ಬಿಎಸ್-6 ಇಸುಝು ವಿ-ಕ್ರಾಸ್ ಟೀಸರ್ ಬಿಡುಗಡೆ

ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಇಸುಝು ಮೋಟಾರ್ಸ್ ತನ್ನ ಬಿಎಸ್-6 ಡಿ-ಮ್ಯಾಕ್ಸ್ ಕಮರ್ಷಿಯಲ್ ಪಿಕ್ ಅಪ್ ಟೀಸರ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಇದೀಗ ಇಸುಝು ತನ್ನ ವೆಬ್‌ಸೈಟ್‌ನಲ್ಲಿ ಹೊಸ ವಿ-ಕ್ರಾಸ್ ಪಿಕ್ ಅಪ್ ಟ್ರಕ್ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಬಿಎಸ್-6 ಇಸುಝು ವಿ-ಕ್ರಾಸ್ ಟೀಸರ್ ಬಿಡುಗಡೆ

ಇಸುಝು ಮೋಟಾರ್ಸ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಮೊದಲ ಬಿಎಸ್-6 ಮಾದರಿಯಾಗಿ ಡಿ-ಮ್ಯಾಕ್ಸ್ ಕಮರ್ಷಿಯಲ್ ಪಿಕ್ ಅಪ್ ಟ್ರಕ್ ಅನ್ನು ಬಿಡುಗಡೆಗೊಳಿಸಲಿದೆ. ಈ ಹೊಸ ಇಸುಝು ಡಿ-ಮ್ಯಾಕ್ಸ್ ಪಿಕ್ ಅಪ್ ಟ್ರಕ್ ನಾಳೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಶೀಘ್ರದಲ್ಲೇ ಬಿಎಸ್-6 ವಿ-ಕ್ರಾಸ್ ಪಿಕ್ ಅಪ್ ಟ್ರಕ್ ಅನ್ನು ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಬಿಎಸ್-6 ಇಸುಝು ವಿ-ಕ್ರಾಸ್ ಟೀಸರ್ ಬಿಡುಗಡೆ

ಇಸುಝು ತನ್ನ ಹೊಸ ತಲೆಮಾರಿನ ವಿ-ಕ್ರಾಸ್ ಪಿಕ್ ಅಪ್ ಟ್ರಕ್ ಅನ್ನು 2019ರ ಅಕ್ಟೋಬರ್ ತಿಂಗಳಲ್ಲಿ ಥೈಲ್ಯಾಂಡ್ ನಲ್ಲಿ ಅನಾವರಣಗೊಳಿಸಿತ್ತು. ಈ ವಿ-ಕ್ರಾಸ್ ಮಾದರಿಯ ಮುಂಭಾಗದಲ್ಲಿ ಟ್ವಿನ್ ಕ್ರೋಮ್ ಸ್ಲಾಟ್ ಫ್ರಂಟ್ ಗ್ರಿಲ್, ಪ್ರೊಜೆಕ್ಟರ್ ಹೊಂದಿರುವ ಎಲ್‍ಇ‍‍ಡಿ ಹೆಡ್‍‍ಲ್ಯಾಂಪ್ ಹಾಗೂ ಡಿ‍ಆರ್‍ಎಲ್‍‍ಗಳಿವೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಬಿಎಸ್-6 ಇಸುಝು ವಿ-ಕ್ರಾಸ್ ಟೀಸರ್ ಬಿಡುಗಡೆ

ಇದರ ಜೊತೆಗೆ ವರ್ಟಿಕಲ್ ಸ್ಟಾಕ್‍‍ನ ಡ್ಯುಯಲ್ ಫಾಗ್ ಲ್ಯಾಂಪ್ ಹೊಂದಿರುವ ಹೊಸ ಬಂಪರ್ ಹಾಗೂ ಹೊಸ ಸ್ಕಿಡ್ ಪ್ಲೇಟ್‍‍ಗಳಿದ್ದು, ಡಿ ಮ್ಯಾಕ್ಸ್ ವಾಹನಕ್ಕೆ ಮೊದಲಿಗಿಂತ ಹೆಚ್ಚಿನ ರಗಡ್ ಲುಕ್ ನೀಡುತ್ತವೆ.

ಬಿಎಸ್-6 ಇಸುಝು ವಿ-ಕ್ರಾಸ್ ಟೀಸರ್ ಬಿಡುಗಡೆ

ಹೊಸ ವಾಹನದ ಟೇಲ್‍‍ಗೇಟ್ ಅನ್ನು ಪರಿಷ್ಕರಿಸಲಾಗಿದೆ. ಹೊಸ ಪಿಕ್‍ಅಪ್ ವಾಹನದಲ್ಲಿ 18 ಇಂಚಿನ ಬ್ಲಾಕ್ ಅಲಾಯ್ ವ್ಹೀಲ್‍‍ಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ವಾಹನದ ಲುಕ್ ಹೆಚ್ಚಿದೆ. ಕ್ಯಾಬಿನ್‍‍ನೊಳಗೆ ಹಲವಾರು ಹೊಸ ಫೀಚರ್‍‍ಗಳನ್ನು ಅಳವಡಿಸಲಾಗಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಬಿಎಸ್-6 ಇಸುಝು ವಿ-ಕ್ರಾಸ್ ಟೀಸರ್ ಬಿಡುಗಡೆ

ಇನ್ನು ಹೊಸ ಇಸುಝು ವಿ-ಕ್ರಾಸ್ ಕ್ಯಾಬಿನ್‍‍ನಲ್ಲಿ ಹೊಸ ಡ್ಯಾಶ್‍‍ಬೋರ್ಡ್ ವಿನ್ಯಾಸದ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯಿಡ್ ಆಟೋ ಹೊಂದಿರುವ 9 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಹಾಗೂ ಟ್ರೈಗ್ಯುಲರ್ ಎಸಿ ವೆಂಟ್ಸ್ ಗಳನ್ನು ಹೊಂದಿರಲಿದೆ.

ಬಿಎಸ್-6 ಇಸುಝು ವಿ-ಕ್ರಾಸ್ ಟೀಸರ್ ಬಿಡುಗಡೆ

ಈ ಇಸುಝು ವಿ-ಕ್ರಾಸ್ ನಲ್ಲಿ 6 ಏರ್‍‍ಬ್ಯಾಗ್, ಸ್ಟಾಬಿಲಿಟಿ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ರೇರ್ ಕ್ರಾಸ್ ಟ್ರಾಫಿಕ್ ಅಲರ್ಟ್, ಆಟೋಮ್ಯಾಟಿಕ್ ಲಾಕಿಂಗ್, ವೆಲ್‍‍ಕಮ್ ಹಾಗೂ ಫಾಲೋ ಮಿ ಹೋಂ ಲೈಟಿಂಗ್ ಹಾಗೂ ವಾಯ್ಸ್ ಕಂಟ್ರೋಲ್ ಗಳನ್ನು ಹೊಂದಿರಲಿದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಬಿಎಸ್-6 ಇಸುಝು ವಿ-ಕ್ರಾಸ್ ಟೀಸರ್ ಬಿಡುಗಡೆ

ಇನ್ನು ಇಸುಝು ವಿ-ಕ್ರಾಸ್ ನಲ್ಲಿ 3.0 ಲೀಟರಿನ ಹೊಸ ಟರ್ಬೊ‍‍ಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿರಲಿದೆ. ಈ ಎಂಜಿನ್ 188 ಬಿ‍‍ಹೆಚ್‍‍ಪಿ ಪವರ್ ಹಾಗೂ 450 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರೊಂದಿಗೆ 1.9 ಲೀಟರಿನ ಡೀಸೆಲ್ ಎಂಜಿನ್‍‍ನೊಂದಿಗೂ ಈ ವಾಹನವನ್ನು ಮಾರಾಟ ಮಾಡಲಾಗುವುದು.

ಬಿಎಸ್-6 ಇಸುಝು ವಿ-ಕ್ರಾಸ್ ಟೀಸರ್ ಬಿಡುಗಡೆ

ಈ ಎಂಜಿನ್ 148 ಬಿ‍‍ಹೆಚ್‍‍ಪಿ ಪವರ್ ಹಾಗೂ 350 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಇಸುಝು ಕಂಪನಿಯು ಭಾರತದಲ್ಲಿ ಡಿ-ಮ್ಯಾಕ್ಸ್, ವಿ-ಕ್ರಾಸ್ ಮತ್ತು ಎಂಯು-ಎಕ್ಸ್ ಎಂಬ ಮೂರು ಮಾದರಿಗಳನ್ನು ನೀಡಿತು. ಡಿ-ಮ್ಯಾಕ್ಸ್ ವಾಣಿಜ್ಯ ಉದ್ದೇಶದ ಪಿಕ್-ಅಪ್ ಟ್ರಕ್ ಆಗಿದ್ದು, ಇದು ಒಂದೆರಡು ರೂಪಾಂತರಗಳಲ್ಲಿ ಲಭ್ಯವಿದೆ.

ಬಿಎಸ್-6 ಇಸುಝು ವಿ-ಕ್ರಾಸ್ ಟೀಸರ್ ಬಿಡುಗಡೆ

ವಿ-ಕ್ರಾಸ್ ಖಾಸಗಿ ಬಳಕೆಗಾಗಿ ಮಾರಾಟವಾಗುವ ಪಿಕ್-ಅಪ್ ಟ್ರಕ್ ಮತ್ತು ಉತ್ತಮ ಆಫ್-ರೋಡ್ ಸಾಮರ್ಥ್ಯಗಳನ್ನು ಹೊಂದಿದೆ. ಇತ್ತೀಚೆಗೆ ಇಸುಝು ಮ್ಯಾಕ್ಸ್ ವಿ-ಕ್ರಾಸ್ ಬಿಎಸ್-6 ಮಾದರಿಯು ಬೆಂಗಳೂರಿನಲ್ಲಿ ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ಅನ್ನು ನಡೆಸಿತ್ತು.

Most Read Articles

Kannada
Read more on ಇಸುಝು isuzu
English summary
Next-gen Isuzu V-Cross Briefly Teased. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X