ಹೊಸ ಸ್ಟೈಲ್'ನಲ್ಲಿ ಸೊನೆಟ್ ಎಸ್‌ಯುವಿ ವಿತರಿಸಿದ ಕಿಯಾ ಮೋಟಾರ್ಸ್

ವಾಹನ ಉತ್ಪಾದನಾ ಕಂಪನಿಗಳ ಮುಖ್ಯ ಉದ್ದೇಶ ಗ್ರಾಹಕರನ್ನು ತೃಪ್ತಿಪಡಿಸುವುದಾಗಿರಬೇಕು. ಈ ಉದ್ದೇಶವನ್ನು ಪೂರೈಸುವ ಅನೇಕ ವಾಹನ ತಯಾರಕ ಕಂಪನಿಗಳಿವೆ. ದಕ್ಷಿಣ ಕೊರಿಯಾದ ಕಾರು ತಯಾರಕ ಕಂಪನಿಯಾದ ಕಿಯಾ ಮೋಟಾರ್ಸ್ ಇದೇ ರೀತಿಯ ಉದ್ದೇಶವನ್ನು ಹೊಂದಿದೆ.

ಹೊಸ ಸ್ಟೈಲ್'ನಲ್ಲಿ ಸೊನೆಟ್ ಎಸ್‌ಯುವಿ ವಿತರಿಸಿದ ಕಿಯಾ ಮೋಟಾರ್ಸ್

ಕಿಯಾ ಮೋಟಾರ್ಸ್‌ನ ಡೀಲರ್ ಗೆ ಸಂಬಂಧಿಸಿದ ವೀಡಿಯೊವೊಂದು ಹೊರಬಂದಿದೆ. ಈ ವೀಡಿಯೊದಲ್ಲಿ ಡೀಲರ್ ಇತ್ತೀಚೆಗೆ ಬಿಡುಗಡೆ ಮಾಡಿದ ಸೊನೆಟ್ ಎಸ್‌ಯುವಿಯನ್ನು ಗ್ರಾಹಕರಿಗೆ ವಿತರಿಸಿದ್ದಾರೆ. ಆದರೆ ಈ ಡೀಲರ್ ಸೊನೆಟ್ ಎಸ್‌ಯುವಿಯ ವಿತರಣೆಯನ್ನು ವಿಶಿಷ್ಟ ರೀತಿಯಲ್ಲಿ ಮಾಡಿದ್ದಾರೆ.

ಹೊಸ ಸ್ಟೈಲ್'ನಲ್ಲಿ ಸೊನೆಟ್ ಎಸ್‌ಯುವಿ ವಿತರಿಸಿದ ಕಿಯಾ ಮೋಟಾರ್ಸ್

ಈ ಸೊನೆಟ್ ಎಸ್‌ಯುವಿಯ ವಿತರಣೆಯನ್ನು ಪಡೆದ ಕುಟುಂಬಕ್ಕೆ ಅಂದು ಅವರ ಮಗನ ಜನ್ಮದಿನವಿತ್ತು. ಈ ಕಾರಣಕ್ಕೆ ಕಿಯಾ ಡೀಲರ್ ಶೋರೂಂಗೆ ಬಂದ ಆ ಕುಟುಂಬವನ್ನು ಅವೆಂಜರ್ ಸಿನಿಮಾದ ಥೀಮ್ ನೊಂದಿಗೆ ಸ್ವಾಗತಿಸಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಹೊಸ ಸ್ಟೈಲ್'ನಲ್ಲಿ ಸೊನೆಟ್ ಎಸ್‌ಯುವಿ ವಿತರಿಸಿದ ಕಿಯಾ ಮೋಟಾರ್ಸ್

ಆ ಮಗು ಹಾಗೂ ಕುಟುಂಬವನ್ನು ಸ್ವಾಗತಿಸಲು ಇಬ್ಬರು ಸ್ಪೈಡರ್ ಮ್ಯಾನ್ ಹಾಗೂ ಸೂಪರ್‌ಮ್ಯಾನ್ ವೇಷ ಧರಿಸಿ ಬರುವುದನ್ನು ವೀಡಿಯೊದಲ್ಲಿ ಕಾಣಬಹುದು. ಶೋರೂಂ ಒಳಗೆ ಸಾಗುವ ಕುಟುಂಬವು ಹೊಸ ಸೊನೆಟ್ ಎಸ್‌ಯುವಿಯ ವಿತರಣೆಯನ್ನು ಪಡೆಯುತ್ತದೆ.

ಹೊಸ ಸ್ಟೈಲ್'ನಲ್ಲಿ ಸೊನೆಟ್ ಎಸ್‌ಯುವಿ ವಿತರಿಸಿದ ಕಿಯಾ ಮೋಟಾರ್ಸ್

ಇಡೀ ಶೋರೂಂ ಅನ್ನು ಅವೆಂಜರ್ ಥೀಮ್ ಹಾಗೂ ಅವೆಂಜರ್ ಸಿನಿಮಾದ ಎಲ್ಲಾ ಸೂಪರ್ ಹೀರೋಗಳ ಕಟ್ ಔಟ್‌ಗಳಿಂದ ಅಲಂಕರಿಸಲಾಗಿತ್ತು. ನಂತರ ಮಗುವಿನ ಹುಟ್ಟುಹಬ್ಬದ ಕೇಕ್ ಅನ್ನು ಕತ್ತರಿಸಿ ಹೊಸ ಸೊನೆಟ್ ಎಸ್‌ಯುವಿಯ ಕೀಯನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಹೊಸ ಸ್ಟೈಲ್'ನಲ್ಲಿ ಸೊನೆಟ್ ಎಸ್‌ಯುವಿ ವಿತರಿಸಿದ ಕಿಯಾ ಮೋಟಾರ್ಸ್

ಈ ಘಟನೆ ಗುಜರಾತ್‌ನ ವಡೋದರಾದಲ್ಲಿರುವ ಕಿಯಾ ಮೋಟಾರ್ಸ್‌ ಶೋರೂಂನಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಈ ವೀಡಿಯೊವನ್ನು ವಿಕ್ರಮ್ ಪಟೇಲ್ ಎಂಬುವವರು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಶೇರ್ ಮಾಡಿದ್ದಾರೆ.

ಹೊಸ ಸ್ಟೈಲ್'ನಲ್ಲಿ ಸೊನೆಟ್ ಎಸ್‌ಯುವಿ ವಿತರಿಸಿದ ಕಿಯಾ ಮೋಟಾರ್ಸ್

ಕಿಯಾ ಮೋಟಾರ್ಸ್ ಇತ್ತೀಚೆಗಷ್ಟೇ ತನ್ನ ಸೊನೆಟ್ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಎಸ್‌ಯುವಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಹೊಸ ಸ್ಟೈಲ್'ನಲ್ಲಿ ಸೊನೆಟ್ ಎಸ್‌ಯುವಿ ವಿತರಿಸಿದ ಕಿಯಾ ಮೋಟಾರ್ಸ್

ಕಿಯಾ ಸೊನೆಟ್ ಎಸ್‌ಯುವಿಯನ್ನು ಎರಡು ಪೆಟ್ರೋಲ್ ಹಾಗೂ ಒಂದು ಡೀಸೆಲ್ ಎಂಜಿನ್ ಸೇರಿದಂತೆ ಒಟ್ಟು ಮೂರು ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇದರಲ್ಲಿ 1.2-ಲೀಟರಿನ ಪೆಟ್ರೋಲ್ ಎಂಜಿನ್ 83 ಬಿಹೆಚ್‌ಪಿ ಪವರ್ ಹಾಗೂ 113 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ಸ್ಟೈಲ್'ನಲ್ಲಿ ಸೊನೆಟ್ ಎಸ್‌ಯುವಿ ವಿತರಿಸಿದ ಕಿಯಾ ಮೋಟಾರ್ಸ್

1.0-ಲೀಟರಿನ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 120 ಬಿಹೆಚ್‌ಪಿ ಪವರ್ ಹಾಗೂ 172 ಎನ್‌ಎಂ ಟಾರ್ಕ್ ಉತ್ಪಾದಿಸಿದರೆ 1.5-ಲೀಟರಿನ ಡೀಸೆಲ್ ಎಂಜಿನ್ 113 ಬಿಹೆಚ್‌ಪಿ ಪವರ್ ಹಾಗೂ 240 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

Most Read Articles

Kannada
English summary
Kia motors dealer delivers new Sonet SUV in Avenger theme. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X