Just In
Don't Miss!
- Movies
'ಬೆಲ್ ಬಾಟಂ-2' ಟೈಟಲ್ ಪೋಸ್ಟರ್ ಅನಾವರಣ: ಡಿಟೆಕ್ಟಿವ್ ದಿವಾಕರ್ ಈಸ್ ಬ್ಯಾಕ್
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Sports
ಭಾರತೀಯರ ನಿಂದಿಸಿದ ಕಿಡಿಗೇಡಿಗಳ ಕಂಡುಹಿಡಿಯುವಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ವಿಫಲ
- News
ಶಶಿಕಲಾ ಈಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾಮಾನ್ಯ ರೋಗಿ
- Finance
ಹೊಸ ಸಾರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್- ಡೀಸೆಲ್ ದರ; ಯಾವ ನಗರದಲ್ಲಿ ಎಷ್ಟು?
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫೋರ್ಡ್-ಮಹೀಂದ್ರಾ ನಿರ್ಮಾಣದ ಮೊದಲ ಕಾರಿನ ವಿನ್ಯಾಸ ಮಾಹಿತಿ ಬಹಿರಂಗ
ಹೊಸ ಕಾರುಗಳ ಅಭಿವೃದ್ದಿಗಾಗಿ ದೇಶಿಯ ಮಾರುಕಟ್ಟೆಯಲ್ಲಿ ಸಹಭಾಗಿತ್ವ ಯೋಜನೆಗೆ ಚಾಲನೆ ನೀಡಿರುವ ಮಹೀಂದ್ರಾ ಮತ್ತು ಫೋರ್ಡ್ ಕಂಪನಿಗಳು ಮುಂದಿನ ಎರಡು ವರ್ಷಗಳಲ್ಲಿ ಹಲವಾರು ಹೊಸ ಕಾರು ಮಾದರಿಗಳನ್ನು ಬಿಡುಗಡೆಗೊಳಿಸಲಿದ್ದು, ಸಹಭಾಗಿತ್ವದಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಕಾರಿನ ವಿನ್ಯಾಸದ ಕುರಿತಾಗಿ ಪ್ರಮುಖ ಮಾಹಿತಿ ಲಭ್ಯವಾಗಿದೆ.

ಮಹೀಂದ್ರಾ ಕಂಪನಿಯು ಶೇ.51ರಷ್ಟು ಮತ್ತು ಫೋರ್ಡ್ ಕಂಪನಿಯು ಶೇ.49ರಷ್ಟು ಹೂಡಿಕೆಯೊಂದಿಗೆ ಸಹಭಾಗಿತ್ವ ಯೋಜನೆಗೆ ಚಾಲನೆ ನೀಡಲಾಗುತ್ತಿದ್ದು, ಹೊಸ ಯೋಜನೆಗಾಗಿ ಬರೋಬ್ಬರಿ ರೂ. 4,300 ಕೋಟಿ ಬಂಡವಾಳ ಹೂಡಿಕೆ ಮಾಡಿವೆ. ಹೊಸ ಯೋಜನೆ ಅಡಿ ಸಾಮಾನ್ಯ ಕಾರು ಮಾದರಿಗಳಲ್ಲದೆ ಎಲೆಕ್ಟ್ರಿಕ್ ಕಾರು ಮಾದರಿಗಳು ಸಹ ಸೇರಿದ್ದು, ಸಹಭಾಗಿತ್ವ ಯೋಜನೆ ಅಡಿ ನಿರ್ಮಾಣವಾಗುವ ಮೊದಲ ಕಾರು 2021ರ ಮಧ್ಯಂತರದಲ್ಲಿ ಅಧಿಕೃತವಾಗಿ ರಸ್ತೆಗಿಳಿಯಲಿದೆ.

ಜಂಟಿ ಯೋಜನೆ ಅಡಿ ಅಭಿವೃದ್ದಿಗೊಳ್ಳುತ್ತಿರುವ ಹೊಸ ಸಿ ಸೆಗ್ಮೆಂಟ್ ಕಾರು ಎಕ್ಸ್‌ಯುವಿ500 ಕಾರಿಗೆ ಸರಿಸಮನಾಗಿ ಬಿಡುಗಡೆಯಾಗಲಿದ್ದು, ನೆಕ್ಸ್ಟ್ ಜನರೇಷನ್ ಎಕ್ಸ್‌ಯುವಿ500 ಬಿಡುಗಡೆಯ ನಂತರವೇ ಫೋರ್ಡ್ ಮತ್ತು ಮಹೀಂದ್ರಾ ನಿರ್ಮಾಣದ ಹೊಸ ಕಾರು ಮಾರುಕಟ್ಟೆ ಪ್ರವೇಶಿಸಲಿದೆ.

ಇಟಾಲಿಯನ್ ಕಾರು ವಿನ್ಯಾಸ ಕಂಪನಿಯಾದ ಪಿನಿನ್‌ಫರಿನಾ ಕಂಪನಿಯು ಹೊಸ ಕಾರಿನ ವಿನ್ಯಾಸ ಸಿದ್ದಪಡಿಸಿದ್ದು, ಪಿನಿನ್‌ಫರಿನಾ ವಿಶ್ವದ ಹಲವಾರು ಜನಪ್ರಿಯ ಕಾರುಗಳಿಗೆ ವಿನ್ಯಾಸ ಒದಗಿಸಿ ಜನಪ್ರಿಯತೆ ಪಡೆದಿದೆ. ಇದು ಮಹೀಂದ್ರಾ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮಹೀಂದ್ರಾ ಕಾರು ಮಾದರಿಗಳಿಗೆ ಇನ್ಮುಂದೆ ಪಿನಿನ್‌ಫರಿನಾ ಕಂಪನಿಯೇ ಹೊಸ ವಿನ್ಯಾಸ ಸಿದ್ದಪಡಿಸಲಿದೆ.

ಸಿ ಸೆಗ್ಮೆಂಟ್ ಎಸ್‌ಯುವಿ ಕಾರಿಗೆ ಮಾತ್ರವಲ್ಲದೆ ಇಕೋಸ್ಪೋಟ್ ಮಾದರಿಗೆ ಸಮನಾಗಿ ಬಿಡುಗಡೆಯಾಗಲಿರುವ ಮತ್ತೊಂದು ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗೂ ಇದೇ ಕಂಪನಿಯು ವಿನ್ಯಾಸ ಒದಗಿಸುತ್ತಿದ್ದು, ಹೊಸ ತಲೆಮಾರಿನ ಎಕ್ಸ್‌ಯುವಿ ಮಾದರಿಯಿಂದಲೂ ಹೊಸ ಕಾರು ಕೆಲವು ತಾಂತ್ರಿಕ ಸೌಲಭ್ಯಗಳನ್ನು ಎರವಲು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಹೊಸ ಎಕ್ಸ್‌ಯುವಿ500 ಮತ್ತು ಜಂಟಿ ಕಾರು ಉತ್ಪಾದನಾ ಯೋಜನೆ ಕಾರು ಮಾದರಿಯು ಒಂದೇ ಪ್ಲ್ಯಾಟ್‌ಫಾರ್ಮ್‌ನಲ್ಲಿ ಸಿದ್ದಗೊಳ್ಳಲಿದ್ದು, ಒಂದೇ ಮಾದರಿಯ ಚಾರ್ಸಿ ಹೊಂದಿದ್ದರೂ ವಿಭಿನ್ನ ವಿನ್ಯಾಸಗಳನ್ನು ಹೊಂದಿರಲಿವೆ.

ಸದ್ಯಕ್ಕೆ ಜಂಟಿ ಯೋಜನೆಯ ಎಸ್‌ಯುವಿ ಮಾದರಿಯನ್ನು ಸಿಎಕ್ಸ್ 757 ಸಂಕೆೇತದೊಂದಿಗೆ ಹೆಸರಿಸಲಾಗಿದ್ದು, ಶೀಘ್ರದಲ್ಲೇ ಹೊಸ ಕಾರಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳಿಗೆ ಚಾಲನೆ ನೀಡಲಿದೆ. ತದನಂತರವಷ್ಟೇ ಹೊಸ ಕಾರನ್ನು ಅನಾವರಣಗೊಳಿಸಲಿರುವ ಉಭಯ ಕಂಪನಿಗಳು ಮುಂಬರುವ ಜೂನ್ ಅಥವಾ ಜುಲೈ ಹೊತ್ತಿಗೆ ಹೊಸ ಕಾರನ್ನು ಬಿಡುಗಡೆ ಮಾಡಲಿವೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹೊಸ ಕಾರಿನ ಕುರಿತಾಗಿ ಇದುವರೆಗೂ ಯಾವುದೇ ಅಧಿಕೃತ ಮಾಹಿತಿಯಿಲ್ಲವಾದರೂ ಹೊಸ ಕಾರು ನ್ಯೂ ಜನರೇಷನ್ ಎಕ್ಸ್‌ಯುವಿ500 ಮಾದರಿಯಲ್ಲಿ 2.2-ಲೀಟರ್ ಡೀಸೆಲ್ ಮತ್ತು 2.0-ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳುವ ನೀರಿಕ್ಷೆಯಿದೆ.

ಹಾಗೆಯೇ ಪ್ರಸ್ತುತ ಮಾರುಕಟ್ಟೆಯಲ್ಲಿ ರೂ.15 ಲಕ್ಷದಿಂದ ರೂ.19 ಲಕ್ಷ ಬೆಲೆ ಅಂತರದಲ್ಲಿ ಬಲಿಷ್ಠವಾದ ಸಿ-ಸೆಗ್ಮೆಂಟ್ ಎಸ್‌ಯುವಿ ಕಾರುಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಮಹೀಂದ್ರಾ ಎಕ್ಸ್‌ಯುವಿ500, ಟಾಟಾ ಹ್ಯಾರಿಯರ್ ಮತ್ತು ಜೀಪ್ ಕಂಪಾಸ್ ಕಾರುಗಳು ಉತ್ತಮ ಬೇಡಿಕೆ ಪಡೆದುಕೊಂಡಿರುವುದು ಫೋರ್ಡ್-ಮಹೀಂದ್ರಾ ಸಹಭಾಗಿತ್ವದ ಹೊಸ ಕಾರುಗಳಿಗೆ ಪ್ರಮುಖ ಪ್ರೇರಣೆಯಾಗಿದೆ.
MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಇನ್ನು ಗ್ರಾಹಕರ ಬೇಡಿಕೆಯೆಂತೆ ಒಟ್ಟು 9 ಹೊಸ ಕಾರುಗಳನ್ನು ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಲಾಗಿದ್ದು, ಫೋರ್ಡ್ ಎಕ್ಸ್‌ಪ್ಲೊರರ್ ಮಾದರಿಯಲ್ಲಿ ನಿರ್ಮಾಣಗೊಳ್ಳಲಿರುವ ಹೊಸ ಕಾರು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ಟಾಟಾ ಹ್ಯಾರಿಯರ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.