ಆಟೋ ಎಕ್ಸ್‌ಪೋ 2020: ಬಿ‍ಎಸ್ 6 ಎಸ್ ಸಿ‍ಎನ್‍‍ಜಿ ಎರ್ಟಿಗಾ ಬಿಡುಗಡೆಗೊಳಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ತನ್ನ ಜನಪ್ರಿಯ ಕಾರುಗಳಲ್ಲಿ ಒಂದಾದ ಎರ್ಟಿಗಾ ಎಂಪಿವಿಯನ್ನು ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಳಿಸಿದೆ. ಈ ಕಾರು ಎಸ್- ಸಿಎನ್‍‍ಜಿ ಆವೃತ್ತಿಯಾಗಿರುವುದು ವಿಶೇಷ. ಭಾರತದಲ್ಲಿ ವಾಯು ಮಾಲಿನ್ಯವು ವಿಪರೀತವಾಗಿ ಏರಿಕೆಯಾಗುತ್ತಿದೆ.

ಆಟೋ ಎಕ್ಸ್‌ಪೋ 2020: ಬಿ‍ಎಸ್ 6 ಎಸ್ ಸಿ‍ಎನ್‍‍ಜಿ ಎರ್ಟಿಗಾ ಬಿಡುಗಡೆಗೊಳಿಸಿದ ಮಾರುತಿ ಸುಜುಕಿ

ಇದೇ ರೀತಿ ವಾಯು ಮಾಲಿನ್ಯವು ಏರಿಕೆಯಾದರೆ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಓಡಾಡುವ ದಿನಗಳು ದೂರವಿಲ್ಲ. ಈ ಕಾರಣಕ್ಕೆ ಸರ್ಕಾರವು ಎಲ್ಲಾ ವಾಹನಗಳಲ್ಲಿ ಬಿ‍ಎಸ್ 6 ಎಂಜಿನ್ ಅಳವಡಿಕೆಯನ್ನು ಕಡ್ಡಾಯಗೊಳಿಸಿದೆ. ಏಪ್ರಿಲ್ 1ರಿಂದ ಬಿ‍ಎಸ್ 4 ಎಂಜಿನ್ ವಾಹನಗಳನ್ನು ರಿಜಿಸ್ಟರ್ ಮಾಡುವುದಿಲ್ಲ.

ಆಟೋ ಎಕ್ಸ್‌ಪೋ 2020: ಬಿ‍ಎಸ್ 6 ಎಸ್ ಸಿ‍ಎನ್‍‍ಜಿ ಎರ್ಟಿಗಾ ಬಿಡುಗಡೆಗೊಳಿಸಿದ ಮಾರುತಿ ಸುಜುಕಿ

ಈ ಕಾರಣಕ್ಕೆ ಎಲ್ಲಾ ಆಟೋ ಮೊಬೈಲ್ ಕಂಪನಿಗಳು ತಮ್ಮ ವಾಹನಗಳಲ್ಲಿ ಬಿಎಸ್ 6 ಎಂಜಿನ್‍‍ಗಳನ್ನು ಅಳವಡಿಸಿ ಅಪ್‍‍ಗ್ರೇಡ್‍‍ಗೊಳಿಸುತ್ತಿವೆ. ಇದರಿಂದ ಮಾರುತಿ ಸುಜುಕಿ ಕಂಪನಿಯು ಸಹ ಹೊರತಾಗಿಲ್ಲ. ಈಗ ಮಾರುತಿ ಸುಜುಕಿ ಕಂಪನಿಯು ತನ್ನ ಎರ್ಟಿಗಾ ಎಂಪಿವಿಯನ್ನು ಬಿ‍ಎಸ್ 6 ಎಂಜಿನ್‍‍ನಲ್ಲಿ ಸಿ‍ಎನ್‍‍ಜಿ ಆಯ್ಕೆಯೊಂದಿಗೆ ಬಿಡುಗಡೆಗೊಳಿಸಿದೆ.

ಆಟೋ ಎಕ್ಸ್‌ಪೋ 2020: ಬಿ‍ಎಸ್ 6 ಎಸ್ ಸಿ‍ಎನ್‍‍ಜಿ ಎರ್ಟಿಗಾ ಬಿಡುಗಡೆಗೊಳಿಸಿದ ಮಾರುತಿ ಸುಜುಕಿ

ಸಿ‍ಎನ್‍‍ಜಿ ಆಯ್ಕೆ ಹೊಂದಿರುವ ಬಿ‍ಎಸ್ 6 ಎಂಜಿನ್‍‍ನ ಎರ್ಟಿಗಾ ಎಂಪಿವಿಯ ಬೆಲೆ ರೂ.8.95 ಲಕ್ಷಗಳಾಗಿದೆ. ಮಾರುಕಟ್ಟೆಯಲ್ಲಿರುವ ಎರ್ಟಿಗಾ ಕಾರಿಗಿಂತ ರೂ.7,000 ಹೆಚ್ಚಿನ ಬೆಲೆಯನ್ನು ಹೊಂದಿದೆ. ಸಿ‍ಎನ್‍‍ಜಿ ಆಯ್ಕೆಯನ್ನು ಸದ್ಯಕ್ಕೆ ವಿ‍ಎಕ್ಸ್ ಐ ಮಾದರಿಯಲ್ಲಿ ಮಾತ್ರವೇ ನೀಡಲಾಗುವುದು.

ಆಟೋ ಎಕ್ಸ್‌ಪೋ 2020: ಬಿ‍ಎಸ್ 6 ಎಸ್ ಸಿ‍ಎನ್‍‍ಜಿ ಎರ್ಟಿಗಾ ಬಿಡುಗಡೆಗೊಳಿಸಿದ ಮಾರುತಿ ಸುಜುಕಿ

ಇದರ ಜೊತೆಗೆ ಇನ್ನೂ ಕೆಲವು ಮಾದರಿಗಳಲ್ಲಿ ಈ ಆಯ್ಕೆಯನ್ನು ನೀಡಲಾಗುವುದು. ಈ ಎಂಜಿನ್ ಮಾತ್ರವಲ್ಲದೇ ಮಾರುತಿ ಸುಜುಕಿ ಕಂಪನಿಯು ಹೊಸ ಎರ್ಟಿಗಾ ಕಾರಿನಲ್ಲಿ ಹಲವಾರು ಪ್ರೀಮಿಯಂ ಹಾಗೂ ಟೆಕ್ನಿಕಲ್ ಫೀಚರ್‍‍‍ಗಳನ್ನು ನೀಡಿದೆ.

ಆಟೋ ಎಕ್ಸ್‌ಪೋ 2020: ಬಿ‍ಎಸ್ 6 ಎಸ್ ಸಿ‍ಎನ್‍‍ಜಿ ಎರ್ಟಿಗಾ ಬಿಡುಗಡೆಗೊಳಿಸಿದ ಮಾರುತಿ ಸುಜುಕಿ

ಹೊಸ ಫೀಚರ್‍‍ಗಳಲ್ಲಿ ಕಾರಿನ ಬಾಡಿ ಕಲರ್ ಹ್ಯಾಂಡಲ್ ಹಾಗೂ ಮಿರರ್, ಲಿಡ್ ಹೊಂದಿರುವ 15 ಇಂಚಿನ ಸ್ಟೀಲ್ ವ್ಹೀಲ್, ಮಿರರ್ ಇಂಡಿಕೇಟರ್, ಎಲೆಕ್ಟ್ರಾನಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ವಿಂಗ್ ಮಿರರ್, ಸೆಕೆಂಡ್ ಸೀಟಿಗೆ ಆರ್ಮ್‍‍ರೆಸ್ಟ್ ಗಳಿವೆ.

ಆಟೋ ಎಕ್ಸ್‌ಪೋ 2020: ಬಿ‍ಎಸ್ 6 ಎಸ್ ಸಿ‍ಎನ್‍‍ಜಿ ಎರ್ಟಿಗಾ ಬಿಡುಗಡೆಗೊಳಿಸಿದ ಮಾರುತಿ ಸುಜುಕಿ

ಇದರ ಜೊತೆಗೆ ರೇರ್ ಎಸಿ ವೆಂಟ್, ಕೀಲೆಸ್ ರಿಮೋಟ್ ಎಂಟ್ರಿ, ಯು‍ಎಸ್‍‍ಬಿ, ಬ್ಲೂಟೂತ್ ಸೇರಿದಂಟೆ ಹಲವಾರು ಫೀಚರ್‍‍ಗಳಿವೆ. ಇವುಗಳಲ್ಲದೇ ಕಾರಿನ ಕ್ಯಾಬಿನ್‍‍ನಲ್ಲಿ ಡೇ ಲೈಟ್ ಹಾಗೂ ನೈಟ್ ಟೈಂ ಮಿರರ್‍‍ಗಳಿವೆ. ಮನರಂಜನೆಗಾಗಿ ಕಾರಿನಲ್ಲಿ ನಾಲ್ಕು ಸ್ಪೀಕರ್‍‍ಗಳ ಮ್ಯೂಸಿಕ್ ಸಿಸ್ಟಂ ನೀಡಲಾಗಿದೆ.

Most Read Articles

Kannada
English summary
Maruti Suzuki launches BS 6 CNG at Auto Expo. Read in Kannada.
Story first published: Friday, February 7, 2020, 19:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X