ಸ್ಥಗಿತವಾಯ್ತು ಜನಪ್ರಿಯ ನಿಸ್ಸಾನ್ ಟೆರಾನೊ ಎಸ್‍ಯುವಿ

ನಿಸ್ಸಾನ್ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಟೆರಾನೊ ಎಸ್‍ಯುವಿಯನ್ನು ಸ್ಥಗಿತಗೊಳಿಸಲಾಗಿದೆ. ನಿಸ್ಸಾನ್ ಇಂಡಿಯಾ ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಿಂದ ಟೆರಾನೊ ಎಸ್‍ಯುವಿಯ ಹೆಸರನ್ನು ತೆಗೆದುಹಾಕಲಾಗಿದೆ.

ಸ್ಥಗಿತವಾಯ್ತು ಜನಪ್ರಿಯ ನಿಸ್ಸಾನ್ ಟೆರಾನೊ ಎಸ್‍ಯುವಿ

ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನಿಸ್ಸಾನ್ ಟೆರಾನೊ ಎಸ್‍ಯುವಿಯನ್ನು ನವೀಕರಿಸಲಾಗುವುದಿಲ್ಲ. ಭಾರತೀಯ ಮಾರುಕಟ್ಟೆಯಲ್ಲಿ ಭವಿಷ್ಯದಲ್ಲಿ ಹೊಸ ನಿಸ್ಸಾನ್ ಟೆರಾನೊ ಬಿಡುಗಡೆಯಾಗುವುದರ ಬಗ್ಗೆ ಮಾಹಿತಿ ಇಲ್ಲ. ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಟೆರಾನೊ ಎಸ್‍ಯುವಿಯು ಬೇಡಿಕೆಯು ಕಡಿಮೆಯಾಗಿತ್ತು. ಅಲ್ಲದೇ ನಿಸ್ಸಾನ್ ಟೆರಾನೊ ಮಾರಾಟವು ಪತಾಳಕ್ಕೆ ಕುಸಿದಿತ್ತು. ಇದರಿಂದ ನಿಸ್ಸಾನ್ ಕಂಪನಿಯು ತನ್ನ ಟೆರಾನೊ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಲಾಗಿದೆ.

ಸ್ಥಗಿತವಾಯ್ತು ಜನಪ್ರಿಯ ನಿಸ್ಸಾನ್ ಟೆರಾನೊ ಎಸ್‍ಯುವಿ

ನಿಸ್ಸಾನ್ ಟೆರಾನೊ ಎಸ್‍ಯುವಿಯು ರೆನಾಲ್ಟ್ ಡಸ್ಟರ್ ಮಾದರಿಯ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ನಿಸ್ಸಾನ್ ಟೆರಾನೊ ಎಸ್‍ಯುವಿಯನ್ನು 2013ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಲಾಗಿತ್ತು.

MOST READ: ಮಾರಾಟದಲ್ಲಿ ಶೂನ್ಯ ಸಾಧನೆ ಮಾಡಿದ ಎಂಜಿ ಮೋಟಾರ್

ಸ್ಥಗಿತವಾಯ್ತು ಜನಪ್ರಿಯ ನಿಸ್ಸಾನ್ ಟೆರಾನೊ ಎಸ್‍ಯುವಿ

ನಿಸ್ಸಾನ್ ಟೆರಾನೊ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡುವಲ್ಲಿ ವಿಫಲವಾಗಿದೆ. ಈ ಎಸ್‍ಯುವಿಯಲ್ಲಿ ಯಾವುದೇ ಮಹತ್ವದ ನವೀಕರಣವನ್ನು ನಡೆಸಿ ಬಿಡುಗಡೆಗೊಳಿಸುವಲ್ಲಿ ವಿಫಲವಾಗಿದೆ.

ಸ್ಥಗಿತವಾಯ್ತು ಜನಪ್ರಿಯ ನಿಸ್ಸಾನ್ ಟೆರಾನೊ ಎಸ್‍ಯುವಿ

ನಿಸ್ಸಾನ್ ಟೆರಾನೊ ಎಸ್‍ಯುವಿಯಲ್ಲಿ ಪ್ರಮುಖ ನವೀಕರಣಗಳನ್ನು ನಡೆಸಿ ಬಿಡುಗಡೆಗೊಳಿಸಿದರೆ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯಲು ಸಹಕಾರಿಯಾಗಿರುತ್ತಿತ್ತು. ಟೆರಾನೊ ಎಸ್‍ಯುವಿಯನ್ನು ನಿಸ್ಸಾನ್ ಸ್ಥಗಿತಗೊಳಿಸಿದ ಬಳಿಕ ನಿಸ್ಸಾನ್ ಕಿಕ್ಸ್ ಮಾತ್ರ ಬ್ರ್ಯಾಂಡ್ ಏಕೈಕ ಎಸ್‍ಯುವಿಯಾಗಿದೆ.

MOST READ: ಬಹಿರಂಗವಾಯ್ತು ದಟ್ಸನ್ ರೆಡಿ ಗೋ ಫೇಸ್‍‍ಲಿಫ್ಟ್ ಕಾರಿನ ಮಾಹಿತಿ

ಸ್ಥಗಿತವಾಯ್ತು ಜನಪ್ರಿಯ ನಿಸ್ಸಾನ್ ಟೆರಾನೊ ಎಸ್‍ಯುವಿ

ನಿಸ್ಸಾನ್ ಟೆರಾನೊ ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಯನ್ನು ಹೊಂದಿತ್ತು. ನಿಸ್ಸಾನ್ ಟೆರಾನೊ 1.6-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 103 ಬಿಹೆಚ್‌ಪಿ ಮತ್ತು 148 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಸ್ಥಗಿತವಾಯ್ತು ಜನಪ್ರಿಯ ನಿಸ್ಸಾನ್ ಟೆರಾನೊ ಎಸ್‍ಯುವಿ

ಇನ್ನು ಎರಡು ರೀತಿಯ ಡೀಸೆಲ್ ಎಂಜಿನ್ ಅನ್ನು ಹೊಂದಿತ್ತು. ಒಂದು ಡೀಸೆಲ್ ಎಂಜಿನ್ 84 ಬಿಹೆಚ್‌ಪಿ ಮತ್ತು 148 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸಿದರೆ, ಇನ್ನೊಂದು ಡೀಸೆಲ್ ಎಂಜಿನ್ 109 ಬಿಹೆಚ್‍ಪಿ ಪವರ್ ಮತ್ತು 245 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಗಳೊಂದಿಗೆ ಆರು-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.

MOST READ: ಹೊಸ ವಿನ್ಯಾಸದೊಂದಿಗೆ ಬಿಡುಗಡೆಯಾಗಲಿದೆ ಸ್ಕೋಡಾ ಸೂಪರ್ಬ್ ಫೇಸ್‌ಲಿಫ್ಟ್

ಸ್ಥಗಿತವಾಯ್ತು ಜನಪ್ರಿಯ ನಿಸ್ಸಾನ್ ಟೆರಾನೊ ಎಸ್‍ಯುವಿ

ನಿಸ್ಸಾನ್ ತನ್ನ ಬಿಎಸ್-6 ಕಿಕ್ಸ್ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಲಾಕ್‌ಡೌನ್‌ ಮುಗಿದ ಬಳಿಕ ಈ ಹೊಸ ನಿಸ್ಸಾನ್ ಕಿಕ್ಸ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಹೊಸ ನಿಸ್ಸಾನ್ ಕಿಕ್ಸ್ ಮಾದರಿಯಲ್ಲಿ 1.3-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ.

ಸ್ಥಗಿತವಾಯ್ತು ಜನಪ್ರಿಯ ನಿಸ್ಸಾನ್ ಟೆರಾನೊ ಎಸ್‍ಯುವಿ

ನಿಸ್ಸಾನ್ ಟೆರಾನೊ ಮಾರಾಟವು ಕಡಿಮೆಯಾಗಿರುವುದರಿಂದ ನಿಸ್ಸಾನ್ ಕಂಪನಿಯು ತನ್ನ ಟೆರಾನೊ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಲಾಗಿದೆ. ನಿಸ್ಸಾನ್ ಟೆರಾನೊ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ರೆನಾಲ್ಟ್ ಡಸ್ಟರ್, ಟಾಟಾ ಹ್ಯಾರಿಯರ್, ಮಹೀಂದ್ರಾ ಎಕ್ಸ್‌ಯುವಿ 500 ಎಸ್‍ಯುವಿಗಳಿಗೆ ಪೈಪೋಟಿ ನೀಡುತಿತ್ತು

Most Read Articles

Kannada
English summary
Nissan Terrano Discontinued With No BS6 Updates In India. Read in Kannada.
Story first published: Monday, May 4, 2020, 20:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X