ಟಾಟಾ ನೆಕ್ಸಾನ್ ಬಿಎಸ್-6 ಪೆಟ್ರೋಲ್ ಕಾರಿನ ಮೈಲೇಜ್ ಮಾಹಿತಿ ಹೀಗಿದೆ..

ಟಾಟಾ ಉತ್ಪಾದನೆಯ ಜನಪ್ರಿಯ ಕಾರುಗಳಲ್ಲಿ ಒಂದಾಗಿರುವ ನೆಕ್ಸಾನ್ ಕಾರು ಗ್ರಾಹಕರ ಬೇಡಿಕೆಯಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಹೊಸ ಕಾರು ಇದೀಗ ಬಿಎಸ್-6 ಎಂಜಿನ್‌ನೊಂದಿಗೆ ಮತ್ತಷ್ಟು ಬಲಿಷ್ಠ ಮತ್ತು ಹೆಚ್ಚಿನ ಮಟ್ಟದ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಟಾಟಾ ನೆಕ್ಸಾನ್ ಬಿಎಸ್-6 ಪೆಟ್ರೋಲ್ ಕಾರಿನ ಮೈಲೇಜ್ ಮಾಹಿತಿ ಹೀಗಿದೆ..

ಹೊಸ ಎಂಜಿನ್ ಪ್ರೇರಿತ ನೆಕ್ಸಾನ್ ಮಾದರಿಯಲ್ಲಿ ಈ ಬಾರಿ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗಿದ್ದು, ಹೆಚ್ಚಿನ ಪ್ರಮಾಣದ ಸುರಕ್ಷತಾ ಫೀಚರ್‍‍ಗಳನ್ನು ಅಳವಡಿಸಲಾಗಿದೆ. ಜೊತೆಗೆ ಹೊಸ ಕಾರಿನ ಎಂಜಿನ್ ಉನ್ನತೀಕರಣವು ಸಹ ಆಕರ್ಷಣೆಗೆ ಕಾರಣವಾಗಿದ್ದು, ಹೊಸ ಕಾರಿನ ಮೈಲೇಜ್ ಪ್ರಮಾಣವು ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಉತ್ತಮವಾಗಿದೆ ಎನ್ನಬಹುದು.

ಟಾಟಾ ನೆಕ್ಸಾನ್ ಬಿಎಸ್-6 ಪೆಟ್ರೋಲ್ ಕಾರಿನ ಮೈಲೇಜ್ ಮಾಹಿತಿ ಹೀಗಿದೆ..

ಬಿಎಸ್ ವೈಶಿಷ್ಟ್ಯತೆಯ ಪೆಟ್ರೋಲ್ ಆವೃತ್ತಿಯ 1.2 ಲೀಟರ್ ಎಂಜಿನ್‌ನೊಂದಿಗೆ 107-ಬಿ‍ಹೆಚ್‍‍ಪಿ ಹಾಗೂ 170-ಎನ್‍ಎಂ ಟಾರ್ಕ್ ಉತ್ಪಾದಿಸಲಿದ್ದು, 1.5 ಲೀಟರಿನ ಡೀಸೆಲ್ ಎಂಜಿ‍‍ನ್‍ ಬಿಎಚ್‌ಪಿ ಉತ್ಪಾದನೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಟಾಟಾ ನೆಕ್ಸಾನ್ ಬಿಎಸ್-6 ಪೆಟ್ರೋಲ್ ಕಾರಿನ ಮೈಲೇಜ್ ಮಾಹಿತಿ ಹೀಗಿದೆ..

1.5-ಲೀಟರ್ ಡೀಸೆಲ್ ಎಂಜಿನ್ ಮಾದರಿಯು 107-ಬಿ‍‍ಹೆಚ್‍‍ಪಿ ಹಾಗೂ 260-ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಆಯ್ಕೆಯಿರಲಿವೆ.

ಟಾಟಾ ನೆಕ್ಸಾನ್ ಬಿಎಸ್-6 ಪೆಟ್ರೋಲ್ ಕಾರಿನ ಮೈಲೇಜ್ ಮಾಹಿತಿ ಹೀಗಿದೆ..

ಈ ಮೂಲಕ ಡೀಸೆಲ್ ಮಾದರಿಯು ಪ್ರತಿ ಲೀಟರ್‌ಗೆ ಸರಾಸರಿಯಾಗಿ 22.4 ಕಿ.ಮೀ ಮೈಲೇಜ್ ಹಿಂದಿರುಗಿಸಿದ್ದಲ್ಲಿ, ಪೆಟ್ರೋಲ್ ಮಾದರಿಯಲ್ಲಿ ಪ್ರತಿ ಲೀಟರ್‌ಗೆ ಮ್ಯಾನುವಲ್ ಮಾದರಿಯು 17.4 ಕಿ.ಮೀ ಮತ್ತು ಎಎಂಟಿ ಮಾದರಿಯು 16 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಟಾಟಾ ನೆಕ್ಸಾನ್ ಬಿಎಸ್-6 ಪೆಟ್ರೋಲ್ ಕಾರಿನ ಮೈಲೇಜ್ ಮಾಹಿತಿ ಹೀಗಿದೆ..

ಡೀಸೆಲ್ ಮಾದರಿಯು ಉತ್ತಮ ಇಂಧನ ದಕ್ಷತೆ ಹೊಂದಿದ್ದರೂ ಪೆಟ್ರೋಲ್ ಮಾದರಿಯು ಎಂಟ್ರಿ ಲೆವಲ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲೇ ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಉತ್ತಮ ಇಂಧನ ದಕ್ಷತೆಯು ಗಮನಸೆಳೆಯುತ್ತದೆ.

ಟಾಟಾ ನೆಕ್ಸಾನ್ ಬಿಎಸ್-6 ಪೆಟ್ರೋಲ್ ಕಾರಿನ ಮೈಲೇಜ್ ಮಾಹಿತಿ ಹೀಗಿದೆ..

ಇನ್ನು ಪ್ರತಿ ಸ್ಪರ್ಧಿ ಮಾದರಿಗಳಾದ ಹ್ಯುಂಡೈ ವೆನ್ಯೂನಲ್ಲಿ 1.0 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ 117 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸಿದ್ದಲ್ಲಿ ಮಹೀಂದ್ರಾ ಎಕ್ಸ್ ಯುವಿ 300ನಲ್ಲಿರುವ 1.2 ಲೀಟರಿನ ಪೆಟ್ರೋಲ್ ಎಂಜಿನ್ 117 ಬಿ‍‍ಹೆಚ್‍‍ಪಿ ಪವರ್ ಹಾಗೂ 200 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಟಾಟಾ ನೆಕ್ಸಾನ್ ಬಿಎಸ್-6 ಪೆಟ್ರೋಲ್ ಕಾರಿನ ಮೈಲೇಜ್ ಮಾಹಿತಿ ಹೀಗಿದೆ..

ಮಹೀಂದ್ರಾ ಕಂಪನಿಯು ಎಕ್ಸ್ ಯುವಿ 300 ಎಸ್‍‍ಯುವಿಯನ್ನು ಟರ್ಬೊ ಪೆಟ್ರೋಲ್ ಎಂಜಿನ್‍‍ನಲ್ಲಿ ಬಿಡುಗಡೆಗೊಳಿಸಲಾಗುತ್ತಿದ್ದು, ಈ ಎಂಜಿನ್ 127 ಬಿ‍‍ಹೆಚ್‍‍ಪಿ ಪವರ್ ಹಾಗೂ 230 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸಲಿದೆ.

ಟಾಟಾ ನೆಕ್ಸಾನ್ ಬಿಎಸ್-6 ಪೆಟ್ರೋಲ್ ಕಾರಿನ ಮೈಲೇಜ್ ಮಾಹಿತಿ ಹೀಗಿದೆ..

ಈ ಕಾರುಗಳಿಗೆ ಪೈಪೋಟಿ ನೀಡಲು ಟಾಟಾ ಮೋಟಾರ್ಸ್ ತನ್ನ ಪೆಟ್ರೋಲ್ ಎಂಜಿನ್ ಕಾರಿನಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ಹೊಸ ನೆಕ್ಸಾನ್ ಎಸ್‍‍ಯುವಿಯು ಹೊಸ ಗ್ರಿಲ್ ಸಿಸ್ಟಂ, ಎಲ್‍ಇ‍‍ಡಿ ಪ್ರೊಜೆಕ್ಟರ್ ಹೆಡ್‍‍ಲೈಟ್, ಡಿ‍ಆರ್‍ಎಲ್, 16 ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್ ಹಾಗೂ ಎಲ್‍ಇ‍‍ಡಿ ಟೇಲ್ ಲೈಟ್‍‍ಗಳನ್ನು ಹೊಂದಿದೆ.

ಟಾಟಾ ನೆಕ್ಸಾನ್ ಬಿಎಸ್-6 ಪೆಟ್ರೋಲ್ ಕಾರಿನ ಮೈಲೇಜ್ ಮಾಹಿತಿ ಹೀಗಿದೆ..

ಹೊಸ ನೆಕ್ಸಾನ್‍‍ನಲ್ಲಿರುವ ಇನ್ಫೋಟೆನ್‍‍ಮೆಂಟ್ ಸಿಸ್ಟಂ ಅನ್ನು ಹೊಸ ಫೀಚರ್‍‍ಗಳೊಂದಿಗೆ ಅಪ್‍‍ಗ್ರೇಡ್ ಮಾಡಲಾಗಿದೆ. ಈ ಫೀಚರ್‍‍‍ಗಳಲ್ಲಿ ವೆಹಿಕಲ್ ಲೊಕೆಷನ್ ಡಿಟೆಕ್ಷನ್ ಸೌಲಭ್ಯ, ಎಲೆಕ್ಟ್ರಿಕ್ ಸನ್‍‍ರೂಫ್ ಹಾಗೂ ಫ್ಯಾಬ್ರಿಕ್ ಅಪ್‍‍ಹೊಲೆಸ್ಟರಿಗಳು ಸೇರಿವೆ.

Most Read Articles

Kannada
English summary
Tata Nexon AMT BS6 Mileage Figures Revealed: Here Is A Comparison To Its Segment Rivals In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X