ಆಟೋ ಎಕ್ಸ್‌ಪೋ 2020: ವಿಷನ್ ಐ ಕಾನ್ಸೆಪ್ಟ್ ಕಾರು ಅನಾವರಣಗೊಳಿಸಿದ ಎಂಜಿ ಮೋಟಾರ್

ದೆಹಲಿಯಲ್ಲಿ ನಡೆಯುತ್ತಿರುವ 2020ರ ಆಟೋ ಎಕ್ಸ್‌ಪೋದಲ್ಲಿ ಎಂಜಿ ಸಂಸ್ಥೆಯು ವಿವಿಧ ಮಾದರಿಯ 14 ಹೊಸ ಮಾದರಿಯ ಕಾರುಗಳನ್ನು ಅನಾವರಣಗೊಳಿಸಿದ್ದು, ಮೊದಲ ಬಾರಿಗೆ ಭಾರತದಲ್ಲಿ ಆಟೋನಮಸ್ ಕಾರು ಆವೃತ್ತಿಯೊಂದನ್ನು ಪ್ರದರ್ಶನಗೊಳಿಸಿದೆ.

ಆಟೋ ಎಕ್ಸ್‌ಪೋ 2020: ವಿಷನ್ ಐ ಕಾನ್ಸೆಪ್ಟ್ ಕಾರು ಅನಾವರಣಗೊಳಿಸಿದ ಎಂಜಿ ಮೋಟಾರ್

ಸ್ವಯಂ ಚಾಲಿತ ತಂತ್ರಜ್ಞಾನ ಹೊಂದಿರುವ ವಿಷನ್ ಐ ಕಾನ್ಸೆಪ್ಟ್ ಕಾರು ಹಲವು ವಿಶೇಷತೆಗಳೊಂದಿಗೆ ಅಭಿವೃದ್ದಿಗೊಂಡಿದ್ದು, ಎಂಜಿ ಮೋಟಾರ್ ಮಾತೃಸಂಸ್ಥೆಯಾದ ಸೈಕ್ ಮತ್ತೊಂದು ಸಬ್ ಬ್ರಾಂಡ್ ರೊವೆ ಸಂಸ್ಥೆಯು ಈ ಆಟೋನಮಸ್ ಕಾರು ಆವೃತ್ತಿಯನ್ನು ಸಿದ್ದಪಡಿಸಿದೆ. ಹೊಸ ಕಾರು 5ಜಿ ತಂತ್ರಜ್ಞಾನ ಪ್ರೇರಣೆಯ ಕುಕ್‌ಪಿಟ್ ಜೋಡಣೆ ಹೊಂದಿದ ವಿಶ್ವದ ಮೊದಲ ಆಟೋನಮಸ್ ಕಾರು ಮಾದರಿಯಾಗಿದ್ದು, ಇದನ್ನು ಸ್ಮಾರ್ಟ್ ಪ್ರೊಆಕ್ಟಿವ್ ವೆಹಿಕಲ್ (ಎಸ್‌ಪಿವಿ) ಎಂದು ಕರೆಯಲಾಗುತ್ತದೆ.

ಆಟೋ ಎಕ್ಸ್‌ಪೋ 2020: ವಿಷನ್ ಐ ಕಾನ್ಸೆಪ್ಟ್ ಕಾರು ಅನಾವರಣಗೊಳಿಸಿದ ಎಂಜಿ ಮೋಟಾರ್

ಇದರೊಂದಿಗೆ ಹೊಸ ಕಾರು ಮಾನವನಷ್ಟೇ ಮುಂದಾಲೋಚನೆ ಮಾಡಬಹುದಾದ ಎಲ್ಲಾ ಗುಣವೈಶಿಷ್ಟ್ಯತೆಗಳನ್ನು ಹೊಂದಿದ್ದು, ಸ್ವಯಂ ಚಾಲನೆಯ ವೇಳೆ ಪ್ರಯಾಣಿಕರೊಂದಿಗೆ ಸಂವಹನವನ್ನು ಕೂಡಾ ನಡೆಸಬಲ್ಲದು.

ಆಟೋ ಎಕ್ಸ್‌ಪೋ 2020: ವಿಷನ್ ಐ ಕಾನ್ಸೆಪ್ಟ್ ಕಾರು ಅನಾವರಣಗೊಳಿಸಿದ ಎಂಜಿ ಮೋಟಾರ್

ಜೊತೆಗೆ ಕಾರು ಚಾಲನೆಯ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವ ಈ ಕಾರು 5 ಜಿ ತಂತ್ರಜ್ಞಾನ ಪ್ರೇರಣೆಯೊಂದಿಗೆ ಕಾರಿನ ಮುಂದೆ ಬರುವ ಯಾವುದೇ ವಾಹನ, ಮಾನವ ಅಥವಾ ಪ್ರಾಣಿಗಳ ಬಗ್ಗೆ ಕೆಲವೇ ಸೇಕೆಂಡುಗಳ ಮಾಹಿತಿ ಪಡೆದುಕೊಳ್ಳುವ ಸ್ವಯಂ ನಿಯಂತ್ರಣ ಮಾಡಿಕೊಳ್ಳಬಲ್ಲದು.

ಆಟೋ ಎಕ್ಸ್‌ಪೋ 2020: ವಿಷನ್ ಐ ಕಾನ್ಸೆಪ್ಟ್ ಕಾರು ಅನಾವರಣಗೊಳಿಸಿದ ಎಂಜಿ ಮೋಟಾರ್

ಹಾಗೆಯೇ ಕಾರಿನ ಒಳಭಾಗದ ವಿನ್ಯಾಸವು ಇದುವರೆಗೂ ಯಾವುದೇ ಕಾರಿನಲ್ಲಿ ನೀಡದಿರುವ ವಿನ್ಯಾಸವನ್ನು ನೀಡಲಾಗಿದ್ದು, ಸ್ಕೈ ತಂತ್ರಜ್ಞಾನ ಪ್ರೇರಣೆಯೊಂದಿಗೆ ವಿಶ್ವದರ್ಜೆಯ ಆಸನ ಮಾದರಿಗಳು ಮತ್ತು ಸಂವಹನ ಸೌಲಭ್ಯವು ಕಾರು ಖರೀದಿದಾರರ ಪ್ರಮುಖ ಆಕರ್ಷಣೆಯಾಗಲಿದೆ. ಹೀಗಾಗಿ ಹೊಸ ಮಾದರಿಯ ಕಾನ್ಸೆಪ್ಟ್ ಆವೃತ್ತಿಯ ಮೇಲೆ ಭಾರೀ ಭರವಸೆ ಇಟ್ಟುಕೊಂಡಿರುವ ಸೈಕ್ ಸಂಸ್ಥೆಯು ಕಾನ್ಸೆಪ್ಟ್ ಕಾರಿನ ಉತ್ಪಾದನಾ ಆವೃತ್ತಿಯನ್ನು ಶೀಘ್ರದಲ್ಲೇ ಅನಾವರಣಗೊಳಿಸಿಸುವುದಾಗಿ ಹೇಳಿಕೊಂಡಿದೆ.

ಆಟೋ ಎಕ್ಸ್‌ಪೋ 2020: ವಿಷನ್ ಐ ಕಾನ್ಸೆಪ್ಟ್ ಕಾರು ಅನಾವರಣಗೊಳಿಸಿದ ಎಂಜಿ ಮೋಟಾರ್

ಆದರೆ ಈ ಹೊಸ ಭಾರತದಲ್ಲಿ ಸದ್ಯಕ್ಕೆ ಬರುವುದಿಲ್ಲವಾದರೂ ಭವಿಷ್ಯದಲ್ಲಿ ಆಟೋನಮಸ್ ಕಾರುಗಳ ಪ್ರಾಬಲ್ಯ ಹೆಚ್ಚಾಗುವ ಎಲ್ಲಾ ಲಕ್ಷಣ ಗೋಚರವಾಗುತ್ತಿದ್ದು, ಮುಂದುವರಿದ ಪ್ರಮುಖ ರಾಷ್ಟ್ರಗಳು ಆಟೋನಮಸ್ ವಾಹನಗಳಿಗಾಗಿ ಪ್ರತ್ಯೇಕ ಹೆದ್ದಾರಿಗಳನ್ನು ಸಹ ನಿರ್ಮಾಣ ಮಾಡುತ್ತಿವೆ.

ಆಟೋ ಎಕ್ಸ್‌ಪೋ 2020: ವಿಷನ್ ಐ ಕಾನ್ಸೆಪ್ಟ್ ಕಾರು ಅನಾವರಣಗೊಳಿಸಿದ ಎಂಜಿ ಮೋಟಾರ್

ಹೀಗಿರುವಾಗ ಹೊಸ ಆಟೋನಮಸ್ ಕಾರುಗಳ ಕಾರ್ಯಾಚರಣೆಗೆ ಅವಕಾಶ ನೀಡುವ ಕುರಿತಂತೆ ಭಿನ್ನ ನಿಲುವು ಹೊಂದಿರುವ ಕೇಂದ್ರ ಸರ್ಕಾರವು ತಮ್ಮ ಆಡಳಿತಾವಧಿಯಲ್ಲಿ ಆಟೋನಮಸ್ ವಾಹನಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲವೆಂದಿದೆ.

ಆಟೋ ಎಕ್ಸ್‌ಪೋ 2020: ವಿಷನ್ ಐ ಕಾನ್ಸೆಪ್ಟ್ ಕಾರು ಅನಾವರಣಗೊಳಿಸಿದ ಎಂಜಿ ಮೋಟಾರ್

ಇದಕ್ಕೆ ಕಾರಣ, ಆಟೋನಮಸ್ ವಾಹನಗಳ ಟೆಸ್ಟಿಂಗ್ ವೇಳೆ ಈಗಾಗಲೇ ವಿದೇಶಿಗಳಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿರುವುದು ಇಂತದೊಂದು ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದ್ದು, ಇದು ಮುಂಬರುವ ದಿನಗಳಲ್ಲಿ ತಂತ್ರಜ್ಞಾನ ಸುಧಾರಿಸಿದಂತೆ ಈ ನಿರ್ಧಾರ ಬದಲಾಗುವ ಸಾಧ್ಯತೆಗಳಿವೆ.

Most Read Articles

Kannada
English summary
MG Vision-i Reveled at auto expo 2020. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X