ಕರೋನಾ ವಾರಿಯರ್ಸ್‌ಗಾಗಿ ಸ್ಪೆಷಲ್ ಕ್ಯಾಂಪ್ ಆಯೋಜಿಸಿದ ಹ್ಯುಂಡೈ

ಮಾಹಾಮಾರಿ ಕರೋನಾ ವೈರಸ್ ಮಟ್ಟ ಹಾಕುವುದಕ್ಕಾಗಿ ಸದ್ಯ ನಾಲ್ಕನೇ ಹಂತದ ಲಾಕ್‌ಡೌನ್ ವಿಧಿಸಿರುವ ಕೇಂದ್ರ ಸರ್ಕಾರವು ಆರ್ಥಿಕ ಪುನಶ್ಚೇತನಕ್ಕಾಗಿ ಕೈಗಾರಿಕಾ ವಲಯಕ್ಕೆ ಕೆಲವು ವಿನಾಯ್ತಿಗಳನ್ನು ಘೋಷಿಸಿದ್ದು, ಆಟೋ ಕಂಪನಿಗಳು ಕೂಡಾ ಹೊಸ ಮಾರ್ಗಸೂಚಿ ಅನುಸಾರವಾಗಿ ವಾಹನ ಉತ್ಪಾದನೆ ಮತ್ತು ಮಾರಾಟವನ್ನು ಪುನಾರಂಭಿಸಿವೆ.

ಕರೋನಾ ವಾರಿಯರ್ಸ್‌ಗಾಗಿ ಸ್ಪೆಷಲ್ ಕ್ಯಾಂಪ್ ಆಯೋಜಿಸಿದ ಹ್ಯುಂಡೈ

ಹ್ಯುಂಡೈ ಕೂಡಾ ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಾರ ಕಾರು ಉತ್ಪಾದನೆಯನ್ನು ಪುನಾರಂಭಿಸಿದ್ದು, ಚೆನ್ನೈ ಹೊರವಲಯದಲ್ಲಿರುವ ಕಾರು ಉತ್ಪಾದನಾ ಘಟಕದಲ್ಲಿ ಗರಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳೊಂದಿಗೆ ಉತ್ಪಾದನಾ ಪ್ರಕ್ರಿಯೆಗೆ ಮರುಚಾಲನೆ ನೀಡಿದೆ. ಶೇ.50ಕ್ಕಿಂತಲೂ ಕಡಿಮೆ ಪ್ರಮಾಣದ ಉದ್ಯೋಗಿಗಳೊಂದಿಗೆ ಉತ್ಪಾದನಾ ಚಟುವಟಿಕೆಗಳನ್ನು ಕೈಗೊಳ್ಳಲಾಗಿದ್ದು, ಉದ್ಯೋಗದ ಸ್ಥಳದಲ್ಲಿ ಸಾಮಾಜಿಕ ಅಂತರದ ಜೊತೆಗೆ ಗುಣಮಟ್ಟದ ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್ ಮತ್ತು ಹ್ಯಾಂಡ್ ಗ್ಲೌಸ್ ಬಳಕೆಯು ಕಡ್ಡಾಯವಾಗಿರಲಿದೆ.

ಕರೋನಾ ವಾರಿಯರ್ಸ್‌ಗಾಗಿ ಸ್ಪೆಷಲ್ ಕ್ಯಾಂಪ್ ಆಯೋಜಿಸಿದ ಹ್ಯುಂಡೈ

ವಾಹನ ಮತ್ತು ಬಿಡಿಭಾಗಗಳ ಉತ್ಪಾದನೆಗೆ ಮರುಚಾಲನೆ ನೀಡಿರುವ ವಿವಿಧ ಆಟೋ ಕಂಪನಿಗಳು ಸಹ ಸೋಂಕು ಹರಡದಂತೆ ಈಗಾಗಲೇ ಹಲವಾರು ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ನಿರ್ದಿಷ್ಟ ಪ್ರಮಾಣದ ಉದ್ಯೋಗಿಗಳೊಂದಿಗೆ ಉತ್ಪಾದನಾ ಚಟುವಟಿಕೆಗಳನ್ನು ಆರಂಭಿಸಲಾಗಿದೆ.

ಕರೋನಾ ವಾರಿಯರ್ಸ್‌ಗಾಗಿ ಸ್ಪೆಷಲ್ ಕ್ಯಾಂಪ್ ಆಯೋಜಿಸಿದ ಹ್ಯುಂಡೈ

ಕೇಂದ್ರ ಸರ್ಕಾರ ನೀಡಿರುವ ಹೊಸ ಗೈಡ್‌ಲೆನ್ಸ್ ಪ್ರಕಾರ, ಹಸಿರು ವಲಯದಲ್ಲಿರುವ ಮುನ್ಸಿಪಲ್ ಕಾರ್ಪೊರೇಶನ್ ಮಿತಿ ಹೊರಗಿನ ಕೈಗಾರಿಕಾ ಸಂಸ್ಥೆಗಳಿಗೆ ಕಾರ್ಯಾಚರಣೆಯನ್ನು ಪುನರಾರಂಭಿಸಲು ಅನುಮತಿ ನೀಡಲಾಗುತ್ತಿದ್ದು, ಗರಿಷ್ಠ ಪ್ರಮಾಣದ ಸುರಕ್ಷಾ ಸಾಧನಗಳನ್ನು ಬಳಕೆ ಮಾಡುವುದು ಕಡ್ಡಾಯವಾಗಿಸಿದೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಕರೋನಾ ವಾರಿಯರ್ಸ್‌ಗಾಗಿ ಸ್ಪೆಷಲ್ ಕ್ಯಾಂಪ್ ಆಯೋಜಿಸಿದ ಹ್ಯುಂಡೈ

ಮಾಹಾಮಾರಿ ಕರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಸಂಕಷ್ಟದ ಸಮಯದಲ್ಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಸ್ಪಂದಿಸಿರುವ ಹ್ಯುಂಡೈ ಮತ್ತು ವಿವಿಧ ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಧನಸಹಾಯದ ಜೊತೆಗೆ ವೈದ್ಯಕೀಯ ಉಪಕರಣಗಳನ್ನು ಉತ್ಪಾದನೆ ಮಾಡಿ ಪೂರೈಕೆ ಮಾಡುತ್ತಿವೆ.

ಕರೋನಾ ವಾರಿಯರ್ಸ್‌ಗಾಗಿ ಸ್ಪೆಷಲ್ ಕ್ಯಾಂಪ್ ಆಯೋಜಿಸಿದ ಹ್ಯುಂಡೈ

ಹಾಗೆಯೇ ಮಹಾಮಾರಿ ವೈರಸ್ ವಿರುದ್ಧ ಹೋರಾಟದಲ್ಲಿ ಭಾಗಿರುವ ವೈದ್ಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿ, ಪೊಲೀಸರು ಮತ್ತು ರಕ್ಷಣಾ ಕಾರ್ಯಚಾರಣೆಯಲ್ಲಿ ಭಾಗಿಯಾಗಿರುವ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಹ್ಯುಂಡೈ ಕಂಪನಿಯು ಸ್ಪೆಷಲ್ ಆಫರ್ ಘೋಷಿಸಿದೆ.

ಕರೋನಾ ವಾರಿಯರ್ಸ್‌ಗಾಗಿ ಸ್ಪೆಷಲ್ ಕ್ಯಾಂಪ್ ಆಯೋಜಿಸಿದ ಹ್ಯುಂಡೈ

ಕರೋನಾ ವಾರಿಯರ್ಸ್‌ಗಾಗಿ ಆಯೋಜಿಸಲಾಗಿರುವ ಕ್ಯಾಂಪ್‌ನಲ್ಲಿ ಹ್ಯುಂಡೈ ಕಾರುಗಳಿಗೆ ಉಚಿತವಾಗಿ ತಾಂತ್ರಿಕ ಸೌಲಭ್ಯಗಳ ಸೇವೆಗಳನ್ನು ಒದಗಿಸುತ್ತಿದ್ದು, ಮೇ 21ರಿಂದ ಮೇ 31ರ ತನಕ ಈ ಆಫರ್ ಉಪಯೋಗಿಕೊಳ್ಳಬಹುದಾಗಿದೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಕರೋನಾ ವಾರಿಯರ್ಸ್‌ಗಾಗಿ ಸ್ಪೆಷಲ್ ಕ್ಯಾಂಪ್ ಆಯೋಜಿಸಿದ ಹ್ಯುಂಡೈ

ಹ್ಯುಂಡೈ ಕಂಪನಿಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ರೂ.12 ಕೋಟಿ ಹಣಕಾಸಿನ ನೆರವು ನೀಡಿದ್ದು, ಜೊತೆಗೆ ರೂ.5 ಕೋಟಿ ಮೌಲ್ಯದ ಪಿಪಿಇ ಕಿಟ್, ಕೋವಿಡ್-19 ಅಡ್ವಾನ್ಸ್ ಟೆಸ್ಟಿಂಗ್ ಕಿಟ್, ಸುಧಾರಿತ ತಂತ್ರಜ್ಞಾನ ಪ್ರೇರಿತ ಸಾವಿರಾರು ವೆಂಟಿಲೇಟರ್‌ಗಳು ಮತ್ತು ವೈದ್ಯಕೀಯ ತ್ಯಾಜ್ಯ ನಿರ್ವಹಣೆಗೂ ಸಹಕಾರ ನೀಡುತ್ತಿದೆ.

Most Read Articles

Kannada
English summary
Hyundai announces 'Corona Warriors Camp' for frontline workers. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X