ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಗಳ ಬಿಡುಗಡೆ ದಿನಾಂಕ ಬಹಿರಂಗ

ಲ್ಯಾಂಡ್ ರೋವರ್ ತನ್ನ ಡಿಫೆಂಡರ್ ಸರಣಿಯ ಆಫ್-ರೋಡ್ ಎಸ್‍ಯುವಿಗಳನ್ನು 2020ರ ಅಕ್ಟೋಬರ್ 15ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿವೆ. ಲ್ಯಾಂಡ್ ರೋವರ್ ಭಾರತದಲ್ಲಿ ಮೊದಲ ಬಾರಿಗೆ ಡಿಫೆಂಡರ್ ಬ್ರ್ಯಾಂಡ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ.

ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಗಳ ಬಿಡುಗಡೆ ದಿನಾಂಕ ಬಹಿರಂಗ

ಭಾರತೀಯ ಮಾರುಕಟ್ಟೆಯಲ್ಲಿ ಲ್ಯಾಂಡ್ ರೋವರ್‌ಗೆ ಮಹತ್ವದ ಮೈಲಿಗಲ್ಲಾಗಿಲಿದೆ. ಡಿಫೆಂಡರ್ 90 (ಮೂರು-ಡೋರ್) ಮತ್ತು 110 (ಐದು ಡೋರ್) ಎಂಬ ಎರಡು ಮಾದರಿಗಳಲ್ಲಿ ಲಭ್ಯವಿದೆ, ಎರಡು ಮಾದರಿಗಳನ್ನು ಐದು ರೂಪಾಂತರಗಳಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಲ್ಯಾಂಡ್ ರೋವರ್ ಈ ವರ್ಷದ ಆರಂಭದಲ್ಲಿ ಡಿಫೆಂಡರ್‌ಗಾಗಿ ಬೆಲೆಗಳನ್ನು ಘೋಷಿಸಿತ್ತು ಮತ್ತು ದೇಶದಲ್ಲಿ ಪ್ರೀ ಬುಕ್ಕಿಂಗ್ ಅನ್ನು ಆರಂಭಿಸಿದ್ದರು.

ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಗಳ ಬಿಡುಗಡೆ ದಿನಾಂಕ ಬಹಿರಂಗ

ಲ್ಯಾಂಡ್ ರೋವರ್ ಡಿಫೆಂಡರ್ 90 ಎಸ್‍ಯುವಿಯ ರೂ.69.99 ಲಕ್ಷದಿಂದ ರೂ.81.30 ಲಕ್ಷಗಳಾಗಿದೆ. ಡಿಫೆಂಡರ್ 110 ಎಸ್‍ಯುವಿಯು ಬೆಲೆಯು ರೂ.76.57 ಲಕ್ಷದಿಂದ ರೂ.86.27 ಲಕ್ಷಗಳಾಗಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಗಳ ಬಿಡುಗಡೆ ದಿನಾಂಕ ಬಹಿರಂಗ

ಲ್ಯಾಂಡ್ ರೋವರ್ ಡಿಫೆಂಡರ್ 110 ಎಸ್‍ಯುವಿಯನ್ನು ಬಿಡುಗಡೆಗೊಳಿಸಿದ ದಿನ ವಿತರಣೆಯನ್ನು ಪ್ರಾರಂಭಿಸುತ್ತಾರೆ, ಆದರೆ ಕರೋನಾ ಸೋಂಕಿನ ಭೀತಿಯಿಂದ ಡಿಫೆಂಡರ್ 90 ಎಸ್‍ಯುವಿಯ ವಿತರಣೆಯು ಮತ್ತಷ್ಟು ವಿಳಂಬವಾಗುತ್ತದೆ.

ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಗಳ ಬಿಡುಗಡೆ ದಿನಾಂಕ ಬಹಿರಂಗ

ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಲಿಮಿಟೆಡ್ (ಜೆಎಲ್ಆರ್ಐಎಲ್)ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಸೂರಿ ಅವರು ಮಾತನಾಡಿ, 2009ರಲ್ಲಿ ಲ್ಯಾಂಡ್ ರೋವರ್ ಕಂಪನಿಯು ಭಾರತವನ್ನು ಪ್ರವೇಶಿಸಿದ ನಂತರ ಭಾರತದಲ್ಲಿ ಮೊದಲ ಬಾರಿಗೆ ಐಕಾನಿಕ್ ಡಿಫೆಂಡರ್ ಎಸ್‍ಯುವಿಯನ್ನು ಬಿಡುಗಡೆಗೊಳಿಸುತ್ತಿದೆ ಮತ್ತು ಇದು ನಮಗೆ ಹೆಮ್ಮೆಯ ಕ್ಷಣವಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಗಳ ಬಿಡುಗಡೆ ದಿನಾಂಕ ಬಹಿರಂಗ

ಜಾಗತಿಕವಾಗಿ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಗಳಿಸಿರುವ ಡಿಫೆಂಡರ್ ಎಸ್‍ಯುವಿಯು ಭಾರತದಲ್ಲಿ ಬಿಡುಗಡೆಯಾಗುವುದಿರುವುದು ಭಾರತೀಯ ಮಾರುಕಟ್ಟೆಯಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಲಿದೆ. ಹೊಸ ಡಿಫೆಂಡರ್ ಎಸ್‍ಯುವಿಗಳನ್ನು ಡಿಜಿಟಲ್ ಕಾರ್ಯಕ್ರಮದ ಮೂಲಕ ಬಿಡುಗಡೆಗೊಳಿಸಿದ್ದೇವೆ ಎಂದು ಹೇಳಿದರು.

ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಗಳ ಬಿಡುಗಡೆ ದಿನಾಂಕ ಬಹಿರಂಗ

ಹೊಸ ಡಿಫೆಂಡರ್ ಎಸ್‍ಯುವಿಗಳು 2.0-ಲೀಟರ್, ನಾಲ್ಕು ಸಿಲಿಂಡರ್, ಟರ್ಬೊ-ಪೆಟ್ರೋಲ್ ‘ಪಿ 300' ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 300 ಬಿಹೆಚ್‍ಪಿ ಮತ್ತು 400 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇದು ಎಲ್ಲಾ ನಾಲ್ಕು ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸಲಾಗುತ್ತದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಗಳ ಬಿಡುಗಡೆ ದಿನಾಂಕ ಬಹಿರಂಗ

ಕಠಿಣ ಭೂಪ್ರದೇಶಗಳಲ್ಲಿ ಸುಲಭವಾಗಿ ಸಾಗಲು ಡಿಫೆಂಡರ್ ಲ್ಯಾಂಡ್ ರೋವರ್‌ನಲ್ಲಿ ಟೆರೆಯನ್ ರೆಸ್ಪಾನ್ಸ್ ಸಿಸ್ಟಂ ಅನ್ನು ಸಹ ಒಳಗೊಂಡಿದೆ. ಡಿಫೆಂಡರ್ 110 ಮಾದರಿಯನ್ನು ಏರ್-ಸಸ್ಪೆನ್ಷನ್ ಸಿಸ್ಟಂನೊಂದಿಗೆ ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.

ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಗಳ ಬಿಡುಗಡೆ ದಿನಾಂಕ ಬಹಿರಂಗ

ಈ ಎಸ್‍ಯುವಿಗಳಲ್ಲಿ ಕ್ರೂಸ್ ಕಂಟ್ರೋಲ್, 360 ಡಿಗ್ರಿ 3ಡಿ ಸರೌಂಡ್ ಕ್ಯಾಮೆರಾ, ಸ್ಟ್ರೀಮ್ ಕ್ರಾಸಿಂಗ್‌ಗಳಿಗೆ ವೇಡ್ ಸೆನ್ಸಿಂಗ್ ಮತ್ತು ಡ್ರೈವರ್ ಕಂಡಿಷನ್ ಮಾನಿಟರಿಂಗ್ ಆಫ್-ರೋಡ್ ಗಳಿಗೆ ಇತರ ಡ್ರೈವಿಂಗ್ ಅಸಿಸ್ಟ್ ಫೀಚರ್ ಗಳನ್ನು ಹೊಂದಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಗಳ ಬಿಡುಗಡೆ ದಿನಾಂಕ ಬಹಿರಂಗ

ಇದರೊಂದಿಗೆ ಈ ಎಸ್‍ಯುವಿಯಲ್ಲಿ ಪ್ರಯಾಣಿಕರ ಸುರಕ್ಷತೆ ಒತ್ತು ನೀಡಿ, ಸ್ಟ್ಯಾಂಡರ್ಡ್ ಸುರಕ್ಷತಾ ಫೀಚರ್ ಗಳಾದ ಏರ್‌ಬ್ಯಾಗ್, ಎಬಿಎಸ್, ಟ್ರ್ಯಾಕ್ಷನ್ ಕಂಟ್ರೋಲ್ ನಂತಹ ಫೀಚರ್ ಗಳನ್ನು ಒಳಗೊಂಡಿದೆ.

ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಗಳ ಬಿಡುಗಡೆ ದಿನಾಂಕ ಬಹಿರಂಗ

ಈ ಎಸ್‍ಯುವಿಗಳ ಇಂಟಿರಿಯರ್ ನಲ್ಲಿ ಹೆಡ್-ಅಪ್ ಡಿಸ್ ಪ್ಲೇ 12.3-ಇಂಚಿನ ಫುಲ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜಿಂಗ್ ಮತ್ತು ಹೆಚ್ಚಿನ ಫೀಚರ್ ಗಳನ್ನು ಹೊಂದಿದೆ.

ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಗಳ ಬಿಡುಗಡೆ ದಿನಾಂಕ ಬಹಿರಂಗ

ಕಠಿಣವಾದ ಭೂಪ್ರದೇಶಗಳಲ್ಲಿಯು ಸಲಿಸಾಗಿ ಸಾಗುವ ಡಿಫೆಂಡರ್ ಎಸ್‍ಯುವಿಯು ಒಂದು ಸಮರ್ಥವಾದ ಆಫ್-ರೋಡರ್ ಆಗಿದೆ. ಲ್ಯಾಂಡ್ ರೋವರ್ ಡಿಫೆಂಡರ್ 110 ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಜೀಪ್ ರಾಂಗ್ಲರ್ ಮತ್ತು ಮರ್ಸಿಡಿಸ್ ಬೆಂಜ್ ಜಿ 350 ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Land Rover Defender India Launch Timeline Revealed. Read In Kannada.
Story first published: Friday, September 25, 2020, 14:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X