ರೇಸ್ ಕಾರಿನಂತೆ ಮಾಡಿಫೈಗೊಂಡು ಮಿಂಚಿದ ಸುಜುಕಿ ಸ್ವಿಫ್ಟ್ ಸ್ಪೋರ್ಟ್

ದೇಶದ ಅತಿ ದೊಡ್ಡ ಉತ್ಪಾದನಾ ಕಂಪನಿಯಾದ ಮಾರುತಿ ಸುಜುಕಿಯ ಸ್ವಿಫ್ಟ್ ಭಾರತದಲ್ಲಿ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಮಾರುತಿ ಸ್ವಿಫ್ಟ್ ಕಾರು ಉತ್ಸಾಹಭರಿತ ಪರ್ಫಾಮೆನ್ಸ್, ಉತ್ತಮ ಮೈಲೇಜ್ ಮತ್ತು ಆಕರ್ಷಕ ವಿನ್ಯಾಸದ ಮೂಲಕ ಗ್ರಾಹಕರ ಗಮನಸೆಳೆದ ಮಾದರಿಯಾಗಿದೆ.

ರೇಸ್ ಕಾರಿನಂತೆ ಮಾಡಿಫೈಗೊಂಡು ಮಿಂಚಿದ ಸುಜುಕಿ ಸ್ವಿಫ್ಟ್ ಸ್ಪೋರ್ಟ್

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ವಿಫ್ಟ್ ಕಾರಿನ ಪರ್ಫಾಮೆನ್ಸ್ ಮಾದರಿ ಸ್ಪೋರ್ಟ್ಸ್ ಅನ್ನು ಮಾರಾಟ ಮಾಡಲಾಗುತ್ತಿದೆ. ಆದರೆ ಭಾರತದಲ್ಲಿ ಸ್ವಿಫ್ಟ್ ಸ್ಪೋರ್ಟ್ಸ್ ಅನ್ನು ಬಿಡುಗಡೆಗೊಳಿಸಲಾಗಿಲ್ಲ. ಆದರೆ ಸ್ವಿಫ್ಟ್ ಸ್ಪೋರ್ಟ್, ಮೆಕ್ಸಿಕೊ-ಸ್ಪೆಕ್ ಅನ್ನು ರೇಸ್ ಕಾರಿನಂತೆ ಮಾಡಿಫೈಗೊಳಿಸಿದ್ದಾರೆ. ಈ ಮಾರುತಿ ಸ್ವಿಫ್ಟ್ ಮಾದರಿಯನ್ನು ರೇಸ್-ಕಾರು ಸ್ಟೈಲಿಂಗ್ ಬಾಡಿ ಕಿಟ್‌ನೊಂದಿಗೆ ಕಸ್ಟಮೈಸ್ ಮಾಡಲಾಗಿದೆ.

ರೇಸ್ ಕಾರಿನಂತೆ ಮಾಡಿಫೈಗೊಂಡು ಮಿಂಚಿದ ಸುಜುಕಿ ಸ್ವಿಫ್ಟ್ ಸ್ಪೋರ್ಟ್

ಎರಿಕ್ ಗುಟೈರೆಜ್ ಅವರು ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಕಾರನ್ನು ಮಾಡಿಫೈಗೊಳಿಸಿದ್ದಾರೆ. ಈ ಸ್ವಿಫ್ಟ್‌ನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ನವೀಕರಿಸಿದ ಫಾಸಿಕವನ್ನು ಹೊಂದಿದೆ. ಮುಂಭಾಗದ ಗ್ರಿಲ್‌ನಲ್ಲಿರುವ ಅಡ್ಡವಾಗಿದ್ದ ಬಾರ್ ಅನ್ನು ತೆಗೆದುಹಾಕಲಾಗಿದೆ.

MOST READ: ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಪಡೆದ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ ಕಾರು

ರೇಸ್ ಕಾರಿನಂತೆ ಮಾಡಿಫೈಗೊಂಡು ಮಿಂಚಿದ ಸುಜುಕಿ ಸ್ವಿಫ್ಟ್ ಸ್ಪೋರ್ಟ್

ಇನ್ನು ಮಾಡಿಫೈ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಕಾರಿನಲ್ಲಿ ಫಾಗ್ ಲ್ಯಾಂಪ್ ಅನ್ನು ಅಳವಡಿಸಿದ್ದು, ಆದರೆ ಹೌಸಿಂಗ್ ಬದಲಾಗದೆ ಉಳಿದಿವೆ. ಇನ್ನು ಈ ಕಾರಿನ ಹೆಡ್‌ಲ್ಯಾಂಪ್‌ಗಳು ಇಂಟಿಗ್ರೇಟೆಡ್ ಎಲ್‌ಇಡಿ ಡಿಆರ್‌ಎಲ್ ರಿಂಗ್ಸ್ ಮತ್ತು ಎಲ್‌ಇಡಿ ಇಂಡಿಕೇಟರ್ ಗಳೊಂದಿಗೆ ಹೊಸ ಪ್ರೊಜೆಕ್ಟರ್ ಸೆಟಪ್ ಅನ್ನು ಹೊಂದಿದೆ. ಈ ಮಾಡಿಫೈ ಕಾರಿನ ವಿನ್ಯಾಸ ನೋಡುಗರನ್ನು ಬೆರಗುಗೊಳಿಸುವಂತಿದೆ.

ರೇಸ್ ಕಾರಿನಂತೆ ಮಾಡಿಫೈಗೊಂಡು ಮಿಂಚಿದ ಸುಜುಕಿ ಸ್ವಿಫ್ಟ್ ಸ್ಪೋರ್ಟ್

ಮಾಡಿಫೈ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಕಾರಿನ ಹೆಡ್‌ಲ್ಯಾಂಪ್‌ಗಳನ್ನು ಮೇಲ್ಭಾಗದಲ್ಲಿ ವಿನೈಲ್‌ನಿಂದ ಮುಚ್ಚಲಾಗಿದ್ದು, ಅವು ತೀಕ್ಷ್ಣವಾಗಿ ಕಾಣುವಂತೆ ನೀಡಲಾಗಿದೆ. ಕೆಳಭಾಗದಲ್ಲಿ ಹೊಸ ಸ್ಪ್ಲಿಟರ್ ಅನ್ನು ಸೇರಿಸಲಾಗಿದೆ. ಬ್ರೇಸ್ ಲಿಂಕ್‌ಗಳೊಂದಿಗೆ ಫಿನಿಶಿಂಗ್ ಆಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ರೇಸ್ ಕಾರಿನಂತೆ ಮಾಡಿಫೈಗೊಂಡು ಮಿಂಚಿದ ಸುಜುಕಿ ಸ್ವಿಫ್ಟ್ ಸ್ಪೋರ್ಟ್

ಅದೇ ಸ್ಪ್ಲಿಟರ್ ಟ್ರೇಟ್ ಮೆಂಟ್ ಹಿಂಭಾಗದವರೆಗೂ ಮುಂದುವರಿಯುವುದನ್ನು ನಾವು ಚಿತ್ರದಲ್ಲಿ ನೋಡಬಹುದು. ಇನ್ನು ಈ ಕಾರಿನಲ್ಲಿ ಅಲಾಯ್ ವ್ಹೀಲ್ ಗಳೊಂದಿಗೆ ಹೊಸ ಬ್ಲ್ಯಾಕ್ ಔಟ್ ಯುನಿಟ್ ಗಳು, ಫಾಲ್ಕೆನ್ ಅಜೆನಿಸ್ ರಬ್ಬರ್‌ನೊಂದಿಗೆ ಶೋಡ್. ಹಿಂಭಾಗದಲ್ಲಿ, ಹೊಸ ರೂಫ್ ಮೌಂಟಡ್ ಸ್ಪಾಯ್ಲರ್ ಹೊರತುಪಡಿಸಿ ನಾವು ಹೆಚ್ಚಿನ ಬದಲಾವಣೆಗಳನ್ನು ಕಾಣುವುದಿಲ್ಲ.

ರೇಸ್ ಕಾರಿನಂತೆ ಮಾಡಿಫೈಗೊಂಡು ಮಿಂಚಿದ ಸುಜುಕಿ ಸ್ವಿಫ್ಟ್ ಸ್ಪೋರ್ಟ್

ಬಲ ಹೆಡ್‌ಲೈಟ್ ಕೆಳಗಿರುವ ಸುಜುಕಿ ಲೋಗೊ, ಸೈಡ್ ಇಂಡಿಕೇಟರ್‌ಗಳ ಕೆಳಗೆ ಡಬ್ಲ್ಯುಆರ್‌ಸಿ ಸ್ಟಿಕ್ಕರ್, ಬದಿಗಳಲ್ಲಿ ಸ್ಪೋರ್ಟಿ ಡೆಕಲ್ಸ್ ಮತ್ತು ಹಿಂಭಾಗದ ಪ್ರಯಾಣಿಕರ ವೀಂಡೋದಲ್ಲಿ ಜಪಾನಿನ ಧ್ವಜ ಸೇರಿದಂತೆ ಇಡೀ ಕಾರಿನಲ್ಲಿ ಸಾಕಷ್ಟು ಸ್ಟಿಕ್ಕರ್‌ಗಳಿವೆ.ಸಿ-ಪಿಲ್ಲರ್‌ನಲ್ಲಿ ಹಯಾಬುಸಾ ಸ್ಟಿಕ್ಕರ್ ಕೂಡ ಇದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ರೇಸ್ ಕಾರಿನಂತೆ ಮಾಡಿಫೈಗೊಂಡು ಮಿಂಚಿದ ಸುಜುಕಿ ಸ್ವಿಫ್ಟ್ ಸ್ಪೋರ್ಟ್

ಮಾಡಿಫೈ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಕಾರಿನ ಬಾನೆಟ್ ಮತ್ತು ರೂಫ್ ಮೇಲೆ ಬಲಭಾಗಕ್ಕೆ ಸರಿದೂಗಿಸುವ ರೇಸಿಂಗ್ ಸ್ಟ್ರೀಪಿಂಗ್ ಕೂಡ ಇದೆ. ಒಟ್ಟಾರೆಯಾಗಿವಾಹನದ ವಿನ್ಯಾಸವು ಬೆರಗುಗೊಳಿಸುವಂತಿದೆ. ರೇಸಿಂಗ್ ಸ್ಟೈಲ್ ನಂತೆ ಮಾಡಿಫೈಗೊಳಿಸುವುದರಿಂದ ನೋಡಲು ಈ ಸ್ವಿಫ್ಟ್ ಹೆಚ್ಚು ಸ್ಪೋರ್ಟಿಯಾಗಿದೆ.

ರೇಸ್ ಕಾರಿನಂತೆ ಮಾಡಿಫೈಗೊಂಡು ಮಿಂಚಿದ ಸುಜುಕಿ ಸ್ವಿಫ್ಟ್ ಸ್ಪೋರ್ಟ್

ಮಾಡಿಫೈಗೊಂಡ ಮಾರುತಿ ಸ್ವಿಫ್ಟ್ ಸ್ಪೋರ್ಟ್ ಕಾರಿನ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಮಾಡಿಫೈ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಕಾರಿನಲ್ಲಿ ಅದೇ 1.4 ಲೀಟರ್ ‘ಬೂಸ್ಟರ್‌ಜೆಟ್' ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 140 ಬಿಹೆಚ್‍ಪಿ ಪವರ್ ಮತ್ತು 230 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

Image Courtesy: Erik Gutierrez

Most Read Articles

Kannada
English summary
This Customised Suzuki Swift Sport Looks Like A Road-Legal Race. Read In Kannada.
Story first published: Saturday, December 5, 2020, 12:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X