ಲಾಕ್‌ಡೌನ್ ವಿನಾಯ್ತಿ ನಂತರವೇ 2,500 ಕಾರುಗಳಿಗಳಿಗೆ ಬುಕ್ಕಿಂಗ್ ಪಡೆದುಕೊಂಡ ಹ್ಯುಂಡೈ

ಲಾಕ್‌ಡೌನ್ ವಿನಾಯ್ತಿ ನಂತರ ವಾಹನ ಮಾರಾಟದಲ್ಲಿ ಹಲವಾರು ಹೊಸ ಬದಲಾಣೆಗಳನ್ನು ಪರಿಚಯಿಸಿರುವ ಆಟೋ ಕಂಪನಿಗಳು ಸುರಕ್ಷಿತ ವ್ಯಾಪಾರ-ವಹಿವಾಟು ನಡೆಸುತ್ತಿದ್ದು, ಸಂಕಷ್ಟದ ಪರಿಸ್ಥಿತಿಯಲ್ಲೂ ಹೊಸ ಕಾರುಗಳ ಮಾರಾಟ ಪ್ರಮಾಣದಲ್ಲಿ ಚೇತರಿಕೆ ಕಂಡುಬರುತ್ತಿದೆ.

ಲಾಕ್‌ಡೌನ್ ವಿನಾಯ್ತಿ ನಂತರವೇ 2,500 ಕಾರುಗಳಿಗಳಿಗೆ ಬುಕ್ಕಿಂಗ್ ಪಡೆದುಕೊಂಡ ಹ್ಯುಂಡೈ

ಕಾರು ಮಾರಾಟದಲ್ಲಿ ಎರಡನೇ ಅತಿದೊಡ್ಡ ಕಂಪನಿಯಾಗಿ ಹೊರಹೊಮ್ಮಿರುವ ಹ್ಯುಂಡೈ ಕೂಡಾ ಇದೀಗ ಇದೀಗ ಕಾರುಗಳ ಮಾರಾಟದಲ್ಲಿ ಗಮನಸೆಳೆಯುತ್ತಿದ್ದು, ಮೇ 4 ರಿಂದ ಇದುವರೆಗೆ ಸುಮಾರು 2,500 ಯುನಿಟ್‌ಗಳಿಗಾಗಿ ಬುಕ್ಕಿಂಗ್ ಪಡೆದುಕೊಂಡಿದೆ. ಸದ್ಯ ಲಾಕ್‌ಡೌನ್‌ಗೂ ಮುನ್ನ ಬುಕ್ಕಿಂಗ್ ದಾಖಲಿಸಿದ್ದ ಗ್ರಾಹಕರಿಗೆ ಹೊಸ ಕಾರುಗಳನ್ನು ವಿತರಣೆ ಮಾಡಲಾಗುತ್ತಿದ್ದು, ಹ್ಯುಂಡೈ ಘೋಷಣೆ ಮಾಡಿರುವ ಹೊಸ ಆಫರ್‌ಗಳು ಗ್ರಾಹಕರ ಆಕರ್ಷಣೆಗೆ ಕಾರಣವಾಗಿವೆ.

ಲಾಕ್‌ಡೌನ್ ವಿನಾಯ್ತಿ ನಂತರವೇ 2,500 ಕಾರುಗಳಿಗಳಿಗೆ ಬುಕ್ಕಿಂಗ್ ಪಡೆದುಕೊಂಡ ಹ್ಯುಂಡೈ

ದೇಶಾದ್ಯಂತ 225 ಮಾರಾಟ ಮಳಿಗೆಗಳನ್ನು ಮಾತ್ರವೇ ತೆರಿದಿರುವ ಹ್ಯುಂಡೈ ಕಂಪನಿಯು ಗ್ರಾಹಕರ ಸೆಳೆಯಲು ವಿವಿಧ ಮಾದರಿಯ ಹಲವು ಆಫರ್‌ಗಳನ್ನು ನೀಡುತ್ತಿದ್ದು, ಸಂಕಷ್ಟದ ಸಮಯದಲ್ಲೂ ಗ್ರಾಹಕರಿಗೆ ಆರ್ಥಿಕವಾಗಿ ಸಹಕಾರಿಯಾಗುವ ಯೋಜನೆಗಳನ್ನು ಘೋಷಣೆ ಮಾಡಿದೆ.

ಲಾಕ್‌ಡೌನ್ ವಿನಾಯ್ತಿ ನಂತರವೇ 2,500 ಕಾರುಗಳಿಗಳಿಗೆ ಬುಕ್ಕಿಂಗ್ ಪಡೆದುಕೊಂಡ ಹ್ಯುಂಡೈ

ಕರೋನಾ ವೈರಸ್‌ನಿಂದಾಗಿ ಆಟೋ ಮೊಬೈಲ್ ಸೇರಿದಂತೆ ಎಲ್ಲ ವಲಯದಲ್ಲೂ ಆರ್ಥಿಕ ಸ್ಥಿತಿ ಶೋಚನೀಯ ಸ್ಥಿತಿಗೆ ತಲುಪಿದೆ. ಲಾಕ್‌ಡೌನಿಂದಾಗಿ ಕುಸಿದುಬಿದ್ದಿರುವ ವ್ಯಾಪಾರ ಅಭಿವೃದ್ದಿಯನ್ನು ಸರಿದಾರಿಗೆ ತರುವುದು ಒಂದು ಸವಾಲಾಗಿ ಪರಿಣಿಮಿಸಿದ್ದು, ಹ್ಯುಂಡೈ ಕಂಪನಿಯು ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿತ್ತು.

ಲಾಕ್‌ಡೌನ್ ವಿನಾಯ್ತಿ ನಂತರವೇ 2,500 ಕಾರುಗಳಿಗಳಿಗೆ ಬುಕ್ಕಿಂಗ್ ಪಡೆದುಕೊಂಡ ಹ್ಯುಂಡೈ

ಲಾಕ್‌ಡೌನ್‌ಗೂ ಮೊದಲ ವಾಹನಗಳ ಖರೀದಿ ಮುಂಗಡ ಪಾವತಿಸಿದ್ದ ಗ್ರಾಹಕರಲ್ಲಿ ಬಹುತೇಕರು ಇದೀಗ ಮುಂಗಡ ಹಣ ವಾಪಸ್ ಪಡೆದುಕೊಳ್ಳುತ್ತಿರುವುದು ಆಟೋ ಕಂಪನಿಗಳನ್ನು ಚಿಂತೆಗೀಡು ಮಾಡಿದ್ದು, ವಾಹನ ಮಾರಾಟಕ್ಕೆ ವಿನಾಯ್ತಿ ಸಿಕ್ಕರೂ ಇದೀಗ ಗ್ರಾಹಕರು ಮಾರಾಟ ಮಳಿಗೆಗಳತ್ತ ಸುಳಿಯದಿರುವುದು ಭಾರೀ ನಷ್ಟ ಭೀತಿ ಎದುರಾಗಿದೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಲಾಕ್‌ಡೌನ್ ವಿನಾಯ್ತಿ ನಂತರವೇ 2,500 ಕಾರುಗಳಿಗಳಿಗೆ ಬುಕ್ಕಿಂಗ್ ಪಡೆದುಕೊಂಡ ಹ್ಯುಂಡೈ

ಮಾಹಿತಿಗಳ ಪ್ರಕಾರ, ಲಾಕ್‌ಡೌನ್‌ಗೂ ಮುಂಗಡ ಪಾವತಿಸಿದ್ದ ಗ್ರಾಹಕರಲ್ಲಿ ಇದೀಗ ಸುಮಾರು ಶೇ.60ರಿಂದ ಶೇ.70ರಷ್ಟು ಜನ ಇದೀಗ ಮುಂಗಡ ಹಣವನ್ನು ವಾಪಸ್ ಪಡೆದುಕೊಳ್ಳುತ್ತಿದ್ದು, ಭವಿಷ್ಯದಲ್ಲಿ ಮತ್ತಷ್ಟು ಆರ್ಥಿಕ ಸಂಕಷ್ಟು ಶುರುವಾಗಬಹುದು ಎನ್ನುವ ಆತಂಕ ಗ್ರಾಹಕರಲ್ಲಿ ಕಾಡತೊಡಗಿದೆ.

ಲಾಕ್‌ಡೌನ್ ವಿನಾಯ್ತಿ ನಂತರವೇ 2,500 ಕಾರುಗಳಿಗಳಿಗೆ ಬುಕ್ಕಿಂಗ್ ಪಡೆದುಕೊಂಡ ಹ್ಯುಂಡೈ

ಇದರಿಂದ ಆತಂಕದಲ್ಲಿರುವ ಆಟೋ ಕಂಪನಿಗಳು ಗ್ರಾಹಕರನ್ನು ಸೆಳೆಯಲು ವಿವಿಧ ಮಾದರಿಯ ಹಲವಾರು ಹಣಕಾಸು ಸೇವೆಗಳನ್ನು ನೀಡಲು ಮುಂದಾಗಿದ್ದು, ಹ್ಯುಂಡೈ ಕೂಡಾ ಐದು ಮಾದರಿಯ ಹಣಕಾಸು ಸೇವೆಗಳ ಆಫರ್ ನೀಡುವ ಮೂಲಕ ವಾಹನ ಖರೀದಿದಾರರಲ್ಲಿ ಆತ್ಮವಿಶ್ವಾಸ ತುಂಬಿದೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಲಾಕ್‌ಡೌನ್ ವಿನಾಯ್ತಿ ನಂತರವೇ 2,500 ಕಾರುಗಳಿಗಳಿಗೆ ಬುಕ್ಕಿಂಗ್ ಪಡೆದುಕೊಂಡ ಹ್ಯುಂಡೈ

ಆಕರ್ಷಕ ಇಎಂಐ ಮರುಪಾವತಿ, ಸಾಲ ಮರುಪಾವತಿಗಾಗಿ ಧೀರ್ಘಾವಧಿಯ ಸಾಲ, ಕಡಿಮೆ ಬಡ್ಡಿದರದ ಸಾಲ, ಬಲೂನ್ ಸ್ಕೀಮ್ ಸೇರಿದಂತೆ ವಿವಿಧ ಮಾದರಿಯ ಆಫರ್‌ಗಳನ್ನು ನೀಡಲಾಗುತ್ತಿದ್ದು, ಆಯ್ದ ಕಾರುಗಳ ಖರೀದಿ ಮೇಲೆ ಮೊದಲ ವರ್ಷದ ಮೂರು ತಿಂಗಳು ಇಎಂಐ ಕಡಿತ ಯೋಜನೆಯನ್ನು ಸಹ ಹ್ಯುಂಡೈ ಆಫರ್ ಮಾಡುತ್ತಿದೆ.

Most Read Articles

Kannada
English summary
Hyundai Gets 2,500 Bookings After Dealerships Reopening In India Details, Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X