ವಾರದ ಪ್ರಮುಖ ಸುದ್ದಿ: ಜಿಎಂ ಉತ್ಪಾದನೆ ಸ್ಥಗಿತ, ಟೈಗರ್ ಇವಿ ಬಿಡುಗಡೆ, ಬ್ಯಾಟರಿ ವಿನಿಮಯ ಕೇಂದ್ರಕ್ಕೆ ಚಾಲನೆ..

ಕರೋನಾ ಅಬ್ಬರದ ನಡುವೆಯೇ ಈ ವರ್ಷ ಕೊನೆಗೊಳ್ಳುತ್ತಿದ್ದು, ಆಟೋ ಉತ್ಪಾದನಾ ವಲಯವು ಕೂಡಾ ಹಲವಾರು ಏರಿಳಿತಗಳನ್ನು ಕಂಡಿದೆ. ಕಳೆದ ವಾರವು ಆಟೋ ಉದ್ಯಮದಲ್ಲಿ ಹಲವಾರು ಬೆಳವಣಿಗೆಗಳು ಕಂಡುಬಂದಿದ್ದು, ಕಳೆದ ವಾರದ ಪ್ರಮುಖ ಸುದ್ದಿಗಳ ಹೈಲೆಟ್ಸ್ ಇಲ್ಲಿದೆ ನೋಡಿ.

ವಾರದ ಪ್ರಮುಖ ಆಟೋ ಸುದ್ದಿಗಳು

ಕಾರು ಉತ್ಪಾದನೆ ಸ್ಥಗಿತಗೊಳಿಸಿದ ಜನರಲ್ ಮೋಟಾರ್ಸ್

ಅಮೆರಿಕದ ಜನರಲ್ ಮೋಟಾರ್ಸ್ (ಜಿಎಂ) ಕಂಪನಿಯು ಪುಣೆಯ ತಾಲೇಗಾಂವ್‌ನಲ್ಲಿರುವ ತನ್ನ ಉತ್ಪಾದನಾ ಘಟಕವನ್ನು ಸ್ಥಗಿತಗೊಳಿಸಿದೆ. ಕಂಪನಿಯು ಗ್ರೇಟ್ ವಾಲ್ ಮೋಟಾರ್ಸ್ (ಜಿಡಬ್ಲ್ಯೂಎಂ) ಭಾರತದಲ್ಲಿ ಕಾರ್ಯಾಚರಣೆ ಆರಂಭಿಸುತ್ತಿರುವುದರಿಂದ ಈ ನಿರ್ಧಾರವನ್ನು ಕೈಗೊಂಡಿದೆ. ಈ ವರ್ಷದ ಆರಂಭದಲ್ಲಿ ಚೀನಾದ ಗ್ರೇಟ್ ವಾಲ್ ಮೋಟಾರ್ಸ್ ಕಂಪನಿಯು ಜನರಲ್ ಮೋಟಾರ್ಸ್ ಉತ್ಪಾದನಾ ಘಟಕವನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿತ್ತು. ಆದರೆ ಕರೋನಾ ವೈರಸ್‌ ಕಾರಣದಿಂದಾಗಿ ಈ ಯೋಜನೆಯು ಮುಂದೂಡಿಕೆಯಾಯಿತು.

ವಾರದ ಪ್ರಮುಖ ಆಟೋ ಸುದ್ದಿಗಳು

ಇದಾದ ನಂತರ ಭಾರತ ಹಾಗೂ ಚೀನಾ ನಡುವೆ ಗಡಿ ವಿವಾದ ತಲೆದೋರಿತು. ಅಂದಿನಿಂದ ಚೀನಾ ದೇಶಕ್ಕೆ ಸಂಬಂಧಿಸಿದ ಎಲ್ಲಾ ಹೊಸ ಯೋಜನೆಗಳನ್ನು ನಿಲ್ಲಿಸಲಾಗಿದೆ. ಉದ್ಯಮದ ಉನ್ನತ ಮೂಲಗಳ ಪ್ರಕಾರ ಕಂಪನಿಯು 2021ರ ಫೆಬ್ರವರಿಯೊಳಗೆ ಈ ಯೋಜನೆಗೆ ಅನುಮೋದನೆಯನ್ನು ಪಡೆಯುವ ಸಾಧ್ಯತೆಗಳಿದ್ದು, ಜಿಎಂ ಕಾರು ಉತ್ಪಾದನಾ ಘಟಕವು ಚೀನಾದ ಗ್ರೇಟ್ ವಾಲ್ ಮೋಟಾರ್ಸ್‌ ಸ್ವಾಧೀನ ಪಡಿಸಿಕೊಂಡಿದೆ.

ವಾರದ ಪ್ರಮುಖ ಆಟೋ ಸುದ್ದಿಗಳು

ದಾಖಲೆ ಮೊತ್ತ ಸಂಗ್ರಹಿಸಿದ ಎನ್‌ಹೆಚ್‌ಎಐ

ಭಾರತದಲ್ಲಿ ಡಿಸೆಂಬರ್ 24ರಂದು ಫಾಸ್ಟ್‌ಟ್ಯಾಗ್ ಮೂಲಕ ಕೇಂದ್ರ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರವು ದಿನವೊಂದಕ್ಕೆ ಗರಿಷ್ಠ ರೂ. 80 ಕೋಟಿ ಟೋಲ್ ಗೇಟ್ ಶುಲ್ಕವನ್ನು ಸಂಗ್ರಹಿಸಿದ್ದು, 50 ಲಕ್ಷಕ್ಕೂ ಹೆಚ್ಚು ಫಾಸ್ಟ್‌ಟ್ಯಾಗ್ ವಹಿವಾಟುಗಳ ಮೂಲಕ ಈ ದಾಖಲೆಯನ್ನು ನಿರ್ಮಿಸಲಾಗಿದೆ.

ವಾರದ ಪ್ರಮುಖ ಆಟೋ ಸುದ್ದಿಗಳು

ಫಾಸ್ಟ್‌ಟ್ಯಾಗ್ ಅಳವಡಿಕೆಯ ನಂತರ ಟೋಲ್‌ಗಳಲ್ಲಿ ವಾಹನ ಸಂಚಾರದ ಅವಧಿಯು ಗಣನೀಯವಾಗಿ ಇಳಿಕೆಯಾಗಿದ್ದು, ಇದೇ ಕಾರಣಕ್ಕೆ ವಾಹನಗಳ ಚಾಲನೆ ಅವಧಿಯ ಕಡಿತಗೊಳ್ಳುತ್ತಿರುವರಿಂದ ಟೋಲ್ ಸಂಗ್ರಹ ಸಾಕಷ್ಟು ಏರಿಕೆಯಾಗಿದೆ. ಫಾಸ್ಟ್‌ಟ್ಯಾಗ್'ಗಳು ಕಾಗದದ ಬಳಕೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿರುವುದಲ್ಲದೆ ಕರೋನಾ ವೈರಸ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಫಾಸ್ಟ್‌ಟ್ಯಾಗ್'ಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ನೆರವಾಗುತ್ತಿವೆ.

ವಾರದ ಪ್ರಮುಖ ಆಟೋ ಸುದ್ದಿಗಳು

ಬ್ಯಾಟರಿ ವಿನಿಮಯ ಕೇಂದ್ರಗಳಿಗೆ ಗ್ರಿನ್ ಸಿಗ್ನಲ್

ದೇಶಾದ್ಯಂತ ತೈಲ ಬೆಲೆಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಸಾಂಪ್ರಾದಾಯಿಕ ವಾಹನ ನಿರ್ವಹಣಾ ವೆಚ್ಚದಲ್ಲಿ ಭಾರೀ ಏರಿಕೆಯಾಗಿದೆ. ಹೀಗಿರುವಾಗ ಹೊಸ ವಾಹನ ಖರೀದಿದಾರರಿಗೆ ಎಲೆಕ್ಟ್ರಿಕ್ ವಾಹನಗಳು ಪ್ರಮುಖ ಆಕರ್ಷಣೆಯಾಗುತ್ತಿದ್ದು, ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ.

ವಾರದ ಪ್ರಮುಖ ಆಟೋ ಸುದ್ದಿಗಳು

ಎಲೆಕ್ಟ್ರಿಕ್ ವಾಹನಗಳ ಬಳಕೆ ಆಸಕ್ತಿ ಇದ್ದರೂ ಕೂಡಾ ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೆ ಇವಿ ವಾಹನಗಳ ಬ್ಯಾಟರಿ ರೇಂಜ್ ಸಾಮಾರ್ಥ್ಯವು ಖರೀದಿಗೆ ಹಿಂದೇಟು ಹಾಕುವಂತೆ ಮಾಡಿದ್ದು, ಈ ಸಮಸ್ಯೆ ನಿವಾರಣೆಗಾಗಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿಯು ಸನ್ ಮೊಬಿಲಿಟಿ ಜೊತೆಗೂಡಿ ಎಲೆಕ್ಟ್ರಿಕ್ ವಾಹನಗಳಿಗೆ ತ್ವರಿತವಾಗಿ ಚಾರ್ಜಿಂಗ್ ಒದಗಿಸಲು ಬ್ಯಾಟರಿ ವಿನಿಮಯ ಕೇಂದ್ರಗಳನ್ನು ನಮ್ಮ ಬೆಂಗಳೂರು ಸೇರಿದಂತೆ ಪ್ರಮುಖ ಮಾಹಾನಗರಗಳಲ್ಲಿ ನಿರ್ಮಾಣ ಮಾಡುತ್ತಿವೆ.

ವಾರದ ಪ್ರಮುಖ ಆಟೋ ಸುದ್ದಿಗಳು

ಟೈಗರ್ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಬಿಡುಗಡೆ

ದೇಶಯ ಜನಪ್ರಿಯ ಟ್ರ್ಯಾಕ್ಟರ್ ಉತ್ಪದನಾ ಕಂಪನಿಗಳಲ್ಲಿ ಒಂದಾಗಿರುವ ಸೊನಾಲಿಕಾ ಟ್ರ್ಯಾಕ್ಟರ್ಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ ಕಂಪನಿಯು ತನ್ನ ಟೈಗರ್ ಸರಣಿ ಟ್ರ್ಯಾಕ್ಟರ್ ಮಾದರಿಯಲ್ಲಿ ಎಲೆಕ್ಟ್ರಿಕ್ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ವಾರದ ಪ್ರಮುಖ ಆಟೋ ಸುದ್ದಿಗಳು

ಹೊಸ ಟೈಗರ್ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಮಾದರಿಯನ್ನು ಯುರೋಪಿನ್ ಮಾರುಕಟ್ಟೆಯಲ್ಲಿ ಅಭಿವೃದ್ದಿಗೊಳಿಸಿರುವ ಸೊನಾಲಿಕಾ ಕಂಪನಿಯು ಭಾರತದಲ್ಲಿ ಉತ್ಪಾದನೆ ಮಾಡಿ ದೇಶಿಯ ಮಾರುಕಟ್ಟೆಯೊಂದಿಗೆ ವಿದೇಶಿ ಮಾರುಕಟ್ಟೆಗಳಿಗೂ ಹೊಸ ಟ್ರ್ಯಾಕ್ಟರ್ ಮಾದರಿಯನ್ನು ರಫ್ತು ಮಾಡಿಲಿದೆ. ಹೊಸ ಟ್ರ್ಯಾಕ್ಟರ್ ಮಾದರಿಯು ಎಕ್ಸ್‌ಶೋರೂಂ ದರದಂತೆ ರೂ. 5.99 ಲಕ್ಷ ಬೆಲೆ ಹೊಂದಿದ್ದು, ಹೊಸ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಖರೀದಿಗಾಗಿ ಈಗಾಗಲೇ ದೇಶಾದ್ಯಂತ ಪ್ರಮುಖ ಡೀಲರ್ಸ್‌ಗಳಲ್ಲಿ ಬುಕ್ಕಿಂಗ್ ಆರಂಭಿಸಲಾಗಿದೆ.

ವಾರದ ಪ್ರಮುಖ ಆಟೋ ಸುದ್ದಿಗಳು

ಟಾಟಾ ಅಲ್ಟ್ರಾ ಟಿ.7 ಟ್ರಕ್ ಬಿಡುಗಡೆ

ವಾಣಿಜ್ಯ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಬಹುನೀರಿಕ್ಷಿತ ಟಿ.7 ಲೈಟ್ ಕಮರ್ಷಿಯಲ್ ವೆಹಿಕಲ್ ಬಿಡುಗಡೆ ಮಾಡಿದ್ದು, ಹೊಸ ಟ್ರಕ್ ಮಾದರಿಯನ್ನು ವಿಶೇಷವಾಗಿ ನಗರ ಪ್ರದೇಶದಲ್ಲಿನ ದಿನನಿತ್ಯದ ಸರಕು ಸಾಗಾಣಿಕೆ ಅನುಕೂಲಕವಾಗುವಂತೆ ನಿರ್ಮಾಣ ಮಾಡಲಾಗಿದೆ.

ವಾರದ ಪ್ರಮುಖ ಆಟೋ ಸುದ್ದಿಗಳು

ಅಡ್ವಾನ್ಸ್ ಟೆಕ್ನಾಲಜಿಯೊಂದಿಗೆ ಅಭಿವೃದ್ದಿಗೊಂಡಿರುವ ಹೊಸ ಟಿ.7 ಟ್ರಕ್ ಮಾದರಿಯು ಅತಿ ಕಡಿಮೆ ನಿರ್ವಹಣಾ ವೆಚ್ಚ ಹೊಂದಿದ್ದು, ವಾಹನ ದಟ್ಟಣೆಯಿಂದ ಕೂಡಿರುವ ನಗರಪ್ರದೇಶಗಳಲ್ಲಿನ ಸುಲಭ ಸಂಚರಿಸಲು ಸಾಧ್ಯವಾಗುವಂತೆ ಅಭಿವೃದ್ದಿಪಡಿಸಲಾಗಿದೆ. ಹೊಸ ಟ್ರಕ್ ಮಾದರಿಯ ವಿನ್ಯಾಸವು ತುಸು ಕಡಿಮೆ ಅಗಲ ಹೊಂದಿದ್ದು, ಡೆಕ್ ಉದ್ದವು ಪ್ರತಿಸ್ಪರ್ಧಿ ಟ್ರಕ್ ಮಾದರಿಗಳಿಂತಲೂ ಹೆಚ್ಚಿನ ಸ್ಥಳಾವಕಾಶ ಹೊಂದಿದೆ.

ವಾರದ ಪ್ರಮುಖ ಆಟೋ ಸುದ್ದಿಗಳು

ಭರ್ಜರಿ ದಂಡ ಸಂಗ್ರಹಿಸಿದ ಬೆಂಗಳೂರು ಪೊಲೀಸರು

ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ಬೆಂಗಳೂರು ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆಯನ್ನು ಕೈಗೊಂಡಿದ್ದರು. ಈ ವಿಶೇಷ ಕಾರ್ಯಾಚರಣೆಗೆ ಆಪರೇಷನ್ ಸರ್ಪ್ರೈಸ್ ಚೆಕ್ ಎಂಬ ಹೆಸರಿಡಲಾಗಿತ್ತು.

ವಾರದ ಪ್ರಮುಖ ಆಟೋ ಸುದ್ದಿಗಳು

ಈ ವಿಶೇಷ ಕಾರ್ಯಾಚರಣೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿದ ವಾಹನ ಸವಾರರಿಗೆ ಕೇವಲ ಎರಡು ಗಂಟೆಗಳಲ್ಲಿ ರೂ.29.50 ಲಕ್ಷ ದಂಡ ವಿಧಿಸಲಾಗಿದೆ. ಸಂಚಾರಿ ಪೊಲೀಸರು ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಾಲನೆ ಮಾಡುವವರು, ರಾಂಗ್ ಸೈಡಿನಲ್ಲಿ ವಾಹನ ಚಾಲನೆ ಮಾಡುವವರು, ಸೀಟ್ ಬೆಲ್ಟ್ ಧರಿಸದೇ ಕಾರು ಚಾಲನೆ ಮಾಡುವವರು, ವಾಹನ ಚಾಲನೆ ವೇಳೆ ಸೆಲ್ ಫೋನ್‌ನಲ್ಲಿ ಮಾತನಾಡುವವರ ವಿರುದ್ಧ ಕಾರ್ಯಾಚರಣೆಯನ್ನು ಆರಂಭಿಸಿದ್ದರು.

Most Read Articles

Kannada
English summary
Top Auto News Of The Week. Read in Kannada.
Story first published: Sunday, December 27, 2020, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X