ಇತಿಹಾಸದ ಪುಟ ಸೇರಲಿದೆ ಜನಪ್ರಿಯ ಟೊಯೊಟಾ ಲ್ಯಾಂಡ್ ಕ್ರೂಸರ್ ಎಲ್‍‍ಸಿ 200, ಪ್ರಾಡೊ

ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಟೊಯೊಟಾ ತನ್ನ ಲ್ಯಾಂಡ್ ಕ್ರೂಸರ್ ಎಲ್‍‍ಸಿ 200 ಮತ್ತು ಪ್ರಾಡೊ ಎಸ್‍‍ಯುವಿಗಳನ್ನು ಸ್ಥಗಿತಗೊಳಿಸುತ್ತಿದೆ. ಏಪ್ರಿಲ್ 1ರಿಂದ ಭಾರತದಲ್ಲಿ ಈ ಎರಡೂ ಎಸ್‍ಯುವಿಗಳು ಲಭ್ಯವಿರುವುದಿಲ್ಲ.

ಇತಿಹಾಸದ ಪುಟ ಸೇರಲಿದೆ ಜನಪ್ರಿಯ ಟೊಯೊಟಾ ಲ್ಯಾಂಡ್ ಕ್ರೂಸರ್ ಎಲ್‍‍ಸಿ 200, ಪ್ರಾಡೊ

ಲ್ಯಾಂಡ್ ಕ್ರೂಸರ್ ಎಲ್‍‍ಸಿ 200 ವಿಶ್ವದ ಅತ್ಯುತ್ತಮ ಐಷಾರಾಮಿ ಆಫ್-ರೋಡ್ ಎಸ್‍‍ಯುವಿಗಳಲ್ಲಿ ಒಂದಾಗಿದೆ. ಟೊಯೊಟಾ ಕ್ರೂಸರ್ ಎಲ್‍‍ಸಿ 200 ಎಸ್‍‍ಯುವಿಯು 4.5 ಲೀಟರ್ ವಿ8 ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 268 ಬಿ‍‍ಹೆಚ್‍‍ಪಿ ಪವರ್ ಮತ್ತು 650 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ನೊಂದಿಗೆ 6 ಸ್ಫೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಇತಿಹಾಸದ ಪುಟ ಸೇರಲಿದೆ ಜನಪ್ರಿಯ ಟೊಯೊಟಾ ಲ್ಯಾಂಡ್ ಕ್ರೂಸರ್ ಎಲ್‍‍ಸಿ 200, ಪ್ರಾಡೊ

ಲ್ಯಾಂಡ್ ಕ್ರೂಸರ್ ಎಲ್‍‍ಸಿ 200 ಎಸ್‍‍ಯುವಿಯ ಫೀಚರ್ಸ್‍‍ಗಳು ಹಳೆಯದಾಗಿದೆ. ಇದಲ್ಲದೆ ಎಲ್‍‍ಸಿ 200 ಎಸ್‍‍ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.47 ಕೋಟಿಗಳಾಗಿದೆ.

ಇತಿಹಾಸದ ಪುಟ ಸೇರಲಿದೆ ಜನಪ್ರಿಯ ಟೊಯೊಟಾ ಲ್ಯಾಂಡ್ ಕ್ರೂಸರ್ ಎಲ್‍‍ಸಿ 200, ಪ್ರಾಡೊ

ಉತ್ತರ ಅಮೆರಿಕಾ, ಯುರೋಪ್ ಮತ್ತು ಏಷ್ಯಾದ ಆಯ್ದ ಮಾರುಕಟ್ಟೆಗಳಲ್ಲಿ ಟೊಯೊಟಾ ಕ್ರೂಸರ್ ಮಾರಾಟವು ಕಡಿಮೆಯಾಗಿದೆ. ಟೊಯೊಟಾ ಲ್ಯಾಂಡ್ ಕ್ರೂಸರ್ ಎಲ್‍‍ಸಿ 200 ಅನ್ನು ಎಲ್‍‍ಸಿ 300 ಮಾದರಿಯಾಗಿ ನವೀಕರಿಸಲಿದೆ. ಇದರ ವಿನ್ಯಾಸ, ಫೀಚರ್ಸ್‍ಗಳು ಮತ್ತು ತಂತ್ರಜ್ಞಾನವನ್ನು ನವೀಕರಿಸುತ್ತದೆ. ಪೆಟ್ರೋಲ್ ಹೈಬ್ರಿಡ್ ಎಂಜಿನ್ ಅನ್ನು ಹೊಂದಿರಲಿದೆ. ಕಂಪನಿಯು ಇದರ ಬಗ್ಗೆ ಅಧಿಕೃತವಾಗಿ ಹೇಳಿಕೆಯನ್ನು ನೀಡಿಲ್ಲ.

ಇತಿಹಾಸದ ಪುಟ ಸೇರಲಿದೆ ಜನಪ್ರಿಯ ಟೊಯೊಟಾ ಲ್ಯಾಂಡ್ ಕ್ರೂಸರ್ ಎಲ್‍‍ಸಿ 200, ಪ್ರಾಡೊ

ಲ್ಯಾಂಡ್ ಕ್ರೂಸರ್ ಎಲ್‍‍ಸಿ 200 ಎಸ್‍‍ಯುವಿ ಮರ್ಸಿಡಿಸ್ ಬೆಂಝ್ ಜಿಎಲ್‍ಎಸ್, ಲ್ಯಾಂಡ್ ರೋವರ್ ರೇಂಜ್ ರೋವರ್ ಮತ್ತು ನಿಸ್ಸಾನ್ ಎಸ್‍‍ಯುವಿಗಳಿಗೆ ಪೈಪೋಟಿ ನೀಡುತ್ತಿದೆ.

ಇತಿಹಾಸದ ಪುಟ ಸೇರಲಿದೆ ಜನಪ್ರಿಯ ಟೊಯೊಟಾ ಲ್ಯಾಂಡ್ ಕ್ರೂಸರ್ ಎಲ್‍‍ಸಿ 200, ಪ್ರಾಡೊ

ಟೊಯೊಟಾ ಕಂಪಣಿಯ ಸರಣಿಯಲ್ಲಿರುವ ಲ್ಯಾಂಡ್ ಕ್ರೂಸರ್ ಪ್ರಾಡೊ ಎಸ್‍ಯುವಿಯನ್ನು ಕೂಡ ಸ್ಥಗಿತಗೊಳಿಸುತ್ತಿದೆ. ಲ್ಯಾಂಡ್ ಕ್ರೂಸರ್ ಪ್ರಾಡೊ ಎಸ್‍‍ಯುವಿಯು 3.0 ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 170 ಬಿ‍‍ಹೆಚ್‍‍ಪಿ ಪವರ್ ಮತ್ತು 410 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 5 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಇತಿಹಾಸದ ಪುಟ ಸೇರಲಿದೆ ಜನಪ್ರಿಯ ಟೊಯೊಟಾ ಲ್ಯಾಂಡ್ ಕ್ರೂಸರ್ ಎಲ್‍‍ಸಿ 200, ಪ್ರಾಡೊ

ಈ ಎಸ್‍‍ಯುವಿಗೆ ಭಾರತದ ಎಕ್ಸ್ ಶೋರೂಂ ಪ್ರಕಾರ 96.30 ಲಕ್ಷಗಳಾಗಿದೆ. ಈ ಎಸ್‍‍ಯುವಿಯು ಜೀಪ್ ಗ್ರ್ಯಾಂಡ್ ಚೆರೋಕೀ ಮತ್ತು ಲ್ಯಾಂಡ್ ರೋವರ್ ಡಿಸ್ಕವರಿ ಎಸ್‍‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.

MOST READ: ದುಬಾರಿ ಬೆಂಝ್ ಕಾರನ್ನು ಹೆಲಿಕಾಪ್ಟರ್ ಮೂಲಕ ಪುಡಿ ಮಾಡಿದ ಭೂಪ

ಇತಿಹಾಸದ ಪುಟ ಸೇರಲಿದೆ ಜನಪ್ರಿಯ ಟೊಯೊಟಾ ಲ್ಯಾಂಡ್ ಕ್ರೂಸರ್ ಎಲ್‍‍ಸಿ 200, ಪ್ರಾಡೊ

ಲ್ಯಾಂಡ್ ಕ್ರೂಸರ್ ಸರಣಿಯು ಟೊಯೊಟಾದ ಪೋರ್ಟ್ಫೋಲಿಯೊದಲ್ಲಿ ಹೆಚ್ಚು ಕಾಲ ಬಹುಬೇಡಿಕೆಯ ವಾಹನವಾಗಿದೆ. ಲ್ಯಾಂಡ್ ಕ್ರೂಸರ್ ತನ್ನ ಹೆಸರನ್ನು ಟೊಯೊಟಾ ಜೀಪ್ ಬಿಜೆ ಆಫ್-ರೋಡರ್ ಎಂಬ ಹೆಸರಿನೊಂದಿಗೆ ಮೊದಲು ಮಾರಾಟವಾಗುತ್ತಿತ್ತು.

MOST READ: ಕಳ್ಳತನವಾಗಿದ್ದ ಕಾರು ಫಾಸ್ಟ್‌ಟ್ಯಾಗ್‌‍‍ನಿಂದಾಗಿ ವಾಪಸ್ ಸಿಕ್ಕಿದ್ದೆ ಒಂದು ರೋಚಕ

ಇತಿಹಾಸದ ಪುಟ ಸೇರಲಿದೆ ಜನಪ್ರಿಯ ಟೊಯೊಟಾ ಲ್ಯಾಂಡ್ ಕ್ರೂಸರ್ ಎಲ್‍‍ಸಿ 200, ಪ್ರಾಡೊ

ಲ್ಯಾಂಡ್ ಕ್ರೂಸರ್ ಅನ್ನು ಕನ್ವರ್ಟಿಬಲ್, ಹಾರ್ಡ್ ಟಾಪ್, ಸ್ಟೇಷನ್ ವ್ಯಾಗನ್ ಮತ್ತು ಕ್ಯಾಬ್-ಚಾಸಿಸ್ ಬಾಡಿ ಸ್ಟೈಲ್‌ಗಳಲ್ಲಿ ನಿರ್ಮಿಸಲಾಗಿದೆ. ಈ ಎಸ್‍ಯುವಿಯು ಹೆಚ್ಚು ವಿಶ್ವಾಸಾರ್ಹತೆ ಮತ್ತು ಜನಪ್ರಿಯ ಮಾದರಿಯಾಗಿದೆ.

MOST READ: ಹೊಸ ಲುಕ್‍‍ನಲ್ಲಿ ಮಿಂಚಿದ ಮಾಡಿಫೈ ಕಿಯಾ ಸೆಲ್ಟೋಸ್

ಇತಿಹಾಸದ ಪುಟ ಸೇರಲಿದೆ ಜನಪ್ರಿಯ ಟೊಯೊಟಾ ಲ್ಯಾಂಡ್ ಕ್ರೂಸರ್ ಎಲ್‍‍ಸಿ 200, ಪ್ರಾಡೊ

ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವುದರಿಂದ ಏಪ್ರಿಲ್ 1ರಿಂದ ಟೊಯೊಟಾ ಲ್ಯಾಂಡ್ ಕ್ರೂಸರ್ ಎಲ್‍‍ಸಿ 200 ಮತ್ತು ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊ ಲಭ್ಯವಾಗುವುದಿಲ್ಲ. ಟೊಯೊಟಾ ಲ್ಯಾಂಡ್ ಕ್ರೂಸರ್ ಎಲ್‍‍ಸಿ 200 ಅನ್ನು ಎಲ್‍‍ಸಿ 300 ಮಾದರಿಯಾಗಿ ನವೀಕರಿಸಲಿ. ಟೊಯೊಟಾ ಕಂಪನಿಯು ಲ್ಯಾಂಡ್ ಕ್ರೂಸರ್ ಎಸ್‍‍ಯುವಿಯ ಇಂಟಿರಿಯರ್ ಮತ್ತು ಎಂಜಿನ್‍‍ಗಳ ನವೀಕರಣವು ಮಾಡಲಾಗುತ್ತದೆ.

Most Read Articles

Kannada
Read more on toyota ಟೊಯೊಟಾ
English summary
Toyota Discontinues Land Cruiser LC200 And Prado Models: Will Not Be Available After 31 March 2020 - Read in Kannada
Story first published: Monday, January 6, 2020, 18:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X