ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಫೋಕ್ಸ್‌ವ್ಯಾಗನ್ ಪಸಾಟ್

2020ರ ಫೋಕ್ಸ್‌ವ್ಯಾಗನ್ ಪಸಾಟ್ ಬಿಎಸ್-6 ಕಾರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಮೊದಲು ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಪಸಾಟ್ ಕಾರ್ ಅನ್ನು ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸುತ್ತಿರುವುದನ್ನು ರಶ್‍‍ಲೇನ್ ಸ್ಪೈ ಚಿತ್ರವನ್ನು ಬಹಿರಂಗಪಡಿಸಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಫೋಕ್ಸ್‌ವ್ಯಾಗನ್ ಪಸಾಟ್

ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಬಿಎಸ್-6, 2020ರ ಫೋಕ್ಸ್‌ವ್ಯಾಗನ್ ಪಸಾಟ್ ಕಾರಿನ ಸ್ಪೈ ಚಿತ್ರದಲ್ಲಿ ಹೊರಭಾಗದಲ್ಲಿ ಸಣ್ಣ ವಿನ್ಯಾಸ ಬದಲಾವಣೆಗಳನ್ನು ಬಹಿರಂಗಪಡಿಸುತ್ತದೆ. ಹೊಸ ಸೆಡಾನ್‍ನಲ್ಲಿ ಫ್ರಂಟ್ ಬಂಪರ್, ಸ್ಲ್ಯಾಟ್‍‍ಗಳನ್ನು ಹೊಂದಿರುವ ಗ್ರಿಲ್ ಮತ್ತು ಐಕ್ಯೂ ಲೈಟ್ ಎಲ್‍ಇ‍ಡಿ ಮ್ಯಾಟ್ರಿಕ್ಸ್ ಹೆಡ್‍‍ಲ್ಯಾಂಪ್‍‍ಗಳನ್ನು ಒಳಗೊಂಡಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಫೋಕ್ಸ್‌ವ್ಯಾಗನ್ ಪಸಾಟ್

ಪಸಾಟ್ ಕಾರು ಹೊಸ ಟೇಲ್ ಲ್ಯಾಂಪ್ ಕ್ಲಸ್ಟರ್ ವಿನ್ಯಾಸವನ್ನು ಕೂಡ ಹೊಂದಿದ. ಹೊಸ ಕಾರಿನಲ್ಲಿ ಮರುವಿನ್ಯಾಸಗೊಳಿಸಲಾದ ಪಸಾಟ್ ಲೋಗೊವನ್ನು ಅಳವಡಿಸಲಾಗಿದೆ. ಮುಂಬರುವ ಫೋಕ್ಸ್ ವ್ಯಾಗನ್ ಸೆಡಾನ್ 17 ಇಂಚಿನ ಅಲಾಯ್ ವ್ಹೀಲ್‍‍ಗಳನ್ನು ಸಹ ಹೊಂದಿದೆ. ಕಂಪನಿಯು 18 ಇಂಚಿನ ಮತ್ತು 19 ಇಂಚಿನ ವ್ಹೀಲ್‍‍ಗಳ ಆಯ್ಕೆಯನ್ನು ನೀಡಬಹುದು.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಫೋಕ್ಸ್‌ವ್ಯಾಗನ್ ಪಸಾಟ್

ಸ್ಪೈ ಚಿತ್ರದಲ್ಲಿ ಕಾರಿನ ಇಂಟಿರಿಯರ್‍‍ನಲ್ಲಿ ಮಾಡಿದ ಬದಲಾವಣೆಗಳು ಯಾವುದು ತಿಳಿದು ಬಂದಿಲ್ಲ. ಆದರೆ 2020ರ ಪಸಾಟ್ ಬಿ‍ಎಸ್-6 ಮಾದರಿಯು ಅತ್ಯಾಧುನಿಕ ಫೀಚರ್ಸ್‍‍ಗಳೊಂದಿಗೆ ಇರಲಿದೆ ಎಂದು ನಿರೀಕ್ಷಿಸಬಹುದು.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಫೋಕ್ಸ್‌ವ್ಯಾಗನ್ ಪಸಾಟ್

ಹೊಸ ಕಾರಿನ ಇಂಟಿರಿಯರ್‍‍ನಲ್ಲಿ ಇತ್ತೀಚಿನ ಎಂಐಬಿ3 ಆಧಾರಿತ ಇನ್ಫೋಟೇನ್‍‍ಮೆಂಟ್ ಸಿಸ್ಟಂ, ಇಂಟಿಗ್ರೇಟೆಡ್ ಇಂಟರ್‍‍ನೆಟ್ ಕನೆಕ್ಟಿವಿಟಿ ಎಲ್ಲಾ ಹೊಸ ಡಿಜಿಟಲ್ ಕಾಕ್‍‍ಪಿಟ್ ಮತ್ತು ಕೆಪ್ಯಾಸಿಟಿವ್ ಸ್ಟೀಟಿಯರಿಂಗ್ ಅನ್ನು ಹೊಂದಿರಲಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಫೋಕ್ಸ್‌ವ್ಯಾಗನ್ ಪಸಾಟ್

ಮುಂಬರುವ 2020ರ ಪಸಾಟ್ ಕಾರ್ ಅನ್ನು ಆಯ್ದ ಸ್ಯಾಮ್‍‍ಸಂಗ್ ಸ್ಮಾರ್ಟ್‍‍ಪೋನ್‍‍ಗಳನ್ನು ಬಳಿಸಿ ಲಾಕ್ ಮಾಡಲು ಮತ್ತು ಅನ್ ಲಾಕ್ ಮಾಡಲು ಸಾಧ್ಯವಾಗುತ್ತದೆ. ಇದು ಸ್ಯಾಮ್‍‍ಸಾಂಗ್‍‍ನ ಕೆಲವು ಆಯ್ದ ಮೊಬೈಲ್ ಮಾದರಿಗಳಲ್ಲಿ ಮಾತ್ರ ಸಾಧ್ಯವಾಗುತ್ತದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಫೋಕ್ಸ್‌ವ್ಯಾಗನ್ ಪಸಾಟ್

ಹೊಸ ಫೋಕ್ಸ್ ವ್ಯಾಗನ್ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಹಲವಾರು ಹೊಸ ಫೀಚರ್ಸ್‍‍ಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಫಾರ್ವರ್ಡ್ ಡಿಕ್ಕಿ ವಾರ್ನಿಂಗ್ ಸಿಸ್ಟಂ, ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಂ, ಮಾನಿಟರಿಂಗ್ ಸಿಸ್ಟಂ, ರೇರ್ ಟ್ರಾಫಿಕ್ ಅಲರ್ಟ್ ಸಿಸ್ಟಂ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಲೇನ್ ಕೀಪಿಂಗ್ ಅಸಿಸ್ಟ್ ಅನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

MOST READ: ದುಬಾರಿ ಬೆಂಝ್ ಕಾರನ್ನು ಹೆಲಿಕಾಪ್ಟರ್ ಮೂಲಕ ಪುಡಿ ಮಾಡಿದ ಭೂಪ

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಫೋಕ್ಸ್‌ವ್ಯಾಗನ್ ಪಸಾಟ್

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬಿಎಸ್-4 ಪಸಾಟ್ ಸೆಡಾನ್ 2.0 ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 174 ಬಿ‍‍ಹೆಚ್‍‍ಪಿ ಪವರ್ ಮತ್ತು 350 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

MOST READ: ಕಳ್ಳತನವಾಗಿದ್ದ ಕಾರು ಫಾಸ್ಟ್‌ಟ್ಯಾಗ್‌‍‍ನಿಂದಾಗಿ ವಾಪಸ್ ಸಿಕ್ಕಿದ್ದೆ ಒಂದು ರೋಚಕ

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಫೋಕ್ಸ್‌ವ್ಯಾಗನ್ ಪಸಾಟ್

ಹೊಸ ಪಸಾಟ್ ಬಿಎಸ್-6 ಮಾದರಿಯಲ್ಲಿ 2.0 ಲೀಟರ್ ಟಿಎಸ್ಐ, ಟರ್ಬೋಚಾಜ್ಛ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 187 ಬಿ‍ಹೆಚ್‍‍ಪಿ ಪವರ್ ಮತ್ತು 320 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ ಡಿಎಸ್‍‍ಜಿ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅನ್ನು ಅಳವಡಿಸಲಾಗಿದೆ.

MOST READ: ಹೊಸ ಲುಕ್‍‍ನಲ್ಲಿ ಮಿಂಚಿದ ಮಾಡಿಫೈ ಕಿಯಾ ಸೆಲ್ಟೋಸ್

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಫೋಕ್ಸ್‌ವ್ಯಾಗನ್ ಪಸಾಟ್

ಪ್ರಸ್ತುತ ದೇಶಿಯ ಮಾರುಟ್ಟೆಯಲ್ಲಿರುವ ಫೋಕ್ಸ್ ವ್ಯಾಗನ್ ಪಸಾಟ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.25.99 ಲಕ್ಷದಿಂದ 33.22 ಲಕ್ಷಗಳಾಗಿದೆ. ಹೊಸ ಬಿಎಸ್-6 ಮಾದರಿಗೆ ಪ್ರಸ್ತುತ ಪಸಾಟ್ ಮಾದರಿಗಿಂತ ರೂ.2.5 ಲಕ್ಷದಿಂದ ರೂ.4.5 ಲಕ್ಷಗಳವರೆಗೆ ಬೆಲೆ ಹೆಚ್ಚಾಗಬಹುದು.

Most Read Articles

Kannada
English summary
Spy Pics: Volkswagen Passat BS6 2020 Model Spotted Testing Ahead Of India Launch - Read in Kannada
Story first published: Monday, January 6, 2020, 15:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X