Just In
Don't Miss!
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಬಂಜೆತನಕ್ಕೆ ಕಾರಣವಾಗುವ ಥೈರಾಯ್ಡ್ ಲಕ್ಷಣಗಳು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಆಯ್ಕೆಯನ್ನು ಪಡೆದುಕೊಂಡ ಫೋರ್ಷೆ ಸ್ಪೋರ್ಟ್ಸ್ ಕಾರುಗಳು
ಜರ್ಮನ್ ಮೂಲದ ಸ್ಪೋರ್ಟ್ಸ್ ಕಾರು ತಯಾರಕ ಕಂಪನಿಯಾದ ಪೋರ್ಷೆ ತನ್ನ 2020ರ 718 ಸ್ಪೈಡರ್ ಮತ್ತು 718 ಕೇಮನ್ ಜಿಟಿ4 ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಪೋರ್ಷೆ 718 ಸ್ಪೈಡರ್ ಮತ್ತು ಕೇಮನ್ ಜಿಟಿ4 ಮಾದರಿಗಳು ಬ್ರ್ಯಾಂಡ್‌ನ ಎಂಟ್ರಿ ಲೆವೆಲ್ ಸ್ಪೋರ್ಟ್ಸ್ ಕಾರುಗಳಾಗಿದೆ.

ಈ 2020ರ ಪೋರ್ಷೆ 718 ಸ್ಪೈಡರ್ ಕಾರಿನ ಬೆಲೆಯು ರೂ.1.59 ಕೋಟಿ ಗಳಾಗಿದೆ. ಇನ್ನು ಹೊಸ ಪೋರ್ಷೆ ಕೇಮನ್ ಜಿಟಿ4 ಕಾರಿನ ಬೆಲೆಯು ರೂ.1.63 ಕೋಟಿಗಳಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ. ಪೋರ್ಷೆ 718 ಸ್ಪೈಡರ್ ಮತ್ತು ಕೇಮನ್ ಜಿಟಿ4 ಭಾರತೀಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್‌ನ 718 ಕುಟುಂಬಕ್ಕೆ ಎರಡು ಹೊಸ ಸೇರ್ಪಡೆಗಳಾಗಿವೆ.

ಸ್ಪೈಡರ್ ಸಾಫ್ಟ್-ಟಾಪ್ ಕನ್ವರ್ಟಿಬಲ್ ನೊಂದಿಗೆ ಕೇಮನ್ ಜಿಟಿ4 ಭಾರತೀಯ ಮಾರುಕಟ್ಟೆಯಲ್ಲಿ ಜರ್ಮನ್ ಬ್ರ್ಯಾಂಡ್‌ನಿಂದ ಎಂಟ್ರಿ ಲೆವೆಲ್ ಮಾದರಿಗಳಾಗಿದೆ. ಈ ಎರಡು ಮಾದರಿಗಳಲ್ಲಿ ಒಂದೇ ರೀತಿಯ ಎಂಜಿನ್ ಗಳನ್ನು ಅಳವಡಿಸಿದೆ.
MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಪೋರ್ಷೆ 718 ಸ್ಪೈಡರ್ ಮತ್ತು 718 ಕೇಮನ್ ಜಿಟಿ4 ಮಾದರಿಗಳಲ್ಲಿ 4.0-ಲೀಟರ್ ಆರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 415 ಬಿಹೆಚ್‍ಪಿ ಪವರ್ ಮತ್ತು 420 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಪೋರ್ಷೆ 718 ಸ್ಪೈಡರ್ ಮತ್ತು 718 ಕೇಮನ್ ಜಿಟಿ4 ಮಾದರಿಗಳಲ್ಲಿ 4.0-ಲೀಟರ್ ಆರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 415 ಬಿಹೆಚ್‍ಪಿ ಪವರ್ ಮತ್ತು 420 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಈ ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ. ಇದೀಗ 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಕೂಡ ನೀಡಲಾಗಿದೆ

ಈ ಎರಡು ಕಾರುಗಳು ಕೇವಲ 4.4 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ಅನ್ನು ಕ್ರಮಿಸುತ್ತದೆ. ಇನ್ನು ಪೋರ್ಷೆ 718 ಸ್ಪೈಡರ್ ಕಾರು 301 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದ್ದರೆ, ಪೋರ್ಷೆ 718 ಕೇಮನ್ ಜಿಟಿ4 ಕಾರು 304 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಪೋರ್ಷೆ 718 ಕೇಮನ್ ಜಿಟಿ4 ಕಾರಿನ ಹಿಂದಿನ ಮಾದರಿಗೆ ಹೋಲಿಸಿದರೆ ಸುಧಾರಿತ ಏರೋ ಪ್ಯಾಕೇಜ್‌ಗಳನ್ನು ಒಳಗೊಂಡಿದೆ. ಈ ಹೊಸ ಪ್ಯಾಕೇಜ್ ಕೇಮನ್ ಜಿಟಿ4 ತನ್ನ ಹಿಂದಿನ ಮಾದರಿಗಿಂತ 50% ಹೆಚ್ಚಿನ ಡೌನ್‌ಫೋರ್ಸ್ ಅನ್ನು ನೀಡುತ್ತದೆ.

ಈ ಹೊಸ ಪೋರ್ಷೆ 718 ಸ್ಪೈಡರ್ ಮತ್ತು ಕೇಮನ್ ಜಿಟಿ4 ಮಾದರಿಗಳು ದೇಶಿಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್‌ನ ಎಂಟ್ರಿ ಲೆವೆಲ್ ಸ್ಪೋರ್ಟ್ಸ್ ಕಾರುಗಳಾಗಿದೆ. ಈ ಪೋರ್ಷೆ 718 ಸ್ಪೈಡರ್ ಮತ್ತು ಕೇಮನ್ ಜಿಟಿ4 ಕಾರುಗಳು ಆಕರ್ಷಕ ಲುಕ್ ಮತ್ತು ಪವರ್ ಫುಲ್ ಮಾದರಿಗಳಾಗಿದೆ.