Just In
Don't Miss!
- News
ನಾಯಿ ಮೇಲೆ ಕಾರು ಹತ್ತಿಸಿದ ನಿವೃತ್ತ ಇನ್ಸ್ಪೆಕ್ಟರ್ ವಿರುದ್ಧ ಕೇಸು !
- Finance
ಸತತ 4ನೇ ದಿನ ಇಳಿಕೆ ಕಂಡು ಒಂದು ತಿಂಗಳ ಕನಿಷ್ಠ ಮಟ್ಟಕ್ಕೆ ತಲುಪಿದ ಚಿನ್ನ
- Movies
ಟಾಲಿವುಡ್ ಗೆ ಹಾರಿದ ಮತ್ತೋರ್ವ ಕನ್ನಡದ ನಟಿ
- Lifestyle
ಹೊಟ್ಟೆಯ ಬಲಭಾಗದಲ್ಲಿ ನೋವು, ಈ ತೊಂದರೆಗಳಿರಬಹುದು
- Sports
ವಿರಾಟ್ ಕೊಹ್ಲಿ ಮತ್ತು ನನ್ನ ಮಧ್ಯೆ ಏನೂ ಬದಲಾಗಿಲ್ಲ: ಅಜಿಂಕ್ಯ ರಹಾನೆ
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಹೀಂದ್ರಾ ಪವರ್‌ಫುಲ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ ಫೋರ್ಡ್ ಫಿಗೊ ಕಾರು
ಹೊಸ ಕಾರುಗಳ ಅಭಿವೃದ್ದಿಗಾಗಿ ದೇಶಿಯ ಮಾರುಕಟ್ಟೆಯಲ್ಲಿ ಸಹಭಾಗಿತ್ವ ಯೋಜನೆಗೆ ಚಾಲನೆ ನೀಡಿರುವ ಮಹೀಂದ್ರಾ ಮತ್ತು ಫೋರ್ಡ್ ಕಂಪನಿಗಳು ಮುಂದಿನ ಎರಡು ವರ್ಷಗಳಲ್ಲಿ ಹಲವಾರು ಹೊಸ ಕಾರು ಮಾದರಿಗಳನ್ನು ಬಿಡುಗಡೆಗೊಳಿಸಲಿದ್ದು, ಹೊಸ ಯೋಜನೆ ಅಡಿ ಫೋರ್ಡ್ ಕಾರುಗಳು ಮಹೀಂದ್ರಾ ನಿರ್ಮಾಣದ ಎಂಜಿನ್ ಮಾದರಿಗಳನ್ನು ಪಡೆದುಕೊಳ್ಳಲಿವೆ.

ಫೋರ್ಡ್ ನಿರ್ಮಾಣದ ಫಿಗೊ ಹ್ಯಾಚ್‌ಬ್ಯಾಕ್ ಕಾರು ಮಾದರಿಯು ಶೀಘ್ರದಲ್ಲೇ 2021ರ ಮಾದರಿಯೊಂದಿಗೆ ರಸ್ತೆಗಿಳಿಯಲು ಸಜ್ಜಾಗುತ್ತಿದ್ದು, ಮಾಹಿತಿಗಳ ಪ್ರಕಾರ ಫಿಗೊ ಹ್ಯಾಚ್‌ಬ್ಯಾಕ್ ಕಾರು ಮಾದರಿಯು ಮಹೀಂದ್ರಾ ನಿರ್ಮಾಣದ ಎಂ ಸ್ಟಾಲಿನ್ 1.2-ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ. ಎಂ ಸ್ಟಾಲಿನ್ ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ300 ಟರ್ಬೋ ಪೆಟ್ರೋಲ್ ಮಾದರಿಗೆ ಅಭಿವೃದ್ದಿಗೊಳಿಸಿದ್ದು, ಹೊಸ ಯೋಜನೆ ಅಡಿ ಫಿಗೊ ಕಾರು ಮಾದರಿಯು ಕೂಡಾ ಹೊಸ ಎಂಜಿನ್ ಎರವಲು ಪಡೆದುಕೊಳ್ಳಲಿದೆ.

ಎಂ-ಸ್ಟಾಲಿನ್ 1.2-ಲೀಟರ್ ಪೆಟ್ರೋಲ್ ಮಾದರಿಯು 129-ಬಿಎಚ್‌ಪಿ ಉತ್ಪಾದನೆಯನ್ನು ಹೊಂದಿದ್ದು, ಹೊಸ ಎಂಜಿನ್ ಮೂಲಕ ಫಿಗೊ ಕಾರು ಮಾದರಿಯು ಹ್ಯಾಚ್‌ಬ್ಯಾಕ್ ಮಾದರಿಗಳಲ್ಲೇ ಪವರ್‌ಪುಲ್ ಕಾರು ಮಾದರಿಯಾಗಲಿದೆ.

ಸದ್ಯ ಫಿಗೊ ಕಾರು ಮಾದರಿಯು ನ್ಯಾಚುರಲಿ ಆಸ್ಪೆರೆಟೆಡ್ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, 2021ರ ಮಾದರಿಯಲ್ಲಿ 1.2-ಲೀಟರ್ ಎಂ-ಸ್ಟಾಲಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿರಲಿದೆ.

1.2-ಲೀಟರ್ ಎಂ-ಸ್ಟಾಲಿನ್ ಎಂಜಿನ್ ಮಾದರಿಯನ್ನು ಫಿಗೊ ಕಾರಿನಲ್ಲಿ ಅಳವಡಿಸುವುದಕ್ಕೂ ಮುನ್ನು ಹೊಸ ಎಂಜಿನ್ ಅನ್ನು ಎಕ್ಸ್‌ಯುವಿ300 ಟರ್ಬೋ ಪೆಟ್ರೋಲ್ ಮಾದರಿಯಲ್ಲಿ ಅಳವಡಿಸಲಿರುವ ಮಹೀಂದ್ರಾ ಕಂಪನಿಯು ಜನವರಿ ಆರಂಭದಲ್ಲೇ ಬಿಡುಗಡೆ ಮಾಡಲಿದ್ದು, ತದನಂತರವಷ್ಟೇ ಹೊಸ ಎಂಜಿನ್ ಅನ್ನು ಫಿಗೊ ಹೊಸ ಕಾರು ಮಾದರಿಗಾಗಿ ಜೋಡಣೆ ಮಾಡಲಿದೆ.

ಕೋವಿಡ್ ಪರಿಣಾಮ 1.2-ಲೀಟರ್ ಎಂ-ಸ್ಟಾಲಿನ್ ಎಂಜಿನ್ ಮಾದರಿಯ ಎಕ್ಸ್‌ಯುವಿ300 ಟರ್ಬೋ ಬಿಡುಗಡೆಯನ್ನು 2021ಕ್ಕೆ ಮುಂದೂಡಿಕೆ ಮಾಡಿರುವ ಮಹೀಂದ್ರಾ ಕಂಪನಿಯು ಹೊಸ ಕಾರಿನ ಮೂಲಕ ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ.

ಇನ್ನು ಮಹೀಂದ್ರಾ ಕಂಪನಿಯು ಶೇ.51ರಷ್ಟು ಮತ್ತು ಫೋರ್ಡ್ ಕಂಪನಿಯು ಶೇ.49ರಷ್ಟು ಹೂಡಿಕೆಯೊಂದಿಗೆ ಸಹಭಾಗಿತ್ವ ಯೋಜನೆಗೆ ಚಾಲನೆ ನೀಡಿದ್ದು, ಹೊಸ ಯೋಜನೆಗಾಗಿ ಬರೋಬ್ಬರಿ ರೂ. 4,300 ಕೋಟಿ ಬಂಡವಾಳ ಹೂಡಿಕೆ ಮಾಡಿವೆ.

ಹೊಸ ಯೋಜನೆ ಅಡಿ ಸಾಮಾನ್ಯ ಕಾರು ಮಾದರಿಗಳಲ್ಲದೆ ಎಲೆಕ್ಟ್ರಿಕ್ ಕಾರು ಮಾದರಿಗಳು ಸಹ ಸೇರಿದ್ದು, ಸಹಭಾಗಿತ್ವ ಯೋಜನೆ ಅಡಿ ನಿರ್ಮಾಣವಾಗುವ ಮೊದಲ ಕಾರು 2021ರ ಮಧ್ಯಂತರದಲ್ಲಿ ಅಧಿಕೃತವಾಗಿ ರಸ್ತೆಗಿಳಿಯಲಿದೆ.

ಜಂಟಿ ಯೋಜನೆ ಅಡಿ ಅಭಿವೃದ್ದಿಗೊಳ್ಳುತ್ತಿರುವ ಹೊಸ ಸಿ ಸೆಗ್ಮೆಂಟ್ ಕಾರು ಎಕ್ಸ್‌ಯುವಿ500 ಕಾರಿಗೆ ಸರಿಸಮನಾಗಿ ಬಿಡುಗಡೆಯಾಗಲಿದ್ದು, ನೆಕ್ಸ್ಟ್ ಜನರೇಷನ್ ಎಕ್ಸ್‌ಯುವಿ500 ಬಿಡುಗಡೆಯ ನಂತರವೇ ಫೋರ್ಡ್ ಮತ್ತು ಮಹೀಂದ್ರಾ ನಿರ್ಮಾಣದ ಹೊಸ ಕಾರು ಮಾರುಕಟ್ಟೆ ಪ್ರವೇಶಿಸಲಿದೆ.

ಸಿ ಸೆಗ್ಮೆಂಟ್ ಎಸ್‌ಯುವಿ ಕಾರಿಗೆ ಮಾತ್ರವಲ್ಲದೆ ಇಕೋಸ್ಪೋಟ್ ಮಾದರಿಗೆ ಸಮನಾಗಿ ಬಿಡುಗಡೆಯಾಗಲಿರುವ ಮತ್ತೊಂದು ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗೂ ಇದೇ ಕಂಪನಿಯು ವಿನ್ಯಾಸ ಒದಗಿಸುತ್ತಿದ್ದು, ಹೊಸ ತಲೆಮಾರಿನ ಎಕ್ಸ್‌ಯುವಿ ಮಾದರಿಯಿಂದಲೂ ಹೊಸ ಕಾರು ಕೆಲವು ತಾಂತ್ರಿಕ ಸೌಲಭ್ಯಗಳನ್ನು ಎರವಲು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಹೊಸ ಎಕ್ಸ್‌ಯುವಿ500 ಮತ್ತು ಜಂಟಿ ಕಾರು ಉತ್ಪಾದನಾ ಯೋಜನೆ ಕಾರು ಮಾದರಿಯು ಒಂದೇ ಪ್ಲ್ಯಾಟ್‌ಫಾರ್ಮ್‌ನಲ್ಲಿ ಸಿದ್ದಗೊಳ್ಳಲಿದ್ದು, ಒಂದೇ ಮಾದರಿಯ ಚಾರ್ಸಿ ಹೊಂದಿದ್ದರೂ ವಿಭಿನ್ನ ವಿನ್ಯಾಸಗಳನ್ನು ಹೊಂದಿರಲಿವೆ.

ಹಾಗೆಯೇ ಜಂಟಿ ಯೋಜನೆ ಅಡ ಗ್ರಾಹಕರ ಬೇಡಿಕೆಯೆಂತೆ ಒಟ್ಟು 9 ಹೊಸ ಕಾರುಗಳನ್ನು ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಲಾಗಿದ್ದು, ಫೋರ್ಡ್ ಎಕ್ಸ್‌ಪ್ಲೊರರ್ ಮಾದರಿಯಲ್ಲಿ ನಿರ್ಮಾಣಗೊಳ್ಳಲಿರುವ ಹೊಸ ಕಾರು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ಟಾಟಾ ಹ್ಯಾರಿಯರ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.