ಇನ್ಮುಂದೆ ನಮ್ಮ ಬೆಂಗಳೂರಿನಲ್ಲಿಯೇ ಉತ್ಪಾದನೆಯಾಗಲಿವೆ ಲೆಕ್ಸಸ್‍‍ನ ಹೊಸ ಕಾರುಗಳು

ಲೆಕ್ಸಸ್ ಜಪಾನ್ ಮೂಲದ ಟೊಯೊಟಾ ಕಂಪನಿಯ ಭಾಗವಾಗಿದೆ. ಈ ಕಂಪನಿಯು ಭಾರತದಲ್ಲಿ ಕಾರುಗಳನ್ನು ಮಾರಾಟ ಮಾಡುತ್ತದೆ. 2017ರಿಂದ ಭಾರತದಲ್ಲಿ ಕಾರು ಮಾರಾಟ ಮಾಡುತ್ತಿರುವ ಲೆಕ್ಸಸ್‍‍ನ ಕಾರುಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿಲ್ಲ.

ಇನ್ಮುಂದೆ ನಮ್ಮ ಬೆಂಗಳೂರಿನಲ್ಲಿಯೇ ಉತ್ಪಾದನೆಯಾಗಲಿವೆ ಲೆಕ್ಸಸ್‍‍ನ ಹೊಸ ಕಾರುಗಳು

ಲೆಕ್ಸಸ್ ಕಂಪನಿಯು ಸದ್ಯಕ್ಕೆ ದೇಶಿಯ ಮಾರುಕಟ್ಟೆಯಲ್ಲಿ 1 - 2% ನಷ್ಟು ಷೇರುಗಳನ್ನು ಮಾತ್ರ ಹೊಂದಿದ್ದು, ಈ ಪ್ರಮಾಣವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಲೆಕ್ಸಸ್‍‍ನ ಕಾರುಗಳು ಐಷಾರಾಮಿಯಾಗಿದ್ದು, ದುಬಾರಿ ಬೆಲೆಯನ್ನು ಹೊಂದಿವೆ.

ಇನ್ಮುಂದೆ ನಮ್ಮ ಬೆಂಗಳೂರಿನಲ್ಲಿಯೇ ಉತ್ಪಾದನೆಯಾಗಲಿವೆ ಲೆಕ್ಸಸ್‍‍ನ ಹೊಸ ಕಾರುಗಳು

ಲೆಕ್ಸಸ್ ತನ್ನ ಕಾರುಗಳನ್ನು ಭಾರತಕ್ಕೆ ಆಮದು ಮಾಡಿಕೊಂಡು ಮಾರಾಟ ಮಾಡುತ್ತಿದೆ. ಈ ಕಾರಣಕ್ಕೆ ಲೆಕ್ಸಸ್ ಕಂಪನಿಯ ಕಾರುಗಳ ಬೆಲೆಗಳು ದುಬಾರಿಯಾಗಿವೆ. ಆಮದು ಮಾಡಿಕೊಳ್ಳಲಾಗುವ ಕಾರುಗಳ ಮೇಲೆ 100%ನಷ್ಟು ತೆರಿಗೆಯನ್ನು ವಿಧಿಸಲಾಗುತ್ತದೆ.

ಇನ್ಮುಂದೆ ನಮ್ಮ ಬೆಂಗಳೂರಿನಲ್ಲಿಯೇ ಉತ್ಪಾದನೆಯಾಗಲಿವೆ ಲೆಕ್ಸಸ್‍‍ನ ಹೊಸ ಕಾರುಗಳು

ಲೆಕ್ಸಸ್ ಕಾರುಗಳನ್ನು ಭಾರತದಲ್ಲಿಯೇ ಉತ್ಪಾದಿಸಿದರೆ ಈ ಕಾರುಗಳ ಬೆಲೆ ಕಡಿಮೆಯಾಗಲಿದೆ. ಈ ಕಾರಣಕ್ಕೆ ಲೆಕ್ಸಸ್ ಕಂಪನಿಯು ತನ್ನ ಕಾರುಗಳನ್ನು ಭಾರತದಲ್ಲಿಯೇ ಉತ್ಪಾದಿಸಿ ಮಾರಾಟ ಮಾಡಲು ನಿರ್ಧರಿಸಿದೆ. ಇದರಂತೆ ಲೆಕ್ಸಸ್ ಕಂಪನಿಯು ಮೊದಲಿಗೆ ಇ‍ಎಸ್ 300 ಹೆಚ್ ಸೆಡಾನ್ ಕಾರಿನ ಉತ್ಪಾದನೆಯನ್ನು ಭಾರತದಲ್ಲಿ ಆರಂಭಿಸಲಿದೆ.

ಇನ್ಮುಂದೆ ನಮ್ಮ ಬೆಂಗಳೂರಿನಲ್ಲಿಯೇ ಉತ್ಪಾದನೆಯಾಗಲಿವೆ ಲೆಕ್ಸಸ್‍‍ನ ಹೊಸ ಕಾರುಗಳು

ಅಂದ ಹಾಗೆ ಲೆಕ್ಸಸ್ ಕಂಪನಿಯು ತನ್ನ ಕಾರುಗಳ ಉತ್ಪಾದನೆಯನ್ನು ಭಾರತದಲ್ಲಿ ಆರಂಭಿಸಿರುವುದು ನಮ್ಮ ಬೆಂಗಳೂರಿನಲ್ಲಿ. ಬೆಂಗಳೂರಿನ ಹೊರವಲಯದ ಬಿಡದಿಯಲ್ಲಿರುವ ಟೊಯೊಟಾ ಉತ್ಪಾದನಾ ಘಟಕದಲ್ಲಿ ಲೆಕ್ಸಸ್ ಕಾರುಗಳ ಉತ್ಪಾದನೆಯನ್ನು ಆರಂಭಿಸಲಾಗಿದೆ.

ಇನ್ಮುಂದೆ ನಮ್ಮ ಬೆಂಗಳೂರಿನಲ್ಲಿಯೇ ಉತ್ಪಾದನೆಯಾಗಲಿವೆ ಲೆಕ್ಸಸ್‍‍ನ ಹೊಸ ಕಾರುಗಳು

ಟೊಯೊಟಾ ಕಂಪನಿಯು ಈ ಯೋಜನೆಗೆ 100 ಮಿಲಿಯನ್ ಡಾಲರ್ ಬಂಡವಾಳವನ್ನು ಹೂಡಿಕೆ ಮಾಡಿದೆ. ಟೊಯೊಟಾ ಕಂಪನಿಯು ಈ ಘಟಕದಲ್ಲಿ ಲೆಕ್ಸಸ್ ಕಾರುಗಳನ್ನು ಉತ್ಪಾದಿಸಿ ಅವುಗಳನ್ನು ರಫ್ತು ಮಾಡುವ ಯೋಜನೆಯನ್ನು ಹೊಂದಿದೆ.

ಇನ್ಮುಂದೆ ನಮ್ಮ ಬೆಂಗಳೂರಿನಲ್ಲಿಯೇ ಉತ್ಪಾದನೆಯಾಗಲಿವೆ ಲೆಕ್ಸಸ್‍‍ನ ಹೊಸ ಕಾರುಗಳು

ಲೆಕ್ಸಸ್ ಕಂಪನಿಯು ಮೊದಲಿಗೆ ಎನ್‍ಎಕ್ಸ್ ಲಗ್ಷುರಿ ಎಸ್‍‍ಯುವಿಯನ್ನು ಉತ್ಪಾದಿಸಿ, ನಂತರ ಇ‍ಎಸ್ ಲಗ್ಷುರಿ ಸೆಡಾನ್ ಕಾರುಗಳನ್ನು ಉತ್ಪಾದಿಸುವ ಯೋಜನೆಯನ್ನು ಹೊಂದಿದೆ. ಸ್ಥಳೀಯವಾಗಿ ಉತ್ಪಾದನೆಯಾಗುವ ಕಾರಣಕ್ಕೆ ಇಎಸ್ ಹಾಗೂ ಎನ್‍ಎಕ್ಸ್ ಕಾರುಗಳ ಬೆಲೆಯು ಗಣನೀಯವಾಗಿ ಇಳಿಕೆಯಾಗಲಿದೆ.

ಇನ್ಮುಂದೆ ನಮ್ಮ ಬೆಂಗಳೂರಿನಲ್ಲಿಯೇ ಉತ್ಪಾದನೆಯಾಗಲಿವೆ ಲೆಕ್ಸಸ್‍‍ನ ಹೊಸ ಕಾರುಗಳು

ಪ್ರಮುಖ ಬಿಡಿಭಾಗಗಳ ಮೇಲಿನ ತೆರಿಗೆಯು 70%ನಷ್ಟು ಕಡಿಮೆಯಾಗಲಿದೆ. ಇದರಿಂದಾಗಿ ಕಾರ್ ಅನ್ನು ಪೂರ್ತಿಯಾಗಿ ಉತ್ಪಾದಿಸಿ ಮಾರಾಟ ಮಾಡುವ ವೇಳೆಗೆ ಕಾರುಗಳ ಬೆಲೆಯು 40%ನಷ್ಟು ಕಡಿಮೆಯಾಗಲಿದೆ.

ಇನ್ಮುಂದೆ ನಮ್ಮ ಬೆಂಗಳೂರಿನಲ್ಲಿಯೇ ಉತ್ಪಾದನೆಯಾಗಲಿವೆ ಲೆಕ್ಸಸ್‍‍ನ ಹೊಸ ಕಾರುಗಳು

ಲೆಕ್ಸಸ್ ಕಂಪನಿಯು ಸದ್ಯಕ್ಕೆ ಬೆಂಗಳೂರು, ದೆಹಲಿ, ಗುರುಗ್ರಾಮ ಹಾಗೂ ಮುಂಬೈಗಳಲ್ಲಿ ಶೋರೂಂಗಳನ್ನು ಹೊಂದಿದೆ. ಲೆಕ್ಸಸ್ ಕಂಪನಿಯು ಶೀಘ್ರದಲ್ಲಿಯೇ ಚೆನ್ನೈ ಹಾಗೂ ಹೈದರಾಬಾದ್‍ ನಗರಗಳಲ್ಲಿಯೂ ಶೋರೂಂಗಳನ್ನು ಆರಂಭಿಸಲಿದೆ.

Most Read Articles

Kannada
English summary
Lexus starts local assembly of its cars in India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X