ಹ್ಯುಂಡೈ ವೆರ್ನಾ ಫೇಸ್‌ಲಿಫ್ಟ್ ಅನಾವರಣ- ಹೊಸ ಕಾರು ಖರೀದಿಗೆ ಇಂದಿನಿಂದಲೇ ಬುಕ್ಕಿಂಗ್ ಶುರು

ಹ್ಯುಂಡೈ ಇಂಡಿಯಾ ಕಂಪನಿಯು ಬಿಎಸ್6 ಎಂಜಿನ್ ಪ್ರೇರಿತ ವೆರ್ನಾ ಫೇಸ್‌ಲಿಫ್ಟ್ ಆವೃತ್ತಿಯನ್ನು ಇದೇ ತಿಂಗಳು 26ಕ್ಕೆ ಬಿಡುಗಡೆಗೊಳಿಸುತ್ತಿದ್ದು, ಹೊಸ ಕಾರನ್ನು ಅನಾವರಣಗೊಳಿಸುವ ಮೂಲಕ ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಹ್ಯುಂಡೈ ವೆರ್ನಾ ಫೇಸ್‌ಲಿಫ್ಟ್ ಅನಾವರಣ- ಹೊಸ ಕಾರು ಖರೀದಿಗೆ ಇಂದಿನಿಂದಲೇ ಬುಕ್ಕಿಂಗ್ ಶುರು

ಏಪ್ರಿಲ್ 1ರಿಂದ ಬಿಎಸ್-6 ಎಮಿಷನ್ ನಿಯಮವು ಕಡ್ಡಾಯವಾಗುತ್ತಿದ್ದು, ಹ್ಯುಂಡೈ ವೆರ್ನಾ ಸೆಡಾನ್ ಫೇಸ್‌ಲಿಫ್ಟ್ ಆವೃತ್ತಿಯು ಬಿಎಸ್-6 ಎಂಜಿನ್ ಪ್ರೇರಿತ ಹೊಸ ಎಂಜಿನ್ ಆಯ್ಕೆಯನ್ನು ಪಡೆದುಕೊಳ್ಳುವುದರ ಜೊತೆಗೆ ಕಾರಿನ ಹೊರ ಭಾಗದ ವಿನ್ಯಾಸದಲ್ಲೂ ಕೂಡಾ ಸಾಕಷ್ಟು ಬದಲಾವಣೆ ಪಡೆದುಕೊಂಡಿದೆ. ಸಿ ಸೆಗ್ಮೆಂಟ್ ಸೆಡಾನ್ ಆವೃತ್ತಿಗಳಲ್ಲೇ ವಿಶೇಷ ಎನ್ನಿಸಲಿರುವ ಹೊಸ ಫೇಸ್‌ಲಿಫ್ಟ್ ಕಾರು ಈ ಬಾರಿ ನ್ಯೂ ಜನರೇಷನ್ ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಹ್ಯುಂಡೈ ವೆರ್ನಾ ಫೇಸ್‌ಲಿಫ್ಟ್ ಅನಾವರಣ- ಹೊಸ ಕಾರು ಖರೀದಿಗೆ ಇಂದಿನಿಂದಲೇ ಬುಕ್ಕಿಂಗ್ ಶುರು

ಅನಾವರಣಗೊಳಿಸಲಾಗಿರುವ ಚಿತ್ರಗಳಲ್ಲಿನ ಮಾಹಿತಿ ಪ್ರಕಾರ ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಆವೃತ್ತಿಗಿಂತಲೂ ವಿಭಿನ್ನ ವಿನ್ಯಾಸ ಹೊಂದಿರುವುದರ ಜೊತೆಗೆ 35ಕ್ಕೂ ಹೆಚ್ಚು ಫೀಚರ್ಸ್‌ಗಳನ್ನು ಒಳಗೊಂಡ ಬ್ಲ್ಯೂ ಲಿಂಕ್ ತಂತ್ರಜ್ಞಾನವನ್ನು ಪಡೆದುಕೊಳ್ಳುವುದು ಬಹುತೇಕ ಖಚಿತವಾಗಿದೆ.

ಹ್ಯುಂಡೈ ವೆರ್ನಾ ಫೇಸ್‌ಲಿಫ್ಟ್ ಅನಾವರಣ- ಹೊಸ ಕಾರು ಖರೀದಿಗೆ ಇಂದಿನಿಂದಲೇ ಬುಕ್ಕಿಂಗ್ ಶುರು

ಇದರೊಂದಿಗೆ ವೆರ್ನಾ ಫೇಸ್‌ಲಿಫ್ಟ್ ಕಾರಿನ ಮುಂಭಾಗದ ಗ್ರಿಲ್ ಸ್ಲಾಟ್ ಸಹ ಸಾಕಷ್ಟು ಬದಲಾವಣೆ ಹೊಂದಿದ್ದು, ವಿದೇಶಿ ಮಾರುಕಟ್ಟೆಗಳಲ್ಲಿ ಸದ್ಯ ಮಾರಾಟದಲ್ಲಿರುವ ಸೊನಾಟಾ ಸೆಡಾನ್ ಮಾದರಿಯ ಹೋಲಿಕೆಯನ್ನು ಪಡೆದುಕೊಂಡಿರುವುದು ಪ್ರಮುಖ ಆಕರ್ಷಣೆಯಾಗಲಿದೆ.

ಹ್ಯುಂಡೈ ವೆರ್ನಾ ಫೇಸ್‌ಲಿಫ್ಟ್ ಅನಾವರಣ- ಹೊಸ ಕಾರು ಖರೀದಿಗೆ ಇಂದಿನಿಂದಲೇ ಬುಕ್ಕಿಂಗ್ ಶುರು

ಹಾಗೆಯೇ ಹೊಸ ಕಾರು ಮಾದರಿಯ ಹೆಡ್‌ಲ್ಯಾಂಪ್ ಸೌಲಭ್ಯವು ಸಹ ಕಾರಿನ ನೋಟಕ್ಕೆ ಮತ್ತಷ್ಟು ಬಲಿಷ್ಠತೆಯನ್ನು ತುಂಬಲಿದ್ದು, ಮೂರು ಲೈಟ್‌ಗಳೂ ಪ್ರತ್ಯೇಕ ಹೋಸ್ ವಿನ್ಯಾಸವನ್ನು ಪಡೆದುಕೊಂಡಿರುವುದು ಪ್ರೀಮಿಯಂ ಹೆಚ್ಚಿಸಿದೆ. ಜೊತೆಗೆ ಎಲ್ಇಡಿ ಹೆಡ್‌ಲ್ಯಾಂಪ್ ಭೀಮ್, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ ಮತ್ತು ಸನ್‌ರೂಫ್ ಇದರಲ್ಲಿದ್ದು,ಕಾರಿನ ಹಿಂಭಾಗದ ತಾಂತ್ರಿಕ ವಿನ್ಯಾಸದಲ್ಲೂ ಮಹತ್ವದ ಬದಲಾವಣೆಗಳನ್ನು ತರಲಾಗಿದೆ.

ಹ್ಯುಂಡೈ ವೆರ್ನಾ ಫೇಸ್‌ಲಿಫ್ಟ್ ಅನಾವರಣ- ಹೊಸ ಕಾರು ಖರೀದಿಗೆ ಇಂದಿನಿಂದಲೇ ಬುಕ್ಕಿಂಗ್ ಶುರು

ಇನ್ನು ಟೈಲ್ ಲ್ಯಾಂಪ್, ಬೂಟ್ ಲಿಡ್ ಮತ್ತು ಸ್ಪೋರ್ಟಿ ಮಾದರಿಯ ಕ್ರೊಮ್ ನೀಡಿರುವುದು ಕೂಡಾ ಮಹತ್ವದ ಬದಲಾವಣೆ ಕಾರಣವಾಗಿದ್ದು, ಕಾರಿನ ಹೊರವಿನ್ಯಾಸದ ಹೊರತಾಗಿ ಇಂಟಿರಿಯರ್ ಮಾಹಿತಿ ಲಭ್ಯವಾಗಿಲ್ಲವಾದರೂ ಪ್ರಸ್ತುತ ಮಾದರಿಗಿಂತಲೂ ಅತ್ಯುತ್ತಮ ಫೀರ್ಚಸ್ ಹೊಂದಿರಲಿದೆ.

ಹ್ಯುಂಡೈ ವೆರ್ನಾ ಫೇಸ್‌ಲಿಫ್ಟ್ ಅನಾವರಣ- ಹೊಸ ಕಾರು ಖರೀದಿಗೆ ಇಂದಿನಿಂದಲೇ ಬುಕ್ಕಿಂಗ್ ಶುರು

ಸದ್ಯ ಮಾರುಕಟ್ಟೆಯಲ್ಲಿ ಹ್ಯುಂಡೈ ವೆರ್ನಾ ಮಾದರಿಯು 1.6-ಲೀಟರ್ ಡೀಸೆಲ್ ಮತ್ತು 1.6-ಲೀಟರ್ ಪೆಟ್ರೋಲ್ ಜೊತೆಗೆ 1.4-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, ಫೇಸ್‌ಲಿಫ್ಟ್ ಆವೃತ್ತಿಯಲ್ಲಿ ಬಿಎಸ್-6 ನಿಯಮಾವಳಿಗೆ ಅನುಗುಣವಾಗಿ ಕೆಲವು ಮಹತ್ವದ ಬದಲಾವಣೆಗಳನ್ನು ತರಲಾಗಿದೆ.

ಹ್ಯುಂಡೈ ವೆರ್ನಾ ಫೇಸ್‌ಲಿಫ್ಟ್ ಅನಾವರಣ- ಹೊಸ ಕಾರು ಖರೀದಿಗೆ ಇಂದಿನಿಂದಲೇ ಬುಕ್ಕಿಂಗ್ ಶುರು

ಹೊಸ ಎಮಿಷನ್‌ ನಿಯಮದಿಂದಾಗಿ ಹಳೆಯ ಎಂಜಿನ್ ಆಯ್ಕೆಗಳಿಗೆ ಗುಡ್‌ಬೈ ಹೇಳಿರುವ ಹ್ಯುಂಡೈ ಸಂಸ್ಥೆಯು ಹೊಸದಾಗಿ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಆವೃತ್ತಿಗಳನ್ನು ಪರಿಚಯಿಸುತ್ತಿದ್ದು, ಇದೇ ಎಂಜಿನ್ ಮಾದರಿಯು ವೆರ್ನಾದಲ್ಲಿ ಮಾತ್ರವಲ್ಲ ಕ್ರೆಟಾ ಮತ್ತು ವೆನ್ಯೂನಲ್ಲೂ ಬಳಕೆ ಮಾಡಲಾಗಿದೆ.

ಹ್ಯುಂಡೈ ವೆರ್ನಾ ಫೇಸ್‌ಲಿಫ್ಟ್ ಅನಾವರಣ- ಹೊಸ ಕಾರು ಖರೀದಿಗೆ ಇಂದಿನಿಂದಲೇ ಬುಕ್ಕಿಂಗ್ ಶುರು

ವೆನ್ಯೂ ಕಾರಿನಲ್ಲಿ ಡೀಸೆಲ್ ಮಾದರಿಯು ಮಾತ್ರವೇ 1.5-ಲೀಟರ್ ಎಂಜಿನ್ ಹೊಂದಿದ್ದು, ಇನ್ನುಳಿದಂತೆ 1.2-ಲೀಟರ್ ಕಪ್ಪಾ ಪೆಟ್ರೋಲ್ ಮತ್ತು 1.0-ಲೀಟರ್ ಟರ್ಬೋ ಪೆಟ್ರೋಲ್ ಬಳಕೆ ಮಾಡಲಾಗಿದೆ. ಈ ಎಂಜಿನ್ ಹೊರತುಪಡಿಸಿ ಕ್ರೆಟಾ ಮತ್ತು ವೆರ್ನಾ ಕಾರುಗಳಲ್ಲಿ ಸ್ಟ್ಯಾಂಡರ್ಡ್ ಆಗಿ 1.5-ಲೀಟರ್ ಡೀಸೆಲ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ದೊರೆಯಲಿದೆ.

ಹ್ಯುಂಡೈ ವೆರ್ನಾ ಫೇಸ್‌ಲಿಫ್ಟ್ ಅನಾವರಣ- ಹೊಸ ಕಾರು ಖರೀದಿಗೆ ಇಂದಿನಿಂದಲೇ ಬುಕ್ಕಿಂಗ್ ಶುರು

ಬಿಎಸ್-6 ಎಂಜಿನ್‌ನಿಂದಾಗಿ ಹ್ಯುಂಡೈ ಕಾರುಗಳ ಮಾಲಿನ್ಯ ಪ್ರಮಾಣವು ಗಣನೀಯವಾಗಿ ಇಳಿಕೆಯಾಗಿದ್ದು, ಹೊಸ ತಂತ್ರಜ್ಞಾನ ಪ್ರೇರಿತ ಎಂಜಿನ್‌ನಿಂದಾಗಿ ಹೊಸ ಬೆಲೆಯಲ್ಲೂ ಕೂಡಾ ಸಾಕಷ್ಟು ಏರಿಕೆಯಾಗಲಿದೆ.

Most Read Articles

Kannada
English summary
New Hyundai Verna bookings starts engine features update details. Read in Kannada.
Story first published: Thursday, March 12, 2020, 19:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X