ಅನಾವರಣವಾಯ್ತು ಹೊಸ ಜೀಪ್ ರ‍್ಯಾಂಗ್ಲರ್ ರೂಬಿಕಾನ್ 392 ಎಸ್‍ಯುವಿ

ಅಮೆರಿಕ ಮೂಲದ ವಾಹನ ತಯಾರಕ ಕಂಪನಿಯಾದ ಜೀಪ್ ತನ್ನ ಹೊಸ ರ‍್ಯಾಂಗ್ಲರ್ ರೂಬಿಕಾನ್ 392 ಎಸ್‍ಯುವಿಯನ್ನು ಅನಾವರಾಣಗೊಳಿಸಿದೆ. ಜೀಪ್ ಸರಣಿಯಲ್ಲಿ ರ‍್ಯಾಂಗ್ಲರ್ ರೂಬಿಕಾನ್ ಜನಪ್ರಿಯ ಮಾದರಿಯಾಗಿದೆ.

ಅನಾವರಣವಾಯ್ತು ಹೊಸ ಜೀಪ್ ರ‍್ಯಾಂಗ್ಲರ್ ರೂಬಿಕಾನ್ 392 ಎಸ್‍ಯುವಿ

ಹೊಸ ಜೀಪ್ ರ‍್ಯಾಂಗ್ಲರ್ ರೂಬಿಕಾನ್ 392 ಎಸ್‍ಯುವಿಯನ್ನು ಕೆಲವು ತಿಂಗಳ ಹಿಂದೆ ಉತ್ಪಾದನಾ ಮಾದರಿಯಾಗಿ ಪ್ರದರ್ಶಿಸಿದ್ದರು. ಆದರೆ ಉತ್ಪಾದನಾ ಆವೃತ್ತಿಯು ಕೆಲವು ಬದಲಾವಣೆಗಳನ್ನು ಹೊಂದಿದೆ. ಹೊಸ ಜೀಪ್ ರ‍್ಯಾಂಗ್ಲರ್ ರೂಬಿಕಾನ್ 392 ಎಸ್‍ಯುವಿಯು 6.4-ಲೀಟರ್ ವಿ8 ಎಂಜಿನ್ ಅನ್ನು ಪಡೆಯುತ್ತದೆ. ಈ ಎಂಜಿನ್ 470 ಬಿಹೆಚ್‍ಪಿ ಪವರ್ ಮತ್ತು 637 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅನಾವರಣವಾಯ್ತು ಹೊಸ ಜೀಪ್ ರ‍್ಯಾಂಗ್ಲರ್ ರೂಬಿಕಾನ್ 392 ಎಸ್‍ಯುವಿ

ಪ್ಯಾಡಲ್ ಶಿಫ್ಟರ್‌ಗಳೊಂದಿಗೆ ಎಂಜಿನ್ ಅನ್ನು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಹೊಸ ಜೀಪ್ ರ‍್ಯಾಂಗ್ಲರ್ ರೂಬಿಕಾನ್ 392 ಎಸ್‍ಯುವಿಯು ಕೇವಲ 4.5 ಸೆಕೆಂಡುಗಳಲ್ಲಿ 0-100 ಕಿ.ಮೀ ಸ್ಪೀಡ್ ಅನ್ನು ಪಡೆದುಕೊಳ್ಳುತ್ತದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಅನಾವರಣವಾಯ್ತು ಹೊಸ ಜೀಪ್ ರ‍್ಯಾಂಗ್ಲರ್ ರೂಬಿಕಾನ್ 392 ಎಸ್‍ಯುವಿ

ಹೊಸ ಜೀಪ್ ರ‍್ಯಾಂಗ್ಲರ್ ರೂಬಿಕಾನ್ 392 ಎಸ್‍ಯುವಿಯ ಸಸ್ಪೆಂಕ್ಷನ್ ಬಗೆ ಹೇಳುವುದಾದರೆ, ಫಾಕ್ಸ್ ಶಾಕ್ಸ್, ಅಪರ್ ಕಂಟ್ರೋಲ್ ಅರ್ಮ್ಸ್ ಮತ್ತು ಹೆವಿ ಡ್ಯೂಟಿ ಬ್ರೇಕ್‌ಗಳನ್ನು ಅಳವಡಿಸಲಾಗಿದೆ.

ಅನಾವರಣವಾಯ್ತು ಹೊಸ ಜೀಪ್ ರ‍್ಯಾಂಗ್ಲರ್ ರೂಬಿಕಾನ್ 392 ಎಸ್‍ಯುವಿ

ಇನ್ನು ಈ ಹೊಸ ಎಸ್‍ಯುವಿಯಲ್ಲಿ ಆಫ್ ರೋಡ್ ಸಾಮರ್ಥ್ಯವನ್ನು ಹೆಚ್ಚಿಸಿದೆ. ಇನ್ನು 32.5 ಇಂಚಿನ ವಾಟರ್ ಕ್ಲೀಯರೆನ್ಸ್ ಅನ್ನು ಕೂಡ ಹೊಂದಿದೆ ಎಂದು ಜೀಪ್ ಕಂಪನಿಯು ಹೇಳಿಕೊಂಡಿದೆ.

MOST READ: ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಪಡೆದ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ ಕಾರು

ಅನಾವರಣವಾಯ್ತು ಹೊಸ ಜೀಪ್ ರ‍್ಯಾಂಗ್ಲರ್ ರೂಬಿಕಾನ್ 392 ಎಸ್‍ಯುವಿ

ಹೊಸ ಜೀಪ್ ರ‍್ಯಾಂಗ್ಲರ್ ರೂಬಿಕಾನ್ 392 ಎಸ್‍ಯುವಿಯಲ್ಲಿ 4ಡಬ್ಲ್ಯುಡಿ ಆಟೋ, 4ಡಬ್ಲ್ಯುಡಿ ಹೈ, ನ್ಯೂಟ್ರಾಲ್ ಮತ್ತು 4ಡಬ್ಲ್ಯುಡಿ ಲೋ ಮೋಡ್‌ಗಳ ಜೊತೆಗೆ ಸೆಲೆಕ್ಟ್-ಟ್ರ್ಯಾಕ್ 4ಡಬ್ಲ್ಯುಡಿ ಸಿಸ್ಟಂ ಅನ್ನು ಕೂಡ ಒಳಗೊಂಡಿದೆ.

ಅನಾವರಣವಾಯ್ತು ಹೊಸ ಜೀಪ್ ರ‍್ಯಾಂಗ್ಲರ್ ರೂಬಿಕಾನ್ 392 ಎಸ್‍ಯುವಿ

ಇದು 44 ಮುಂಭಾಗ ಮತ್ತು ಹಿಂಭಾಗದಲ್ಲಿ ದಾನ ಆಕ್ಸಲ್ಗಳನ್ನು ಹೊಂದಿದೆ, ಇನ್ನು ದಪ್ಪವಾದ ಟ್ಯೂಬ್‌ಗಳನ್ನು ಹೊಂದಿದ್ದು, ಕಷ್ಟಕರವಾದ ಆಫ್-ರೋಡ್ ದಾರಿಯಲ್ಲಿ ಸಾಗಲು ಎಲೆಕ್ಟ್ರಾನಿಕ್ ಲಾಕಿಂಗ್ ಡಿಫರೆನ್ಷಿಯಲ್ಸ್ ಮತ್ತು ಫ್ರಂಟ್ ಸ್ಟೆಬಿಲೈಜರ್ ಬಾರ್‌ಗಾಗಿ ಎಲೆಕ್ಟ್ರಾನಿಕ್ ಡಿಸ್ಕನೆಕ್ಟ್ ನಂತಹ ಆಫ್-ರೋಡ್ ಫೀಚರ್ ಗಳನ್ನು ನೀಡಿದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಅನಾವರಣವಾಯ್ತು ಹೊಸ ಜೀಪ್ ರ‍್ಯಾಂಗ್ಲರ್ ರೂಬಿಕಾನ್ 392 ಎಸ್‍ಯುವಿ

ಇದಲ್ಲದೆ ಒರಟಾದ ಪ್ರದೇಶಗಳಲ್ಲಿ ಸರಾಗವಾಗಿ ಚಲಿಸಲು ಬಹುತೇಕ ಎಲ್ಲಾ ಎಂಜಿನ್ ಟಾರ್ಕ್ ಕಡಿಮೆ ರೆವ್‌ಗಳಿಂದ ಲಭ್ಯವಿದೆ ಎಂದು ಜೀಪ್ ಹೇಳಿಕೊಂಡಿದೆ. ಫೀಚರ್ ಗಳು ಮತ್ತು ವಿನ್ಯಾಸವನ್ನು ನೋಡಿದಾಗ ಹೊಸ ಜೀಪ್ ್ಯಾಂಗ್ಲರ್ ರೂಬಿಕಾನ್ 392 ಮಾದರಿಯು ಸಮರ್ಥ ಆಫ್-ರೋಡ್ ಎಸ್‍ಯುವಿಯಾಗರಲಿದೆ ಎಂದು ಹೇಳಬಹುದು.

ಅನಾವರಣವಾಯ್ತು ಹೊಸ ಜೀಪ್ ರ‍್ಯಾಂಗ್ಲರ್ ರೂಬಿಕಾನ್ 392 ಎಸ್‍ಯುವಿ

ಹೊಸ ಜೀಪ್ ರ‍್ಯಾಂಗ್ಲರ್ ರೂಬಿಕಾನ್ 392 ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ರ‍್ಯಾಂಗ್ಲರ್ ರೂಬಿಕಾನ್ ಬ್ಯಾಡ್ಜ್‌ಗಳು ಮತ್ತು ಸುಧಾರಿಸಲು ಗ್ರಿಲ್ ಅನ್ನು ಅಳವಡಿಸಿದೆ. ಈ ಎಸ್‍ಯುವಿಯು ಹಾರ್ಡ್‌ಟಾಪ್ ಬಾಡಿಯನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಜೀಪ್ ರ‍್ಯಾಂಗ್ಲರ್ ರೂಬಿಕಾನ್ 392 ಎಸ್‍ಯುವಿ

ಹೊಸ ಜೀಪ್ ರ‍್ಯಾಂಗ್ಲರ್ ರೂಬಿಕಾನ್ 392 ಎಸ್‍ಯುವಿ ಬೆಲೆಯನ್ನು ಕಂಪನಿಯು ಇನ್ನು ಬಹಿರಂಗಪಡಿಸಿಲ್ಲ. ಇನ್ನು ಈ ಹೊಸ ಜೀಪ್ ರ‍್ಯಾಂಗ್ಲರ್ ರೂಬಿಕಾನ್ 392 ಎಸ್‍ಯುವಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷ ಬಿಡುಗಡೆಯಾಗಲಿದೆ.

Most Read Articles
2020ರ ಅಕ್ಟೋಬರ್ ತಿಂಗಳಿನ ಮಾರಾಟ ವರದಿಯನ್ನು ಹ್ಯುಂಡೈ ಇಂಡಿಯಾ ಕಂಪನಿಯು ಬಹಿರಂಗಪಡಿಸಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿ ನೋಡೋಣ.

Kannada
Read more on ಜೀಪ್ jeep
English summary
2021 Jeep Wrangler Rubicon 392 Unveiled. Read In Kannada.
Story first published: Wednesday, November 18, 2020, 16:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X