ಕರೋನಾ ವೈರಸ್ ಭೀತಿ: ನೆಕ್ಸಾನ್ ಇವಿ ಖರೀದಿಗಾಗಿ ವರ್ಚುವಲ್ ಶೋರೂಂ ತೆರೆದ ಟಾಟಾ ಮೋಟಾರ್ಸ್

ಕರೋನಾ ವೈರಸ್‌ ಭೀತಿ ನಡುವೆ ವಾಣಿಜ್ಯ ಚಟುವಟಿಕೆಗಳು ಹೊಸ ಸವಾಲಾಗಿ ಪರಿಣಮಿಸಿದ್ದು, ಟಾಟಾ ಮೋಟಾರ್ಸ್ ಕೂಡಾ ಹಲವಾರು ಸುರಕ್ಷಾ ಮಾರ್ಗಸೂಚಿಗಳೊಂದಿಗೆ ಕಾರು ಮಾರಾಟವನ್ನು ಕೈಗೊಳ್ಳುತ್ತಿದೆ.

ನೆಕ್ಸಾನ್ ಇವಿ ಖರೀದಿಗಾಗಿ ವರ್ಚುವಲ್ ಶೋರೂಂ ತೆರೆದ ಟಾಟಾ ಮೋಟಾರ್ಸ್

ಕರೋನಾ ವೈರಸ್ ಪರಿಣಾಮ ಕಳೆದ ಕೆಲ ತಿಂಗಳ ಹಿಂದೆ ಸಂಪೂರ್ಣವಾಗಿ ನೆಲಕಚ್ಚಿದ್ದ ಹೊಸ ವಾಹನಗಳ ಮಾರಾಟ ಪ್ರಮಾಣವು ಇದೇ ಕರೋನಾ ಪರಿಣಾಮವೇ ಭಾರೀ ಪ್ರಮಾಣದಲ್ಲಿ ಬೇಡಿಕೆ ಹೆಚ್ಚಳವಾಗಲು ಕಾರಣವಾಗಿದ್ದು, ಟಾಟಾ ಕಾರು ಮಾರಾಟವು ಕಳೆದ ವರ್ಷಕ್ಕಿಂತಲೂ ದುಪ್ಪಟ್ಟು ಹೆಚ್ಚಳವಾಗಿದೆ. ಹೌದು, ಟಾಟಾ ಮೋಟಾರ್ಸ್ ನಿರ್ಮಾಣದ ಕಾರುಗಳ ಮಾರಾಟ ಪ್ರಮಾಣವು ಈ ವರ್ಷದ ಅಗಸ್ಟ್ ತಿಂಗಳಿನಲ್ಲಿ ಶೇ. 154ರಷ್ಟು ಏರಿಕೆಯಾಗಿದ್ದು, ಅಗಸ್ಟ್ ತಿಂಗಳಿನಲ್ಲಿ ಒಟ್ಟು 18,538 ಯುನಿಟ್ ಮಾರಾಟ ಮಾಡುವ ಮೂಲಕ ಮೂರನೇ ಅತಿ ದೊಡ್ಡ ಕಾರು ಮಾರಾಟ ಕಂಪನಿಯಾಗಿ ಹೊರಹೊಮ್ಮಿದೆ.

ನೆಕ್ಸಾನ್ ಇವಿ ಖರೀದಿಗಾಗಿ ವರ್ಚುವಲ್ ಶೋರೂಂ ತೆರೆದ ಟಾಟಾ ಮೋಟಾರ್ಸ್

ಕರೋನಾ ವೈರಸ್‌ನಿಂದಾಗಿ ಆರಂಭದಲ್ಲಿ ಭಾರೀ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಬಹುತೇಕ ಆಟೋ ಕಂಪನಿಗಳು ಇದೀಗ ಕರೋನಾ ವೈರಸ್‌ನಿಂದಾಗಿ ಹೊಸ ವಾಹನಗಳ ಮಾರಾಟದಲ್ಲಿ ಅತ್ಯಧಿಕ ಬೇಡಿಕೆ ಪಡೆದುಕೊಳ್ಳುತ್ತಿದ್ದು, ವೈರಸ್ ಭೀತಿಯಿಂದಾಗಿ ಬಹುತೇಕರು ಸ್ವಂತ ವಾಹನಗಳ ಬಳಕೆಗೆ ಆದ್ಯತೆ ನೀಡುತ್ತಿರುವುದು ಈ ಬೆಳವಣಿಗೆ ಪ್ರಮುಖ ಕಾರಣವಾಗಿದೆ.

ನೆಕ್ಸಾನ್ ಇವಿ ಖರೀದಿಗಾಗಿ ವರ್ಚುವಲ್ ಶೋರೂಂ ತೆರೆದ ಟಾಟಾ ಮೋಟಾರ್ಸ್

ಈ ಹಿನ್ನಲೆಯಲ್ಲಿ ಕಾರು ಮಾರಾಟ ಹೆಚ್ಚುತ್ತಿರುವುದರಿಂದ ನೆಕ್ಸಾನ್ ಇವಿ ಮಾರಾಟವನ್ನು ಉತ್ತೇಜಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಇವಿ ಕಾರು ಮಾರಾಟಕ್ಕಾಗಿ ಪ್ರತ್ಯೇಕವಾದ ಪ್ಲ್ಯಾಟ್‌ಫಾರ್ಮ್ ತೆರೆದಿದ್ದು, ಗ್ರಾಹಕರು ಶೋರೂಂಗಳಿಗೆ ಭೇಟಿ ನೀಡದೆ ನಿಮ್ಮ ಇಷ್ಟದ ಮಾದರಿಯನ್ನು ಆನ್‌ಲೈನ್ ಮೂಲಕವೇ ವಿಕ್ಷಣೆ ಮಾಡುವ ಅವಕಾಶ ನೀಡಿದೆ.

ನೆಕ್ಸಾನ್ ಇವಿ ಖರೀದಿಗಾಗಿ ವರ್ಚುವಲ್ ಶೋರೂಂ ತೆರೆದ ಟಾಟಾ ಮೋಟಾರ್ಸ್

ವರ್ಚುವಲ್ ಶೋರೂಂನಲ್ಲಿ ನೆಕ್ಸಾನ್ ಇವಿ ಮಾದರಿ ಮಾತ್ರ ಲಭ್ಯವಿದ್ದು, ಇದು ಗ್ರಾಹಕರಿಗೆ ನೇರವಾಗಿ ಶೋರೂಂ ಭೇಟಿ ನೀಡಿದ ಅನುಭವವನ್ನೇ ನೀಡುತ್ತದೆ. ಇದು ಸದ್ಯ ಕರೋನಾ ವೈರಸ್ ಪರಿಣಾಮ ಗ್ರಾಹಕರಿಗೂ ಮತ್ತು ಶೋರೂಂ ಸಿಬ್ಬಂದಿಯ ಆರೋಗ್ಯ ದೃಷ್ಠಿಯಿಂದಲೂ ಉತ್ತಮ ಕ್ರಮವಾಗಿದ್ದು, ವೈರಸ್ ಹರಡುವಿಕೆಯನ್ನು ತಪ್ಪಿಸಲು ಅನುಕೂಲಕವಾಗಲಿದೆ.

ನೆಕ್ಸಾನ್ ಇವಿ ಖರೀದಿಗಾಗಿ ವರ್ಚುವಲ್ ಶೋರೂಂ ತೆರೆದ ಟಾಟಾ ಮೋಟಾರ್ಸ್

ಹೊಸ ಸುರಕ್ಷಾ ಕ್ರಮಗಳೊಂದಿಗೆ ವಾಹನ ಮಾರಾಟವನ್ನು ಕೈಗೊಳ್ಳುತ್ತಿರುವ ಆಟೋ ಕಂಪನಿಗಳು ಸೋಂಕು ಹರಡದಂತೆ ಸಾಕಷ್ಟು ಎಚ್ಚರಿಕೆ ವಹಿಸುತ್ತಿದ್ದು, ವಾಹನ ಖರೀದಿಗೆ ಸುಲಭವಾಗುವಂತೆ ಆನ್‌ಲೈನ್ ವಾಹನ ಮಾರಾಟ ಮಳಿಗೆಗಳಿಗೆ ಹೆಚ್ಚು ಆದ್ಯತೆ ನೀಡುತ್ತಿವೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ನೆಕ್ಸಾನ್ ಇವಿ ಖರೀದಿಗಾಗಿ ವರ್ಚುವಲ್ ಶೋರೂಂ ತೆರೆದ ಟಾಟಾ ಮೋಟಾರ್ಸ್

ಕಾರು ಖರೀದಿದಾರರು ತಮ್ಮ ಇಷ್ಟದ ವಾಹನಗಳ ಬಗೆಗೆ ತಿಳಿದುಕೊಳ್ಳಲು ಶೋರೂಂಗೆ ನೇರ ಭೇಟಿ ನೀಡದೆ ಮನೆಯಲ್ಲೇ ಕುಳಿತು ಶೋರೂಂ ಮಾದರಿಯಲ್ಲೇ ವರ್ಚುವಲ್ ಶೋರೂಂ ಅನ್ನು ವೀಕ್ಷಿಸಿಬಹುದಾಗಿದ್ದು, 3ಡಿ ತಂತ್ರಜ್ಞಾನದ ಮೂಲಕ ನಿಮ್ಮ ಆಯ್ಕೆ ಕಾರಿನ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತದೆ.

ನೆಕ್ಸಾನ್ ಇವಿ ಖರೀದಿಗಾಗಿ ವರ್ಚುವಲ್ ಶೋರೂಂ ತೆರೆದ ಟಾಟಾ ಮೋಟಾರ್ಸ್

ವರ್ಚುವಲ್ ಶೋರೂಂ ನಲ್ಲಿ ಖರೀದಿಗೆ ಲಭ್ಯವಿರುವ ಕಾರು ಮಾದರಿಯ ವೆರಿಯೆಂಟ್, ತಾಂತ್ರಿಕ ಅಂಶಗಳು, ಬೆಲೆ, ಮತ್ತು ತಾಂತ್ರಿಕ ಅಂಶಗಳನ್ನು ನೇರವಾಗಿ ವೀಕ್ಷಣೆ ಮಾಡಬಹುದಾಗಿದ್ದು, ಸದ್ಯ ವರ್ಚುವಲ್ ಶೋರೂಂನಲ್ಲಿ ನೆಕ್ಸಾನ್ ಇವಿ ಮಾದರಿಯನ್ನು ಮಾತ್ರ ಪ್ರದರ್ಶನ ಮಾಡಲಾಗಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ನೆಕ್ಸಾನ್ ಇವಿ ಖರೀದಿಗಾಗಿ ವರ್ಚುವಲ್ ಶೋರೂಂ ತೆರೆದ ಟಾಟಾ ಮೋಟಾರ್ಸ್

ಇನ್ನು ಸೆಪ್ಟೆಂಬರ್ 9ರಂದು ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಆಯೋಜಿಸಲಾಗುತ್ತಿರುವ ವರ್ಲ್ಡ್ ಇವಿ ಡೇ ಆಚರಣೆಯ ವಿಶೇಷವಾಗಿ ನೆಕ್ಸಾನ್ ಇವಿ ಖರೀದಿಗಾಗಿ ವರ್ಚುವಲ್ ಶೋರೂಂ ತೆರೆಯಲಾಗಿದ್ದು, ನೆಕ್ಸಾನ್ ಇವಿ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13.99 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.15.99 ಲಕ್ಷ ಬೆಲೆ ಪಡೆದುಕೊಂಡಿದೆ.

ನೆಕ್ಸಾನ್ ಇವಿ ಖರೀದಿಗಾಗಿ ವರ್ಚುವಲ್ ಶೋರೂಂ ತೆರೆದ ಟಾಟಾ ಮೋಟಾರ್ಸ್

ನೆಕ್ಸಾನ್ ಎಲೆಕ್ಟ್ರಿಕ್ ಕಾರು ಎಕ್ಸ್‌ಎಂ, ಎಕ್ಸ್‌ಝಡ್ ಪ್ಲಸ್, ಎಕ್ಸ್‌ಝಡ್‍ ಪ್ಲಸ್ ಲಕ್ಸ್ ಎನ್ನುವ ಮೂರು ಪ್ರಮುಖ ವೆರೆಯೆಂಟ್‌ಗಳಲ್ಲಿ ಬಿಡುಗಡೆಗೊಳಿಸಲಾಗಿದ್ದು, ಮೂರು ವೆರಿಯೆಂಟ್‌ಗಳಲ್ಲೂ ಹಲವಾರು ಹೊಸ ಫೀಚರ್ಸ್‌ಗಳಿವೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ನೆಕ್ಸಾನ್ ಇವಿ ಖರೀದಿಗಾಗಿ ವರ್ಚುವಲ್ ಶೋರೂಂ ತೆರೆದ ಟಾಟಾ ಮೋಟಾರ್ಸ್

ಎ‍ಆರ್‌ಎಐ ಪ್ರಮಾಣ ಪತ್ರದಂತೆ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಒಂದು ಬಾರಿಗೆ ಪೂರ್ತಿಯಾಗಿ ಚಾರ್ಜ್ ಆದಲ್ಲಿ ಗರಿಷ್ಠ 312 ಕಿ.ಮೀವರೆಗೂ ಚಲಿಸುತ್ತದೆ ಎನ್ನಲಾಗಿದ್ದು, ಆದರೆ ನೈಜ ಪರಿಸ್ಥಿತಿಗಳಿಗೆ ಅನುಗುಣವಾಗಿ ಈ ಕಾರು 250 ಕಿ.ಮೀನಿಂದ- 300ಕಿ.ಮೀವರೆಗೂ ಚಲಿಸುವುವುದು ಫಸ್ಟ್ ಡ್ರೈವ್‌ ಟೆಸ್ಟಿಂಗ್‌ನಲ್ಲಿ ಸಾಬೀತಾಗಿದೆ.

Most Read Articles

Kannada
English summary
Tata Motors Launches ‘NEXON EV 3D Commerce. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X