ರೇಂಜ್ ರೋವರ್ ಕಾರನ್ನು ಹೊಂದಿರುವ ಬಾಲಿವುಡ್ ಚೆಲುವೆಯರಿವರು

ಬಾಲಿವುಡ್ ಸ್ಟಾರ್‍‍ಗಳಿಗೆ ರೀಲ್ ಲೈಫ್ ನಲ್ಲಿ ಮಾತ್ರವಲ್ಲದೇ, ರಿಯಲ್ ಲೈಫ್‍‍ನಲ್ಲೂ ಕಾರುಗಳ ಕ್ರೇಜ್ ಹೆಚ್ಚೆ ಇದೆ. ಬಾಲಿವುಡ್ ಸ್ಟಾರ್‍‍ಗಳು ಐಷಾರಾಮಿ ಮತ್ತು ದುಬಾರಿ ಕಾರುಗಳನ್ನು ಇಷ್ಟಪಡುತ್ತಾರೆ. ಬಾಲಿವುಡ್ ಸ್ಟಾರ್‍‍‍ಗಳ ಮೆಚ್ಚಿನ ವಾಹನ ರೇಂಜ್ ರೋವರ್ ಆಗಿದೆ.

ರೇಂಜ್ ರೋವರ್ ಕಾರನ್ನು ಹೊಂದಿರುವ ಬಾಲಿವುಡ್ ಚೆಲುವೆಯರಿವರು

ಬಾಲಿವುಡ್‍‍ಗೂ ಮತ್ತು ರೇಂಜ್ ರೋವರ್ ಕಾರಿಗೂ ಅವಿನಾಭಾವ ಸಂಬಂಧವಿದೆ. ರೇಂಜ್ ರೋವರ್ ಕಾರಿನ ಕ್ರೇಜ್ ಕೇವಲ ಬಾಲಿವುಡ್ ನಟರಿಗೆ ಮಾತ್ರವಲ್ಲದೇ ನಟಿಯರಿಗೂ ಕೂಡ ಇದೆ. ಬಾಲಿವುಡ್‍ನ ಜನಪ್ರಿಯ ನಟಿಯರು ರೇಂಜ್ ರೋವರ್ ಕಾರನ್ನು ಹೊಂದಿದ್ದಾರೆ. ರೇಂಜ್ ರೋವರ್ ಎಸ್‍‍ಯುವಿಯನ್ನು ಹೊಂದಿರುವ ನಟಿಯರ ಬಗ್ಗೆ ಮಾಹಿತಿ ಇಲ್ಲಿದೆ.

ರೇಂಜ್ ರೋವರ್ ಕಾರನ್ನು ಹೊಂದಿರುವ ಬಾಲಿವುಡ್ ಚೆಲುವೆಯರಿವರು

ಕತ್ರಿನಾ ಕೈಫ್

ಬಾಲಿವುಡ್‍ನ ಬಹು ಬೇಡಿಕೆಯ ನಟಿ ಕತ್ರಿನಾ ಕೈಫ್ ಅವರು ರೇಂಜ್ ರೋವರ್ ಕಾರನ್ನು ಹೊಂದಿದ್ದಾರೆ. ಈ ನಟಿ ಹಲವು ವರ್ಷಗಳ ಕಾಲ ಆಡಿ ಕ್ಯೂ7 ಬಳಸಿದ ಬಳಿಕ ಇತ್ತೀಚೆಗೆ ರೇಂಜ್ ರೋವರ್ ಎಸ್‍ಇ ವೋಗ್‍ ಕಾರಿನಲ್ಲಿ ಸಂಚರಿಸುತ್ತಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಕತ್ರಿನಾ ಕೈಫ್ ಅವರಿಗೆ ಈ ರೇಂಜ್ ರೋವರ್ ಕಾರನ್ನು ಗಿಫ್ಟ್ ನೀಡಿದ್ದಾರೆ. ಈ ಕಾರಿನ ಆನ್‍-ರೋಡ್ ಬೆಲೆಯು ರೂ.2.72 ಕೋಟಿಗಳಾಗಿದೆ.

ರೇಂಜ್ ರೋವರ್ ಕಾರನ್ನು ಹೊಂದಿರುವ ಬಾಲಿವುಡ್ ಚೆಲುವೆಯರಿವರು

ಆಲಿಯಾ ಭಟ್

ಬಾಲಿವುಡ್ ಚೆಲುವೆ ಆಲಿಯಾ ಭಟ್‍‍ರವರು ರೇಂಜ್ ರೋವರ್ ವೋಗ್ ಅನ್ನು ಹೊಂದಿದ್ದಾರೆ. ಈ ನಟಿ ಹಲವು ವರ್ಷಗಳ ಕಾಲ ಆಡಿ ಕ್ಯೂ7 ಕಾರು ಬಳಸಿದ ಬಳಿಕ ರೇಂಜ್ ರೋವರ್ ಅನ್ನು ಬಳಸಲು ಪ್ರಾರಂಭಿಸಿದರು. ಆಲಿಯಾ ಭಟ್ ಬಳಿ ರೇಂಜ್ ರೋವರ್ ಅಲ್ಲದೇ ಹಲವಾರು ದುಬಾರಿ ಮತ್ತು ಐಷಾರಾಮಿ ಕಾರುಗಳಿವೆ.

ರೇಂಜ್ ರೋವರ್ ಕಾರನ್ನು ಹೊಂದಿರುವ ಬಾಲಿವುಡ್ ಚೆಲುವೆಯರಿವರು

ಆಲಿಯಾ ಭಟ್ ಬಳಿ ಇರುವ ರೇಂಜ್ ರೋವರ್ ಕಾರಿನ ಬೆಲೆಯು ಸುಮಾರು ರೂ.2 ಕೋಟಿ ಗಳಾಗಿದೆ. ಈ ರೇಂಜ್ ರೋವರ್ ವೋಗ್‍ 3.0 ಲೀಟರಿನ ವಿ6 ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 296 ಬಿ‍‍ಹೆಚ್‍‍ಪಿ ಪವರ್ ಮತ್ತು 400 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ರೇಂಜ್ ರೋವರ್ ಕಾರನ್ನು ಹೊಂದಿರುವ ಬಾಲಿವುಡ್ ಚೆಲುವೆಯರಿವರು

ಮಲೈಕಾ ಅರೋರಾ

ಮಲೈಕಾ ಅರೋರಾ ಖಾನ್ ಅವರ ಬಳಿ ರೇಂಜ್ ರೋವರ್ ವೋಗ್ ಸೇರಿದಂತೆ ಹಲವಾರು ದುಬಾರಿ ಐಷಾರಾಮಿ ಕಾರುಗಳಿವೆ. ಇವರ ಬಳಿ ಇರುವ ರೇಂಜ್ ರೋವರ್ ವೋಗ್ ಕಾರು 3.0 ಲೀಟರಿನ ವಿ6 ಟರ್ಬೂ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 335 ಬಿ‍‍ಹೆಚ್‍‍ಪಿ ಪವರ್ ಮತ್ತು 450 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ರೇಂಜ್ ರೋವರ್ ಕಾರನ್ನು ಹೊಂದಿರುವ ಬಾಲಿವುಡ್ ಚೆಲುವೆಯರಿವರು

ಅನುಷ್ಕಾ ಶರ್ಮಾ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ರೇಂಜ್ ರೋವರ್ ವೋಗ್ ಹೊಂದಿದ್ದಾರೆ. ವಿಶೇಷವೆಂದರೆ ಇದೇ ರೀತಿಯ ರೇಂಜ್ ರೋವರ್ ವೋಗ್ ಕಾರನ್ನು ಟೀಂ ಇಂಡಿಯಾ ನಾಯಕ ಮತ್ತು ಅನುಷ್ಕಾ ಶರ್ಮಾ ಪತಿ ವಿರಾಟ್ ಕೊಹ್ಲಿ ಅವರು ಹೊಂದಿದ್ದಾರೆ.

ರೇಂಜ್ ರೋವರ್ ಕಾರನ್ನು ಹೊಂದಿರುವ ಬಾಲಿವುಡ್ ಚೆಲುವೆಯರಿವರು

ಈ ರೇಂಜ್ ರೋವರ್ ಕಾರ್ ಅನ್ನು ವಿರುಷ್ಕಾ ದಂಪತಿಗಳು ಸಿಟಿಯಲ್ಲಿ ತಿರುಗಾಡಲು ಬಳಸುತ್ತಾರೆ. ಈ ಕಾರಿನಲ್ಲಿ 4.4 ಲೀಟರಿನ ವಿ8 ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 355 ಬಿ‍‍ಹೆಚ್‍‍ಪಿ ಪವರ್ ಮತ್ತು 740 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ರೇಂಜ್ ರೋವರ್ ಕಾರನ್ನು ಹೊಂದಿರುವ ಬಾಲಿವುಡ್ ಚೆಲುವೆಯರಿವರು

ದಿಶಾ ಪಟಾನಿ

ಇತ್ತೀಚೆಗೆ ಬಾಲಿವುಡ್ ಗ್ಲಾಮರಸ್ ಕ್ವೀನ್ ದಿಶಾ ಪಟಾನಿ ಅವರು ಲ್ಯಾಂಡ್ ರೋವರ್ ಅನ್ನು ಖರೀದಿಸಿದ್ದಾರೆ. ಇವರು ಖರೀದಿಸಿದ ಹೊಸ ರೇಂಜ್ ರೋವರ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.52 ಕೋಟಿಗಳಾಗಿದೆ. ದಿಶಾ ಪಟಾನಿ ಅವರು ಷೆವರ್ಲೆ ಕ್ರೂಜ್ ಮತ್ತು ಹೋಂಡಾ ಸಿವಿಕ್ ಮತ್ತು ಐಷಾರಾಮಿ ಕಾರುಗಳಾದ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಮತ್ತು ಬಿಎಂಡಬ್ಲ್ಯು 5-ಸೀರಿಸ್ ಅನ್ನು ಸಹ ಹೊಂದಿದ್ದಾರೆ.

ರೇಂಜ್ ರೋವರ್ ಕಾರನ್ನು ಹೊಂದಿರುವ ಬಾಲಿವುಡ್ ಚೆಲುವೆಯರಿವರು

ಬಾಲಿವುಡ್ ನಟಿ ಖರೀದಿಸಿರುವ ರೇಂಜ್ ರೋವರ್ ಸ್ಪೋರ್ಟ್ ಕಾರಿನ ಹೆಚ್‍ಎಸ್‍ಇ ಪೆಟ್ರೋಲ್ ರೂಪಾಂತರವಾಗಿದೆ. ಈ ಎಸ್‍‍ಯು‍ವಿಯಲ್ಲಿರುವ ಎಂಜಿನ್ 2.0 ಲೀಟರ್ ಪೆಟ್ರೋಲ್ ಯುನಿಟ್ ಅಥವಾ 3.0 ಲೀಟರ್ ಪೆಟ್ರೋಲ್ ಎಂಜಿನ್ ಎಂಬುದೇ ಎಂದು ತಿಳಿದುಬಂದಿಲ್ಲ.

ರೇಂಜ್ ರೋವರ್ ಕಾರನ್ನು ಹೊಂದಿರುವ ಬಾಲಿವುಡ್ ಚೆಲುವೆಯರಿವರು

ಕರೀನಾ ಕಪೂರ್

ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಕರೀನಾ ಕಪೂರ್‌ ಅವರು ರೇಂಜ್ ರೋವರ್ ಅನ್ನು ಹೊಂದಿದ್ದಾರೆ. ರೇಂಜ್ ರೋವರ್ ಕಾರನ್ನು ಹಲವಾರು ವರ್ಷಗಳ ಕಾಲ ಬಳಿಸಿದ್ದಾರೆ. ಇತ್ತೀಚಿಗೆ ಹೆಚ್ಚಾಗಿ ಜೀಪ್ ಗ್ರ್ಯಾಂಡ್ ಚೆರೋಕಿ ಎಸ್‍ಯುವಿಯನ್ನು ಬಳಸುತ್ತಿದ್ದಾರೆ.

Most Read Articles

Kannada
English summary
Bollywood divas with their Range Rover SUVs. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X