ದೀಪಾವಳಿ ಸಂಭ್ರಮಕ್ಕಾಗಿ ಪೊಲೊ ಮತ್ತು ವೆಂಟೊ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿಯು ದಸರಾ ಮತ್ತು ದೀಪಾವಳಿ ಸಂಭ್ರಮಕ್ಕಾಗಿ ತನ್ನ ಜನಪ್ರಿಯ ಕಾರು ಮಾದರಿಗಳಾದ ಪೊಲೊ ಹ್ಯಾಚ್‌ಬ್ಯಾಕ್ ಮತ್ತು ವೆಂಟೊ ಸೆಡಾನ್ ಮಾದರಿಗಳಲ್ಲಿ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದೆ.

ಪೊಲೊ ಮತ್ತು ವೆಂಟೊ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ ಫೋಕ್ಸ್‌ವ್ಯಾಗನ್

ಪೊಲೊ ಹ್ಯಾಚ್‌ಬ್ಯಾಕ್ ಮತ್ತು ವೆಂಟೊ ಸೆಡಾನ್ ಮಾದರಿಗಳಲ್ಲಿ ಬಿಡುಗಡೆ ಮಾಡಲಾಗಿರುವ ರೆಡ್ ಆ್ಯಂಡ್ ವೈಟ್ ಮಾದರಿಗಳು ಸೀಮಿತ ಅವಧಿಗೆ ಮಾತ್ರ ಖರೀದಿಗೆ ಲಭ್ಯವಿರವಿದ್ದು, ಹೊಸ ಕಾರು ಮಾದರಿಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 9.19 ಲಕ್ಷಕ್ಕೆ ಮತ್ತು 11.49 ಲಕ್ಷಕ್ಕೆ ಖರೀದಿಗೆ ಲಭ್ಯವಿರಲಿವೆ. ದಸರಾ ಮತ್ತು ದೀಪಾವಳಿ ಹಬ್ಬಗಳ ಸಂಭ್ರಮಕ್ಕಾಗಿ ಫೋಕ್ಸ್‌ಫೆಸ್ಟ್ 2020 ಅಭಿಯಾನದಡಿ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಲಾಗಿದ್ದು, ಹೊಸ ಕಾರುಗಳು ಬಣ್ಣಗಳ ಆಯ್ಕೆ ಹೊರತುಪಡಿಸಿ ಸ್ಟ್ಯಾಂಡರ್ಡ್ ಮಾದರಿಯಲ್ಲೇ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿವೆ.

ಪೊಲೊ ಮತ್ತು ವೆಂಟೊ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ ಫೋಕ್ಸ್‌ವ್ಯಾಗನ್

ರೆಡ್ ಆ್ಯಂಡ್ ವೈಟ್ ಪೊಲೊ ಮತ್ತು ವೆಂಟೊ ಕಾರುಗಳ ಮಾದರಿಗಳಿಗಾಗಿ ಯಾವುದೇ ಹೆಚ್ಚುವರಿ ದರ ವಿಧಿಸದ ಫೋಕ್ಸ್‌ವ್ಯಾಗನ್ ಕಂಪನಿಯು ಸ್ಟ್ಯಾಂಡರ್ಡ್ ಮಾದರಿಯಲ್ಲೇ ಮಾರಾಟ ಮಾಡಲಿದ್ದು, ಸ್ಪೆಷಲ್ ಎಡಿಷನ್ ಮಾದರಿಗಳು ಹೈ ಎಂಡ್ ವೆರಿಯೆಂಟ್‌ಗಳಲ್ಲಿ ಪರಿಚಯಿಸಲಾಗಿದೆ.

ಪೊಲೊ ಮತ್ತು ವೆಂಟೊ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ ಫೋಕ್ಸ್‌ವ್ಯಾಗನ್

ಪೊಲೊ ಮತ್ತು ವೆಂಟೊ ಹೈಲೈನ್ ಆಟೋಮ್ಯಾಟಿಕ್ ವೆರಿಯೆಂಟ್‌ಗಳಲ್ಲಿ ಸ್ಪೆಷಲ್ ಎಡಿಷನ್ ಆಫರ್ ಮಾಡಲಾಗುತ್ತಿದ್ದು, ರೆಡ್ ಆ್ಯಂಡ್ ವೈಟ್ ಮಾದರಿಯು ಫ್ಯಾಶ್ ರೆಡ್, ಸನ್‌ಸೆಟ್ ರೆಡ್ ಮತ್ತು ಕ್ಯಾಂಡಿ ವೈಟ್ ಬಣ್ಣಗಳನ್ನು ಆಧರಿಸಿ ಸ್ಪೆಷಲ್ ಎಡಿಷನ್ ಅಭಿವೃದ್ದಿಗೊಳಿಸಿದೆ.

ಪೊಲೊ ಮತ್ತು ವೆಂಟೊ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ ಫೋಕ್ಸ್‌ವ್ಯಾಗನ್

ರೆಡ್ ಆ್ಯಂಡ್ ವೈಟ್ ಬಣ್ಣಗಳ ಆಯ್ಕೆ ಹೊಂದಿರುವ ಪೊಲೊ ಮತ್ತು ವೆಂಟೊ ಮಾದರಿಗಳಲ್ಲಿ ರೂಫ್, ರಿಯರ್ ವ್ಯೂ ಮಿರರ್, ಬೂಟ್ ಸ್ಪಾಯ್ಲರ್‌ ಮತ್ತು ಡೋರ್ ಲೈನ್‌ಗಳು ಆಕರ್ಷಕವಾಗಿದ್ದು, ರಿಯಲ್ ವ್ಯೂ ಮಿರರ್ ಮತ್ತು ಹಿಂಭಾಗದ ಟೈಲ್‌ಲೈಟ್ ಕೆಳಭಾಗದಲ್ಲಿ ಸ್ಪೆಷಲ್ ಎಡಿಷನ್ ಬ್ಯಾಡ್ಜ್ ಅಳವಡಿಸಲಾಗಿದೆ.

ಪೊಲೊ ಮತ್ತು ವೆಂಟೊ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ ಫೋಕ್ಸ್‌ವ್ಯಾಗನ್

ಹಾಗೆಯೇ ಹೊಸ ಕಾರುಗಳ ಖರೀದಿಗೆ ರೂ. 60 ಸಾವಿರದಷ್ಟು ಆಫರ್ ನೀಡುತ್ತಿರುವ ಫೋಕ್ಸ್‌ವ್ಯಾಗನ್ ಕಂಪನಿಯು ಬಿಡಿಭಾಗಗಳ ಸೇವಗಳ ಮೇಲೂ ಆಕರ್ಷಕ ಆಫರ್ ಘೋಷಣೆ ಮಾಡಿದ್ದು, ಹಬ್ಬದ ಋುತುವಿನಲ್ಲಿ ಗರಿಷ್ಠ ಪ್ರಮಾಣದ ಕಾರು ಮಾರಾಟ ಗುರಿಹೊಂದಿದೆ.

ಪೊಲೊ ಮತ್ತು ವೆಂಟೊ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ ಫೋಕ್ಸ್‌ವ್ಯಾಗನ್

ಇನ್ನು ಹ್ಯಾಚ್‌ಬ್ಯಾಕ್ ಮತ್ತು ಸೆಡಾನ್ ಮಾದರಿಗಳ ಮಾದರಿಗಳ ಮಾರಾಟದಲ್ಲಿ ಉತ್ತಮ ಬೇಡಿಕೆ ಹೊಂದಿರುವ ಪೊಲೊ ಮತ್ತು ವೆಂಟೊ ಕಾರುಗಳು ಅತ್ಯುತ್ತಮ ಎಂಜಿನ್ ಆಯ್ಕೆ ಹೊಂದಿದ್ದು, ಸ್ಪೆಷಲ್ ಎಡಿಷನ್‌ಗಳಲ್ಲಿ 1.0-ಲೀಟರ್ ಟಿಎಸ್ಐ ಟರ್ಬೋ ಪೆಟ್ರೋಲ್ ಎಂಜಿನ್ ಜೋಡಿಸಲಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಪೊಲೊ ಮತ್ತು ವೆಂಟೊ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ ಫೋಕ್ಸ್‌ವ್ಯಾಗನ್

ಟಿಎಸ್ಐ ಟರ್ಬೋ ಪೆಟ್ರೋಲ್ ಕಾರು ಮಾದರಿಗಳು ಸಿಕ್ಸ್ ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 109-ಬಿಎಚ್‌ಪಿ ಮತ್ತು 170-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಲೀಟರ್ ಪೆಟ್ರೋಲ್‌ಗೆ ಗರಿಷ್ಠ 16.47 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತವೆ.

ಪೊಲೊ ಮತ್ತು ವೆಂಟೊ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ ಫೋಕ್ಸ್‌ವ್ಯಾಗನ್

ಸ್ಪೆಷಲ್ ಎಡಿಷನ್ ಹೊರತುಪಡಿಸಿ ಸ್ಟ್ಯಾಂಡರ್ಡ್ ಪೊಲೊ ಕಾರು ಮಾದರಿಯು 1.0-ಲೀಟರ್ ಎಂಪಿಐ ಪೆಟ್ರೋಲ್ ಮತ್ತು 1.0-ಲೀಟರ್ ಟಿಎಸ್ಐ ಟರ್ಬೋ ಪೆಟ್ರೋಲ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.92 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯಾದ ಜಿಟಿ ಲೈನ್ ಆವೃತ್ತಿಯು ರೂ. 9.67 ಲಕ್ಷ ಬೆಲೆ ಹೊಂದಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಪೊಲೊ ಮತ್ತು ವೆಂಟೊ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ ಫೋಕ್ಸ್‌ವ್ಯಾಗನ್

ಹಾಗೆಯೇ ವೆಂಟೊ ಸೆಡಾನ್ ಮಾದರಿಯು ಕೂಡಾ 1.0-ಲೀಟರ್ ಎಂಪಿಐ ಪೆಟ್ರೋಲ್ ಮತ್ತು 1.0-ಲೀಟರ್ ಟಿಎಸ್ಐ ಟರ್ಬೋ ಪೆಟ್ರೋಲ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.98 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 13.30 ಲಕ್ಷ ಬೆಲೆ ಹೊಂದಿದೆ.

Most Read Articles

Kannada
English summary
Volkswagen Polo & Vento Red & White Special Edition Models Launched. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X