ಆಟೋ ಎಕ್ಸ್‌ಪೋ 2020: ಬಿಡುಗಡೆಯಾಯ್ತು ಐಷಾರಾಮಿ ಮರ್ಸಿಡಿಸ್ ಬೆಂಝ್ ವಿ ಕ್ಲಾಸ್ ಮಾರ್ಕೊ ಪೊಲೊ

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಮರ್ಸಿಡಿಸ್ ಬೆಂಝ್ ತನ್ನ ಹೊಸ ವಿ-ಕ್ಲಾಸ್ ಮಾರ್ಕೊ ಪೊಲೊ ಕಾರನ್ನು 2020ರ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಗೊಳಿಸಿದೆ. ಈ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಮಾರ್ಕೊ ಪೊಲೊ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.38 ಕೋಟಿಗಳಾಗಿದೆ.

ಆಟೋ ಎಕ್ಸ್‌ಪೋ 2020: ಬಿಡುಗಡೆಯಾಯ್ತು ಐಷಾರಾಮಿ ಮರ್ಸಿಡಿಸ್ ಬೆಂಝ್ ವಿ ಕ್ಲಾಸ್ ಮಾರ್ಕೊ ಪೊಲೊ

ವಿ-ಕ್ಲಾಸ್ ಮಾರ್ಕೊ ಪೊಲೊ ಎರಡೂ ರೂಪಾಂತರಗಳಲ್ಲಿ ಲಭ್ಯವಿದೆ. ಇದರಲ್ಲಿ ಎಂಟ್ರಿ ಲೆವೆಲ್ ಮಾರ್ಕೊ ಪೊಲೊ ಹರೈಸನ್ ಮತ್ತು ಸ್ಟ್ಯಾಂಡರ್ಡ್ ಮಾರ್ಕೊ ಪೊಲೊ ಆಗಿದೆ. ಸ್ಟ್ಯಾಂಡರ್ಡ್ ಮಾರ್ಕೊ ಪೊಲೊ ಕಾರಿನ ಬೆಲೆಯು ರೂ.1.46 ಕೋಟಿಗಳಾಗಿದೆ. ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಮಾರ್ಕೊ ಪೊಲೊ 2.0 ಲೀಟರ್ ನಾಲ್ಕು ಸಿಲಿಂಡರ್ ಟರ್ಬೊ-ಡೀಸೆಲ್ ಎಂಜಿನ್ ಅನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಬಿಡುಗಡೆಯಾಯ್ತು ಐಷಾರಾಮಿ ಮರ್ಸಿಡಿಸ್ ಬೆಂಝ್ ವಿ ಕ್ಲಾಸ್ ಮಾರ್ಕೊ ಪೊಲೊ

ಈ ಎಂಜಿನ್ 163 ಬಿ‍‍ಹೆಚ್‍‍ಪಿ ಪವರ್ ಮತ್ತು 380 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 9 ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಆಟೋ ಎಕ್ಸ್‌ಪೋ 2020: ಬಿಡುಗಡೆಯಾಯ್ತು ಐಷಾರಾಮಿ ಮರ್ಸಿಡಿಸ್ ಬೆಂಝ್ ವಿ ಕ್ಲಾಸ್ ಮಾರ್ಕೊ ಪೊಲೊ

ಹೊಸ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಮಾರ್ಕೊ ಪೊಲೊ ಕಾರು ಲಾಂಗ್ ವ್ಹೀಲ್ ಬೇಸ್ ಆವೃತ್ತಿಯಾಗಿದೆ. ಈ ಹೊಸ ಮಾರ್ಕೊ ಪೊಲೊ 5,140 ಎಂಎಂ ಉದ್ದ, 1,928 ಎಂಎಂ ಅಗಲ, 1,901 ಎಂಎಂ ಎತ್ತರವನ್ನು ಹೊಂದಿದೆ ಮತ್ತು ಇದು 3,200 ಎಂಎಂ ವ್ಹೀಲ್ ಬೇಸ್ ಹೊಂದಿದೆ.

ಆಟೋ ಎಕ್ಸ್‌ಪೋ 2020: ಬಿಡುಗಡೆಯಾಯ್ತು ಐಷಾರಾಮಿ ಮರ್ಸಿಡಿಸ್ ಬೆಂಝ್ ವಿ ಕ್ಲಾಸ್ ಮಾರ್ಕೊ ಪೊಲೊ

ಮರ್ಸಿಡಿಸ್ ಬೆಂಝ್ ಕಂಪನಿಯು ಹಲವಾರು ಕಾರುಗಳನ್ನು ವಿ ಕ್ಲಾಸ್ ಮಾದರಿಯಲ್ಲಿ ಮಾರಾಟ ಮಾಡುತ್ತದೆ. ಈ ಕಾರುಗಳನ್ನು ಗ್ರಾಹಕರ ಅಭಿರುಚಿಗೆ ತಕ್ಕಂತೆ ಮಾರಾಟ ಮಾಡಲಾಗುತ್ತದೆ. ವಿ ಕ್ಲಾಸ್ ಕಾರು ಭಾರತದ ದುಬಾರಿ ಬೆಲೆಯ ಲಗ್ಷುರಿ ಎಂಪಿವಿಯಾಗಿದೆ.

ಆಟೋ ಎಕ್ಸ್‌ಪೋ 2020: ಬಿಡುಗಡೆಯಾಯ್ತು ಐಷಾರಾಮಿ ಮರ್ಸಿಡಿಸ್ ಬೆಂಝ್ ವಿ ಕ್ಲಾಸ್ ಮಾರ್ಕೊ ಪೊಲೊ

ಮರ್ಸಿಡಿಸ್ ಬೆಂಝ್ ಕಂಪನಿಯು ಈ ವಿ-ಕ್ಲಾಸ್ ಮಾರ್ಕೊ ಪೊಲೊ ಕಾರ್ ಅನ್ನು ಮೊಬೈಲ್ ಮಿನಿ ಹೋಂ ಎಂದು ಕರೆಯುತ್ತದೆ. ಇದರಿಂದಾಗಿ ಕಂಪನಿಯು ಈ ಕಾರಿನಲ್ಲಿ ಮನೆಯಲ್ಲಿರುವಂತಹ ಸೌಕರ್ಯಗಳನ್ನು ನೀಡುವುದು ತಿಳಿದು ಬರುತ್ತದೆ.

ಆಟೋ ಎಕ್ಸ್‌ಪೋ 2020: ಬಿಡುಗಡೆಯಾಯ್ತು ಐಷಾರಾಮಿ ಮರ್ಸಿಡಿಸ್ ಬೆಂಝ್ ವಿ ಕ್ಲಾಸ್ ಮಾರ್ಕೊ ಪೊಲೊ

ಈ ಕಾರಿನ ಹಿಂಭಾಗದಲ್ಲಿರುವ ಸೀಟ್ ಅನ್ನು ಬೆಡ್‍‍ನಂತೆ ಮಡಚಬಹುದಾಗಿದೆ. ಈ ಕಾರಿನ ಮುಂಭಾಗದಲ್ಲಿರುವ ಸೀಟುಗಳನ್ನು ಹಿಂದಕ್ಕೆ ಎಳೆಯಬಹುದು. ಈ ಕಾರು ಚಿಕ್ಕ ಗಾತ್ರದ ಕಿಚನ್, ಫೋಲ್ಡಿಂಗ್ ಟೇಬಲ್‍‍ಗಳನ್ನು ಹೊಂದಿದೆ. 40-ಲೀಟರ್ ಫ್ರಿಜ್ ಮತ್ತು ಸಂಪೂರ್ಣ ಸುಸಜ್ಜಿತ ಅಡಿಗೆಮನೆಗಳನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಬಿಡುಗಡೆಯಾಯ್ತು ಐಷಾರಾಮಿ ಮರ್ಸಿಡಿಸ್ ಬೆಂಝ್ ವಿ ಕ್ಲಾಸ್ ಮಾರ್ಕೊ ಪೊಲೊ

ಸಾಮಗ್ರಿಗಳನ್ನು ತುಂಬಿಡಲು ಈ ಕಾರಿನಲ್ಲಿ ಚಿಕ್ಕ ವಾರ್ಡ್‍‍ರೋಬ್ ಸಹ ನೀಡಲಾಗಿದೆ. ಇದರ ಜೊತೆಗೆ ಮರ್ಸಿಡಿಸ್ ಬೆಂಝ್ ಕಂಪನಿಯು ಈ ಕಾರಿನಲ್ಲಿ ಹಲವಾರು ಹೆಚ್ಚುವರಿ ಆಕ್ಸೆಸರೀಸ್‍‍ಗಳನ್ನು ಸಹ ನೀಡಲಿದೆ.

ಆಟೋ ಎಕ್ಸ್‌ಪೋ 2020: ಬಿಡುಗಡೆಯಾಯ್ತು ಐಷಾರಾಮಿ ಮರ್ಸಿಡಿಸ್ ಬೆಂಝ್ ವಿ ಕ್ಲಾಸ್ ಮಾರ್ಕೊ ಪೊಲೊ

ಈ ಕಾರ್ ಅನ್ನು ವಿಶ್ರಾಂತಿ ಪಡೆಯುವ ಉದ್ದೇಶಕ್ಕಾಗಿಯೂ ಅಭಿವೃದ್ಧಿಪಡಿಸಲಾಗಿದ್ದು, ದೂರ ಸಂಚಾರ ಮಾಡುವವರು ಹಾಗೂ ಸಾಹಸ ಪ್ರಿಯರು ಈ ಕಾರ್ ಅನ್ನು ಬಳಸಿ ತಮ್ಮ ರಾತ್ರಿ ವೇಳೆಯನ್ನು ಈ ಕಾರಿನಲ್ಲಿಯೇ ಕಳೆಯಬಹುದಾಗಿದೆ.

ಆಟೋ ಎಕ್ಸ್‌ಪೋ 2020: ಬಿಡುಗಡೆಯಾಯ್ತು ಐಷಾರಾಮಿ ಮರ್ಸಿಡಿಸ್ ಬೆಂಝ್ ವಿ ಕ್ಲಾಸ್ ಮಾರ್ಕೊ ಪೊಲೊ

ಈ ಹೊಸ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಮಾರ್ಕೊ ಪೊಲೊ ಕಾರು ಹೆಚ್ಚಾಗಿ ದೂರ ಪ್ರಯಾಣ ಮಾಡುವವರಿಗೆ ಮತ್ತು ಐಷಾರಾಮಿ ವಾಹನ ಪ್ರಿಯರಿಗೆ ಉತ್ತಮ ಆಯ್ಕೆಯಾಗಿದೆ. ಈ ಕಾರು ಹೆಚ್ಚಾಗಿ ಐಷಾರಾಮಿ ಕಾರು ಪ್ರಿಯರನ್ನು ಸೆಳೆಯಬಹುದು.

Most Read Articles

Kannada
English summary
Mercedes-Benz V-class Marco Polo is your home on wheels. Read in Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X