ಅನಾವರಣವಾಯ್ತು ಐಷಾರಾಮಿ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಫೇಸ್‍‍ಲಿಫ್ಟ್

ಜರ್ಮನಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ತನ್ನ 2020ರ ಇ-ಕ್ಲಾಸ್ ಫೇಸ್‍‍ಲಿಫ್ಟ್ ಕಾರನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಈ ಹೊಸ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಫೇಸ್‍‍ಲಿಫ್ಟ್ ಅನ್ನು ಜಾಗತಿಕ ಮಟ್ಟದಲ್ಲಿ ಅನಾವರಣಗೊಳಿಸಿದೆ.

ಅನಾವರಣವಾಯ್ತು ಐಷಾರಾಮಿ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಫೇಸ್‍‍ಲಿಫ್ಟ್

2020ರ ಮರ್ಸಿಡೀಸ್ ಬೆಂಝ್ ಇ-ಕ್ಲಾಸ್ ಫೇಸ್‍ಲಿಫ್ಟ್ ಕಾರನ್ನು ನವೀಕರಿಸಲಾಗಿದೆ. ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಐಷಾರಾಮಿ ಸೆಡಾನ್‍ನಲ್ಲಿ ಮರುವಿನ್ಯಾಸಗೊಳಿಸಿದ ಫ್ರಂಟ್ ಗ್ರಿಲ್, ಹೊಸ ಹೆಡ್‍‍ಲ್ಯಾಂಪ್ ಮತ್ತು ಹೊಸ ಫ್ರಂಟ್ ಬಂಪರ್‍‍ಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಟೇಲ್ ಲೈಟ್ಸ್ ಮತ್ತು ಹಿಂಭಾಗದ ಬಂಪರ್‍‍‍ಗಳನ್ನು ಸಹ ವಿನ್ಯಾಸಗೊಳಿಸಲಾಗಿದೆ. ಹಳೆಯ ಮಾದರಿಗೆ ಹೋಲಿಸಿದರೆ 2020ರ ಇ-ಕ್ಲಾಸ್ ಸೆಡಾನ್‍‍‍ನ ಎಲ್ಲಾ ಬದಲಾವಣೆಗಳು ಬ್ರ್ಯಾಂಡ್‍‍ನ ಸ್ಟೈಲ್‍‍ಗೆ ಅನುಗುಣವಾಗಿದೆ.

ಅನಾವರಣವಾಯ್ತು ಐಷಾರಾಮಿ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಫೇಸ್‍‍ಲಿಫ್ಟ್

ಮರ್ಸಿಡಿಸ್ ತಮ್ಮ ಎಂಬಿಯುಎಕ್ಸ್ ತಂತ್ರಜ್ಞಾನವನ್ನು ಹೊಸ ಇ-ಕ್ಲಾಸ್ ಕಾರಿನಲ್ಲಿ ಅಳವಡಿಸಬಹುದು. ಇದರೊಂದಿಗೆ ಕಾರಿನ ಇಂಟಿರಿಯರ್‍‍ನಲ್ಲಿ ಆ್ಯಪಲ್ ಕಾರ್‍‍ಪ್ಲೇ ಮತ್ತು ಅಂಡ್ರಾಯ್ಡ್ ಆಟೋ ಜೊತೆಯಲ್ಲಿ ಕಾರಿನ ಇತರ ಪೀಚರ್‍‍ಗಳು ಕ್ಲೈಮೆಂಟ್ ಕಂಟ್ರೋಲ್, ವೆಂಟಿಲೆಟಡ್, ಹಿಟಡ್ ಸೀಟ್ ಮತ್ತು ಏರ್ ಸಸ್ಪೆಂಷನ್‍‍ಗಳಾಗಿದೆ.

ಅನಾವರಣವಾಯ್ತು ಐಷಾರಾಮಿ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಫೇಸ್‍‍ಲಿಫ್ಟ್

ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಫೇಸ್‍‍ಲಿಫ್ಟ್ ಮಾದರಿಗಳು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಜಾಗತಿಕ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಇದೀಗ ಹೊಸ ಇ-ಕ್ಲಾಸ್ ಫೇಸ್‍‍ಲಿಫ್ಟ್ ಕಾರಿಗೆ ಹ್ರೈಬ್ರಿಡ್ ಎಂಜಿನ್‍‍ನೊಂಡಿಗೆ ಬಿಡುಗಡೆಯಾಗಲಿದೆ.

ಅನಾವರಣವಾಯ್ತು ಐಷಾರಾಮಿ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಫೇಸ್‍‍ಲಿಫ್ಟ್

ಪ್ಲಗ್-ಇನ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಎರಡೂ ರೂಪಾಂತರಗಳಲ್ಲಿ ಇರಲಿದೆ. ಇದರಲ್ಲಿ ಹೈ-ಸ್ಪೆಕ್ ಎಂಜಿನ್ 362 ಬಿ‍‍‍ಹೆಚ್‍‍ಪಿ ಪವರ್ ಅನ್ನು ಉತ್ಪಾದಿಸಿದರೆ, ಲೋವರ್ ಸ್ಪೆಕ್ 154 ಬಿ‍‍ಹೆಚ್‍‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಹೊಸ ಇ-ಕ್ಲಾಸ್‍‍ನಲ್ಲಿರುವ ಪಿ‍‍ಹೆಚ್‍ಇವಿ ಡೀಸೆಲ್ ಎರಡು ಎಂಜಿನ್‍ನಲ್ಲಿ 158 ಬಿ‍‍ಹೆಚ್‍‍ಪಿ ಪವರ್ ಮತ್ತು 326 ಬಿ‍ಹೆಚ್‍‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಅನಾವರಣವಾಯ್ತು ಐಷಾರಾಮಿ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಫೇಸ್‍‍ಲಿಫ್ಟ್

ಈ ಕಾರಿನಲ್ಲಿ ಸುರಕ್ಷತೆಗಾಗಿ ಎಂಟು ಏರ್‍‍ಬ್ಯಾಗಗಳು, ಇಬಿಡಿ‍‍ಯೊಂದಿಗೆ ಎಬಿ‍ಎಸ್, ಫ್ರಂಟ್ ಮತ್ತು ರೇರ್ ಪಾರ್ಕಿಂಗ್ ಸೆನ್ಸಾರ್‍‍ಗಳು, 360 ಡಿಗ್ರಿ ಕ್ಯಾಮೆರಾ ಮತ್ತು ಇತರ ಸುರಕ್ಷತಾ ಫೀಚರ್‍‍ಗಳನ್ನು ಹೊಂದಿರುತ್ತದೆ.

ಅನಾವರಣವಾಯ್ತು ಐಷಾರಾಮಿ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಫೇಸ್‍‍ಲಿಫ್ಟ್

ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬೆಂಝ್ ಇ-ಕ್ಲಾಸ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.59.08 ಲಕ್ಷದಿಂದ ರೂ.1.5 ಕೋಟಿಗಳಾಗಿದೆ. ಮರ್ಸಿಡಿಸ್ ಬೆಂಝ್ ಕಂಪನಿಯ ಸರಣಿಯಲ್ಲಿ ಜನಪ್ರಿಯ ಕಾರುಗಳಲ್ಲಿ ಇದು ಕೂಡ ಒಂದಾಗಿದೆ.

ಅನಾವರಣವಾಯ್ತು ಐಷಾರಾಮಿ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಫೇಸ್‍‍ಲಿಫ್ಟ್

2020ರ ಇ-ಕ್ಲಾಸ್ ಫೇಸ್‍‍ಲಿಫ್ಟ್ ಹೊಸ ಪ್ಲಗ್-ಇನ್ ಹೈಬ್ರಿಡ್ ಎಂಜಿನ್‍ ಅನ್ನು ಹೊಂದಿದೆ. ಹೊಸ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಫೇಸ್‍‍ಲಿಫ್ಟ್ ಕಾರಿನ ಬೆಲೆಯು ಭಾರತದ ಎಕ್ಸ್ ಶೂಂ ಪ್ರಕಾರ ರೂ.66 ಲಕ್ಷದಿಂದ ರೂ.1.8 ಕೋಟಿಗಳಿರಬಹುದು ಎಂದು ಅಂದಾಜಿಸಲಾಗಿದೆ.

Most Read Articles

Kannada
English summary
Mercedes-Benz E-Class Facelift Unveiled. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X