ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ವಿಂಗರ್ ಮಿನಿ ವ್ಯಾನ್

ಟಾಟಾ ಮೋಟಾರ್ಸ್ ಕಂಪನಿಯು ಹೊಸ ವಿಂಗರ್ ಮಿನಿ ವ್ಯಾನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದರ ಭಾಗವಾಗಿ ಟಾಟಾ ಮೋಟಾರ್ಸ್ ಹೊಸ ವಿಂಗರ್ ಮಿನಿ ವ್ಯಾನ್ ಅನ್ನು ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ವಿಂಗರ್ ಮಿನಿ ವ್ಯಾನ್

ಟಾಟಾ ವಿಂಗರ್ ಮಿನಿ ವ್ಯಾನ್ ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸುತ್ತಿರುವುದನ್ನು ಟೀಂ ಬಿಹೆಚ್‍ಪಿ ಬಹಿರಂಗಪಡಿಸಿದೆ. ಹೊಸ ಟಾಟಾ ವಿಂಗರ್ ಮಿನಿ ವ್ಯಾನ್ ಕ್ರೋಮ್ ಬಾರ್ ಮತ್ತು ಸ್ಲಿಮ್ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು ಹೊಂದಿರುವ ಸ್ಲಿಮ್ ಗ್ರಿಲ್ ಅನ್ನು ಒಳಗೊಂಡಿದೆ. ಈ ಮಿನಿ ವ್ಯಾನ್ ನಲ್ಲಿ ಹ್ಯಾರಿಯರ್ ನಂತೆಯೇ ಹೆಡ್‌ಲ್ಯಾಂಪ್ ಕ್ಲಸ್ಟರ್‌ಗಳನ್ನು ಮುಂಭಾಗದ ಬಂಪರ್‌ನಲ್ಲಿ ಕೆಳಕ್ಕೆ ಇರಿಸಲಾಗುತ್ತದೆ. ವಿಂಗರ್ ಮಿನಿ ವ್ಯಾನ್ ಸ್ಪಾಟ್ ಟೆಸ್ಟ್ ನಲ್ಲಿ ಹ್ಯಾಲೊಜೆನ್ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ವಿಂಗರ್ ಮಿನಿ ವ್ಯಾನ್

ಟಾಟಾ ಮೋಟಾರ್ಸ್ ಈ ಹೊಸ ವಿಂಗರ್ ಮಿನಿ ವ್ಯಾನ್ ಅನ್ನು 2020ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಿದ್ದರು. ಈ ವಾಹನವನ್ನು ಮೊದಲ ಬಾರಿಗೆ 2007ರಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈಗ ಅಪ್‍‍ಡೇಟ್ ಮಾಡಲಾದ ವಿಂಗರ್ 15 + 1 ಸೀಟ್ ಹೊಂದಿರುವ ಮಿನಿ ವ್ಯಾನ್ ಆಗಿದೆ. ಟಾಟಾ ಮೋಟಾರ್ಸ್ ಈ ವ್ಯಾನ್‍‍ನಲ್ಲಿ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಿದ್ದು, ಬಿ‍ಎಸ್ 6 ಎಂಜಿನ್‍‍ನೊಂದಿಗೆ ಅಪ್‍‍ಗ್ರೇಡ್‍‍ಗೊಳಿಸಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ವಿಂಗರ್ ಮಿನಿ ವ್ಯಾನ್

ಈ ಮಿನಿ ವ್ಯಾನ್‍‍ನ ಇಂಟಿರಿಯರ್ ಟಾಟಾದ ಜನಪ್ರಿಯ ವಾಹನವಾದ ಹ್ಯಾರಿಯರ್ ಎಸ್‍‍ಯುವಿಯಂತಿದೆ. ವಿಂಗರ್ ವಾಹನವನ್ನು ಟಾಟಾ ಮೋಟಾರ್ಸ್‍‍ನ ಇಂಪ್ಯಾಕ್ಟ್ 2.0 ವಿನ್ಯಾಸದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಟಾಟಾ ಹ್ಯಾರಿಯರ್ ಎಸ್‍‍ಯುವಿ ಈ ವಿನ್ಯಾಸದಲ್ಲಿ ಅಭಿವೃದ್ಧಿಪಡಿಸಲಾದ ಮೊದಲ ವಾಹನವಾಗಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ವಿಂಗರ್ ಮಿನಿ ವ್ಯಾನ್

ಈ ಕಮರ್ಷಿಯಲ್ ವ್ಯಾನ್ ಅನ್ನು ಪ್ಯಾಸೆಂಜರ್ ಎಸ್‍‍ಯುವಿಯಾಗಿಸಿದೆ. ಈ ಬದಲಾವಣೆಗಳು ವ್ಯಾನ್‍‍ನ ಸುರಕ್ಷತೆಯನ್ನು ಹೆಚ್ಚಿಸಿವೆ. ಮುಂಭಾಗದ ಪ್ರಯಾಣಿಕರಿಗೆ ಹಾಗೂ ಚಾಲಕನಿಗೆ ಹೆಚ್ಚು ಸುರಕ್ಷತೆಯನ್ನು ನೀಡುತ್ತವೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ವಿಂಗರ್ ಮಿನಿ ವ್ಯಾನ್

ಈ ಹೊಸ ವ್ಯಾನ್ ನಲ್ಲಿ 5 ಸ್ಪೋಕ್‍‍ಗಳ ಅಲಾಯ್ ವ್ಹೀಲ್, ಅಪ್‍‍ಡೇಟ್ ಮಾಡಲಾಗಿರುವ ಹಿಂಭಾಗದ ಡೋರ್‍‍ಗಳು ವ್ಯಾನ್ ಅನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತವೆ. ಟಾಟಾ ಈ ವ್ಯಾನ್‍‍ನ ಇಂಟಿರಿಯರ್‍‍ನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ. ವ್ಯಾನ್‍‍ನ ಕಾಕ್‍‍ಪಿಟ್‍‍ನಿಂದ ರೂಫ್‍‍ವರೆಗೆ ಹಲವಾರು ಅಪ್‍‍ಡೇಟ್‍‍ಗಳನ್ನು ಮಾಡಲಾಗಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ವಿಂಗರ್ ಮಿನಿ ವ್ಯಾನ್

ಈ ವ್ಯಾನ್‍‍ನೊಳಗೆ ಟಚ್ ಸ್ಕ್ರೀನ್ ಇನ್ಫೋಟೆನ್‍‍ಮೆಂಟ್ ಸಿಸ್ಟಂ, ಫ್ರಾಬ್ರಿಕ್ ಸೀಟ್, ಸಿಲ್ವರ್/ಪಿಯಾನೊ ಬ್ಲಾಕ್ ಎಸಿ ಕಂಟ್ರೋಲ್ ಕ್ನಾಪ್, ಪ್ರತಿ ಸೀಟುಗಳಲ್ಲಿ ವಿಭಿನ್ನವಾದ ಯು‍ಎಸ್‍‍ಬಿ ಚಾರ್ಜಿಂಗ್ ಪೋರ್ಟ್, ಪುಶ್ ಬ್ಯಾಕ್ ಸೀಟ್, ಆಂಪಲ್ ರೂಫ್‍‍ಗಳಿವೆ.

MOST READ: ಕರೋನಾ ಭೀತಿಯಿಂದ ಪಾತಾಳಕ್ಕೆ ಕುಸಿತ ಮಾರುತಿ ಸುಜುಕಿ ಕಾರುಗಳ ಮಾರಾಟ

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ವಿಂಗರ್ ಮಿನಿ ವ್ಯಾನ್

ವ್ಯಾನ್‍‍ನಲ್ಲಿರುವ ವೈಬ್ರೆಷನ್‍‍ಗಳನ್ನು ಕಡಿಮೆ ಮಾಡಲಾಗಿದ್ದು, ಆರಾಮದಾಯಕವಾದ ಸಂಚಾರವನ್ನು ನೀಡುವಂತೆ ಅಭಿವೃದ್ಧಿಪಡಿಸಲಾಗಿದೆ. ಈ ವ್ಯಾನ್ ಅನ್ನು ಬಿ‍ಎಸ್ 6 ಎಂಜಿನ್‍‍ನೊಂದಿಗೆ ಅಪ್‍‍ಗ್ರೇಡ್‍‍ಗೊಳಿಸಲಾಗಿದೆ. ಈ ವ್ಯಾನ್‍‍ನಲ್ಲಿರುವ 2.0 ಲೀಟರಿನ ಡೀಸೆಲ್ ಎಂಜಿನ್ 89 ಬಿ‍‍ಹೆಚ್‍‍ಪಿ ಪವರ್ ಹಾಗೂ 190 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಮ್ಯಾನುವಲ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ವಿಂಗರ್ ಮಿನಿ ವ್ಯಾನ್

ಹಲವು ಬದಲಾವಣೆಗಳಿಂದಾಗಿ ಫ್ಯಾಮಿಲಿಗಳಿಗೂ ಸಹ ಈ ವ್ಯಾನ್ ಅನ್ನು ತಮ್ಮ ಸ್ವಂತ ಬಳಕೆಗಾಗಿ ಖರೀದಿಸಲಿ ಎಂಬುದು ಟಾಟಾ ಮೋಟಾರ್ಸ್ ಅಭಿಪ್ರಾಯ. ಟಾಟಾ ಮೋಟಾರ್ಸ್ ಫ್ಯಾಮಿಲಿಗಳಿಗಾಗಿಯೇ ವಿವಿಧ ಫೀಚರ್‍‍‍ಗಳನ್ನು ನೀಡಲಿದೆ.

Most Read Articles

Kannada
English summary
All-new Tata Winger with updated styling spied. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X