ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ರೇಂಜ್ ರೋವರ್ ಇವೊಕ್

ಲ್ಯಾಂಡ್ ರೋವರ್ ಇಂಡಿಯಾ ತನ್ನ ಎರಡನೇ ತಲೆಮಾರಿನ ರೇಂಜ್ ರೋವರ್ ಇವೊಕ್ ಎಸ್‍‍ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೊಸ ರೇಂಜ್ ರೋವರ್ ಇವೊಕ್ ಜನವರಿ 30ರಿಂದ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗಲಿದೆ.

ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ರೇಂಜ್ ರೋವರ್ ಇವೊಕ್

ಬ್ರಿಟಿಷ್ ಮೂಲದ ಕಂಪನಿಯು ಮೊದಲ ಬಾರಿಗೆ ಭಾರತದಲ್ಲಿ ಮೊದಲ ತಲೆಮಾರಿನ ಇವೊಕ್ ಎಸ್‍ಯುವಿಯನ್ನು 2018ರಲ್ಲಿ ಬಿಡುಗಡೆಗೊಳಿಸಿತ್ತು. ಎರಡನೇ ತಲೆಮಾರಿನ ಮಾದರಿಯನ್ನು ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಿ ಒಂದು ವರ್ಷದ ಬಳಿಕ ಇದೀಗ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ.

ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ರೇಂಜ್ ರೋವರ್ ಇವೊಕ್

ಬಿಎಸ್-6 ರೇಂಜ್ ರೋವರ್ ಇವೊಕ್ ಎಸ್‍‍ಯುವಿಯು ಆಕರ್ಷಕ ಲುಕ್ ಅನ್ನು ಹೊಂದಿದೆ. ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಾದರಿಗೆ ಹೋಲಿಸಿದರೆ 2020ರ ರೇಂಜ್ ರೋವರ್ ಇವೊಕ್ ಅನ್ನು ಸಂಪೂರ್ಣವಾಗಿ ನವೀಕರಿಸಲಾಗಿದೆ.

ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ರೇಂಜ್ ರೋವರ್ ಇವೊಕ್

ಈ ಎಸ್‍ಯುವಿಯು ಅಕರ್ಷಕವಾದ ಸೈಡ್ ಮತ್ತು ರೇರ್ ಪ್ರೊಫೈಲ್‍ಗಳನ್ನು ಮತ್ತು ಹೆಚ್ಚು ಐಷಾರಾಮಿ ಇಂಟಿರಿಯರ್ ಕ್ಯಾಬಿನ್‍‍ಗಳನ್ನು ಒಳಗೊಂಡಿದೆ. 2020ರ ಇವೋಕ್‍‍ನ ವಿನ್ಯಾಸವು ತನ್ನ ಕಂಪನಿಯ ಸರಣಿಯಲ್ಲಿರುವ ವೆಲಾರ್‍ ಎಸ್‍‍ಯುವಿಯ ಮಾದರಿಯಲ್ಲಿದೆ.

ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ರೇಂಜ್ ರೋವರ್ ಇವೊಕ್

ಹೊಸ ಇವೊಕ್ ಕಾರಿನ ಮುಂಭಾಗದಲ್ಲಿರುವ ಹೆಡ್‍‍ಲ್ಯಾಂಪ್ ವೆಲಾರ್ ಎಸ್‍‍ಯುವಿಯಲ್ಲಿರುವ ಮಾದರಿಯಲ್ಲಿದೆ. ಇನ್ನೂ ಮುಂಭಾಗದ ಗ್ರಿಲ್, ಡೋರ್ ಹ್ಯಾಂಡಲ್‍‍ಗಳು ಮತ್ತು ಹಿಂಭಾಗದ ಟೇಲ್‍‍ಲೈಟ್ ಕೂಡ ಅದೇ ಮಾದರಿಯಲ್ಲಿದೆ.

ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ರೇಂಜ್ ರೋವರ್ ಇವೊಕ್

ಹೊಸ ಇವೊಕ್ ಎಸ್‍‍ಯುವಿಯಲ್ಲಿ ಹಳೆಯ ಮಾದರಿಯಲ್ಲಿರುವ ಅದೇ ಸಿಲೂಯೆಟ್‍‍ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಹಿಂದಿನ ಮಾದರಿಯಲ್ಲಿದ್ದ ರೂಫ್‍‍ಲೈನ್ ಮತ್ತು ರೈಸಿಂಗ್ ಬೆಲ್ಟ್‌ಲೈನ್ ಅನ್ನು ಹೊಂದಿದೆ.

ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ರೇಂಜ್ ರೋವರ್ ಇವೊಕ್

ಹೊಸ ರೇಂಜ್ ರೋವರ್ ಇವೊಕ್‍‍ನ ಇಂಟಿರಿಯರ್‍‍‍ನಲ್ಲಿ ಮೊದಲ ತಲೆಮಾರಿನ ಮಾದರಿಗೆ ಹೋಲಿಸಿದರೆ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಇಂಟಿರಿಯರ್‍‍ನಲ್ಲಿ ಹೊಸ ಫೀಚರ್ಸ್‍‍ಗಳು, ಉಪಕರಣಗಳು ಮತ್ತು ತಂತ್ರಜ್ಞಾನವನ್ನು ಹೊಂದಿದೆ.

ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ರೇಂಜ್ ರೋವರ್ ಇವೊಕ್

ಹೊಸ ಇವೊಕ್ ಎಸ್‍‍ಯುವಿನ ಇಂಟಿರಿಯರ್‍ ಪ್ರೀಮಿಯಂ ಲೆದರ್ ಕ್ಯಾಬಿನ್ ಅನ್ನು ಹೊಂದಿದೆ. ಹೊಸ ಎಸ್‍‍ಯುವಿಯಲ್ಲಿ ಫುಲ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಕ್ಲೈಮೆಟ್ ಕಂಟ್ರೋಲ್ ಅನ್ನು ಹೊಂದಿದೆ.

ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ರೇಂಜ್ ರೋವರ್ ಇವೊಕ್

ಹೊಸ ಇವೊಕ್ ಎಸ್‍‍ಯುವಿನಲ್ಲಿ ಸ್ಟೀಯರಿಂಗ್ ವ್ಹೀಲ್, ಪಿಸ್ತೂಲ್-ಗ್ರಿಪ್ ಲಿವರ್, ಎಲೆಕ್ಟ್ರಿನಿಕ್ ಮಾದರಿಯಲ್ಲಿ ಅಡ್ಜೆಸ್ಟ್ ಮಾಡಬಹುದಾದ ಸೀಟುಗಳು, ಪನೋರಾಮಿಕ್ ಸನ್‍‍ರೂಫ್ ಜೊತೆಯಲ್ಲಿ ಇತರ ಪ್ರಮುಖ ಫೀಚರ್ಸ್‍‍ಗಳಿವೆ.

ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ರೇಂಜ್ ರೋವರ್ ಇವೊಕ್

ಭಾರತದಲ್ಲಿ ಬಿಡುಗಡೆಯಾಗಲಿರುವ ಬಿಎಸ್-6 ರೇಂಜ್ ರೋವರ್ ಇವೊಕ್ ಮಾದರಿಯು ಹಿಂದಿನ ಮಾದರಿಯಂತೆ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿರಲಿವೆ. ಇದರಲ್ಲಿ 2.0 ಲೀಟರ್ ನಾಲ್ಕು ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ.

ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ರೇಂಜ್ ರೋವರ್ ಇವೊಕ್

ಈ ಎಂಜಿನ್ 250 ಬಿ‍‍ಹೆಚ್‍‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇನ್ನೂ 2.0 ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 180 ಬಿ‍‍ಹೆಚ್‍‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎರಡೂ ಎಂಜಿನ್‍‍ಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ 9 ಸ್ಪೀಡ್ ಆಟೋಮ್ಯಾಟೀಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ರೇಂಜ್ ರೋವರ್ ಇವೊಕ್

2020ರ ರೇಂಜ್ ರೋವರ್ ಇವೊಕ್ ತನ್ನ ಕಂಪನಿಯ ಸರಣಿಯ ವೆಲಾರ್ ಎಸ್‍‍ಯುವಿ ಮಾದರಿಯ ವಿನ್ಯಾಸದ ಸಾಕಷ್ಟು ಅಂಶಗಳನ್ನು ಹೊಂದಿದೆ. ಭಾರತದಲ್ಲಿ ಬಿಡುಗಡೆಯಾದ ಬಳಿಕ ಮರ್ಸಿಡಿಸ್ ಬೆಂಝ್ ಜೆಎಲ್‍ಸಿ, ವೋಲ್ವೋ ಎಕ್ಸ್‌ಸಿ 60, ಬಿಎಂಡಬ್ಲ್ಯು ಎಕ್ಸ್ 3 ಮತ್ತು ಆಡಿ 5 ಕ್ಯೂ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
2020 Range Rover Evoque India Launch Date Confirmed: The ‘Baby Velar’ Will Rival The Audi Q5. Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X