ಡಿಫೆಂಡರ್ ಆಫ್ ರೋಡ್ ಎಸ್‌ಯವಿ ವಿತರಣೆಗೆ ಚಾಲನೆ ನೀಡಿದ ಲ್ಯಾಂಡ್ ರೋವರ್

ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾದ ಲ್ಯಾಂಡ್ ರೋವರ್ ತನ್ನ ಮೊದಲ ಆಫ್ ರೋಡ್ ಎಸ್‌ಯುವಿ ಮಾದರಿಯಾದ ಡಿಫೆಂಡರ್ ಕಾರು ಮಾದರಿಯನ್ನು ಭಾರತದಲ್ಲಿ ಕಳೆದ ವಾರವಷ್ಟೇ ಬಿಡುಗಡೆ ಮಾಡಿದ್ದು, ಹೊಸ ಕಾರಿನ ವಿತರಣೆಗೆ ಅಧಿಕೃತ ಚಾಲನೆ ನೀಡಲಾಗಿದೆ.

ಡಿಫೆಂಡರ್ ಆಫ್ ರೋಡ್ ಎಸ್‌ಯವಿ ವಿತರಣೆಗೆ ಚಾಲನೆ ನೀಡಿದ ಲ್ಯಾಂಡ್ ರೋವರ್

ಹೈದ್ರಾಬಾದ್‌ನಲ್ಲಿ ಹೊಸ ಡಿಫೆಂಡರ್ ಮೊದಲ ಯುನಿಟ್ ವಿತರಣೆ ಮಾಡಿರುವ ಬಗ್ಗೆ ವರದಿಯಾಗಿದ್ದು, ಹೊಸ ಕಾರು ಭಾರತದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ಡಿಫೆಂಡರ್ ಕಾರು ಮಾದರಿಯು ಜಾಗತಿಕವಾಗಿ ಭಾರೀ ಜನಪ್ರಿಯತೆಯೊಂದಿಗೆ ಮಾರಾಟ ಮಾಡುತ್ತಿದ್ದು, ಲ್ಯಾಂಡ್ ರೋವರ್ ಕಂಪನಿಯು ಹೊಸ ಕಾರು ಭಾರತದಲ್ಲೂ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯೊಂದಿಗೆ ಬಿಡುಗಡೆ ಮಾಡಿದೆ.

ಡಿಫೆಂಡರ್ ಆಫ್ ರೋಡ್ ಎಸ್‌ಯವಿ ವಿತರಣೆಗೆ ಚಾಲನೆ ನೀಡಿದ ಲ್ಯಾಂಡ್ ರೋವರ್

ಹೊಸ ಆಫ್ ರೋಡ್ ಎಸ್‌ಯುವಿಯು ಗ್ರಾಹಕ ಬೇಡಿಕೆಯೆಂತೆ ಡಿಫೆಂಡರ್ 90(3 ಡೋರ್) ಹಾಗೂ ಡಿಫೆಂಡರ್ 110(5 ಡೋರ್) ಎಂಬ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ತಲಾ ಐದು ವೆರಿಯೆಂಟ್‌ಗಳೊಂದಿಗೆ ಮಾರಾಟ ಮಾಡಲಾಗುತ್ತಿದೆ.

ಡಿಫೆಂಡರ್ ಆಫ್ ರೋಡ್ ಎಸ್‌ಯವಿ ವಿತರಣೆಗೆ ಚಾಲನೆ ನೀಡಿದ ಲ್ಯಾಂಡ್ ರೋವರ್

ಲ್ಯಾಂಡ್ ರೋವರ್ ಡಿಫೆಂಡರ್ ಹೊಸ ಕಾರು ಡಿ7ಎಕ್ಸ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ್ದು, ಮೊನೊಕೊಕ್ ಚಾಸಿಸ್ ಅನ್ನು ಹೊಂದಿದೆ. ಬೇಸ್, ಎಸ್, ಎಸ್ಇ, ಹೆಚ್ಎಸ್ಇ ಮತ್ತು ಫಸ್ಟ್ ಎಡಿಷನ್ ಎಂಬ ಐದು ರೂಪಾಂತರಗಳಲ್ಲಿ ಲಭ್ಯವಿದ್ದು, ಹೊಸ ಕಾರು ಭಾರತಕ್ಕೆ ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮಾದರಿಯಲ್ಲಿ ಮಾರಾಟಗೊಳ್ಳಲಿದೆ.

ಡಿಫೆಂಡರ್ ಆಫ್ ರೋಡ್ ಎಸ್‌ಯವಿ ವಿತರಣೆಗೆ ಚಾಲನೆ ನೀಡಿದ ಲ್ಯಾಂಡ್ ರೋವರ್

ಹೊಸ ಡಿಫೆಂಡರ್ 90 3 ಡೋರ್ ಮಾದರಿಗೆ ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ.73.98 ಲಕ್ಷಗಳಾಗಿದ್ದಲ್ಲಿ 5 ಡೋರ್ ಸೌಲಭ್ಯವುಳ್ಳ ಡಿಫೆಂಡರ್ 110 ಮಾದರಿಗೆ ರೂ. 79.94 ಲಕ್ಷಗಳಾಗಿದೆ. ಸ್ಟೈಲಿಷ್ ಜೊತೆ ಬಲಿಷ್ಠ ಎಸ್‌ಯುವಿಯಾಗಿರುವ ಡಿಫೆಂಡರ್‌ನಲ್ಲಿ ಮುಂಭಾಗದಲ್ಲಿ ಡಿಆರ್‌ಎಲ್‌ ಎಲ್‌ಇಡಿ ಹೆಡ್‌ಲೈಟ್, ಟಾಪ್-ಎಂಡ್ ಟ್ರಿಮ್ ಎಲ್ಇಡಿ ಮ್ಯಾಟ್ರಿಕ್ಸ್ ಹೆಡ್ ಲೈಟ್, ಬಂಪರ್ ಕೆಳಗೆ ಇಂಟಿಗ್ರೇಟೆಡ್ ಎಲ್ಇಡಿ ಫಾಗ್ ಲೈಟ್ ಗಳನ್ನು ನೀಡಲಾಗಿದೆ.

ಡಿಫೆಂಡರ್ ಆಫ್ ರೋಡ್ ಎಸ್‌ಯವಿ ವಿತರಣೆಗೆ ಚಾಲನೆ ನೀಡಿದ ಲ್ಯಾಂಡ್ ರೋವರ್

ಈ ಎಸ್‌ಯುವಿಯಲ್ಲಿ 20 ಇಂಚಿನ ದೊಡ್ಡ ಗಾತ್ರ ಅಲಾಯ್ ವ್ಹೀಲ್ ಗಳನ್ನು ನೀಡಲಾಗಿದ್ದು, ಹೊಸ ವಿನ್ಯಾಸದ ಟೇಲ್‌ಲೈಟ್‌ಗಳಿವೆ. ಎಸ್‌ಯುವಿಯ ಹಿಂಭಾಗದಲ್ಲಿ ಬ್ಯಾಡ್ಜ್‌ ಹಾಗೂ ಮಾದರಿಯ ಹೆಸರುಗಳನ್ನು ಬರೆಯಲಾಗಿದೆ.

ಡಿಫೆಂಡರ್ ಆಫ್ ರೋಡ್ ಎಸ್‌ಯವಿ ವಿತರಣೆಗೆ ಚಾಲನೆ ನೀಡಿದ ಲ್ಯಾಂಡ್ ರೋವರ್

ಈ ಎಸ್‌ಯುವಿಯು ವಿಶಾಲವಾದ ಕ್ಯಾಬಿನ್, ದೊಡ್ಡ ಪನೋರಾಮಿಕ್ ಸನ್‌ರೂಫ್, ಸೈಡ್ ಆಲ್ಪೈನ್ ಲೈಟ್ ವಿಂಡೋಗಳನ್ನು ಹೊಂದಿದೆ. ಡಿಫೆಂಡರ್ ಎಸ್‌ಯುವಿ ಮೂರು ರೀತಿಯ ಇಂಟಿರಿಯರ್ ಬಣ್ಣಗಳನ್ನು ಹೊಂದಿದೆ. ಪ್ಯಾಂಗಿಯಾ ಗ್ರೀನ್ ಬಣ್ಣವು ಕಪ್ಪಾದ ಇಂಟಿರಿಯರ್ ಹೊಂದಿದ್ದರೆ, ಮತ್ತೊಂದು ಲೈಟ್ ಕ್ರೀಮ್ ಬಣ್ಣದ ಇಂಟಿರಿಯರ್ ಅನ್ನು ಹೊಂದಿದೆ.

ಡಿಫೆಂಡರ್ ಆಫ್ ರೋಡ್ ಎಸ್‌ಯವಿ ವಿತರಣೆಗೆ ಚಾಲನೆ ನೀಡಿದ ಲ್ಯಾಂಡ್ ರೋವರ್

ಎಕ್ಸ್ ಟಿರಿಯರ್ ನಲ್ಲಿ 360 ಡಿಗ್ರಿಯ ಆರು ಕ್ಯಾಮೆರಾ, ಸೆನ್ಸಾರ್ ಗಳಿವೆ. ಐಆರ್ ವಿಎಂ ಹಿಂದೆ ಒಂದು ಕ್ಯಾಮೆರಾ ಇದ್ದು, ಈ ಕ್ಯಾಮರಾ ಆಕ್ಟೀವ್ ಲೇನ್ ಅಸಿಸ್ಟ್ ಹಾಗೂ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಆಗಿ ಕಾರ್ಯ ನಿರ್ವಹಿಸಿದರೆ, ಐಆರ್ ವಿಎಂನಲ್ಲಿ (ಸ್ವಿಚ್ ಮೂಲಕ) ವೀಡಿಯೊವನ್ನು ಪ್ರದರ್ಶಿಸುವ ಶಾರ್ಕ್-ಫಿನ್ ಆಂಟೆನಾದಲ್ಲಿಯೂ ಕ್ಯಾಮೆರಾ ನೀಡಲಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಡಿಫೆಂಡರ್ ಆಫ್ ರೋಡ್ ಎಸ್‌ಯವಿ ವಿತರಣೆಗೆ ಚಾಲನೆ ನೀಡಿದ ಲ್ಯಾಂಡ್ ರೋವರ್

ಈ ಎಸ್‌ಯುವಿಯು ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಹೊಂದಿರುವ 10 ಇಂಚಿನ ಇನ್ಫೋಟೇನ್ಮೆಂಟ್ ಸಿಸ್ಟಂ, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಲೆದರ್ ವ್ರಾಪ್ ಸ್ಟೀಯರಿಂಗ್ ವ್ಹೀಲ್, ಕ್ರೂಸ್ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾ, 3 ಡಿ ಮೆರಿಡಿಯನ್ ಸರೌಂಡ್ ಸೌಂಡ್ ಸಿಸ್ಟಮ್, ಆ ಸ್ಟ್ರೀಮ್ ಕ್ರಾಸಿಂಗ್‌ಗಳಿಗಾಗಿ ವೇಡ್-ಸೆನ್ಸಿಂಗ್ ಹಾಗೂ ಡ್ರೈವರ್ ಕಂಡಿಷನ್ ಮಾನಿಟರಿಂಗ್ ಫೀಚರ್ ಗಳನ್ನು ಹೊಂದಿದೆ.

ಡಿಫೆಂಡರ್ ಆಫ್ ರೋಡ್ ಎಸ್‌ಯವಿ ವಿತರಣೆಗೆ ಚಾಲನೆ ನೀಡಿದ ಲ್ಯಾಂಡ್ ರೋವರ್

ಎಂಜಿನ್ ಮತ್ತು ಪರ್ಫಾಮೆನ್ಸ್

ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಯಲ್ಲಿ 2.0-ಲೀಟರಿನ ನಾಲ್ಕು ಸಿಲಿಂಡರ್, ಟರ್ಬೊ-ಪೆಟ್ರೋಲ್ ಪಿ 300 ಎಂಜಿನ್ ಅಳವಡಿಸಲಾಗಿದ್ದು, ಈ ಎಂಜಿನ್ 300 ಬಿಹೆಚ್ ಪಿ ಪವರ್ ಹಾಗೂ 400 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹೊಸ ಎಂಜಿನ್‌ನ್ಲಿ ಎಂಟು-ಸ್ಪೀಡಿನ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಜೋಡಿಸಲಾಗಿದ್ದು, ಶೀಘ್ರದಲ್ಲೇ ಡೀಸೆಲ್ ಎಂಜಿನ್ ಆಯ್ಕೆ ಬಿಡುಗಡೆಯಾಗುವ ನೀರಿಕ್ಷೆಗಳಿವೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಡಿಫೆಂಡರ್ ಆಫ್ ರೋಡ್ ಎಸ್‌ಯವಿ ವಿತರಣೆಗೆ ಚಾಲನೆ ನೀಡಿದ ಲ್ಯಾಂಡ್ ರೋವರ್

ಇನ್ನು ಲ್ಯಾಂಡ್ ರೋವರ್ ಡಿಫೆಂಡರ್ ಕಾರು 5,018-ಎಂಎಂ ಉದ್ದ, 2,105-ಎಂಎಂ ಅಗಲ ಮತ್ತು 1,967-ಎಂಎಂ ಎತ್ತರವನ್ನು ಹೊಂದಿದ್ದು, ಈ ಎಸ್‍ಯುವಿಯು 3,022 ಎಂಎಂ ವ್ಹೀಲ್ ಬೇಸ್‌ನೊಂದಿಗೆ 218-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ.

Most Read Articles

Kannada
English summary
Land Rover has started Defender SUV deliveries in India. Read in Kannada.
Story first published: Tuesday, October 20, 2020, 22:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X