಯೇ ರಿಸ್ಟೋರ್ ಆದ ಫೋರ್ಡ್ ಜೀಪ್

ಈ ಜೀಪ್‌ನ ಹಿಂಭಾಗದಲ್ಲಿ ಜೆರ್ರಿ ಕ್ಯಾನ್‌, ಟೇಲ್ ಲೈಟ್‌ ಹಾಗೂ ರೇರ್ ಡೋರ್ ಮೌಂಟೆಡ್ ಸ್ಪೇರ್ ವ್ಹೀಲ್ ಗಳಿವೆ. ಈ ಜೀಪಿನಲ್ಲಿ ಕಪ್ಪು ಬಣ್ಣದ ಅಪ್ ಹೊಲೆಸ್ಟರಿ ಬಳಸಲಾಗಿದೆ. ಈ ಜೀಪನ್ನು ರಿಸ್ಟೋರ್ ಮಾಡಲು ಸುಮಾರು 8 ತಿಂಗಳು ತೆಗೆದು ಕೊಳ್ಳಲಾಗಿದೆ. ಈ ಜೀಪ್ ಅನ್ನು ರಿಸ್ಟೋರ್ ಮಾಡಲು ರೂ.3 ರಿಂದ 3.5 ಲಕ್ಷ ಖರ್ಚು ಮಾಡಲಾಗಿದೆ ಎಂದು ವೀಡಿಯೊದಲ್ಲಿ ಹೇಳಲಾಗಿದೆ

Most Read Articles

Kannada
Read more on ಫೋರ್ಡ್ ford
English summary
Ford jeep restored with Mahindra bolero engine. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X