ಮ್ಯೂಸಿಕಲ್ ಇನ್ಸ್ ಟ್ರೂಮೆಂಟ್ ಗಳೊಂದಿಗೆ ಮಾಡಿಫೈಗೊಂಡ ಕ್ರೆಟಾ ಎಸ್‌ಯುವಿ

ಕ್ರೆಟಾ ಎಸ್‌ಯುವಿ ಹ್ಯುಂಡೈ ಕಂಪನಿಯ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಈ ಎಸ್‌ಯುವಿಯು ಹ್ಯುಂಡೈನ ಜನಪ್ರಿಯ ಕಾರು ಮಾತ್ರವಲ್ಲದೆ ದೇಶದಲ್ಲಿ ಹೆಚ್ಚು ಮಾರಾಟವಾಗುವ ಎಸ್‌ಯುವಿಗಳಲ್ಲಿ ಒಂದಾಗಿದೆ.

ಮ್ಯೂಸಿಕಲ್ ಇನ್ಸ್ ಟ್ರೂಮೆಂಟ್ ಗಳೊಂದಿಗೆ ಮಾಡಿಫೈಗೊಂಡ ಕ್ರೆಟಾ ಎಸ್‌ಯುವಿ

ಹ್ಯುಂಡೈ ಕಂಪನಿಯು ಈ ವರ್ಷದ ಆರಂಭದಲ್ಲಿ ಹೊಸ ಕ್ರೆಟಾ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಈ ಎಸ್‌ಯುವಿಯನ್ನು ಗಟ್ಟಿಮುಟ್ಟಾದ ನಿರ್ಮಾಣ ಹಾಗೂ ಹಲವಾರು ಫೀಚರ್ ಗಳೊಂದಿಗೆ ಬಿಡುಗಡೆಗೊಳಿಸಲಾಯಿತು. ಬಿಡುಗಡೆಯಾದ ಕೆಲವೇ ತಿಂಗಳುಗಳಲ್ಲಿ ಈ ಎಸ್‌ಯುವಿಯ ಲಕ್ಷಾಂತರ ಯುನಿಟ್ ಗಳು ಮಾರಾಟವಾಗಿವೆ.

ಮ್ಯೂಸಿಕಲ್ ಇನ್ಸ್ ಟ್ರೂಮೆಂಟ್ ಗಳೊಂದಿಗೆ ಮಾಡಿಫೈಗೊಂಡ ಕ್ರೆಟಾ ಎಸ್‌ಯುವಿ

ಯುವಕನೊಬ್ಬ ಈ ಎಸ್‌ಯುವಿಯನ್ನು ಮಾಡಿಫೈ ಮಾಡಿ ಹೆಚ್ಚು ವಿಶೇಷ ಕಾರನ್ನಾಗಿಸಿದ್ದಾನೆ. ಈ ಬಗ್ಗೆ ಬೀಕಾನ್ ಮ್ಯೂಸಿಕ್ ಸೀರೀಸ್ ವೀಡಿಯೊ ಬಿಡುಗಡೆಗೊಳಿಸಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಮ್ಯೂಸಿಕಲ್ ಇನ್ಸ್ ಟ್ರೂಮೆಂಟ್ ಗಳೊಂದಿಗೆ ಮಾಡಿಫೈಗೊಂಡ ಕ್ರೆಟಾ ಎಸ್‌ಯುವಿ

ಹ್ಯುಂಡೈ ಕ್ರೆಟಾ ಎಸ್‌ಯುವಿಯನ್ನು ಮಾಡಿಫೈ ಮಾಡಿರುವ ಯುವಕ ಸಂಗೀತ ಪ್ರಿಯನೆಂದು ಕಾಣುತ್ತದೆ. ಇದಕ್ಕಾಗಿ ಈ ಎಸ್‌ಯುವಿಯಲ್ಲಿ ಸಂಗೀತಕ್ಕೆ ಸಂಬಂಧಿಸಿದ ಹಲವಾರು ಎಕ್ವಿಪ್ ಮೆಂಟ್ ಗಳನ್ನು ಅಳವಡಿಸಿದ್ದಾನೆ.

ಮ್ಯೂಸಿಕಲ್ ಇನ್ಸ್ ಟ್ರೂಮೆಂಟ್ ಗಳೊಂದಿಗೆ ಮಾಡಿಫೈಗೊಂಡ ಕ್ರೆಟಾ ಎಸ್‌ಯುವಿ

ಈ ಎಸ್‌ಯುವಿಯ ಬೂಟ್ ನಲ್ಲಿ 18 ಇಂಚಿನ ಸ್ಪೀಕರ್ ಅಳವಡಿಸಲಾಗಿದೆ. ಜೊತೆಗೆ ಎಸಿ ವೆಂಟ್, ಡ್ಯಾಶ್‌ಬೋರ್ಡ್ ಒಳಗೂ ಸಂಗೀತಕ್ಕೆ ಸಂಬಂಧಿಸಿದ ಪ್ಯಾನೆಲ್ ಗಳನ್ನು ಅಳವಡಿಸಲಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಮ್ಯೂಸಿಕಲ್ ಇನ್ಸ್ ಟ್ರೂಮೆಂಟ್ ಗಳೊಂದಿಗೆ ಮಾಡಿಫೈಗೊಂಡ ಕ್ರೆಟಾ ಎಸ್‌ಯುವಿ

ಸಿಂಗಲ್ ಬಣ್ಣದಲ್ಲಿದ್ದ ಈ ಹ್ಯುಂಡೈ ಕ್ರೆಟಾ ಎಸ್‌ಯುವಿಯನ್ನು ಡ್ಯುಯಲ್ ಬಣ್ಣದ ವಾಹನವನ್ನಾಗಿ ಬದಲಿಸಲಾಗಿದೆ. ಇದಕ್ಕಾಗಿ ಯುವಕನು ಬ್ಲಾಕ್ ಹಾಗೂ ಗೋಲ್ಡ್ ಬಣ್ಣಗಳನ್ನು ಬಳಸಿದ್ದಾನೆ.

ಮ್ಯೂಸಿಕಲ್ ಇನ್ಸ್ ಟ್ರೂಮೆಂಟ್ ಗಳೊಂದಿಗೆ ಮಾಡಿಫೈಗೊಂಡ ಕ್ರೆಟಾ ಎಸ್‌ಯುವಿ

ಈ ಎಸ್‌ಯುವಿಯ ಕ್ಲಾಡಿಂಗ್ ಗಳು ಕಪ್ಪು ಬಣ್ಣದಲ್ಲಿದ್ದರೆ, ವ್ಹೀಲ್ ಆರ್ಕ್ ಗಳು ಸಿಲ್ವರ್ ಬಣ್ಣದಲ್ಲಿವೆ. ಈ ಎಸ್‌ಯುವಿಯಲ್ಲಿ ಹ್ಯುಂಡೈ ಕಂಪನಿಯು ನೀಡಿದ್ದ ಅಲಾಯ್ ವ್ಹೀಲ್ ಗಳನ್ನು ತೆಗೆದುಹಾಕಿ, ಹೆಚ್ಚು ಸ್ಪೋಕ್ ಹೊಂದಿರುವ ಅಲಾಯ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಮ್ಯೂಸಿಕಲ್ ಇನ್ಸ್ ಟ್ರೂಮೆಂಟ್ ಗಳೊಂದಿಗೆ ಮಾಡಿಫೈಗೊಂಡ ಕ್ರೆಟಾ ಎಸ್‌ಯುವಿ

ಬ್ರೇಕ್ ಕ್ಯಾಲಿಪರ್‌ಗಳ ಬಣ್ಣವನ್ನು ಸಹ ಬದಲಿಸಲಾಗಿದೆ. ಮುಂಭಾಗ ಹಾಗೂ ಹಿಂಭಾಗದ ಬಂಪರ್‌ಗಳಿಗೆ ಗೋಲ್ಡ್ ಕಲರ್ ನೀಡಲಾಗಿದೆ. ಇವುಗಳಿಗಿಂತ ಎಸ್‌ಯುವಿಯ ಇಂಟಿರಿಯರ್ ನಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಲಾಗಿದೆ.

ಮ್ಯೂಸಿಕಲ್ ಇನ್ಸ್ ಟ್ರೂಮೆಂಟ್ ಗಳೊಂದಿಗೆ ಮಾಡಿಫೈಗೊಂಡ ಕ್ರೆಟಾ ಎಸ್‌ಯುವಿ

ಸೀಟುಗಳಿಂದ ಪೆಡಲ್‌ಗಳವರೆಗೆ ಎಲ್ಲವನ್ನೂ ಅಪ್ ಡೇಟ್ ಮಾಡಲಾಗಿದೆ. ಪ್ಲಾಸ್ಟಿಕ್‌ನಲ್ಲಿದ್ದ ಎಲ್ಲಾ ಪ್ಯಾನೆಲ್ ಗಳನ್ನು ತೆಗೆದು ಹಾಕಿ ಫಾಕ್ಸ್ ವುಡ್ ಪ್ಯಾನೆಲ್ ಗಳನ್ನು ಅಳವಡಿಸಲಾಗಿದೆ. ಈ ಎಲ್ಲಾ ಬದಲಾವಣೆಗಳು ಕ್ರೆಟಾ ಎಸ್‌ಯುವಿಗೆ ಪ್ರೀಮಿಯಂ ಲುಕ್ ನೀಡುತ್ತವೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಸೀಟುಗಳು ಮೊದಲಿಗಿಂತ ಹೆಚ್ಚು ಆಕರ್ಷಕವಾಗಿವೆ. ಸ್ಟೀಯರಿಂಗ್ ವ್ಹೀಲ್ ಕವರ್, ಸೀಟುಗಳು ಹಾಗೂ ಇನ್ಸರ್ಟ್ ಗಳು ಕಂದು ಬಣ್ಣವನ್ನು ಹೊಂದಿವೆ. ಈ ಎಸ್‌ಯುವಿಯಲ್ಲಿ 18 ಇಂಚಿನ ಸಬ್ ವೂಫರ್ ಸಿಸ್ಟಂ, 4 ಸ್ಪೀಕರ್‌ಗಳನ್ನು ಹೆಚ್ಚುವರಿಯಾಗಿ ಅಳವಡಿಸಲಾಗಿದೆ.

ಮ್ಯೂಸಿಕಲ್ ಇನ್ಸ್ ಟ್ರೂಮೆಂಟ್ ಗಳೊಂದಿಗೆ ಮಾಡಿಫೈಗೊಂಡ ಕ್ರೆಟಾ ಎಸ್‌ಯುವಿ

ಹ್ಯುಂಡೈ ಕ್ರೆಟಾ ಎಸ್‌ಯುವಿಯನ್ನು 1.5-ಲೀಟರಿನ ಪೆಟ್ರೋಲ್, 1.5-ಲೀಟರಿನ ಟರ್ಬೊ-ಡೀಸೆಲ್ ಹಾಗೂ 1.4-ಲೀಟರಿನ ಟರ್ಬೊ-ಪೆಟ್ರೋಲ್ ಎಂಜಿನ್ ಎಂಬ ಮೂರು ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. 2020ರ ಕ್ರೆಟಾ ಎಸ್‌ಯುವಿಯ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ.9.99 ಲಕ್ಷಗಳಾಗಿದೆ.

Most Read Articles
 
Kannada
English summary
Hyundai Creta modified with musical instruments. Read in Kannada.
Story first published: Wednesday, October 14, 2020, 19:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X