ಡ್ಯುಯಲ್ ಟೋನ್ ನಲ್ಲಿ ಮಾಡಿಫೈಗೊಂಡ ಪ್ರೀಮಿಯರ್ ಪದ್ಮಿನಿ

ಭಾರತದಲ್ಲಿದ್ದ ಪ್ರೀಮಿಯರ್ ಪದ್ಮಿನಿ ಕಾರನ್ನು ರಸ್ತೆ ರಾಣಿ ಎಂದು ಕರೆಯಲಾಗುತ್ತಿತ್ತು. ಈ ಕಾರಿಗೆ 13ನೇ ಶತಮಾನದ ಮೇವಾರ್ ರಾಣಿ ಪದ್ಮಿನಿಯವರ ಹೆಸರಿಡಲಾಗಿತ್ತು. ಈ ಕಾರು ಭಾರತದಲ್ಲಿ 1964ರಿಂದ 2000ರವರೆಗೆ ಉತ್ಪಾದನೆಯಾಗುತ್ತಿತ್ತು.

ಡ್ಯುಯಲ್ ಟೋನ್ ನಲ್ಲಿ ಮಾಡಿಫೈಗೊಂಡ ಪ್ರೀಮಿಯರ್ ಪದ್ಮಿನಿ

ಮೊದಲಿಗೆ ಈ ಕಾರ್ ಅನ್ನು ಫಿಯೆಟ್ 1100 ಡಿಲೈಟ್ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. 1974ರಲ್ಲಿ ಈ ಕಾರಿನ ಹೆಸರನ್ನು ಪದ್ಮಿನಿ ಎಂದು ಬದಲಿಸಲಾಯಿತು. ಈ ಕಾರು 1970 ಹಾಗೂ 1980ರ ದಶಕಗಳಲ್ಲಿ ಹೆಚ್ಚು ಜನಪ್ರಿಯವಾಗಿತ್ತು. ಅನೇಕ ಬಾಲಿವುಡ್ ತಾರೆಯರು ಈ ಮಿನಿ ಸೆಡಾನ್ ಕಾರಿಗೆ ಫಿದಾ ಆಗಿದ್ದರು.

ಡ್ಯುಯಲ್ ಟೋನ್ ನಲ್ಲಿ ಮಾಡಿಫೈಗೊಂಡ ಪ್ರೀಮಿಯರ್ ಪದ್ಮಿನಿ

ಆ ದಿನಗಳಲ್ಲಿ ಈ ಕಾರು ಹಿಂದೂಸ್ತಾನ್ ಮೋಟಾರ್ಸ್ ಕಂಪನಿಯ ಅಂಬಾಸಿಡರ್ ಹಾಗೂ ಸ್ಟ್ಯಾಂಡರ್ಡ್ ಹೆರಾಲ್ಡ್ ಕಾರುಗಳಿಗೆ ಪೈಪೋಟಿ ನೀಡುತ್ತಿತ್ತು.ಉತ್ಪಾದನೆಯನ್ನು ನಿಲ್ಲಿಸಲಾಗಿರುವ ಕಾರಣಕ್ಕೆ ಈ ಕಾರುಗಳು ರಸ್ತೆಗಳಲ್ಲಿ ಕಂಡು ಬರುತ್ತಿಲ್ಲ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಡ್ಯುಯಲ್ ಟೋನ್ ನಲ್ಲಿ ಮಾಡಿಫೈಗೊಂಡ ಪ್ರೀಮಿಯರ್ ಪದ್ಮಿನಿ

ಈ ಕಾರುಗಳನ್ನು ಹೊಂದಿರುವವರು ಕಾರು ಪ್ರದರ್ಶನಗಳಲ್ಲಿ ಇವುಗಳನ್ನು ಪ್ರದರ್ಶಿಸುತ್ತಾರೆ. ಪುಣೆ ಮೂಲದ ಕಾರು ಮಾಡಿಫಿಕೇಷನ್ ಕಂಪನಿಯಾದ ಆರ್ ಎ ಎಸ್ ಎನ್ ಡಿಸೈನ್ಸ್ 1991ರ ಮಾದರಿಯ ಪ್ರೀಮಿಯರ್ ಪದ್ಮಿನಿ ಕಾರ್ ಅನ್ನು ಮಾಡಿಫೈಗೊಳಿಸಿದೆ.

ಡ್ಯುಯಲ್ ಟೋನ್ ನಲ್ಲಿ ಮಾಡಿಫೈಗೊಂಡ ಪ್ರೀಮಿಯರ್ ಪದ್ಮಿನಿ

ಮಾಡಿಫೈಗೊಂಡ ಕಾರು ಹಳೆಯ ವಿನ್ಯಾಸದಲ್ಲಿದ್ದರೂ ಕಾರಿನ ಲುಕ್ ಬದಲಿಸಲಾಗಿದೆ. ಕಾರಿನ ಎಕ್ಸ್ ಟಿರಿಯರ್ ಹಾಗೂ ಇಂಟಿರಿಯರ್ ಗಳಿಗೆ ಡ್ಯುಯಲ್ ಟೋನ್ ಬಣ್ಣವನ್ನು ನೀಡಲಾಗಿದೆ. ಕಾರಿನ ಮುಂಭಾಗವು ಬಿಳಿ ಬಣ್ಣವನ್ನು ಹೊಂದಿದ್ದರೆ, ಹಿಂಭಾಗವು ಕಿತ್ತಳೆ ಬಣ್ಣವನ್ನು ಹೊಂದಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಡ್ಯುಯಲ್ ಟೋನ್ ನಲ್ಲಿ ಮಾಡಿಫೈಗೊಂಡ ಪ್ರೀಮಿಯರ್ ಪದ್ಮಿನಿ

ಈ ಕಾರಿನ ಹೆಡ್‌ಲೈಟ್, ಟೇಲ್ ಲೈಟ್‌, ಬಂಪರ್‌, ಮಿರರ್ ಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಕಾರಿನ ಎಕ್ಸ್ ಟಿರಿಯರ್ ನಲ್ಲಿರುವ ರಿಮ್ ಹಾಗೂ ಟಯರ್ ಗಳನ್ನು ಬದಲಾಯಿಸಲಾಗಿದೆ.

ಡ್ಯುಯಲ್ ಟೋನ್ ನಲ್ಲಿ ಮಾಡಿಫೈಗೊಂಡ ಪ್ರೀಮಿಯರ್ ಪದ್ಮಿನಿ

ಕಾರಿನಲ್ಲಿ ಹೊಸ ದಪ್ಪವಾದ ಟಯರ್‌ಗಳನ್ನು ಅಳವಡಿಸಲಾಗಿದೆ. ಸ್ಟೀಲ್ ರಿಮ್ ಟಯರ್ ಗಳು ಕಾರಿನ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿವೆ. ಇಂಟಿರಿಯರ್ ನಲ್ಲಿ ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್ ಹಾಗೂ ಕಿತ್ತಳೆ ಬಣ್ಣದ ಸ್ಟೀಯರಿಂಗ್ ನೀಡಲಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಡ್ಯುಯಲ್ ಟೋನ್ ನಲ್ಲಿ ಮಾಡಿಫೈಗೊಂಡ ಪ್ರೀಮಿಯರ್ ಪದ್ಮಿನಿ

ಹಳೆಯ ಸ್ಟೀಯರಿಂಗ್ ಬದಲಿಗೆ ವುಡ್ ಫಿನಿಷಿಂಗ್ ಹೊಂದಿರುವ 4 ಸ್ಪೋಕಿನ ಹೊಸ ಸ್ಟೀಯರಿಂಗ್ ನೀಡಲಾಗಿದೆ. ಎಲ್ಲಾ ಸೀಟುಗಳ ಮೇಲೆ ನೀಲಿ ಹಾಗೂ ಬಿಳಿ ಬಣ್ಣದ ಬಟ್ಟೆಗಳನ್ನು ಮುಚ್ಚಲಾಗಿದೆ.

ಈ ಕಾರಿನಲ್ಲಿ ಅಳವಡಿಸಲಾಗಿರುವ 1.1-ಲೀಟರಿನ 4-ಸಿಲಿಂಡರ್ ಪೆಟ್ರೋಲ್ ಎಂಜಿನ್ 47 ಬಿಹೆಚ್‌ಪಿ ಪವರ್ ಹಾಗೂ 71 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.ಈ ಕಾರು 4 ಸ್ಪೀಡಿನ ಗೇರ್‌ಬಾಕ್ಸ್ ಹೊಂದಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಡ್ಯುಯಲ್ ಟೋನ್ ನಲ್ಲಿ ಮಾಡಿಫೈಗೊಂಡ ಪ್ರೀಮಿಯರ್ ಪದ್ಮಿನಿ

ಪ್ರೀಮಿಯರ್ ಪದ್ಮಿನಿ ಕಾರಿನ ಒಟ್ಟು ತೂಕ 900 ಕೆಜಿಗಳಾಗಿದ್ದು, ಈ ಕಾರು ಪ್ರತಿ ಗಂಟೆಗೆ 130 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಈ ಕಾರಿನ ಬಗ್ಗೆ ಜನರು ಇಂದಿಗೂ ಸಹ ಉತ್ಸುಕರಾಗಿದ್ದಾರೆ. ಈ ಕಾರು ತನ್ನೊಂದಿಗೆ ಹಲವಾರು ಐತಿಹಾಸಿಕ ಸಂಗತಿಗಳನ್ನು ಉಳಿಸಿಕೊಂಡಿದೆ.

Most Read Articles

Kannada
English summary
Pune based RASN designs modifies premier padmini in dual paint. Read in Kannada.
Story first published: Friday, July 31, 2020, 12:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X