ದೀಪಾವಳಿ ಸಂಭ್ರಮದ ವೇಳೆ ಹೊಸ ಕಾರುಗಳ ಖರೀದಿಯು ಯಾಕೆ ಉತ್ತಮ ಗೊತ್ತಾ?

ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತದಲ್ಲಿ ಹಬ್ಬಗಳಿಗೆ ಸಾಕಷ್ಟು ಪ್ರಾಮುಖ್ಯತೆಯಿದ್ದು, ಅದರಲ್ಲೂ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮವು ಹೇಳತೀರದು. ಹಬ್ಬದ ಸಂಭ್ರಮಗಳಲ್ಲಿ ಹೊಸ ವಾಹನಗಳ ಮಾರಾಟ ಪ್ರಕ್ರಿಯೆ ಕೂಡಾ ಉಳಿದ ದಿನಗಳಿಂತಲೂ ಹೆಚ್ಚಿನ ಮಟ್ಟದಲ್ಲಿರಲಿದ್ದು, ದೀಪಾವಳಿ ಸಂಭ್ರಮದ ವೇಳೆ ಹೊಸ ವಾಹನ ಖರೀದಿಯು ಯಾಕೆ ಪ್ರಾಮಖ್ಯತೆ ಪಡೆದುಕೊಂಡಿದೆ ಎನ್ನುವುದನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ.

ದೀಪಾವಳಿ ಸಂಭ್ರಮದ ವೇಳೆ ಹೊಸ ಕಾರುಗಳ ಖರೀದಿಗೆ ಉತ್ತಮವಾದ ಸಮಯ ಏಕೆ ಗೊತ್ತಾ?

ಭಾರತದಲ್ಲಿ ಇತರೆ ಹಬ್ಬಗಳ ಸಂಭ್ರಮಗಳಿಂತಲೂ ದೀಪಾವಳಿ ಮತ್ತು ಯುಗಾದಿ ಹಬ್ಬಗಳು ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದ್ದು, ಹೊಸ ವಾಹನಗಳ ಖರೀದಿಗೆ ದೀಪಾವಳಿ ಸಂಭ್ರಮದಲ್ಲಿ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತದೆ. ದೇಶದ ಉದ್ಯಮಿಗಳಿಗಂತೂ ದೀಪಾವಳಿ ಸಂಭ್ರಮವು ಹೆಚ್ಚು ವಿಶೇಷವಾಗಿದ್ದು, ಸಮೃದ್ಧಿ ಹಾಗೂ ಯೋಗಕ್ಷೇಮಕ್ಕಾಗಿ ಲಕ್ಷ್ಮಿ ದೇವಿಯನ್ನು ಆರಾಧನೆ ಮಾಡಲಾಗುತ್ತದೆ. ಈ ವೇಳೆ ಹೊಸದಾಗಿ ವಾಹನ ಖರೀದಿ, ವ್ಯವಹಾರಗಳಲ್ಲಿ ಹೊಸದಾಗಿ ಹೂಡಿಕೆ ಮಾಡುವುದು ಹೆಚ್ಚು.

ದೀಪಾವಳಿ ಸಂಭ್ರಮದ ವೇಳೆ ಹೊಸ ಕಾರುಗಳ ಖರೀದಿಗೆ ಉತ್ತಮವಾದ ಸಮಯ ಏಕೆ ಗೊತ್ತಾ?

ಹಾಗಾದ್ರೆ ದೀಪಾವಳಿ ಸಂಭ್ರಮದಲ್ಲಿ ಹೊಸ ವಾಹನಗಳ ಖರೀದಿಯು ಯಾಕೆ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ? ಮತ್ತು ಹಬ್ಬದ ಋುತುಗಳಲ್ಲೇ ಹೊಸ ವಾಹನಗಳನ್ನು ಖರೀದಿ ಮಾಡುವುದರಿಂದ ಗ್ರಾಹಕರಿಗೆ ಹೇಗೆ ಲಾಭ ಎಂಬುವುದನ್ನು ಇಲ್ಲಿ ಚರ್ಚಿಸೋಣ.

ದೀಪಾವಳಿ ಸಂಭ್ರಮದ ವೇಳೆ ಹೊಸ ಕಾರುಗಳ ಖರೀದಿಗೆ ಉತ್ತಮವಾದ ಸಮಯ ಏಕೆ ಗೊತ್ತಾ?

01. ಶುಭ ಸಮಯ

ಮೇಲೆ ಹೇಳಿದಂತೆ ಇತರೆ ದಿನಗಳಲ್ಲಿ ವಾಹನ ಖರೀದಿ ಮಾಡುವುದಕ್ಕಿಂತಲೂ ಹಬ್ಬದ ಸಂಭ್ರಮದ ವೇಳೆ ಹೊಸ ವಾಹನಗಳ ಖರೀದಿಯು ವಾಹನ ಮಾಲೀಕತ್ವ ಹೊಂದಲು ಉತ್ತಮ ಸಮಯವಾಗಿರುತ್ತದೆ. ಇದೇ ಕಾರಣಕ್ಕೆ ದೇಶದ ಬಹುತೇಕ ಆಟೋ ಕಂಪನಿಗಳು ದೀಪಾವಳಿ ಸಂದರ್ಭದಲ್ಲಿ ಗರಿಷ್ಠ ಪ್ರಮಾಣದ ಹೊಸ ವಾಹನಗಳನ್ನು ಮಾರಾಟ ಮಾಡುತ್ತವೆ.

ದೀಪಾವಳಿ ಸಂಭ್ರಮದ ವೇಳೆ ಹೊಸ ಕಾರುಗಳ ಖರೀದಿಗೆ ಉತ್ತಮವಾದ ಸಮಯ ಏಕೆ ಗೊತ್ತಾ?

ಅದರಲ್ಲೂ ಮೊದಲ ಬಾರಿಗೆ ವಾಹನ ಖರೀದಿಸುವ ಗ್ರಾಹಕರು ಹಬ್ಬದ ಋುತುಗಳಲ್ಲೇ ಮಾಲೀಕತ್ವ ಹೊಂದುವ ಪ್ರಮಾಣವು ಹೆಚ್ಚಿದ್ದು, ನಿಗದಿತ ಅವಧಿಯಲ್ಲಿ ಖರೀದಿ ಮಾಡುವ ಹೊಸ ವಾಹನಗಳು ಇತರೆ ದಿನಗಳಲ್ಲಿ ಖರೀದಿ ಮಾಡಿದ ವಾಹನಗಳಿಂತಲೂ ಹೆಚ್ಚು ಬಾಳಿಕೆ ಬರುತ್ತವೆ ಎನ್ನುವ ನಂಬಿಕೆಯಿದೆ.

ದೀಪಾವಳಿ ಸಂಭ್ರಮದ ವೇಳೆ ಹೊಸ ಕಾರುಗಳ ಖರೀದಿಗೆ ಉತ್ತಮವಾದ ಸಮಯ ಏಕೆ ಗೊತ್ತಾ?

02. ಭರ್ಜರಿ ಡಿಸ್ಕೌಂಟ್‌ಗಳು

ಉಳಿದ ದಿನಗಳಲ್ಲಿ ಖರೀದಿ ಮಾಡುವ ವಾಹನಗಳಿಂತಲೂ ಹಬ್ಬದ ದಿನಗಳಲ್ಲಿ ಮಾರಾಟಗೊಳ್ಳುವ ವಾಹನಗಳ ಮೇಲೆ ಹೆಚ್ಚಿನ ಮಟ್ಟದ ಆಫರ್‌ಗಳನ್ನು ಲಭ್ಯವಿರಲಿದ್ದು, ಗ್ರಾಹಕರಿಗೆ ಹೆಚ್ಚಿನ ಮಟ್ಟದ ಉಳಿತಾಯಕ್ಕೆ ಅವಕಾಶವಿರುತ್ತದೆ.

ದೀಪಾವಳಿ ಸಂಭ್ರಮದ ವೇಳೆ ಹೊಸ ಕಾರುಗಳ ಖರೀದಿಗೆ ಉತ್ತಮವಾದ ಸಮಯ ಏಕೆ ಗೊತ್ತಾ?

ದೀಪಾವಳಿ ಸಂಭ್ರಮದಲ್ಲಿ ವಾಹನ ಖರೀದಿ ಮಾಡಿಯೇ ಮಾಡುತ್ತಾರೆ ಎನ್ನುವ ವಿಶ್ವಾಸದಲ್ಲಿರುವ ವಾಹನ ತಯಾರಿಕ ಕಂಪನಿಗಳು ಗರಿಷ್ಠ ಪ್ರಮಾಣದ ಡಿಸ್ಕೌಂಟ್‌ನೊಂದಿಗೆ ಗ್ರಾಹಕರನ್ನು ಸೆಳೆಯಲಿದ್ದು, 2020ರ ದೀಪಾವಳಿ ಸಂಭ್ರಮಕ್ಕಾಗಿ ಈಗಾಗಲೇ ಬಹುತೇಕ ಆಟೋ ಕಂಪನಿಗಳು ಎಕ್ಸ್‌ಕ್ಲೂಸಿವ್ ಆಫರ್ ಘೋಷಣೆ ಮಾಡಿವೆ.

ದೀಪಾವಳಿ ಸಂಭ್ರಮದ ವೇಳೆ ಹೊಸ ಕಾರುಗಳ ಖರೀದಿಗೆ ಉತ್ತಮವಾದ ಸಮಯ ಏಕೆ ಗೊತ್ತಾ?

03. ಹೊಸ ವಾಹನಗಳ ಬಿಡುಗಡೆ

ಹಬ್ಬದ ಸಂಭ್ರಮಕ್ಕಾಗಿ ಹೊಸ ವಾಹನ ಖರೀದಿ ಪ್ರಕ್ರಿಯೆ ಹೆಚ್ಚಿರುತ್ತದೆ ಎಂದು ಅರಿತಿರುವ ವಾಹನ ಕಂಪನಿಗಳು ಹಬ್ಬದ ಸಂಭ್ರಮದ ವೇಳೆಯೆ ಹೊಸ ಮಾದರಿಯ ವಾಹನ ಬಿಡುಗಡೆ ಮಾಡುತ್ತವೆ. ಹಬ್ಬದ ಸಂಭ್ರಮದಲ್ಲಿರುವ ಗ್ರಾಹಕರಿಗೆ ಹೊಸ ವಾಹನಗಳು ಆಕರ್ಷಣೆ ಮಾಡಲಿದ್ದು, ಕಾರು ತಯಾರಿಕೆಗಳಿಂತೂ ಈ ಸಂದರ್ಭವು ಅತಿ ಮುಖ್ಯವಾಗಿರುತ್ತದೆ.

ದೀಪಾವಳಿ ಸಂಭ್ರಮದ ವೇಳೆ ಹೊಸ ಕಾರುಗಳ ಖರೀದಿಗೆ ಉತ್ತಮವಾದ ಸಮಯ ಏಕೆ ಗೊತ್ತಾ?

ದೇಶದ ಪ್ರಮುಖ ಕಾರು ತಯಾರಿಕಾ ಕಂಪನಿಗಳಾದ ಮಾರುತಿ ಸುಜುಕಿ, ರೆನಾಲ್ಟ್, ನಿಸ್ಸಾನ್, ಬಿಎಂಡಬ್ಲ್ಯು ಮತ್ತು ಲ್ಯಾಂಡ್ ರೋವರ್ ಕಂಪನಿಗಳು ಇದೇ ತಿಂಗಳಿನಲ್ಲಿ ವಿವಿಧ ಮಾದರಿಯ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದು, ಗ್ರಾಹಕರು ತಮ್ಮ ಬಜೆಟ್‌ಗೆ ಅನುಗುಣವಾಗಿ ಎಂಟ್ರಿ ಲೆವಲ್ ಕಾರುಗಳ ಜೊತೆ ಐಷಾರಾಮಿ ಕಾರುಗಳು ಸಹ ಖರೀದಿಗೆ ಲಭ್ಯವಿರಲಿವೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ದೀಪಾವಳಿ ಸಂಭ್ರಮದ ವೇಳೆ ಹೊಸ ಕಾರುಗಳ ಖರೀದಿಗೆ ಉತ್ತಮವಾದ ಸಮಯ ಏಕೆ ಗೊತ್ತಾ?

04. ಕಾಯುವಿಕೆಯ ಅವಧಿ

ಯಾವುದೇ ಕಂಪನಿಯ ಕಾರುಗಳ ಖರೀದಿಗೆ ಬುಕ್ಕಿಂಗ್ ಮಾಡಿದ ನಂತರ ಇಂತಿಷ್ಟು ದಿನಗಳ ಕಾಯುವಿಕೆ ಅವಧಿಯು ಸಾಮಾನ್ಯವಾಗಿರುತ್ತದೆ. ಕಾರು ಕಂಪನಿಗಳ ಆಧಾರದ ಕಾಯುವಿಕೆ ಅವಧಿಯು ಕೆಲವು ಕಾರು ಮಾದರಿಗಳಿಗೆ ಹೆಚ್ಚಿದ್ದಲ್ಲಿ ಇನ್ನು ಕೆಲವು ಕಾರು ಮಾದರಿಗಳಿಗೆ ಬುಕ್ಕಿಂಗ್ ಮಾಡಿದ ಕೆಲವೇ ದಿನಗಳಲ್ಲಿ ವಿತರಣೆ ಮಾಡಲಾಗುತ್ತದೆ.

ದೀಪಾವಳಿ ಸಂಭ್ರಮದ ವೇಳೆ ಹೊಸ ಕಾರುಗಳ ಖರೀದಿಗೆ ಉತ್ತಮವಾದ ಸಮಯ ಏಕೆ ಗೊತ್ತಾ?

ಆದರೆ ಹಬ್ಬದ ಸಂದರ್ಭದಲ್ಲಿ ಇಂತದ್ದೆ ದಿನ ಕಾರು ವಿತರಣೆ ಪಡೆದುಕೊಳ್ಳಬೇಕೆಂಬ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಯತ್ನಿಸುವ ಆಟೋ ಕಂಪನಿಗಳು ಸಾಧ್ಯವಾದಷ್ಟು ಅತಿ ಕಡಿಮೆ ಅವಧಿಯಲ್ಲಿ ಹೊಸ ವಾಹನಗಳನ್ನು ವಿತರಣೆ ಮಾಡಲಿದ್ದು, ವಾಹನ ಉತ್ಪಾದನಾ ಪ್ರಮಾಣವನ್ನು ಸಹ ಉಳಿದ ದಿನಗಳಿಂತಲೂ ಹೆಚ್ಚು ಉತ್ಪಾದನೆ ಕೈಗೊಳ್ಳಲಾಗುತ್ತಿರುತ್ತದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ದೀಪಾವಳಿ ಸಂಭ್ರಮದ ವೇಳೆ ಹೊಸ ಕಾರುಗಳ ಖರೀದಿಗೆ ಉತ್ತಮವಾದ ಸಮಯ ಏಕೆ ಗೊತ್ತಾ?

ಎಕ್ಸ್‌ಚೆಂಜ್ ಆಫರ್ ಮತ್ತು ಫೈನಾನ್ಸ್ ಆಫರ್

ವಾಹನ ಖರೀದಿ ಮಾಡಿರುವ ಗ್ರಾಹಕರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ವಾಹನ ಮಾದರಿಗಳೊಂದಿಗೆ ಎಕ್ಸ್‌ಚೆಂಜ್ ಮಾಡಿಕೊಳ್ಳುವ ಪ್ರಕ್ರಿಯೆಯು ಕೂಡಾ ಹಬ್ಬದ ದಿನಗಳಲ್ಲಿ ಹೆಚ್ಚಿದ್ದು, ಹಬ್ಬದ ಋುತುವಿನಲ್ಲಿ ಗರಿಷ್ಠ ಪ್ರಮಾಣದ ಎಕ್ಸ್‌ಚೆಂಜ್ ಆಫರ್ ನೀಡುವುದು ಈ ವೇಳೆ ಹೆಚ್ಚು ಲಾಭದಾಯಕ ಎನ್ನಬಹುದು.

ದೀಪಾವಳಿ ಸಂಭ್ರಮದ ವೇಳೆ ಹೊಸ ಕಾರುಗಳ ಖರೀದಿಗೆ ಉತ್ತಮವಾದ ಸಮಯ ಏಕೆ ಗೊತ್ತಾ?

ಹಾಗೆಯೇ ಹೊಸದಾಗಿ ವಾಹನ ಖರೀದಿಸುವ ಗ್ರಾಹಕರ ಆಟೋ ಕಂಪನಿಗಳು ವಿವಿಧ ಬ್ಯಾಂಕ್‌ಗಳ ಮೂಲಕ ಆಕರ್ಷಕ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು ಸಹ ನೀಡುವುದು ಕೂಡಾ ಗ್ರಾಹಕರಿಗೆ ಹೆಚ್ಚು ಲಾಭದಾಯಕವಾಗಿದ್ದು, ಇತರೆ ದಿನಗಳಲ್ಲಿ ಖರೀದಿ ಮಾಡುವ ವಾಹನಗಳಿಂತ ಹಬ್ಬದ ಋುತುವಿನಲ್ಲಿ ಖರೀದಿ ಮಾಡುವ ವಾಹನಗಳಿಗೆ ಆಕರ್ಷಕ ಇಎಂಐ, ಕಡಿಮೆ ಬಡ್ಡಿದರಗಳು ಲಭ್ಯವಿರುತ್ತವೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ದೀಪಾವಳಿ ಸಂಭ್ರಮದ ವೇಳೆ ಹೊಸ ಕಾರುಗಳ ಖರೀದಿಗೆ ಉತ್ತಮವಾದ ಸಮಯ ಏಕೆ ಗೊತ್ತಾ?

ಈ ಎಲ್ಲಾ ಕಾರಣಗಳಿಂದ ಹಬ್ಬದ ದಿನಗಳಲ್ಲಿ ಹೊಸ ವಾಹನ ಖರೀದಿಯು ಗ್ರಾಹಕರಿಗೆ ಹೆಚ್ಚು ಲಾಭದಾಯಕವಾಗಿದ್ದು, ಹೆಚ್ಚಿನ ಮಟ್ಟದ ವಾಹನ ಮಾರಾಟವು ಕೂಡಾ ಆಟೋ ಕಂಪನಿಗಳು ಭಾರೀ ಪ್ರಮಾಣದ ಲಾಭ ಹರಿದುಬರುತ್ತದೆ. ಸದ್ಯ ಕರೋನಾ ವೈರಸ್ ಪರಿಣಾಮ ಹೊಸ ವಾಹನ ಮಾರಾಟವು ತುಸು ಇಳಿ ಮುಖವಿದ್ದರೂ ಪರಿಸ್ಥಿತಿಗೆ ಅನುಗುಣವಾಗಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ದೀಪಾವಳಿ ಸಂಭ್ರಮದ ವೇಳೆ ಹೆಚ್ಚಿನ ಮಟ್ಟದ ವಾಹನ ಮಾರಾಟಕ್ಕಾಗಿ ಆಟೋ ಕಂಪನಿಗಳು ಗ್ರಾಹಕರನ್ನು ವಿವಿಧ ಆಫರ್‌ಗಳೊಂದಿಗೆ ಆಕರ್ಷಿಸುತ್ತಿವೆ.

Most Read Articles

Kannada
English summary
Diwali Is The Best-Time To Purchase A New Car. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X