2021ರ ಪೋರ್ಷೆ ಪನಾಮೆರಾ ಕಾರಿನ ಟೀಸರ್ ಬಿಡುಗಡೆ

ಜರ್ಮನ್ ಮೂಲದ ಸ್ಪೋರ್ಟ್ ಕಾರು ತಯಾರಕ ಕಂಪನಿಯಾದ ಪೋರ್ಷೆ ತನ್ನ 2021ರ ಪನಾಮೆರಾ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದೀಗ ಪೋರ್ಷೆ ಕಂಪನಿಯು ಹೊಸ ಪನಾಮೆರಾ ಕಾರಿನ ಟೀಸರ್ ವೀಡಿಯೋವನ್ನು ಬಿಡುಗಡೆಗೊಳಿಸಿದೆ.

2021ರ ಪೋರ್ಷೆ ಪನಾಮೆರಾ ಕಾರಿನ ಟೀಸರ್ ಬಿಡುಗಡೆ

2021ರ ಪೋರ್ಷ ಪನಾಮೆರಾ ಮಾದರಿಯು ಈಗಾಗಲೇ ನೂರ್‌ಬರ್ಗ್‌ರಿಂಗ್ ಸರ್ಕ್ಯೂಟ್‌ನಲ್ಲಿ ಅತಿ ವೇಗದ ಐಷಾರಾಮಿ ಕಾರು ಎಂಬ ಬಿರುದನ್ನು ಪಡೆದುಕೊಂಡಿದೆ. ಹೊಸ ಪನಾಮೆರಾ ಕಾರು ನಾರ್ಡ್‌ಸ್ಕ್ಲೈಫ್‌ನಲ್ಲಿ ಮರ್ಸಿಡಿಸ್-ಎಎಂಜಿ ಜಿಟಿ 63 ಎಸ್ ಅನ್ನು ಹಿಂದಿಕ್ಕಿದೆ. ಹೊಸ ತಲೆಮಾರಿನ ಪೋರ್ಷೆ ಪನಾಮೆರಾ 7:29:81ರ ಲ್ಯಾಪ್ ರೆಕಾರ್ಡ್ ಮಾಡಿದೆ ಎಂದು ಹೊಸ ವೀಡಿಯೊದಲ್ಲಿ ಪೋರ್ಷೆ ಪ್ರದರ್ಶಿಸಿದೆ.

2021ರ ಪೋರ್ಷೆ ಪನಾಮೆರಾ ಕಾರಿನ ಟೀಸರ್ ಬಿಡುಗಡೆ

2021ರ ಪೋರ್ಷ ಪನಾಮೆರಾ ಕಾರು ಇದೇ ತಿಂಗಳ 26 ರಂದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣವಾಗಲಿದೆ. ಪೋರ್ಷೆ ಪನಾಮೆರಾ ಕಾರು ಸಂಪೂರ್ಣವಾದ ಸ್ಪೋರ್ಟ್ಸ್ ಕಾರು ಅಲ್ಲ. ಈ ಕಾರಿನಲ್ಲಿ ಪ್ರಯಾಣಿಕರ ಸೌಕರ್ಯಗಳತ್ತ ಗಮನ ಹರಿಸಲಾಗುತ್ತದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

2021ರ ಪೋರ್ಷೆ ಪನಾಮೆರಾ ಕಾರಿನ ಟೀಸರ್ ಬಿಡುಗಡೆ

ಪೋರ್ಷೆ ಪನಾಮೆರಾ ಟರ್ಬೊ 535 ಬಿಹೆಚ್‌ಪಿ ಪವರ್ ಮತ್ತು 770 ಎನ್‌ಎ ಟಾರ್ಕ್ ಅನ್ನು ಉತ್ಪಾದಿಸುವ ಹೈಬ್ರಿಡ್ ಎಂಜಿನ್ ಅನ್ನು ಅಳವಡಿಸುವ ಸಾದ್ಯತೆಗಳಿದೆ. ಇದರೊಂದಿಗೆ ಹಿಂದಿನ ಮಾದರಿಯಲ್ಲಿರುವಂತಹ ಎಸ್ 4.0-ಲೀಟರ್, ಟ್ವಿನ್-ಟರ್ಬೊ ವಿ8 ಎಂಜಿನ್ ಅನ್ನು ಹೊಂದಿರಲಿದೆ.

2021ರ ಪೋರ್ಷೆ ಪನಾಮೆರಾ ಕಾರಿನ ಟೀಸರ್ ಬಿಡುಗಡೆ

ಈ ಎಂಜಿನ್ 616 ಬಿಹೆಚ್‌ಪಿ ಪವರ್ ಮತ್ತು 832 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸಬಹುದು. ಈ ಕಾರಿನ ಮುಂಭಾಗದಲ್ಲಿ ಏರ್ ಡ್ಯಾಮ್ ಅನ್ನು ಹೊಂದಿದ್ದರೆ ಹಿಂಭಾಗದಲ್ಲಿ ಕ್ವಾಡ್ ಎಕ್ಸಾಸ್ಟ್ ಗಳನ್ನು ಒಳಗೊಂಡಿರುತ್ತದೆ.

MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಹೊಸ ತಲೆಮಾರಿನ ಪೋರ್ಷೆ ಪನಾಮೆರಾ ಸಹ ಇನ್ನೂ ವಿಶಾಲವಾದ ಟ್ರ್ಯಾಕ್ ಅನ್ನು ಹೊಂದಿರುತ್ತದೆ ಮತ್ತು ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು ಎಲ್‌ಇಡಿ ಟೈಲ್‌ಲೈಟ್‌ಗಳನ್ನು ಹೊಂದಿರುತ್ತದೆ. ಇನ್ನು ಪೋರ್ಷೆ ಆಕ್ಟಿವ್ ಮ್ಯಾನೇಜ್‌ಮೆಂಟ್ ಸಿಸ್ಟಂನಂತಹ ಫೀಚರ್ ಗಳನ್ನು ಹೊಂದಿರಲಿದೆ.

2021ರ ಪೋರ್ಷೆ ಪನಾಮೆರಾ ಕಾರಿನ ಟೀಸರ್ ಬಿಡುಗಡೆ

ಪೋರ್ಷೆ ಕಂಪನಿಯು ಪನಾಮೆರಾ 4 10 ಇಯರ್ಸ್ ಎಡಿಷನ್ ಅನ್ನು 2020ರ ಜೂನ್ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಈ ಪೋರ್ಷೆ ಪನಾಮೆರಾ 4 10 ಇಯರ್ಸ್ ಎಡಿಷನ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.60 ಕೋಟಿಗಳಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

2021ರ ಪೋರ್ಷೆ ಪನಾಮೆರಾ ಕಾರಿನ ಟೀಸರ್ ಬಿಡುಗಡೆ

ಈ ಹೊಸ ಪನಾಮೆರಾ 4 10 ಇಯರ್ಸ್ ಎಡಿಷನ್ ನಲ್ಲಿ 2.8-ಲೀಟರ್, ವಿ6 ಎಂಜಿನ್ ಅನ್ನು ಹೊಂದಿದೆ .ಈ ಎಂಜಿನ್ 226 ಬಿಹೆಚ್‍ಪಿ ಪವರ್ 450 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 8-ಸ್ಫೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

2021ರ ಪೋರ್ಷೆ ಪನಾಮೆರಾ ಕಾರಿನ ಟೀಸರ್ ಬಿಡುಗಡೆ

ಇನ್ನು ಹೊಸ ತಲೆಮಾರಿನ ಪೋರ್ಷೆ ಪನಾಮೆರಾ ಕಾರಿನಲ್ಲಿ ಸುರಕ್ಷತೆಗಾಗಿ ಡ್ಯುಯಲ್-ಸ್ಟೇಜ್ ಏರ್‌ಬ್ಯಾಗ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ಎಬಿಎಸ್ ವಿಥ್ ಇಬಿಡಿ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಂ ಮತ್ತು ಹಿಲ್ ಹೋಲ್ಡ್ ಅಸಿಸ್ಟ್ ಅನ್ನು ಹೊಂದಿರಲಿದೆ.

Most Read Articles

Kannada
English summary
2021 Porsche Panamera Teased Ahead Of Global Debut. Read In Kannada.
Story first published: Friday, August 21, 2020, 9:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X