ಆಟೋ ಎಕ್ಸ್‌ಪೋ 2020: ಐ30 ಫಾಸ್ಟ್ ಬ್ಯಾಕ್ ಕಾರು ಅನಾವರಣಗೊಳಿಸಿದ ಹ್ಯುಂಡೈ
ಹ್ಯುಂಡೈ ಮೋಟಾರ್ಸ್ ಭವಿಷ್ಯದಲ್ಲಿ ಹಲವಾರು ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಯೋಜನೆಯನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಹ್ಯುಂಡೈ ಕಂಪನಿಯು ಈಗ ನಡೆಯುತ್ತಿರುವ 2020ರ ಆಟೋ ಎಕ್ಸ್ ಪೋದಲ್ಲಿ ಐ30 ಫಾಸ್ಟ್ ಬ್ಯಾಕ್ ಕಾರ್ ಅನ್ನು ಅನಾವರಣಗೊಳಿಸಿದೆ.

ಐ30 ಫಾಸ್ಟ್ ಬ್ಯಾಕ್ ಕಾರು ಹ್ಯುಂಡೈ ಕಂಪನಿಯ ದುಬಾರಿ ಕಾರುಗಳಲ್ಲಿ ಒಂದಾಗಿದೆ. ಈ ಕಾರು ಹ್ಯುಂಡೈ ಕಂಪನಿಯ ಐ30 ಸರಣಿಯ ಎರಡನೇ ಕಾರ್ ಆಗಿದೆ. ಸ್ಪೋರ್ಟಿ ಲುಕ್‍ನ ಎಕ್ಸ್ ಟಿರಿಯರ್ ಹೊಂದಿರುವ ಈ ಕಾರಿನ ಮುಂಭಾಗದಲ್ಲಿರುವ ಬಂಪರ್‍ನಲ್ಲಿ ಕೆಂಪು ಬಣ್ಣದ ಸ್ಟ್ರಿಪ್ ಅಳವಡಿಸಲಾಗಿದೆ.

ಈ ಕಾರಿನ ಇಂಟಿರಿಯರ್ ಸ್ಪೋರ್ಟಿ ವಿನ್ಯಾಸದ ಬ್ಲಾಕ್ ಥೀಮ್ ಅನ್ನು ಹೊಂದಿದೆ. ಈ ಕಾರಿನಲ್ಲಿರುವ ಪ್ರಮುಖ ಭಾಗಗಳು ಕೆಂಪು ಬಣ್ಣವನ್ನು ಹೊಂದಿವೆ. ಹೊಸ ಫಾಸ್ಟ್ ಬ್ಯಾಕ್ ಕಾರು ಅಪ್‍ರೈಟ್ ಸಸ್ಪೆಂಷನ್, ಬ್ರೇಕ್ ಹಾಗೂ ಟಯರ್‍ಗಳನ್ನು ಹೊಂದಿದೆ.

ಈ ಕಾರಿನಲ್ಲಿ 4 ಸಿಲಿಂಡರ್ ಹೊಂದಿರುವ 2.0 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಸ್ಟಾಂಡರ್ಡ್ ಪ್ಯಾಕೇಜ್‍ನಲ್ಲಿ 275 ಬಿಹೆಚ್‍ಪಿ ಪವರ್ ಹಾಗೂ ಪರ್ಫಾಮೆನ್ಸ್ ಪ್ಯಾಕೇಜ್‍ನಲ್ಲಿ 353 ಬಿಹೆಚ್‍ಪಿ ಪವರ್ ಉತ್ಪಾದಿಸುತ್ತದೆ.

ಈ ಎಂಜಿನ್‍ನ ಗರಿಷ್ಟ ಟಾರ್ಕ್ ಉತ್ಪಾದನೆ 378 ಎನ್‍ಎಂ ಆಗಿದೆ. ಈ ಎಂಜಿನ್‍ನೊಂದಿಗೆ ಜೋಡಿಸಲಾಗಿರುವ ಮ್ಯಾನುವಲ್ ಟ್ರಾನ್ಸ್ ಮಿಷನ್ ಎಲೆಕ್ಟ್ರಾನಿಕ್ ಲಿಮಿಟೆಡ್ ಸ್ಲಿಪ್ ಡಿಫೆರೆಂಶಿಯಲ್ ಮೂಲಕ ಫ್ರಂಟ್ ವ್ಹೀಲ್‍ಗಳಿಗೆ ಪವರ್ ಕಳುಹಿಸುತ್ತದೆ.

ಐ 30 ಫಾಸ್ಟ್ ಬ್ಯಾಕ್ ಕಾರು ಇಕೊ, ನಾರ್ಮಲ್, ಸ್ಪೋರ್ಟ್, ಸ್ಪೋರ್ಟ್ ಎನ್ ಹಾಗೂ ಕಸ್ಟಮ್ ಎಂಬ ಐದು ವಿಧದ ಡ್ರೈವ್ ಮೋಡ್‍ಗಳನ್ನು ಹೊಂದಿದೆ. ಹೊಸ ಫಾಸ್ಟ್ ಬ್ಯಾಕ್ ಕಾರ್ ಅನ್ನು ಆಮದು ಮಾಡಿಕೊಂಡು ಭಾರತದಲ್ಲಿ ಅಸೆಂಬ್ಲ್ ಮಾಡಲಾಗುವುದು.

ಕೇಂದ್ರ ಸರ್ಕಾರದ ಹೊಸ ಆಮದು ನೀತಿಯನ್ವಯ ಈ ಕಾರುಗಳನ್ನು ಆಮದು ಮಾಡಿಕೊಳ್ಳಲಾಗುವುದು. ಭಾರತದಲ್ಲಿ ಬಿಡುಗಡೆಯಾದ ನಂತರ ಈ ಕಾರು ಬೇರೆ ಯಾವುದೇ ಕಾರುಗಳಿಗೆ ನೇರವಾಗಿ ಪೈಪೋಟಿಯನ್ನು ನೀಡುವುದಿಲ್ಲ. ಐ 30 ಫಾಸ್ಟ್ ಬ್ಯಾಕ್ ಕಾರ್ ಅನ್ನು ಭಾರತದಲ್ಲಿ ಸೀಮಿತ ಸಂಖ್ಯೆಯಲ್ಲಿ ಮಾರಾಟ ಮಾಡಲಾಗುವುದು.


Click it and Unblock the Notifications








