ಬಹು ನಿರೀಕ್ಷಿತ ಏಳು ಸೀಟರ್ ಗಳ ಗ್ಲೋಸ್ಟರ್ ಪ್ರೀಮಿಯಂ ಎಸ್‌ಯುವಿ ಬಿಡುಗಡೆಗೊಳಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಇಂಡಿಯಾ ತನ್ನ ಹೊಸ ಗ್ಲೋಸ್ಟರ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ. ಹೊಸ ಎಂಜಿ ಗ್ಲೋಸ್ಟರ್ ಎಸ್‌ಯುವಿಯನ್ನು ಮೊದಲ ಬಾರಿಗೆ 2020 ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿತ್ತು.

ಬಹು ನಿರೀಕ್ಷಿತ ಏಳು ಸೀಟರ್ ಗಳ ಗ್ಲೋಸ್ಟರ್ ಪ್ರೀಮಿಯಂ ಎಸ್‌ಯುವಿ ಬಿಡುಗಡೆಗೊಳಿಸಿದ ಎಂಜಿ ಮೋಟಾರ್

ಎಂಜಿ ಗ್ಲೋಸ್ಟರ್ ಎಸ್‌ಯುವಿಯನ್ನು ಸೂಪರ್, ಸ್ಮಾರ್ಟ್, ಶಾರ್ಪ್ ಹಾಗೂ ಸ್ಯಾವಿ ಎಂಬ ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಪ್ರತಿಯೊಂದು ಮಾದರಿಗಳಲ್ಲೂ ಹಲವಾರು ಫೀಚರ್ ಹಾಗೂ ಎಕ್ವಿಪ್ ಮೆಂಟ್ ಗಳನ್ನು ನೀಡಲಾಗುತ್ತದೆ. ಬೇಸ್ ಮಾದರಿಯಾದ ಸೂಪರ್ ನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.28.98 ಲಕ್ಷಗಳಾದರೆ, ಟಾಪ್-ಎಂಡ್ 'ಸ್ಯಾವಿ' ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.35.38 ಲಕ್ಷಗಳಾಗಿದೆ.

ಬಹು ನಿರೀಕ್ಷಿತ ಏಳು ಸೀಟರ್ ಗಳ ಗ್ಲೋಸ್ಟರ್ ಪ್ರೀಮಿಯಂ ಎಸ್‌ಯುವಿ ಬಿಡುಗಡೆಗೊಳಿಸಿದ ಎಂಜಿ ಮೋಟಾರ್

ಈ ಪ್ರೀಮಿಯಂ ಎಸ್‌ಯುವಿಗಾಗಿ ಬುಕಿಂಗ್ ಆರಂಭವಾಗಿದ್ದು, ವಿತರಣೆಗಳು ಶೀಘ್ರದಲ್ಲೇ ಆರಂಭವಾಗಲಿವೆ. ಎಂಜಿ ಗ್ಲೋಸ್ಟರ್ ಹೆಕ್ಟರ್ ಪ್ಲಸ್ ಎಸ್‌ಯುವಿಗಿಂತ ಮೇಲಿರಲಿದೆ. ಇದು ಕಂಪನಿಯ ಹೊಸ ಪ್ರಮುಖ ಎಸ್‌ಯುವಿ. ಏಳು ಆಸನಗಳ ಮಾದರಿಯು ದೇಶದ ಮೊದಲ ಸ್ವಾಯತ್ತ 'ಲೆವೆಲ್ 1' ಎಸ್‌ಯುವಿ ಎಂದು ಹೇಳಲಾಗಿದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಬಹು ನಿರೀಕ್ಷಿತ ಏಳು ಸೀಟರ್ ಗಳ ಗ್ಲೋಸ್ಟರ್ ಪ್ರೀಮಿಯಂ ಎಸ್‌ಯುವಿ ಬಿಡುಗಡೆಗೊಳಿಸಿದ ಎಂಜಿ ಮೋಟಾರ್

ಈ ಎಸ್‌ಯುವಿಯು ಆಟೋಮ್ಯಾಟಿಕ್ ಪಾರ್ಕಿಂಗ್ ಅಸಿಸ್ಟ್ (ಎಪಿಎ), ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ (ಎಇಬಿ), ಫಾರ್ವರ್ಡ್ ಕೊಲಿಷನ್ ವಾರ್ನಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಹಾಗೂ ಲೇನ್ ಎಕ್ಸಿಟ್ ವಾರ್ನಿಂಗ್ ಗಳನ್ನು ಹೊಂದಿದೆ.

ಬಹು ನಿರೀಕ್ಷಿತ ಏಳು ಸೀಟರ್ ಗಳ ಗ್ಲೋಸ್ಟರ್ ಪ್ರೀಮಿಯಂ ಎಸ್‌ಯುವಿ ಬಿಡುಗಡೆಗೊಳಿಸಿದ ಎಂಜಿ ಮೋಟಾರ್

ಇವುಗಳ ಹೊರತಾಗಿ ಎಸ್‌ಯುವಿಯ ಎಕ್ಸ್ ಟಿರಿಯರ್ ಹಾಗೂ ಇಂಟಿರಿಯರ್ ಗಳ ಸುತ್ತಲೂ ಸಾಕಷ್ಟು ಫೀಚರ್ ಹಾಗೂ ಎಕ್ವಿಪ್ ಮೆಂಟ್ ಗಳಿವೆ. ಎಕ್ಸ್ ಟಿರಿಯರ್ ನಲ್ಲಿ ಎಲ್‌ಇಡಿ ಲೈಟಿಂಗ್, ಆಟೋ ಲೆವೆಲಿಂಗ್‌ನೊಂದಿಗೆ ಹೆಡ್‌ಲ್ಯಾಂಪ್‌ಗಳು, ಎಂಜಿ ಲೋಗೋ ಪ್ರಕ್ಷೇಪಗಳೊಂದಿಗೆ ಒಆರ್‌ವಿಎಂ, ಪನೋರಾಮಿಕ್ ಸನ್‌ರೂಫ್, 19 ಇಂಚಿನ ಡೈಮಂಡ್-ಕಟ್ ಅಲಾಯ್ ವ್ಹೀಲ್, ಫ್ರಂಟ್ - ರೇರ್ ಫಾಗ್ ಲ್ಯಾಂಪ್‌, ಸ್ಟೀಯರಿಂಗ್-ಅಸಿಸ್ಟ್ ಕಾರ್ನರಿಂಗ್ ಲ್ಯಾಂಪ್‌, ಡ್ಯುಯಲ್-ಬ್ಯಾರೆಲ್ ಟ್ವಿನ್ ಕ್ರೋಮ್ ಎಕ್ಸಾಸ್ಟ್ ಗಳಿವೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಬಹು ನಿರೀಕ್ಷಿತ ಏಳು ಸೀಟರ್ ಗಳ ಗ್ಲೋಸ್ಟರ್ ಪ್ರೀಮಿಯಂ ಎಸ್‌ಯುವಿ ಬಿಡುಗಡೆಗೊಳಿಸಿದ ಎಂಜಿ ಮೋಟಾರ್

ಇಂಟಿರಿಯರ್ ನಲ್ಲಿ ಲೆದರ್ ಸೀಟ್, ಎರಡನೇ ಸಾಲಿನಲ್ಲಿ ಪರ್ಸನಲ್ ಕ್ಯಾಪ್ಟನ್ ಸೀಟ್, ಆಪಲ್ ಕಾರ್ ಪ್ಲೇ ಹೊಂದಿರುವ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಆಂಡ್ರಾಯ್ಡ್ ಆಟೋ, ಎಂಜಿ ಕಂಪನಿಯ ಹೊಸ ಐ-ಸ್ಮಾರ್ಟ್ ಕನೆಕ್ಟೆಡ್ ಟೆಕ್ನಾಲಜಿ, ಸ್ಟೀಯರಿಂಗ್-ಮೌಂಟೆಡ್ ಕಂಟ್ರೋಲ್, 8 ಇಂಚಿನ ಎಂಐಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪ್ಯಾಡಲ್ ಶಿಫ್ಟರ್‌, ತ್ರೀ ಜೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಚಾಲಿತ ಟೇಲ್‌ಗೇಟ್, ಬಿಸಿ - ಗಾಳಿ ಮುಂಭಾಗದ ಆಸನಗಳು, ವೈರ್‌ಲೆಸ್ ಚಾರ್ಜಿಂಗ್, ಮಲ್ಟಿ-ವೇ ಎಲೆಕ್ಟ್ರಾನಿಕ್ ಅಡ್ಜಸ್ಟಬಲ್ ಫ್ರಂಟ್ ಸೀಟ್ ಸೇರಿದಂತೆ ಹಲವಾರು ಫೀಚರ್ ಗಳಿವೆ.

ಮಾದರಿಗಳು ಬೆಲೆಗಳು
ಸೂಪರ್ 7 ಸೀಟರ್ ₹28,98,000
ಸ್ಮಾರ್ಟ್ 7 ಸೀಟರ್ ₹30,98,000
ಶಾರ್ಪ್ 7 ಸೀಟರ್ ₹33,68,000
ಶಾರ್ಪ್ 6 ಸೀಟರ್ ₹33,98,000
ಸ್ಯಾವಿ 6 ಸೀಟರ್ ₹35,38,000
ಬಹು ನಿರೀಕ್ಷಿತ ಏಳು ಸೀಟರ್ ಗಳ ಗ್ಲೋಸ್ಟರ್ ಪ್ರೀಮಿಯಂ ಎಸ್‌ಯುವಿ ಬಿಡುಗಡೆಗೊಳಿಸಿದ ಎಂಜಿ ಮೋಟಾರ್

ಈ ಐ-ಸ್ಮಾರ್ಟ್ ತಂತ್ರಜ್ಞಾನವು ಕಾರನ್ನು ಚಾಲಕನ ಸ್ಮಾರ್ಟ್‌ಫೋನ್‌ಗೆ ಅಪ್ಲಿಕೇಶನ್ ಮೂಲಕ ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ. ಇದು ವಾಹನದ ಸ್ಥಿತಿ, ಲೈವ್ ವೆಹಿಕಲ್ ಟ್ರ್ಯಾಕಿಂಗ್, ಜಿಯೋಫೆನ್ಸಿಂಗ್, ಕಾರಿನ ವಿವಿಧ ಫೀಚರ್ ಗಳ ರಿಮೋಟ್ ಫಂಕ್ಷನ್ ಸೇರಿದಂತೆ ಒಟ್ಟು 57 ಹೆಚ್ಚುವರಿ ಫೀಚರ್ ಗಳನ್ನು ನೀಡುತ್ತದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಬಹು ನಿರೀಕ್ಷಿತ ಏಳು ಸೀಟರ್ ಗಳ ಗ್ಲೋಸ್ಟರ್ ಪ್ರೀಮಿಯಂ ಎಸ್‌ಯುವಿ ಬಿಡುಗಡೆಗೊಳಿಸಿದ ಎಂಜಿ ಮೋಟಾರ್

ಫೀಚರ್ ಗಳ ಜೊತೆಗೆ ಎಂಜಿ ಗ್ಲೋಸ್ಟರ್ ದೊಡ್ಡ ಗಾತ್ರವನ್ನು ಹೊಂದಿದೆ. ಈ ಎಸ್‌ಯುವಿ ಎಲ್ಲಾ ಪ್ರಯಾಣಿಕರಿಗೆ ಕ್ಯಾಬಿನ್ ಒಳಗೆ ಸಾಕಷ್ಟು ಸ್ಪೇಸ್ ನೀಡುತ್ತದೆ. ಈ ಎಸ್‌ಯುವಿ 4985 ಎಂಎಂ ಉದ್ದ, 1926 ಎಂಎಂ ಅಗಲ, 1867 ಎಂಎಂ ಎತ್ತರ ಹಾಗೂ 2950 ಎಂಎಂ ವ್ಹೀಲ್ ಬೇಸ್ ಹೊಂದಿದೆ.

ಬಹು ನಿರೀಕ್ಷಿತ ಏಳು ಸೀಟರ್ ಗಳ ಗ್ಲೋಸ್ಟರ್ ಪ್ರೀಮಿಯಂ ಎಸ್‌ಯುವಿ ಬಿಡುಗಡೆಗೊಳಿಸಿದ ಎಂಜಿ ಮೋಟಾರ್

ಎಂಜಿ ಗ್ಲೋಸ್ಟರ್ ಎಸ್‌ಯುವಿಯ ಎಲ್ಲಾ ಮಾದರಿಗಳಲ್ಲಿ 2.0-ಲೀಟರಿನ ಡೀಸೆಲ್ ಎಂಜಿನ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. ಸೂಪರ್ ಹಾಗೂ ಸ್ಮಾರ್ಟ್‌ನ ಮೂಲ ಮಾದರಿಗಳು ಒಂದೇ ಟರ್ಬೋಚಾರ್ಜರ್ ಅನ್ನು ಹೊಂದಿದ್ದರೆ, ಟಾಪ್-ಎಂಡ್ ಶಾರ್ಪ್ ಹಾಗೂ ಸ್ಯಾವಿ ಮಾದರಿಗಳು ಟ್ವಿನ್-ಟರ್ಬೊ ಸೆಟಪ್ ಹೊಂದಿವೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಬಹು ನಿರೀಕ್ಷಿತ ಏಳು ಸೀಟರ್ ಗಳ ಗ್ಲೋಸ್ಟರ್ ಪ್ರೀಮಿಯಂ ಎಸ್‌ಯುವಿ ಬಿಡುಗಡೆಗೊಳಿಸಿದ ಎಂಜಿ ಮೋಟಾರ್

ಬೇಸ್ ಮಾದರಿಗಳಲ್ಲಿರುವ 2.0-ಲೀಟರಿನ ಟರ್ಬೊ ಡೀಸೆಲ್ ಎಂಜಿನ್ 4000 ಆರ್‌ಪಿಎಂನಲ್ಲಿ 160 ಬಿಹೆಚ್‌ಪಿ ಪವರ್ ಹಾಗೂ 1500 - 2400 ಆರ್‌ಪಿಎಂನಲ್ಲಿ 375 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಹು ನಿರೀಕ್ಷಿತ ಏಳು ಸೀಟರ್ ಗಳ ಗ್ಲೋಸ್ಟರ್ ಪ್ರೀಮಿಯಂ ಎಸ್‌ಯುವಿ ಬಿಡುಗಡೆಗೊಳಿಸಿದ ಎಂಜಿ ಮೋಟಾರ್

ಟಾಪ್-ಎಂಡ್ ಮಾದರಿಗಳಲ್ಲಿರುವ 2.0-ಲೀಟರಿನ ಟ್ವಿನ್-ಟರ್ಬೊ ಎಂಜಿನ್ 4000 ಆರ್‌ಪಿಎಂನಲ್ಲಿ 216 ಬಿಹೆಚ್‌ಪಿ ಮತ್ತು 1500 - 2400 ಆರ್‌ಪಿಎಂನಲ್ಲಿ 480 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಡೀಸೆಲ್ ಎಂಜಿನ್‌ನ ಈ ಎರಡೂ ಆವೃತ್ತಿಗಳಲ್ಲಿ ಎಂಟು-ಸ್ಪೀಡಿನ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಬಹು ನಿರೀಕ್ಷಿತ ಏಳು ಸೀಟರ್ ಗಳ ಗ್ಲೋಸ್ಟರ್ ಪ್ರೀಮಿಯಂ ಎಸ್‌ಯುವಿ ಬಿಡುಗಡೆಗೊಳಿಸಿದ ಎಂಜಿ ಮೋಟಾರ್

ಎಂಜಿ ಗ್ಲೋಸ್ಟರ್ ಎಸ್‌ಯುವಿಯನ್ನು ಅಗಾಟಾ ರೆಡ್, ಮೆಟಲ್ ಬ್ಲ್ಯಾಕ್, ಮೆಟಲ್ ಆಶ್ ಹಾಗೂ ವಾರ್ಮ್ ವೈಟ್ ಎಂಬ ನಾಲ್ಕು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

ಬಹು ನಿರೀಕ್ಷಿತ ಏಳು ಸೀಟರ್ ಗಳ ಗ್ಲೋಸ್ಟರ್ ಪ್ರೀಮಿಯಂ ಎಸ್‌ಯುವಿ ಬಿಡುಗಡೆಗೊಳಿಸಿದ ಎಂಜಿ ಮೋಟಾರ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಎಂಜಿ ಗ್ಲೋಸ್ಟರ್ ಎಸ್‌ಯುವಿ ದೇಶಿಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಅಲ್ಟುರಾಸ್ ಜಿ 4, ಟೊಯೊಟಾ ಫಾರ್ಚೂನರ್, ಫೋರ್ಡ್ ಎಂಡೀವರ್ ಎಸ್‌ಯುವಿಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
MG company launches Gloster suv in India price Rs. 28.98 Lakhs. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X