ಕೆಯುವಿ100 ನೆಕ್ಸ್ಟ್ ಡ್ಯುಯಲ್ ಟೋನ್ ವರ್ಷನ್ ಬಿಡುಗಡೆ ಮಾಡಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ತನ್ನ ಎಂಟ್ರಿ ಲೆವಲ್ ಕಾರು ಮಾದರಿಯಾದ ಕೆಯುವಿ100 ನೆಕ್ಸ್ಟ್ ಮೈಕ್ರೊ ಎಸ್‌ಯುವಿ ಕಾರಿನಲ್ಲಿ ಹೊಸದಾಗಿ ಡ್ಯುಯಲ್ ಟೋನ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.7.35 ಲಕ್ಷ ಬೆಲೆ ಹೊಂದಿದೆ.

ಕೆಯುವಿ100 ನೆಕ್ಸ್ಟ್ ಡ್ಯುಯಲ್ ಟೋನ್ ವರ್ಷನ್ ಬಿಡುಗಡೆ

ಕೆಯುವಿ100 ನೆಕ್ಸ್ಟ್ ಡ್ಯುಯಲ್ ಟೋನ್ ಮಾದರಿಯ ಬಗೆಗೆ ಮಹೀಂದ್ರಾ ಕಂಪನಿಯು ತನ್ನ ಅಧಿಕೃತ ವೆಬ್‌ತಾಣದಲ್ಲಿ ಸಂಪೂರ್ಣ ಮಾಹಿತಿಯನ್ನು ಪ್ರಕಟಿಸಿದ್ದು, ಡ್ಯುಯಲ್ ಟೋನ್ ಮಾದರಿಯು ಟಾಪ್ ಎಂಡ್ ಮಾದರಿಯಾದ ಜಿ80 ಕೆ8 ಮಾದರಿಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದೆ. ಡ್ಯುಯಲ್ ಟೋನ್ ಪೇಟಿಂಗ್ ಸೌಲಭ್ಯ ಹೊಂದಿರುವ ಹೊಸ ಕಾರು ಸ್ಟ್ಯಾಂಡರ್ಡ್ ಮಾದರಿಗಿಂತ ರೂ.7 ಸಾವಿರದಷ್ಟು ಹೆಚ್ಚುವರಿ ಬೆಲೆ ಪಡೆದುಕೊಂಡಿದೆ.

ಕೆಯುವಿ100 ನೆಕ್ಸ್ಟ್ ಡ್ಯುಯಲ್ ಟೋನ್ ವರ್ಷನ್ ಬಿಡುಗಡೆ

ಡ್ಯುಯಲ್ ಟೋನ್ ಮಾದರಿಗಳನ್ನು ಸಿಲ್ವರ್/ಬ್ಲ್ಯಾಕ್ ಮತ್ತು ರೆಡ್/ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿ ಮಾಡಬಹುದಾಗಿದ್ದು, ಇದರೊಂದಿಗೆ ಆರು ಮೊನೊ ಟೋನ್ ಹೊಂದಿರುವ ಮಾದರಿಗಳು ಸ್ಟ್ಯಾಂಡರ್ಡ್ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿವೆ.

ಕೆಯುವಿ100 ನೆಕ್ಸ್ಟ್ ಡ್ಯುಯಲ್ ಟೋನ್ ವರ್ಷನ್ ಬಿಡುಗಡೆ

ಮೊನೊ ಟೋನ್ ಬಣ್ಣಗಳಲ್ಲಿ ಕೆಯುವಿ100 ನೆಕ್ಸ್ಟ್ ಕಾರು ಮಾದರಿಯು ಪರ್ಲ್ ವೈಟ್, ಡ್ಯಾಜಿಲಿಂಗ್ ಸಿಲ್ವರ್, ಫ್ಲಾಂಬಾಯೆಂಟ್ ರೆಡ್, ಫ್ಲೈರಿ ಆರೇಂಜ್, ಡಿಸೆಂಜರ್ ಗ್ರೇ ಮತ್ತು ಮಿಡ್‌ ನೈಟ್ ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಡ್ಯುಯಲ್ ಟೋನ್ ಮಾದರಿಗಳನ್ನು ದಸರಾ ಮತ್ತು ದೀಪಾವಳಿ ವಿಶೇಷತೆ ಹಿನ್ನಲೆಯಲ್ಲಿ ಬಿಡುಗಡೆ ಮಾಡಲಾಗಿದೆ.

ಕೆಯುವಿ100 ನೆಕ್ಸ್ಟ್ ಡ್ಯುಯಲ್ ಟೋನ್ ವರ್ಷನ್ ಬಿಡುಗಡೆ

ಟಾಪ್ ಎಂಡ್ ಮಾದರಿಯಲ್ಲಿ ಮಾತ್ರವೇ ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಯು ಲಭ್ಯವಿದ್ದಲ್ಲಿ ಇನ್ನುಳಿದ ಎಲ್ಲಾ ಮಾದರಿಗಳಲ್ಲು ವಿವಿಧ ಆರು ಮೊನೊ ಟೊನ್‌ ಬಣ್ಣಗಳು ಆಯ್ಕೆ ಲಭ್ಯವಿದ್ದು, ಡ್ಯುಯಲ್ ಟೋನ್ ಹೊಂದಿರುವ ಕೆ8 ಮಾದರಿಯ ಜೊತೆಗೆ ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಕೆ2 ಪ್ಲಸ್, ಕೆ4 ಪ್ಲಸ್, ಕೆ6 ಪ್ಲಸ್ ಮಾದರಿಗಳನ್ನು ಸಹ ಖರೀದಿ ಮಾಡಬಹುದಾಗಿದೆ.

ಕೆಯುವಿ100 ನೆಕ್ಸ್ಟ್ ಡ್ಯುಯಲ್ ಟೋನ್ ವರ್ಷನ್ ಬಿಡುಗಡೆ

ಕೆಯುವಿ100 ನೆಕ್ಸ್ಟ್ ಕಾರು ಮಾದರಿಯಲ್ಲಿ ಕೆ2 ಪ್ಲಸ್ ಆವೃತ್ತಿಯು ಆರಂಭಿಕ ಕಾರು ಮಾದರಿಯಾಗಿದ್ದರೆ ಕೆ8 ಮಾದರಿಯು ಟಾಪ್ ಎಂಡ್ ಆವೃತ್ತಿಯಾಗಿದ್ದು, ಸ್ಟ್ಯಾಂಡರ್ಡ್ ಮಾದರಿಯಲ್ಲಿ ಕೆ2 ಪ್ಲಸ್ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 5.66 ಲಕ್ಷದಿಂದ ಟಾಪ್ ಎಂಡ್ ಆವೃತ್ತಿಯಾದ ಕೆ8 ಮಾದರಿಯು ರೂ. 7.28 ಲಕ್ಷ ಬೆಲೆ ಹೊಂದಿದೆ.

ಕೆಯುವಿ100 ನೆಕ್ಸ್ಟ್ ಡ್ಯುಯಲ್ ಟೋನ್ ವರ್ಷನ್ ಬಿಡುಗಡೆ

ಇದೀಗ ಬಿಡುಗಡೆಯಾಗಿರುವ ಕೆ8 ಡ್ಯುಯಲ್ ಆವೃತ್ತಿಯು ಸ್ಟ್ಯಾಂಡರ್ಡ್ ಕೆ8 ಆವೃತ್ತಿಗಿಂತ ರೂ.7 ಸಾವಿರ ಹೆಚ್ಚುವರಿ ಬೆಲೆಯೊಂದಿಗೆ ಮಾರಾಟವಾಗುತ್ತಿದ್ದು, ಬಣ್ಣಗಳ ಆಯ್ಕೆ ಹೊರತುಪಡಿಸಿ ತಾಂತ್ರಿಕ ಅಂಶಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಕೆಯುವಿ100 ನೆಕ್ಸ್ಟ್ ಡ್ಯುಯಲ್ ಟೋನ್ ವರ್ಷನ್ ಬಿಡುಗಡೆ

ಆದರೆ ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿ ಬೆಲೆಯೊಂದಿಗೆ ಡ್ಯುಯಲ್ ಟೋನ್ ಮಾದರಿಯಲ್ಲಿ ಸ್ಟ್ಯಾಂಡರ್ಡ್ ಫೀಚರ್ಸ್‌ಗಳಲ್ಲೂ ಹೊರತುಪಡಿಸಿ ಪ್ರೀಮಿಯಂ ಫೀಚರ್ಸ್‌ಗಳಾದ ಎಲ್ಇಡಿ ಡಿಆರ್‌ಎಲ್ಎಸ್, ಎಲೆಕ್ಟ್ರಿಕ್ ಮಾದರಿಯ ರಿಯಲ್ ವ್ಯೂ ಮಿರರ್, 15-ಇಂಚಿನ ಡ್ಯುಯಲ್ ಟೋನ್ ಅಲಾಯ್ ವೀಲ್ಹ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಫಾಗ್ ಲ್ಯಾಂಪ್ಸ್ ಕಾರಿನ ಒಳಭಾಗದಲ್ಲಿ ಮೂಡ್ ಲೈಡಿಂಗ್ಸ್ ಮತ್ತು ಕೂಲ್ಡ್ ಗ್ಲೋ ಬಾಕ್ಸ್ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

ಕೆಯುವಿ100 ನೆಕ್ಸ್ಟ್ ಡ್ಯುಯಲ್ ಟೋನ್ ವರ್ಷನ್ ಬಿಡುಗಡೆ

ಇನ್ನು ಸಬ್ ಫೋರ್ ಮೀಟರ್ ವಿನ್ಯಾಸದಲ್ಲೇ ಆಕರ್ಷಕ ವೈಶಿಷ್ಟ್ಯತೆಗಳನ್ನು ಹೊಂದಿರುವ ಕೆಯುವಿ100ನೆಕ್ಸ್ಟ್ ಕಾರು ಮಾದರಿಯಲ್ಲಿ 1.2-ಲೀಟರ್ ಎಂ ಫಾಲ್ಕನ್ ಜಿ80 ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 82-ಬಿಎಚ್‌ಪಿ ಮತ್ತು 115-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಕೆಯುವಿ100 ನೆಕ್ಸ್ಟ್ ಡ್ಯುಯಲ್ ಟೋನ್ ವರ್ಷನ್ ಬಿಡುಗಡೆ

ಕೆಯುವಿ100 ನೆಕ್ಸ್ಟ್ ಕಾರು ಮಾದರಿಯು ಇತರೆ ಮಾದರಿಗಳಿಂತಲೂ ವಿಭಿನ್ನ ಆಸನ ಸೌಲಭ್ಯ ಹೊಂದಿದ್ದು, 6 ಸೀಟರ್ ವಿನ್ಯಾಸ ಹೊಂದಿದೆ. ಮುಂಭಾಗದಲ್ಲಿ ಚಾಲಕನ ಆಸನದೊಂದಿಗೆ ಬೆಂಚ್ ಸೀಟ್ ಹೊಂದಿರುವ ಕೆಯುವಿ100 ನೆಕ್ಸ್ಟ್ ಕಾರು ಹಿಂಬದಿಯಲ್ಲೂ ಆರಾಮದಾಯಕ ಆಸನ ವ್ಯವಸ್ಥೆ ಹೊಂದಿದೆ.

Most Read Articles

Kannada
English summary
Mahindra KUV100 NXT Dual-Tone Launched In India. Read in Kannada.
Story first published: Thursday, October 22, 2020, 14:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X