Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅನಾವರಣವಾಯ್ತು ಲ್ಯಾಂಡ್ ರೋವರ್ ಡಿಫೆಂಡರ್ ಪಿಹೆಚ್‌ಇವಿ ಎಸ್‍ಯುವಿ
ಲ್ಯಾಂಡ್ ರೋವರ್ ಕಂಪನಿಯು ಶಾರ್ಟ್ ವ್ಹೀಲ್ ಬೇಸ್ ಡಿಫೆಂಡರ್ 90 ಎಸ್‍ಯುವಿಯ ಮಾದರಿಯನ್ನು ಕೊನೆಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಲ್ಯಾಂಡ್ ರೋವರ್ ಡಿಫೆಂಡರ್ 90 ಎಸ್‍ಯುವಿಯನ್ನು ಪ್ಲಗ್-ಇನ್ ಹೈಬ್ರಿಡ್(ಪಿಹೆಚ್‌ಇವಿ) ಮಾದರಿಯಲ್ಲಿ ಪರಿಚಯಿಸಿದೆ.

ಹೊಸ ಡಿಫೆಂಡರ್ 90 ಎಸ್‍ಯುವಿಯ ಪಿ400ಇ ರೂಪಾಂತರವನ್ನು ಡಿಫೆಂಡರ್ 90 ಶಾರ್ಟ್-ವ್ಹೀಲ್ ಬೇಸ್ ಮತ್ತು ಡಿಫೆಂಡರ್ 110 ಲಾಂಗ್-ವ್ಹೀಲ್ ಬೇಸ್ ಮಾದರಿಯಲ್ಲಿಯು ಬಿಡುಗಡೆಗೊಳಿಸಲಿದೆ. ಈ ಹೂಸ ಡಿಫೆಂಡರ್ 90 ಎಸ್‍ಯುವಿಯಲ್ಲಿ 2.0-ಲೀಟರ್, ನಾಲ್ಕು ಸಿಲಿಂಡರ್, ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿದೆ. ಇನ್ನು ಈ ಎಸ್‍ಯುವಿಯು ಎಲೆಕ್ಟ್ರಿಕ್ ಮೋಟಾರ್ ಅನ್ನು ಕೂಡ ಒಳಗೊಂಡಿದೆ.

ಹೊಸ ಡಿಫೆಂಡರ್ 90 ಎಸ್‍ಯುವಿಯ 2.0-ಲೀಟರ್, ನಾಲ್ಕು ಸಿಲಿಂಡರ್, ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು 296 ಬಿಹೆಚ್‌ಪಿ ಪವರ್ ಉತ್ಪಾದಿಸುವಂತೆ ಟ್ಯೂನ್ ಮಾಡಲಾಗಿದೆ. ಇನ್ನು ಎಲೆಕ್ಟ್ರಿಕ್ ಮೋಟಾರ್ 138 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಎರಡು ಸಂಯೋತವಾಗಿ 398 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಆಯ್ದ ಮಾರುಕಟ್ಟೆಗಳಲ್ಲಿ 3.0-ಲೀಟರ್, ಇನ್ಲೈನ್ ಸಿಕ್ಸ್-ಸಿಲಿಂಡರ್, ಡೀಸೆಲ್ ಎಂಜಿನ್ ಡಿಫೆಂಡರ್ 90 ನಲ್ಲಿ ಸಹ ನೀಡಲಾಗುತ್ತದೆ.

ಈ ಡೀಸೆಲ್ ಎಂಜಿನ್ 296 ಬಿಹೆಚ್‌ಪಿ ಪವರ್ ಮತ್ತು 650 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಸ್‍ಯುವಿಯು ಕೇವಲ 6.7 ಸೆಕೆಂಡುಗಳಲ್ಲಿ 0-100 ಕಿಲೋಮೀಟರ್ ವೇಗವನ್ನು ಕ್ರಮಿಸುತ್ತದೆ. ಈ ಎಂಜಿನ್ ನಲ್ಲಿಯು ಮೈಕ್ರೋ-ಹೈಬ್ರಿಡ್ ತಂತ್ರಜ್ಞಾನದೊಂದಿಗೆ ನೀಡಲಾಗುತ್ತದೆ ಮತ್ತು ಎಂಜಿನ್ ಸ್ಟಾರ್ಟ್-ಸ್ಟಾಪ್ ಸಿಸ್ಟಂ ಅನ್ನು ಒಳಗೊಂಡಿದೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ಲ್ಯಾಂಡ್ ರೋವರ್‍ನ ಈ ಎಸ್‍ಯುವಿಯಲ್ಲಿ ಅಲ್ಯುಮಿನಿಯಂ ಮೊನೊಕಾಕ್ ಚಾಸೀಸ್ ಅಳವಡಿಸಲಾಗಿದೆ. ಈ ಚಾಸೀಸ್ ಹಳೆಯ ಮಾದರಿಯ ಚಾಸೀಸ್‍ಗಿಂತ ಹೆಚ್ಚಿನ ಪ್ರಮಾಣದ ಸ್ಥಿರತೆ ಹಾಗೂ ಸುರಕ್ಷತೆಯನ್ನು ಹೊಂದಿರುತ್ತದೆ.

ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿ ಉತ್ತಮವಾದ ಆಫ್ ರೋಡ್ ಮಾದರಿಯಾಗಿರಲಿದೆ. ಈ ಹೊಸ ತಲೆಮಾರಿನ ಎಸ್‍ಯುವಿ ಹಲವಾರು ಹೊಸ ಫೀಚರ್‍ಗಳನ್ನು ಹೊಂದಿರಲಿದೆ. ಈ ಎಸ್‍ಯುವಿಯು 3,720 ಕೆ.ಜಿಯಷ್ಟು ತೂಕವನ್ನು ಎಳೆಯುವ ಸಾಮರ್ಥ್ಯವನ್ನು ಹೊಂದಿದೆ.
MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಈ ಎಸ್‍ಯುವಿಯ ರೂಫ್‍ನ ತೂಕವು 300 ಕೆಜಿಯಷ್ಟಿದೆ. ಡಿಫೆಂಡರ್ 291 ಎಂಎಂನಷ್ಟು ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಯಾವುದೇ ರಸ್ತೆಯನ್ನೇ ಆಗಲಿ ಸರಾಗವಾಗಿ ದಾಟುವಂತಹ ಸಾಮರ್ಥ್ಯವನ್ನು ಹೊಂದಿದೆ.

ಆಫ್ ರೋಡ್ ಸಾಮರ್ಥ್ಯದ ಈ ಎಸ್‍ಯುವಿಯಲ್ಲಿ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಅಳವಡಿಸಲಾಗಿದೆ. ಇದರಲ್ಲಿರುವ ರೇರ್ ಲಾಕಿಂಗ್ ಡಿಫರೆನ್ಶಿಯಲ್ ಈ ಎಸ್‍ಯುವಿಯನ್ನು ಪೂರ್ಣ ಪ್ರಮಾಣದ ಆಫ್ ರೋಡ್ ವಾಹನವನ್ನಾಗಿಸಿದೆ. ಈ ಎಸ್‍ಯುವಿಯಲ್ಲಿ ಟೆರೇನ್ 2 ರೆಸ್ಪಾನ್ಸ್ ಸಿಸ್ಟಂ ಎಂಬ ಆಫ್ ರೋಡ್ ಟೆಕ್ನಾಲಜಿಯನ್ನು ಸಹ ಒಳಗೊಂಡಿದೆ.