ವಿವಿಧ ಕಾರುಗಳ ಬಿಡಿಭಾಗಗಳೊಂದಿಗೆ ಮಾಡಿಫೈಗೊಂಡ ಅಂಬಾಸಿಡರ್ ಕಾರು

ಹಿಂದೂಸ್ತಾನ್ ಮೋಟಾರ್ಸ್ ಕಂಪನಿಯ ಅಂಬಾಸಿಡರ್ ಕಾರು ಭಾರತದಲ್ಲಿದ್ದ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಸದ್ಯಕ್ಕೆ ಈ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಿದ್ದರೂ ಈ ಕಾರು ಇನ್ನೂ ಸಹ ಭಾರತದ ಹಲವು ಭಾಗಗಳಲ್ಲಿ ಸಂಚರಿಸುತ್ತಿದೆ.

ವಿವಿಧ ಕಾರುಗಳ ಬಿಡಿಭಾಗಗಳೊಂದಿಗೆ ಮಾಡಿಫೈಗೊಂಡ ಅಂಬಾಸಿಡರ್ ಕಾರು

ಅಂಬಾಸಿಡರ್ ಕಾರನ್ನು ಉತ್ತರ ಭಾರತದ ರಾಜ್ಯಗಳಲ್ಲಿ ಹೆಚ್ಚಾಗಿ ಕಾಣಬಹುದು. ಹಿಂದೂಸ್ತಾನ್ ಮೋಟಾರ್ಸ್ ಕಂಪನಿಯು ಒಂದು ಕಾಲದಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿದ್ದ ಅಂಬಾಸಿಡರ್ ಕಾರಿನ ಉತ್ಪಾದನೆಯನ್ನು ಹಲವು ವರ್ಷಗಳ ಹಿಂದೆಯೇ ಸ್ಥಗಿತಗೊಳಿಸಿದೆ.

ವಿವಿಧ ಕಾರುಗಳ ಬಿಡಿಭಾಗಗಳೊಂದಿಗೆ ಮಾಡಿಫೈಗೊಂಡ ಅಂಬಾಸಿಡರ್ ಕಾರು

34 ವರ್ಷದ ಹಿಂದೂಸ್ತಾನ್ ಅಂಬಾಸಿಡರ್ ಕಾರನ್ನು ಅದರ ಮಾಲೀಕರು ಹೊಸ ಕಾರಿನ ರೀತಿಯಲ್ಲಿ ಮಾಡಿಫೈಗೊಳಿಸಿರುವ ಬಗ್ಗೆ ವರದಿಯಾಗಿದೆ. ಮಾಡಿಫೈಗೊಂಡ ಅಂಬಾಸಿಡರ್ ಕಾರಿನ ವೀಡಿಯೊವನ್ನು ತಾಜಿಸ್ ಬಿ ಎಂಬ ಯೂಟ್ಯೂಬ್ ಚಾನೆಲ್ ಬಿಡುಗಡೆಗೊಳಿಸಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ವಿವಿಧ ಕಾರುಗಳ ಬಿಡಿಭಾಗಗಳೊಂದಿಗೆ ಮಾಡಿಫೈಗೊಂಡ ಅಂಬಾಸಿಡರ್ ಕಾರು

ಮಾಡಿಫೈಗೊಂಡ ಹಿಂದೂಸ್ತಾನ್ ಅಂಬಾಸಿಡರ್ ಕಾರು 1986ರ ಮಾದರಿ ಎಂದು ಹೇಳಲಾಗಿದೆ. ಈ ಕಾರನ್ನು ಕಸ್ಟಮೈಸ್ ಹಾಗೂ ಮಾಡಿಫೈ ಮಾಡಿರುವ, ಕಾರು ಮಾಡಿಫೈ ಕಂಪನಿಯು ಈ ಕಾರಿಗೆ ಹೊಸ ಲುಕ್ ನೀಡಿದೆ. ಮಾಡಿಫಿಕೇಶನ್ ಭಾಗವಾಗಿ ಈ ಕಾರಿಗೆ ಹೊಸ ಪೇಂಟ್ ನೀಡಿ, ಹೆಚ್ಚುವರಿಯಾದ ಫೀಚರ್ ಗಳನ್ನು ಅಳವಡಿಸಲಾಗಿದೆ.

ವಿವಿಧ ಕಾರುಗಳ ಬಿಡಿಭಾಗಗಳೊಂದಿಗೆ ಮಾಡಿಫೈಗೊಂಡ ಅಂಬಾಸಿಡರ್ ಕಾರು

ಇದರ ಜೊತೆಗೆ ಈ ಕಾರಿನಲ್ಲಿ ಕಪ್ಪು ಬಣ್ಣದ ಗ್ಲಾಸ್ ಅಳವಡಿಸಲಾಗಿದೆ. ಈ ಕಾರು ಹೊಸದಾಗಿ ಕಾಣುವಂತೆ ಮಾಡಲು ಕಾರಿನ ಎಕ್ಸ್ ಟಿರಿಯರ್ ನಲ್ಲಿ 15 ಇಂಚಿನ ವ್ಹೀಲ್ ರಿಮ್, ರೇರ್ ವೀವ್ ಮಿರರ್, ಡೋರ್ ಹ್ಯಾಂಡಲ್ಸ್, ಫಾಗ್ ಲೈಟ್ಸ್, ಬಂಪರ್ ಸೇರಿದಂತೆ ಹಲವಾರು ಫೀಚರ್ ಗಳನ್ನು ಸೇರಿಸಲಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ವಿವಿಧ ಕಾರುಗಳ ಬಿಡಿಭಾಗಗಳೊಂದಿಗೆ ಮಾಡಿಫೈಗೊಂಡ ಅಂಬಾಸಿಡರ್ ಕಾರು

ಈ ಕಾರಿನಲ್ಲಿ ಪಾರ್ಕಿಂಗ್ ಸೆನ್ಸಾರ್ ಗಳನ್ನು ಸಹ ಅಳವಡಿಸಲಾಗಿದೆ. ಕಾರಿನ ಇಂಟಿರಿಯರ್ ನಲ್ಲಿಯೂ ಹಲವಾರು ಫೀಚರ್ ಗಳನ್ನು ಅಳವಡಿಸಲಾಗಿದೆ.ಈ ಅಂಬಾಸಿಡರ್ ಕಾರಿನಲ್ಲಿದ್ದ ಹಳೆಯ ಸಾಂಪ್ರದಾಯಿಕ ಸ್ಟೀಯರಿಂಗ್ ವ್ಹೀಲ್ ಬದಲಿಗೆ ಹೊಸ ಪವರ್ ಸ್ಟೀಯರಿಂಗ್ ವ್ಹೀಲ್ ಅಳವಡಿಸಲಾಗಿದೆ.

ವಿವಿಧ ಕಾರುಗಳ ಬಿಡಿಭಾಗಗಳೊಂದಿಗೆ ಮಾಡಿಫೈಗೊಂಡ ಅಂಬಾಸಿಡರ್ ಕಾರು

ಈ ಕಾರಿನಲ್ಲಿ ವಿವಿಧ ಕಂಪನಿಗಳ ಕಾರುಗಳಲ್ಲಿರುವಂತಹ ಬಿಡಿ ಭಾಗಗಳನ್ನು ಅಳವಡಿಸಲಾಗಿದೆ. ಈ ಕಾರಿನಲ್ಲಿ ಹ್ಯುಂಡೈ ಕಾರಿನಲ್ಲಿದ್ದ ಸ್ಟೀಯರಿಂಗ್ ವ್ಹೀಲ್ ಅಳವಡಿಸಲಾಗಿದ್ದರೆ, ಸ್ಕೋಡಾ ಕಾರುಗಳಲ್ಲಿರುವಂತಹ ಡ್ಯಾಶ್‌ಬೋರ್ಡ್ ಅನ್ನು ಅಳವಡಿಸಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ವಿವಿಧ ಕಾರುಗಳ ಬಿಡಿಭಾಗಗಳೊಂದಿಗೆ ಮಾಡಿಫೈಗೊಂಡ ಅಂಬಾಸಿಡರ್ ಕಾರು

ಇಷ್ಟು ಮಾತ್ರವಲ್ಲದೇ ಬೇರೆ ಕಾರಿನಲ್ಲಿರುವಂತಹ ಎಂಜಿನ್ ಅನ್ನು ಸಹ ಈ ಕಾರಿನಲ್ಲಿ ಅಳವಡಿಸಲಾಗಿದೆ. ಮಾಡಿಫೈಗೊಂಡಿರುವ ಈ ಅಂಬಾಸಿಡರ್ ಕಾರಿನಲ್ಲಿ ಟೊಯೊಟಾ ಕಂಪನಿಯ ಎಂಜಿನ್ ಅಳವಡಿಸಲಾಗಿದೆ ಎಂದು ಹೇಳಲಾಗಿದೆ.

ವಿವಿಧ ಕಾರುಗಳ ಬಿಡಿಭಾಗಗಳೊಂದಿಗೆ ಮಾಡಿಫೈಗೊಂಡ ಅಂಬಾಸಿಡರ್ ಕಾರು

2.0 ಲೀಟರಿನ ಈ ಡೀಸೆಲ್ ಎಂಜಿನ್ ನೊಂದಿಗೆ 5 ಸ್ಪೀಡಿನ ಗೇರ್‌ಬಾಕ್ಸ್ ಜೋಡಿಸಲಾಗಿದೆ. ಈ ಕಾರಿನಲ್ಲಿ ಕ್ವಾಲಿಸ್‌ ಕಾರಿನ ಫಿಲ್ಟರ್ ಹಾಗೂ ಟಾಟಾ ಸುಮೋದ ರೇಡಿಯೇಟರ್ ಗಳನ್ನು ಸಹ ಅಳವಡಿಸಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಒಟ್ಟಾರೆಯಾಗಿ ಈ ಹಿಂದೂಸ್ತಾನ್ ಅಂಬಾಸಿಡರ್ ಕಾರು ವಿವಿಧ ಕಾರುಗಳ ಮಿಶ್ರಣವಾಗಿದೆ. ಇವುಗಳ ಮೂಲಕವೇ ಈ ಕಾರು ಮಾಡಿಫೈಗೊಂಡಿದೆ.

ವಿವಿಧ ಕಾರುಗಳ ಬಿಡಿಭಾಗಗಳೊಂದಿಗೆ ಮಾಡಿಫೈಗೊಂಡ ಅಂಬಾಸಿಡರ್ ಕಾರು

ಹಿಂದೂಸ್ತಾನ್ ಮೋಟಾರ್ಸ್ ಕಂಪನಿಯು ಈ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವ ಕಾರಣಕ್ಕೆ ಬಿಡಿಭಾಗಗಳ ಕೊರತೆ ಎದುರಾಗಿದೆ. ಈ ಕಾರಣಕ್ಕೆ ವಿವಿಧ ಕಾರುಗಳಲ್ಲಿರುವ ಬಿಡಿಭಾಗಗಳನ್ನು ಪಡೆದು ಈ ಕಾರನ್ನು ಹೊಸದರಂತೆ ಮಾಡಿಫೈಗೊಳಿಸಲಾಗಿದೆ.

Most Read Articles

Kannada
English summary
Hindustan Ambassador car modified with various company spare parts. Read in Kannada.
Story first published: Monday, October 19, 2020, 10:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X