ಪ್ರಯಾಣಿಕರೇ ಗಮನಿಸಿ: ನಾಳೆಯಿಂದ ಶುರುವಾಗಲಿದೆ ರೈಲು ಸಂಚಾರ

ಭಾರತದಲ್ಲಿ ಲಾಕ್‌ಡೌನ್ ಕಾರಣಕ್ಕೆ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಈಗ ರೈಲ್ವೆ ಇಲಾಖೆಯು ತನ್ನ ಸೇವೆಯನ್ನು ಭಾಗಶಃ ಆರಂಭಿಸಲಿದೆ. ನಾಳೆಯಿಂದ ದೇಶದಲ್ಲಿ ರೈಲು ಸೇವೆಗಳು ಆರಂಭವಾಗಲಿವೆ. ಮೇ 12ರಿಂದ ದೇಶದ 15 ನಗರಗಳಿಗೆ ರೈಲು ಓಡಿಸಲಾಗುವುದು.

ಪ್ರಯಾಣಿಕರೇ ಗಮನಿಸಿ: ನಾಳೆಯಿಂದ ಶುರುವಾಗಲಿದೆ ರೈಲು ಸಂಚಾರ

ನವದೆಹಲಿಯ ರೈಲು ನಿಲ್ದಾಣದಿಂದ 15 ರೈಲುಗಳನ್ನು ಓಡಿಸಲಾಗುವುದು. ಈ ರೈಲುಗಳ ಬುಕ್ಕಿಂಗ್‌ಗಳನ್ನು ಮೇ 11ರಿಂದ ಆರಂಭಿಸಲಾಗುವುದು. ಈ 15 ರೈಲುಗಳ ಬುಕ್ಕಿಂಗ್ ಇಂದು ಸಂಜೆ 4 ಗಂಟೆಯಿಂದ ಆರಂಭವಾಗಲಿದೆ. ಈ 15 ರೈಲುಗಳ ಸಂಪೂರ್ಣ ವೇಳಾಪಟ್ಟಿಯನ್ನು ರೈಲ್ವೆ ಇಲಾಖೆಯು ಇಂದು ಬಿಡುಗಡೆಗೊಳಿಸಲಿದೆ.

ಪ್ರಯಾಣಿಕರೇ ಗಮನಿಸಿ: ನಾಳೆಯಿಂದ ಶುರುವಾಗಲಿದೆ ರೈಲು ಸಂಚಾರ

ನವದೆಹಲಿ ರೈಲು ನಿಲ್ದಾಣದಿಂದ ಈ 15 ರೈಲುಗಳು ದೇಶದ ಪ್ರಮುಖ ನಗರಗಳಾದ ಬೆಂಗಳೂರು, ದಿಬ್ರುಗಢ, ಅಗರ್ತಲಾ, ಹೌರಾ, ಪಾಟ್ನಾ, ಬಿಲಾಸ್‌ಪುರ್, ರಾಂಚಿ, ಭುವನೇಶ್ವರ, ಸಿಕಂದರಾಬಾದ್, ಚೆನ್ನೈ, ತಿರುವನಂತಪುರಂ, ಮಡ್ಗಾಂವ್, ಮುಂಬೈ ಸೆಂಟ್ರಲ್, ಅಹಮದಾಬಾದ್ ಮತ್ತು ಜಮ್ಮು ತಾವಿಗಳಿಗೆ ಚಲಿಸಲಿವೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಪ್ರಯಾಣಿಕರೇ ಗಮನಿಸಿ: ನಾಳೆಯಿಂದ ಶುರುವಾಗಲಿದೆ ರೈಲು ಸಂಚಾರ

ಈ ಎಲ್ಲಾ ರೈಲುಗಳು ಪ್ರತಿದಿನ ಸಂಚರಿಸುವುದಿಲ್ಲ. ಇದರ ಸಂಪೂರ್ಣ ಮಾಹಿತಿ ಇಂದು ಲಭ್ಯವಾಗಲಿದೆ. ರಾಜಧಾನಿ ಮಾರ್ಗದಲ್ಲಿ ಚಲಿಸಲಿರುವ ಈ ರೈಲುಗಳು ಹವಾನಿಯಂತ್ರಿತ ರೈಲುಗಳಾಗಿರಲಿವೆ. ಈ ರೈಲುಗಳ ಪ್ರಯಾಣ ದರವು ಸೂಪರ್ ಫಾಸ್ಟ್ ರೈಲುಗಳಿಗೆ ಸಮನಾಗಿರುತ್ತದೆ.

ಪ್ರಯಾಣಿಕರೇ ಗಮನಿಸಿ: ನಾಳೆಯಿಂದ ಶುರುವಾಗಲಿದೆ ರೈಲು ಸಂಚಾರ

ರೈಲ್ವೆ ಇಲಾಖೆಯು ದೇಶದಲ್ಲಿ ಪ್ರಯಾಣಿಕರ ಸೇವೆಯನ್ನು ನಿಧಾನವಾಗಿ ಆರಂಭಿಸಲಿದೆ ಎಂದು ರೈಲ್ವೆ ಸಚಿವರು ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ನವದೆಹಲಿಯಿಂದ 15 ವಿಶೇಷ ರೈಲುಗಳು ಮೇ 12ರಿಂದ ಸಂಚಾರವನ್ನು ಆರಂಭಿಸಲಿವೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಪ್ರಯಾಣಿಕರೇ ಗಮನಿಸಿ: ನಾಳೆಯಿಂದ ಶುರುವಾಗಲಿದೆ ರೈಲು ಸಂಚಾರ

ರೈಲ್ವೆ ನಿಲ್ದಾಣದಲ್ಲಿನ ಟಿಕೆಟ್ ಬುಕ್ಕಿಂಗ್‌ ಕೌಂಟರ್‌ಗಳನ್ನು ಮುಚ್ಚಲಾಗಿದ್ದು, ಪ್ಲಾಟ್‌ಫಾರ್ಮ್ ಟಿಕೆಟ್‌ ಸೇರಿದಂತೆ ಯಾವುದೇ ಕೌಂಟರ್‌ನಲ್ಲಿ ಟಿಕೆಟ್‌ಗಳನ್ನು ಮಾರಾಟ ಮಾಡಲಾಗುವುದಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನ ವಿಶೇಷ ಸೇವೆಗಳನ್ನು ಪ್ರಾರಂಭಿಸಲಾಗುವುದೆಂದು ರೈಲ್ವೆ ಇಲಾಖೆಯು ತಿಳಿಸಿದೆ.

ಪ್ರಯಾಣಿಕರೇ ಗಮನಿಸಿ: ನಾಳೆಯಿಂದ ಶುರುವಾಗಲಿದೆ ರೈಲು ಸಂಚಾರ

ಆದರೆ ಈ ಸೇವೆಗಳು ಲಭ್ಯವಿರುವ ರೈಲು ಬೋಗಿಗಳ ಮೇಲೆ ಅವಲಂಬಿತವಾಗಿರುತ್ತವೆ. ಕೋವಿಡ್ -19ರ ಆರೈಕೆ ಕೇಂದ್ರಗಳಾಗಿ 20,000 ಬೋಗಿಗಳನ್ನು ಬಳಸಲಾಗುತ್ತಿದೆ. ಇದರ ಜೊತೆಗೆ ದೇಶದಲ್ಲಿ ಪ್ರತಿದಿನ 300 ರೈಲುಗಳನ್ನು ಶ್ರಮಿಕ್ ರೈಲಿನ ರೂಪದಲ್ಲಿ ಓಡಿಸಲಾಗುತ್ತಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಪ್ರಯಾಣಿಕರೇ ಗಮನಿಸಿ: ನಾಳೆಯಿಂದ ಶುರುವಾಗಲಿದೆ ರೈಲು ಸಂಚಾರ

ಈ ವಿಶೇಷ ರೈಲುಗಳ ಬುಕ್ಕಿಂಗ್‌‌ಗಳನ್ನು ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಮೇ 11ರ ಸಂಜೆ 4 ಗಂಟೆಯಿಂದ ಮಾಡಬಹುದು. ಯಾವುದೇ ತತ್ಕಾಲ್ ಅಥವಾ ಪ್ರೀಮಿಯಂ ತತ್ಕಾಲ್ ಸೌಲಭ್ಯಗಳನ್ನು ಒದಗಿಸುತ್ತಿಲ್ಲ. ಪ್ರಯಾಣಿಕರು ರೈಲು ಹತ್ತುವ ಹಾಗೂ ಇಳಿಯುವ ಮೊದಲು ಫೇಸ್ ಮಾಸ್ಕ್‌ಗಳನ್ನು ಕಡ್ಡಾಯವಾಗಿ ಧರಿಸಬೇಕು, ಜೊತೆಗೆ ಸ್ಕ್ರೀನಿಂಗ್‌ಗೆ ಒಳಗಾಗಬೇಕು.

ಪ್ರಯಾಣಿಕರೇ ಗಮನಿಸಿ: ನಾಳೆಯಿಂದ ಶುರುವಾಗಲಿದೆ ರೈಲು ಸಂಚಾರ

ಈ ರೈಲುಗಳ ಪ್ರತಿ ಬೋಗಿಯಲ್ಲಿ 72 ಜನರು ಮಾತ್ರ ಪ್ರಯಾಣಿಸಲಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ಣ ಸಾಮರ್ಥ್ಯದಲ್ಲಿ ಚಲಿಸುವ ಈ ಎಲ್ಲಾ ರೈಲುಗಳ ಶುಲ್ಕದಲ್ಲಿ ಯಾವುದೇ ರಿಯಾಯಿತಿ ಇರುವುದಿಲ್ಲ. ಶ್ರಮಿಕ್ ವಿಶೇಷ ರೈಲಿನ ಪ್ರತಿ ಬೋಗಿಯಲ್ಲಿ ಕೇವಲ 54 ಪ್ರಯಾಣಿಕರಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗಿದೆ.

Most Read Articles

Kannada
English summary
Train service resume from 12th May bookings starts today. Read in Kannada.
Story first published: Monday, May 11, 2020, 15:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X