2021ರ ಇ-ಪೇಸ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಜಾಗ್ವಾರ್

ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿಯು ತನ್ನ ಎಕ್ಸ್‌ಇ, ಎಕ್ಸ್‌ಎಫ್ ಮತ್ತು ಎಫ್-ಪೇಸ್‌ನ ನಂತರ ಈಗ ತನ್ನ ಎಂಟ್ರಿ ಲೆವೆಲ್ ಐಷಾರಾಮಿ ಎಲೆಕ್ಟ್ರಿಕ್ ಎಸ್‌ಯುವಿ ಇ-ಪೇಸ್ ಅನ್ನು ಅನಾವರಣಗೊಳಿಸಿದೆ. ಈ ಹೊಸ ಜಾಗ್ವಾರ್ ಇ-ಪೇಸ್ ಕಾಸ್ಮೆಟಿಕ್ ಮತ್ತು ಸಣ್ಣ ವಿನ್ಯಾಸ ನವೀಕರಣಗಳನ್ನು ನಡೆಸಿದ್ದಾರೆ.

2021ರ ಇ-ಪೇಸ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಜಾಗ್ವಾರ್

ಈ ಹೊಸ ಎಲೆಕ್ಟ್ರಿಕ್ ಎಸ್‍ಯುವಿ ಹೊರಗಿನ ಬದಲಾವಣೆಗಳು ಹೆಚ್ಚು ಸೂಕ್ಷ್ಮವಾಗಿವೆ ಮತ್ತು ಹೊಸದನ್ನು ಕಂಡುಹಿಡಿಯಲು ಹೆಚ್ಚು ಹೊತ್ತು ಸಮಯವನ್ನು ತೆಗೆದುಕೊಳ್ಳಬಹುದು. ಈ ಹೊಸ ಜಾಗ್ವಾರ್ ಇ-ಪೇಸ್ ಎಲೆಕ್ಟ್ರಿಕ್ ಎಸ್‍ಯುವಿ ಕ್ರೋಮ್ ಸರೌಂಡ್‌ನೊಂದಿಗೆ ದಪ್ಪವಾದ ಮೆಶ್ ಗ್ರಿಲ್ ಅನ್ನು ಪಡೆಯುತ್ತದೆ. ಇದರೊಂದಿಗೆ ಕ್ರೋಮ್ ಗಳನ್ನು ಹೊಂದಿವೆ. ಇನ್ನು ಡಬಲ್ ಜೆ-ಬ್ಲೇಡ್ ಎಲ್ಇಡಿ ವಿನ್ಯಾಸವನ್ನು ಹೊಂದಿರುವ ಹೊಸ ಹೆಡ್‌ಲೈಟ್‌ಗಳಿವೆ.

2021ರ ಇ-ಪೇಸ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಜಾಗ್ವಾರ್

ಇನ್ನು ಕ್ಯಾಬಿನ್ ಒಳಗೆ ಕಾಲಿಟ್ಟ ನಂತರ ನವೀಕರಣಗಳು ನಿಜವಾಗಿಯೂ ಅರಿವಾಗುತ್ತದೆ. ಹೊಸ ಸಂಟ್ರೋಲ್ ಕನ್ಸೋಲ್ ಇದೆ ಮತ್ತು 11.4-ಇಂಚಿನ ಗ್ಲಾಸ್ ಟಚ್‌ಸ್ಕ್ರೀನ್ ಅನ್ನು ಹೊಂದಿದೆ. ಜಾಗ್ವಾರ್ ಪಿವಿ ಪ್ರೊ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಗೂಗಲ್ ಮತ್ತು ಮೈಕ್ರೋಸಾಫ್ಟ್ ಔಟ್ ಲುಕ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗಳವರೆಗೆ ಎಲ್ಲವನ್ನೂ ಒಳಗೊಂಡಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

2021ರ ಇ-ಪೇಸ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಜಾಗ್ವಾರ್

ಡ್ಯುಯಲ್-ಸ್ಪೋಕ್ ವಿನ್ಯಾಸದೊಂದಿಗೆ ಹೊಸ ಸ್ಟೀಯರಿಂಗ್ ವ್ಹೀಲ್ ಅನ್ನು ಹೊಂದಿದೆ. 12.3-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಸಹ ಪಡೆಯುತ್ತದೆ. ಇನ್ನು ರೇರ್ ವ್ಯೂ ಮಿರರ್ ಟೆಕ್ ಮುಂತಾದ ಸಣ್ಣ ನವೀಕರಣಗಳು ಸಹ ಇವೆ.

2021ರ ಇ-ಪೇಸ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಜಾಗ್ವಾರ್

ಅದು ಹೈ-ಡೆಫಿನಿಷನ್ ಚಿತ್ರವನ್ನು ಪ್ರದರ್ಶಿಸಲು ವಿಶಾಲವಾದ ಹಿಂದಿನ ಕ್ಯಾಮೆರಾವನ್ನು ಬಳಸುತ್ತದೆ. ಫ್ರೇಮ್‌ಲೆಸ್ ರಿಯರ್ ವ್ಯೂ ಮಿರರ್ ಹೊಂದಿದ್ದು, ಯಾಂತ್ರಿಕವಾಗಿ, ಹೊಸ ಜಾಗ್ವಾರ್ ಇ-ಪೇಸ್ ಬದಲಾಗದೆ ಉಳಿದಿದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

2021ರ ಇ-ಪೇಸ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಜಾಗ್ವಾರ್

ಹೊಸ ಜಾಗ್ವಾರ್ ಇ-ಪೇಸ್ ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ ಲೀಟರ್, ನಾಲ್ಕು-ಸಿಲಿಂಡರ್, ಡೀಸೆಲ್ ಮತ್ತು ಪೆಟ್ರೋಲ್ ಪವರ್‌ಟ್ರೇನ್‌ಗಳನ್ನು ಪಡೆಯುತ್ತದೆ, ಇದರೊಂದಿಗೆ 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

2021ರ ಇ-ಪೇಸ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಜಾಗ್ವಾರ್

ಇದು ನಾಲ್ಕು ಚಕ್ರಗಳಿಗೆ ಪವರ್ ಅನ್ನು ಗಳಿಸುತ್ತದೆ. ಡೀಸೆಲ್ ಎಂಜಿನ್ 161 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸಿದರೆ, ಪೆಟ್ರೋಲ್ ಎಂಜಿನ್ 296 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ 1.5-ಲೀಟರ್, ಮೂರು-ಸಿಲಿಂಡರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

2021ರ ಇ-ಪೇಸ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಜಾಗ್ವಾರ್

ಇನ್ನು ಮೈಲ್ಡ್ ಹೈಬ್ರಿಡ್ ಸೆಟಪ್ ಅಥವಾ ಪ್ಲಗ್-ಇನ್ ಹೈಬ್ರಿಡ್ ಸಿಸ್ಟಂ ಅನ್ನು ಹೊಂದಬಹುದು. ಇದು 305 ಬಿಎಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. 15 ಕಿ.ವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಅನ್ನು ಹೊಂದಿದೆ.

2021ರ ಇ-ಪೇಸ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಜಾಗ್ವಾರ್

ಹೊಸ ಜಾಗ್ವಾರ್ ಇ-ಪೇಸ್ ಎಲೆಕ್ಟ್ರಿಕ್ ಎಸ್‍ಯುವಿಯು ಕೇವಲ 6.1 ಸೆಕೆಂಡುಗಳಲ್ಲಿ 0-100 ಕಿ.ಮೀ ಕ್ರಮಿಸುತ್ತದೆ. ಹೊಸ ಜಾಗ್ವಾರ್ ಇ-ಪೇಸ್ ಎಲೆಕ್ಟ್ರಿಕ್ ಎಸ್‍ಯುವಿಯು ಶೀಘ್ರದಲ್ಲೇ ಅಂತರರಾಷ್ಟ್ರೀಯ ಮರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
2021 Jaguar E-Pace Unveiled In Europe. Read In Kannada.
Story first published: Thursday, October 29, 2020, 17:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X