ನಮ್ಮ ಬೆಂಗಳೂರಿನಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಹೊಸ ಶೋರೂಂ ತೆರೆದ ಜೆಎಲ್ಆರ್

ಐಷಾರಾಮಿ ಕಾರು ಉತ್ಪಾದನಾ ಕಂಪನಿ ಜೆಎಲ್ಆರ್(ಜಾಗ್ವಾರ್, ಲ್ಯಾಂಡ್ ರೋವಲ್, ರೇಂಜ್ ರೋವರ್) ನಮ್ಮ ಬೆಂಗಳೂರಿನಲ್ಲಿ ಹೊಸ ಮಾರಾಟ ಮಳಿಗೆಗೆ ಚಾಲನೆ ನೀಡಿದ್ದು, ಒಂದೇ ಸೂರಿನಡಿ ವಿವಿಧ ಗ್ರಾಹಕ ಸೇವೆಗಳನ್ನು ಒದಗಿಸುವ ತ್ರಿ ಎಸ್ ಮಾರಾಟ ಕೇಂದ್ರ ಇದಾಗಿದೆ.

ನಮ್ಮ ಬೆಂಗಳೂರಿನಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಹೊಸ ಶೋರೂಂ ತೆರೆದ ಜೆಎಲ್ಆರ್

ತ್ರಿ ಎಸ್ ಕಾರು ಮಾರಾಟ ಮಳಿಗೆಗಳಲ್ಲಿ ಹೊಸ ವಾಹನ ಮಾರಾಟ, ಗ್ರಾಹಕ ಸೇವೆಗಳು ಮತ್ತು ಬಿಡಿಭಾಗಗಳ ಸೇವೆಗಳು ಒಂದೇ ಸೂರಿನಡಿ ಲಭ್ಯವಿದ್ದು, ಜೆಲ್ಎಲ್ಆರ್ ಹೊಸ ಕಾರು ಮಾರಾಟ ಮಳಿಗೆಯು ಬೆಂಗಳೂರಿನ ನ್ಯೂ ಏರ್ಪೋರ್ಟ್ ರಸ್ತೆಯಲ್ಲಿ ತಲೆಎತ್ತಿದೆ. ಜೆಎಲ್ಆರ್ ಕಾರು ಮಾರಾಟ ಸಹಭಾಗಿತ್ವ ಸಂಸ್ಥೆಯಾದ ಮಾರ್ಕ್‌ಲ್ಯಾಂಡ್ ಈ ಹಿಂದೆ ಹೊಸೂರು ರಸ್ತೆಯಿಲ್ಲಿದ್ದ ಕಾರು ಮಾರಾಟ ಮಳಿಗೆಯನ್ನೇ ಇದೀಗ ಹೊಸ ಸೌಲಭ್ಯಗಳೊಂದಿಗೆ ಮರುಚಾಲನೆ ನೀಡಿದೆ.

ನಮ್ಮ ಬೆಂಗಳೂರಿನಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಹೊಸ ಶೋರೂಂ ತೆರೆದ ಜೆಎಲ್ಆರ್

ಹಳೆಯ ಕಾರು ಮಾರಾಟ ಮಳಿಗೆಯಲ್ಲಿ ಕೇವಲ ಕಾರು ಮಾರಾಟ ಸೌಲಭ್ಯವನ್ನು ಮಾತ್ರ ಹೊಂದಿದ್ದ ಮಾರ್ಕ್‌ಲ್ಯಾಂಡ್ ಡೀಲರ್ಸ್ ಸಂಸ್ಥೆಯು ಇದೀಗ 4,160 ಚದರ ಅಡಿ ವಿಸ್ತೀರ್ಣದಲ್ಲಿ ಪ್ರತ್ಯೇಕವಾಗಿ ತ್ರಿ ಎಸ್ ಸೌಲಭ್ಯಗಳನ್ನು ತೆರೆದಿದೆ.

ನಮ್ಮ ಬೆಂಗಳೂರಿನಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಹೊಸ ಶೋರೂಂ ತೆರೆದ ಜೆಎಲ್ಆರ್

ಹೊಸ ಕಾರು ಮಾರಾಟ ಮಳಿಗೆಗಳಲ್ಲಿ ಒಂದೇ ಬಾರಿಗೆ 10ಕ್ಕೂ ಹೆಚ್ಚು ಕಾರುಗಳನ್ನು ಪ್ರದರ್ಶನ ಮಾಡಬಹುದಾಗಿದ್ದು, ಗ್ರಾಹಕರ ವ್ಯವಹಾರಗಳಿಗೆ ಪ್ರತ್ಯೇಕ ಸೌಲಭ್ಯ ತೆರೆಯಲಾಗಿದೆ. ಹಾಗೆಯೇ ಹೊಸ ಕಾರುಗಳ ವಿತರಣೆಗೂ ಪ್ರತ್ಯೇಕವಾದ ಬೇ ಸಿದ್ದಪಡಿಸಲಾಗಿದ್ದು, ಸಾಕಷ್ಟು ಹೊರಾಂಗಣ ಸೌಲಭ್ಯ ಹೊಂದಿದೆ.

ನಮ್ಮ ಬೆಂಗಳೂರಿನಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಹೊಸ ಶೋರೂಂ ತೆರೆದ ಜೆಎಲ್ಆರ್

ಮಾರ್ಕ್‌ಲ್ಯಾಂಡ್ ಕಾರು ಮಾರಾಟ ಮಳಿಗೆಯ ಮತ್ತೊಂದು ವಿಶೇಷ ಎಂದರೆ ಯೂಸ್ಡ್ ಕಾರು ಮಾರಾಟ ಸೌಲಭ್ಯವನ್ನು ಸಹ ಹೊಂದಿದ್ದು, ಪ್ರಮಾಣಿಕೃತ ಯೂಸ್ಡ್ ಕಾರು ಮಾರಾಟವು ಸಹ ಹೊಸ ಮಾರಾಟ ಪ್ರಕ್ರಿಯೆಯಷ್ಟೇ ಮಹತ್ವದ ಪಡೆದುಕೊಂಡಿದೆ.

ನಮ್ಮ ಬೆಂಗಳೂರಿನಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಹೊಸ ಶೋರೂಂ ತೆರೆದ ಜೆಎಲ್ಆರ್

ಸೆಕೆಂಡ್ ಹ್ಯಾಂಡ್ ಕಾರುಗಳು ಹೊಸ ಕಾರುಗಳ ಮಾದರಿಯಲ್ಲೇ ಗರಿಷ್ಠ ಮಟ್ಟದ ವಾರಂಟಿ, ಆಕರ್ಷಕ ಸಾಲಸೌಲಭ್ಯಗಳನ್ನು ಪಡೆದುಕೊಂಡಿದ್ದು, ಅಸಂಘಟಿತವಾಗಿ ಕಾರ್ಯನಿರ್ವಹಿಸುತ್ತಿರುವ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮವನ್ನು ವ್ಯವಸ್ಥಿತವಾಗಿ ಮಾರಾಟ ಮಾಡುವ ಗುರಿ ಯೋಜನೆ ಹೊಂದಲಾಗಿದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ನಮ್ಮ ಬೆಂಗಳೂರಿನಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಹೊಸ ಶೋರೂಂ ತೆರೆದ ಜೆಎಲ್ಆರ್

ಅಸಂಘಟಿತವಾಗಿರುವ ಸ್ಥಳೀಯ ವ್ಯಾಪಾರಿಗಳ ಬಳಿ ಸೆಕೆಂಡ್ ಹ್ಯಾಂಡ್ ವಾಹನ ಖರೀದಿಯು ಕೆಲವು ಸಂದರ್ಭಗಳಲ್ಲಿ ಲಾಭಕ್ಕಿಂತ ಹೆಚ್ಚು ನಷ್ಟ ಅನುಭವಿಸಬೇಕಾದ ಸಂದರ್ಭಗಳು ಎದುರಾಗಬಹುದಾಗಿದ್ದು, ಪ್ರಮಾಣೀಕೃತ ಸೆಕೆಂಡ್ ಹ್ಯಾಂಡ್ ವಾಹನಗಳು ಗ್ರಾಹಕರ ಆಯ್ಕೆಗೆ ಉತ್ತಮ ಎನ್ನಬಹುದು.

ನಮ್ಮ ಬೆಂಗಳೂರಿನಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಹೊಸ ಶೋರೂಂ ತೆರೆದ ಜೆಎಲ್ಆರ್

ಜೊತೆಗೆ ಪ್ರಮಾಣೀಕೃತ ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟ ಮಳಿಗೆಗಳಲ್ಲಿ ಖರೀದಿಸುವ ವಾಹನಗಳಿಗೆ ಹೆಚ್ಚುವರಿಯಾಗಿ ವಾರಂಟಿ ಸಹ ದೊರೆಯಲಿದ್ದು, ಇಲ್ಲಿ ಮೋಸ ವ್ಯವಹಾರಗಳಿಗೆ ಯಾವುದೇ ಅವಕಾಶವಿರುವುದಿಲ್ಲ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ನಮ್ಮ ಬೆಂಗಳೂರಿನಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಹೊಸ ಶೋರೂಂ ತೆರೆದ ಜೆಎಲ್ಆರ್

ಈ ನಿಟ್ಟಿನಲ್ಲಿ ಹೊಸ ಮಾರಾಟ ಮಳಿಗೆ ಸೌಲಭ್ಯದೊಂದಿಗೆ ಒಂದೇ ಸೂರಿನಡಿ ವಿವಿಧ ಸೇವೆಗಳನ್ನು ಒದಗಿಸುತ್ತಿರುವ ಲ್ಯಾಂಡ್‌ಮಾರ್ಕ್ ಡೀಲರ್ಸ್ ಸಂಸ್ಥೆಯು ಮುಂಬರುವ ದಿನಗಳಲ್ಲಿ ಕಾರು ಮಾರಾಟದಲ್ಲಿ ಹೊಸ ನೀರಿಕ್ಷೆಯಿದ್ದು, ಜೆಎಲ್ಆರ್ ಬಹುತೇಕ ಕಾರು ಮಾದರಿಗಳು ಹೊಸ ಎಮಿಷನ್ ನಿಯಮದೊಂದಿಗೆ ಮಾರಾಟಗೊಳ್ಳುತ್ತಿವೆ.

Most Read Articles

Kannada
English summary
Jaguar Land Rover Inaugurates New 3S Retail Facility In Bangalore. Read in Kannada.
Story first published: Friday, August 21, 2020, 21:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X