ಕರೋನಾ ಲಾಕ್‌ಡೌನ್: ಸಂಕಷ್ಟದ ನಡುವೆಯೂ 1,341 ಕಾರುಗಳನ್ನು ರಫ್ತು ಮಾಡಿದ ಹ್ಯುಂಡೈ

ಮಾರ್ಚ್ ಮಧ್ಯದಿಂದಲೇ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದ್ದು, ವಾಹನಗಳ ಮಾರಾಟ ಸೇರಿದಂತೆ ಬಹುತೇಕ ವಾಣಿಜ್ಯ ಚಟುವಟಿಕೆಗಳು ಬಂದ್ ಆಗಿವೆ. ಇದರಿಂದ ಬಹುತೇಕ ಆಟೋ ಕಂಪನಿಗಳು ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದ್ದು, ಮಾರ್ಚ್ 15ರಿಂದ ಇದುವರೆಗೂ ಯಾವುದೊಂದು ಕಂಪನಿಯು ಒಂದೇ ಒಂದು ವಾಹನವನ್ನು ಮಾರಾಟಮಾಡಿಲ್ಲ.

ಸಂಕಷ್ಟದ ನಡುವೆಯೂ 1,341 ಕಾರುಗಳನ್ನು ರಫ್ತು ಮಾಡಿದ ಹ್ಯುಂಡೈ

ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹ್ಯುಂಡೈ ಕೂಡಾ ಏಪ್ರಿಲ್ ಅವಧಿಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿನ ವಾಹನ ಮಾರಾಟದಲ್ಲಿ ಸೊನ್ನೆ ಸುತ್ತಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ಮಾತ್ರ 1,341 ಯನಿಟ್ ವಿವಿಧ ಕಾರು ಮಾದರಿಗಳನ್ನು ರಫ್ತು ಮಾಡಿದೆ. ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ರಾಷ್ಟ್ರಗಳಿಗೆ ವಿವಿಧ ಮಾದರಿಯ ಕಾರು ಮಾದರಿಗಳನ್ನು ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ರಫ್ತು ಮಾಡಿದ್ದು, ತದನಂತರ ಸಾಗರೋತ್ತರ ವ್ಯವಹಾರಗಳ ಬಂದ್ ಆಗಿದ್ದರಿಂದ ಕಾರು ಮಾರಾಟ ಮತ್ತು ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿತ್ತು.

ಸಂಕಷ್ಟದ ನಡುವೆಯೂ 1,341 ಕಾರುಗಳನ್ನು ರಫ್ತು ಮಾಡಿದ ಹ್ಯುಂಡೈ

ಇದೀಗ ಹಸಿರು ವಲಯದಲ್ಲಿರುವ ಕೈಗಾರಿಕೆಗಳಿಗೆ ಉತ್ಪಾದನೆಗೆ ಅವಕಾಶ ನೀಡಿರುವುದರಿಂದ ಕಾರು ಉತ್ಪಾದನಾ ಚಟುವಟಿಕೆ ಮತ್ತೆ ಪುನಾರಂಭಿಸಿರುವ ಹ್ಯುಂಡೈ ಕಂಪನಿಯು ಹೊಸ ಸುರಕ್ಷಾ ಮಾರ್ಗಗಳ ಅನುಸಾರವಾಗಿ ಆನ್‌ಲೈನ್ ಕಾರು ಮಾರಾಟವನ್ನು ಆರಂಭಿಸುತ್ತಿದೆ.

ಸಂಕಷ್ಟದ ನಡುವೆಯೂ 1,341 ಕಾರುಗಳನ್ನು ರಫ್ತು ಮಾಡಿದ ಹ್ಯುಂಡೈ

ಸದ್ಯಕ್ಕೆ ನೇರವಾಗಿ ವಾಹನ ಮಾರಾಟಕ್ಕೆ ಅವಕಾಶವಿಲ್ಲವಾದ್ದರಿಂದ ಬಹುತೇಕ ಆಟೋ ಕಂಪನಿಗಳು ಆನ್‌ಲೈನ್ ವಾಹನ ಮಾರಾಟಕ್ಕೆ ಚಾಲನೆ ನೀಡುತ್ತಿದ್ದು, ಹ್ಯುಂಡೈ ಕೂಡಾ ಗರಿಷ್ಠ ಸುರಕ್ಷಾ ಸೌಲಭ್ಯಗಳೊಂದಿಗೆ ಗ್ರಾಹಕರ ಬೇಡಿಕೆ ಮೇರೆಗೆ ಮನೆ ಬಾಗಿಲಿಗೆ ಹೊಸ ವಾಹನ ಉತ್ಪನ್ನಗಳನ್ನು ವಿತರಣೆ ಮಾಡಲಿದೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಸಂಕಷ್ಟದ ನಡುವೆಯೂ 1,341 ಕಾರುಗಳನ್ನು ರಫ್ತು ಮಾಡಿದ ಹ್ಯುಂಡೈ

ಇನ್ನು ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬಂದಿರುವ ಬಿಎಸ್-6 ಎಮಿಷನ್ ನಿಯಮ ಅನುಗುಣವಾಗಿ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಪ್ರಸ್ತುತ ಮಾರುಕಟ್ಟೆಯಲ್ಲಿರುವ ತಮ್ಮ ವಾಹನ ಮಾದರಿಗಳನ್ನು ಉನ್ನತೀಕರಿಸಿ ಬಿಡುಗಡೆ ಮಾಡಿದ್ದು, ಹ್ಯಂಡೈ ಕಂಪನಿಯು ಕೂಡಾ ಬಿಎಸ್-6 ಎಂಜಿನ್ ಪ್ರೇರಿತ ನ್ಯೂ ಜನರೇಷನ್ ಕ್ರೆಟಾ ಮತ್ತು ವೆನ್ಯೂ ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ.

ಸಂಕಷ್ಟದ ನಡುವೆಯೂ 1,341 ಕಾರುಗಳನ್ನು ರಫ್ತು ಮಾಡಿದ ಹ್ಯುಂಡೈ

ಲಾಕ್‌ಡೌನ್‌ನಿಂದಾಗಿ ಬಹುತೇಕ ವಾಣಿಜ್ಯ ವ್ಯಾಪಾರಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಈ ಸಂದರ್ಭದಲ್ಲೂ ಹ್ಯುಂಡೈ ನಿರ್ಮಾಣದ ನ್ಯೂ ಜನರೇಷನ್ ಕಾರು ಖರೀದಿಗೆ ದಾಖಲಾಗಿರುವ ಬುಕ್ಕಿಂಗ್ ಪ್ರಮಾಣವು ಅಚ್ಚರಿಗೆ ಕಾರಣವಾಗಿದೆ.

MOST READ: ಲಾಕ್‌ಡೌನ್ ಸಂಕಷ್ಟ- ಆಟೋ ಚಾಲಕರ ಬ್ಯಾಂಕ್ ಖಾತೆ ಸೇರಿದ ರೂ.5 ಸಾವಿರ ಪರಿಹಾರ..

ಸಂಕಷ್ಟದ ನಡುವೆಯೂ 1,341 ಕಾರುಗಳನ್ನು ರಫ್ತು ಮಾಡಿದ ಹ್ಯುಂಡೈ

ಸದ್ಯ ವಾಹನಗಳ ಮಾರಾಟ ಪ್ರಕ್ರಿಯೆಗೆ ಅವಕಾಶವಿಲ್ಲವಾದರೂ ಬುಕ್ಕಿಂಗ್ ಪ್ರಕ್ರಿಯೆಯನ್ನು ಮುಂದುವರಿಸಿರುವ ಆಟೋ ಕಂಪನಿಗಳು ಲಾಕ್‌ಡೌನ್ ಮುಗಿದ ನಂತರವಷ್ಟೇ ವಾಹನ ವಿತರಣೆ ಮಾಡುವುದಾಗಿ ಭರವಸೆ ನೀಡುತ್ತಿದ್ದು, ಹ್ಯುಂಡೈ ಇಂಡಿಯಾ ಕಂಪನಿಯು ಕೂಡಾ ತನ್ನ ಹೊಸ ತಲೆಮಾರಿನ ಕ್ರೆಟಾ ಎಸ್‌ಯುವಿ ಕಾರಿನ ಬುಕ್ಕಿಂಗ್ ಪ್ರಮಾಣದಲ್ಲಿ ಭಾರೀ ಬೇಡಿಕೆಪಡೆದುಕೊಂಡಿರುವುದು ಇದೀಗ ಬಹಿರಂಗವಾಗಿದೆ.

ಸಂಕಷ್ಟದ ನಡುವೆಯೂ 1,341 ಕಾರುಗಳನ್ನು ರಫ್ತು ಮಾಡಿದ ಹ್ಯುಂಡೈ

ಕಳೆದ ಮಾರ್ಚ್ 16ರಂದು ಬಿಡುಗಡೆಯಾಗಿದ್ದ ನ್ಯೂ ಜನರೇಷನ್ ಕ್ರೆಟಾ ಕಾರು ಇದುವರೆಗೆ 20 ಸಾವಿರ ಯುನಿಟ್ ಖರೀದಿಗಾಗಿ ಬುಕ್ಕಿಂಗ್ ಪಡೆದುಕೊಂಡಿದ್ದು, ಬುಕ್ಕಿಂಗ್ ಮಾಡಲಾದ ಗ್ರಾಹಕರಿಗೆ ಶೀಘ್ರದಲ್ಲೇ ಕಾರು ವಿತರಣೆ ಮಾಡುವುದಾಗಿ ಹೇಳಿಕೊಂಡಿದೆ.

MOST READ: ಲಾಕ್‌ಡೌನ್ ವೇಳೆ ಕಾರು ಚಾಲನೆ ಮಾಡಿ ಸಿಕ್ಕಿಬಿದ್ದ ಮಹಿಳೆಯಿಂದ ಹೈಡ್ರಾಮಾ..

ಸಂಕಷ್ಟದ ನಡುವೆಯೂ 1,341 ಕಾರುಗಳನ್ನು ರಫ್ತು ಮಾಡಿದ ಹ್ಯುಂಡೈ

ಹೊಸ ಕ್ರೆಟಾ ಕಾರಿನ ವಿತರಣೆ ಆರಂಭವಾದ ಎರಡನೇ ದಿನಕ್ಕೆ ಲಾಕ್‌ಡೌನ್ ವಿಧಿಸಲಾಗಿತ್ತು. ತದನಂತರ ಲಾಕ್‌ಡೌನ್ ವಿಸ್ತರಣೆ ಮಾಡುತ್ತಲೇ ಇರುವ ಕೇಂದ್ರ ಸರ್ಕಾರವು ವೈರಸ್ ಅನ್ನು ಹತೋಟಿ ತರುವ ಪ್ರಯತ್ನದಲ್ಲಿದ್ದು, ಇದೀಗ ಕುಸಿದಿರುವ ಆರ್ಥಿಕ ವ್ಯವಹಾರಗಳನ್ನು ಪುನಾರಂಭಿಸಲು ಮೇ 3ರಿಂದ ಕೆಲವು ವಿನಾಯ್ತಿಗಳನ್ನು ಘೋಷಣೆ ಮಾಡಿರುವುದು ಉದ್ಯಮ ಸಂಸ್ಥೆಗಳಿಗೆ ಮರುಜೀವ ಬಂದಂತಾಗಿದೆ.

Most Read Articles

Kannada
English summary
Hyundai car sales April zero details. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X