Just In
Don't Miss!
- News
ಮತ್ತೊಂದು ದಾಖಲೆಯ ಮಟ್ಟವನ್ನ ತಲುಪಿದ ಪೆಟ್ರೋಲ್, ಡೀಸೆಲ್ ದರ
- Finance
ಹೊಸ ಸಾರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್- ಡೀಸೆಲ್ ದರ; ಯಾವ ನಗರದಲ್ಲಿ ಎಷ್ಟು?
- Movies
ರೈತರ ಪ್ರತಿಭಟನೆ: ಕೆಂಪುಕೋಟೆ ಮೇಲೆ ಬಾವುಟ ಹಾರಿಸಿದ್ದು ಸಿನಿಮಾ ನಟ ದೀಪ್ ಸಿಧು?
- Lifestyle
ಹೊಟ್ಟೆಯ ಬಲಭಾಗದಲ್ಲಿ ನೋವು, ಈ ತೊಂದರೆಗಳಿರಬಹುದು
- Sports
ವಿರಾಟ್ ಕೊಹ್ಲಿ ಮತ್ತು ನನ್ನ ಮಧ್ಯೆ ಏನೂ ಬದಲಾಗಿಲ್ಲ: ಅಜಿಂಕ್ಯ ರಹಾನೆ
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡಕಾರ್ ರ‍್ಯಾಲಿ: 43ನೇ ಆವೃತ್ತಿಯಲ್ಲಿ ಪ್ರಮುಖ ಪಾತ್ರವಹಿಸಲಿದೆ ಲ್ಯಾಂಡ್ ರೋವರ್ ಡಿಫೆಂಡರ್
ಡಕಾರ್ ರ‍್ಯಾಲಿಯ 2021ರ ಆವೃತ್ತಿಯು ಮುಂದಿನ ತಿಂಗಳು ಜನವರಿ 3ರಿಂದ 15ರ ವರೆಗೆ ನಡೆಲಿದ್ದು, 43ನೇ ಮೋಟಾರ್‌ಸ್ಪೋರ್ಟ್ ರ‍್ಯಾಲಿಯಲ್ಲಿ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿ ಮಾದರಿಯು ಆಯೋಜಕರ ತಂಡದಲ್ಲಿ ಪ್ರಮುಖ ಪಾತ್ರವಹಿಸಲಿದೆ.

ಸೌದಿ ಅರೇಬಿಯಾದ ಜಿದ್ದಾದಿಂದ ಆರಂಭಗೊಳ್ಳಲಿರುವ 2021ರ ಡಕಾರ್ ರ‍್ಯಾಲಿಯು ಒಟ್ಟು 7,646 ಕಿ.ಮೀ ಅಂತರವನ್ನು ಒಳಗೊಂಡಿದ್ದು, ಜಿದ್ದಾದಿಂದ ಆರಂಭವಾಗಿ ಕೊನೆಗೆ ಜಿದ್ದಾದದಲ್ಲೇ ಕೊನೆಗೊಳ್ಳಲಿದೆ. ಒಟ್ಟು 12 ಹಂತಗಳನ್ನು ಒಳಗೊಂಡಿರುವ ಡಕಾರ್ ರ‍್ಯಾಲಿಯಲ್ಲಿ ವಿವಿಧ ಮೋಟಾರ್‌ಸ್ಪೋರ್ಟ್ ತಂಡಗಳಿಂದ ಸಾವಿರಾರು ಸ್ಪರ್ಧಿಗಳು ಭಾಗಿಯಾಗುತ್ತಿದ್ದು, ಆಯೋಜಕರ ತಂಡದಲ್ಲಿನ ವೈದ್ಯಕೀಯ ವಿಭಾಗದ ವಾಹನವನ್ನಾಗಿ ಲ್ಯಾಂಡ್ ರೋವರ್ ಡಿಫೆಂಡರ್ ಆಫ್ ರೋಡ್ ಎಸ್‌ಯುವಿ ಆಯ್ಕೆ ಮಾಡಲಾಗಿದೆ.

ವಿಶ್ವದ ಅಪಾಯಕಾರಿ ಮೋಟಾರ್‌ಸ್ಪೋರ್ಟ್‌ಗಳಲ್ಲಿ ಒಂದಾಗಿರುವ ಡಕಾರ್ ರ‍್ಯಾಲಿಯಲ್ಲಿ ಈ ಹಿಂದೆ 1981ರ ಆವೃತ್ತಿಯಲ್ಲಿ ವಿಜಯಶಾಲಿಯಾಗಿದ್ದ ಲ್ಯಾಂಡ್ ರೋವರ್ ಕಂಪನಿಯು ಇದೀಗ ಡಿಫೆಂಡರ್ ಎಸ್‌ಯುವಿ ಮೂಲಕ ಆಯೋಜಕರ ತಂಡದಲ್ಲಿ ಪ್ರಮುಖ ಪಾತ್ರವಹಿಸಲು ಸಜ್ಜುಗೊಂಡಿದೆ.

ಸ್ಪರ್ಧೆಯಲ್ಲಿ ಭಾಗಿಯಾಗುತ್ತಿರುವ ವಾಹನ ಮಾದರಿಗಳಷ್ಟೇ ಬಲಿಷ್ಠ ಆಫ್ ರೋಡ್ ವೈಶಿಷ್ಟ್ಯತೆ ಹೊಂದಿರುವ ಡಿಫೆಂಡರ್ ಎಸ್‌ಯುವಿ ಮಾದರಿಯು ವೈದ್ಯಕೀಯ ತಂಡದಲ್ಲಿನ ಸದಸ್ಯರ ಸೇವೆಗೆ ಸಿದ್ದವಾಗಿದ್ದು, 4x4 ತಂತ್ರಜ್ಞಾನದೊಂದಿಗೆ ಮರಳುಗಾಡಿನ ಮಾರ್ಗಗಳಲ್ಲಿ ಹೊಸ ಡಿಫೆಂಡರ್ ತನ್ನ ಕೌಶಲ್ಯತೆಯನ್ನು ಪ್ರದರ್ಶಸಲಿದೆ.

ಕರೋನಾ ವೈರಸ್ ಹಿನ್ನಲೆಯಲ್ಲಿ 2021ರ ಡಕಾರ್ ರ‍್ಯಾಲಿಯನ್ನು ವ್ಯವಸ್ಥಿತವಾಗಿ ಆಯೋಜಿಸುತ್ತಿರುವ ಡರಾಕ್ ರ‍್ಯಾಲಿ ತಂಡವು ಗರಿಷ್ಠ ಸುರಕ್ಷತೆ ಕೈಗೊಂಡಿದ್ದು, ಜನವರಿ 3ಕ್ಕೆ ಮೊದಲ ಹಂತದ ಸ್ಪರ್ಧೆಗೆ ಅಧಿಕೃತವಾಗಿ ಚಾಲನೆ ನೀಡಲಿದೆ. 2021ರ ಡಕಾರ್ ರ‍್ಯಾಲಿಯಲ್ಲಿ ರೇಸ್ ಎಡಿಷನ್‌ನಲ್ಲಿ ಒಟ್ಟು 108 ವಿವಿಧ ಮಾದರಿಯ ಬೈಕ್ ಮಾದರಿಗಳು, 21 ಕ್ವಾಡ್ರಿಸೈಕಲ್, 124 ಕಾರುಗಳು ಮತ್ತು 42 ಟ್ರಕ್‌ಗಳು ಭಾಗಿಯಾಗಲಿದ್ದು, ಒಟ್ಟು 7,646 ಕಿ.ಮೀ ಅಂತರದಲ್ಲಿ 4,767 ಕಿ.ಮೀ ಪ್ರಯಾಣವು ವಿಶೇಷ ವಿಭಾಗವಾಗಿರುತ್ತದೆ.

2020ರ ಡಕಾರ್ ರ‍್ಯಾಲಿ ಆವೃತ್ತಿಗಿಂತಲೂ 2021ರ ಡಕಾರ್ ರ‍್ಯಾಲಿ ಆವೃತ್ತಿಯು ಪ್ರಯಾಣದ ದೂರವನ್ನು 300ಕಿ.ಮೀ ಕಡಿತ ಮಾಡಲಾಗಿದ್ದು, ನಾಲ್ಕನೇ ಸುತ್ತಿನ 2021ರ ಡಕಾರ್ ರ‍್ಯಾಲಿಯಲ್ಲಿ ಅತಿ ಉದ್ದದ ಮಾರ್ಗವಾಗಿದೆ.

ನಾಲ್ಕನೇ ಸುತ್ತಿನಲ್ಲಿನ ಸ್ಪರ್ಧೆಗಾಗಿ 813 ಕಿ.ಮೀ ಪ್ರಯಾಣ ಮಾಡಬೇಕಿದ್ದು, 2021ರ ಡಕಾರ್ ರ‍್ಯಾಲಿ ಆವೃತ್ತಿಯಲ್ಲಿ ಈ ಬಾರಿ 26 ರೇಸ್ ವಾಹನಗಳನ್ನು ಡಕಾರ್ ಕ್ಲಾಸಿಕ್ ವಿಭಾಗದಲ್ಲಿ ಸೇರ್ಪಡೆಗೊಳಿಸಲಾಗಿದೆ. ಕಠಿಣ ಸ್ಪರ್ಧೆಯಲ್ಲಿ ಭಾಗಿಯಾಗಲು ಈಗಾಗಲೇ ಸಾವಿರಾರು ಸ್ಪರ್ಧೆಗಳು ಸಿದ್ದವಾಗಿದ್ದು, ಸ್ಪರ್ಧಿಗಳಿಗೆ ರ್‍ಯಾಲಿ ವೇಳೆ ನಿಗದಿತ ಅವಧಿಯಲ್ಲಿ ವೈದ್ಯಕೀಯ ಸೇವೆಗಳು ಪ್ರಮುಖವಾಗಿರುತ್ತದೆ.

ಇದಕ್ಕಾಗಿ ನುರಿತ ವೈದ್ಯಕೀಯ ತಂಡ ನಿಯೋಜನೆ ಮಾಡಿರುವ ಆಯೋಜಕರು ಡಿಫೆಂಡರ್ ಕಾರುಗಳನ್ನು ಬಳಕೆ ಮಾಡಲಿದ್ದು, ಬೇಡಿಕೆಗೆ ಅನುಗುಣವಾಗಿ ಡಿಫೆಂಡರ್ 90 ಮತ್ತು ಡಿಫೆಂಡರ್ 110 ಕಾರು ಮಾದರಿಗಳನ್ನು ನೀಡಲಾಗುತ್ತಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಡಿಫೆಂಡರ್ ಆಫ್-ರೋಡ್ ಕಾರು ಮಾದರಿಯು ಜಾಗತಿಕ ಮಾರುಕಟ್ಟೆಗಳಲ್ಲಿ ಭಾರೀ ಜನಪ್ರಿಯತೆಯೊಂದಿಗೆ ಮಾರಾಟಗೊಳ್ಳುತ್ತಿದ್ದು, ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಡಿಫೆಂಡರ್ 90(3 ಡೋರ್) ಹಾಗೂ ಡಿಫೆಂಡರ್ 110(5 ಡೋರ್) ಮಾದರಿಗಳಲ್ಲಿ ಖರೀದಿಗೆ ಲಭ್ಯವಿದೆ.

ಲ್ಯಾಂಡ್ ರೋವರ್ ಡಿಫೆಂಡರ್ ಹೊಸ ಕಾರು ಮಾದರಿಯು ಡಿ7ಎಕ್ಸ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ್ದು, ಮೊನೊಕೊಕ್ ಚಾಸಿಸ್ ಅನ್ನು ಹೊಂದಿದೆ. ಬೇಸ್, ಎಸ್, ಎಸ್ಇ, ಹೆಚ್ಎಸ್ಇ ಮತ್ತು ಫಸ್ಟ್ ಎಡಿಷನ್ ಎಂಬ ಐದು ರೂಪಾಂತರಗಳಲ್ಲಿ ಲಭ್ಯವಿದ್ದು, ಹೊಸ ಕಾರು ಭಾರತಕ್ಕೆ ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮಾದರಿಯಲ್ಲಿ ಮಾರಾಟಗೊಳ್ಳುತ್ತಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಯಲ್ಲಿ 2.0-ಲೀಟರಿನ ನಾಲ್ಕು ಸಿಲಿಂಡರ್, ಟರ್ಬೊ-ಪೆಟ್ರೋಲ್ ಪಿ 300 ಎಂಜಿನ್ ಅಳವಡಿಸಲಾಗಿದ್ದು, ಈ ಎಂಜಿನ್ 300 ಬಿಹೆಚ್ ಪಿ ಪವರ್ ಹಾಗೂ 400 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.