ಹೊಸ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ 2022ರ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕಾರು

ಐಷಾರಾಮಿ ವಾಹನ ತಯಾರಕ ಕಂಪನಿಯಾದ ಬೆಂಟ್ಲಿ ಮೋಟಾರ್ಸ್ ತನ್ನ ಫ್ಲೈಯಿಂಗ್ ಸ್ಪರ್ ಕಾರನ್ನು ನವೀಕರಿಸಲಾಗಿದೆ. 2022ರ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ನೂತನ ಫೀಚರ್ಸ್ ಗಳನ್ನು ಮತ್ತು ತಂತ್ರಜ್ಞಾನದೊಂದಿಗೆ ನವೀಕರಿಸಿದೆ. ಇದರೊಂದಿಗೆ ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡಿದೆ.

ಹೊಸ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ 2022ರ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕಾರು

ನವೀಕರಿಸಿದ ಫ್ಲೈಯಿಂಗ್ ಸ್ಪರ್‌ನಲ್ಲಿನ ಹೊಸ ಗುಣಮಟ್ಟದ ಪೀಚರ್ಸ್ ಗಳನ್ನು ಒಳಗೊಂಡಿವೆ. ಇದರಲ್ಲಿ ಹ್ಯಾಂಡ್ಸ್ ಫ್ರೀ ಬೂಟ್ ಓಪನಿಂಗ್, ವಿಸ್ತೃತ ಸುರಕ್ಷತಾ ವೈಶಿಷ್ಟ್ಯಗಳು, ಟಾಪ್ ವ್ಯೂ ಕ್ಯಾಮೆರಾ, ವೆಲ್ ಕಮ್ ಲೈಟಿಂಗ್, ಆಟೋಮ್ಯಾಟಿಕ್ ಮೀರರ್ಸ್ ಮತ್ತು ಏರ್ ಅಯಾನೈಸರ್ ಅನ್ನು ಒಳಗೊಂಡಿವೆ. ಇದರೊಂದಿಗೆ ಅತ್ಯಾಧುನಿಕ ತಂತ್ರಜ್ಙಾನಗಳನ್ನು ಕೂಡ ಹೊಂದಿದೆ.

ಹೊಸ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ 2022ರ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕಾರು

ಉತ್ತಮವಾದ ಕ್ಯಾಬಿನ್ ಅನುಭವವನ್ನು ನೀಡಲು ಈ ಕಾರಿನಲ್ಲಿ ಬೆಂಟ್ಲಿ ಸುಧಾರಿತ ಕಂಪ್ಯೂಟರ್ ನೆರವಿನ ತಂತ್ರಜ್ಞಾನವನ್ನು ಬಳಸಿದ್ದಾರೆ. ಸ್ಟ್ಯಾಂಡರ್ಡ್ ಇನ್-ಕಾರ್ ವೈಶಿಷ್ಟ್ಯಗಳ ಪೈಕಿ, ಆನ್‌ಬೋರ್ಡ್ ಏರ್ ಅಯಾನೈಸರ್‌ಗಳು ಕ್ಯಾಬಿನ್‌ನ ಕ್ಲೈಮೆಂಟ್ ಕಂಟ್ರೋಲ್ ವೆಂಟ್ ಗಳನ್ನು ಹೊಂದಿವೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಹೊಸ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ 2022ರ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕಾರು

ಇದು ಸುತ್ತಮುತ್ತಲಿನ ಗಾಳಿಯ ಶುದ್ಧತೆಯನ್ನು ಹೆಚ್ಚಿಸುತ್ತದೆ. ಈ ಕಾರಿನಲ್ಲಿ ಕ್ರೌನ್ ಕಟ್ ವಾಲ್ನಟ್, ಡಾರ್ಕ್ ಬರ್ ವಾಲ್ನಟ್ ಮತ್ತು ಕೋವಾ ವೆನಿರ್ಗಳನ್ನು ಹೊಂದಿವೆ. ಇದರೊಂದಿಗೆ ಇಂಟಿರಿಯರ್ ನಲ್ಲಿ ಹೈ ಗ್ಲೋಸ್ ಫಿನಿಶ್ ಮತ್ತು ಲ 0.1 ಮಿ.ಮೀ ದಪ್ಪದ ಮ್ಯಾಟ್ ವೂಡ್ ಹೊಂದಿದೆ,

ಹೊಸ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ 2022ರ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕಾರು

2022ರ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕಾರಿನ ಯಾಂತ್ರಿಕ ವಿಭಾಗದಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ. ಈ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕಾರಿನಲ್ಲಿ 6.0-ಲೀಟರ್ ಟ್ವಿನ್-ಟರ್ಬೊ ಡಬ್ಲ್ಯು 12 ಎಂಜಿನ್ ಅನ್ನು ಅಳವಡಿಸಲಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ 2022ರ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕಾರು

ಈ ಎಂಜಿನ್ 617 ಬಿಹೆಚ್‌ಪಿ ಪವರ್ ಮತ್ತು 900 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ, ಈ ಎಂಜಿನ್ ನೊಂದಿಗೆ 8-ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಹೊಸ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ 2022ರ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕಾರು

ಇದರೊಂದಿಗೆ 4.0-ಲೀಟರ್ ವಿ 8 ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 535 ಬಿಹೆಚ್‌ಪಿ ಪವರ್ ಮತ್ತು 770 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ವಿ8ಡಬ್ಲ್ಯು12 ಗೆ ಹೋಲಿಸಿದರೆ ಫ್ಲೈಯಿಂಗ್ ಸ್ಪರ್ ಸುಮಾರು 100 ಕೆಜಿ ಹಗುರವಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಹೊಸ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ 2022ರ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕಾರು

ಇನ್ನು ಐಷಾರಾಮಿ ವಾಹನ ತಯಾರಕ ಕಂಪನಿಯಾದ ಬೆಂಟ್ಲಿ ತನ್ನ ಫ್ಲೈಯಿಂಗ್ ಸ್ಪರ್ ಕಾರಿನ 40,000 ಯುನಿಟ್‍‍ಗಳ ಉತ್ಪಾದನೆಯನ್ನು ಪೂರ್ಣಗೊಳಿಸಿ ಕಳೆದ ವರ್ಷ ಹೊಸ ಮೈಲುಗಲ್ಲು ಸೃಷ್ಟಿಸಿದೆ. ಬೆಂಟ್ಲಿ ಕಂಪನಿಯು 15 ವರ್ಷಗಳಿಂದ ಫ್ಲೈಯಿಂಗ್ ಸ್ಪರ್ ಕಾರನ್ನು ಉತ್ಪಾದಿಸುತ್ತಿದೆ.

ಹೊಸ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ 2022ರ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕಾರು

ಕಾರು ಉತ್ಪಾದನಾ ಕಂಪನಿಯಾದ ಬೆಂಟ್ಲಿ ಮೊದಲ ಬಾರಿಗೆ 1919ರಲ್ಲಿ ಸ್ಥಾಪಿಸಲಾಯಿತು. ಅಂದಿನಿಂದ ಇಲ್ಲಿಯವರೆಗೆ ಜನಪ್ರಿಯ ಐಷಾರಾಮಿ ಕಾರು ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ. 1919ರಲ್ಲಿ ಪ್ರಾರಂಭವಾಗಿ ಇಲ್ಲಿಯವರೆಗೆ ಬೆಂಟ್ಲಿ 2 ಲಕ್ಷ ಕಾರುಗಳನ್ನು ಉತ್ಪಾದಿಸಿದೆ. ಬೆಂಟ್ಲಿ ಅತ್ಯಂತ ಪ್ರಸಿದ್ಧ ಐಷಾರಾಮಿ ಕಾರು ತಯಾರಕರಲ್ಲಿ ಒಬ್ಬರು ಮತ್ತು ಇದು ಇಂಗ್ಲೆಂಡ್‌ನಲ್ಲಿದೆ. ಬೆಂಟ್ಲಿ ಕಂಪನಿಯು ಸುಮಾರು 68 ವಿವಿಧ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

Most Read Articles

Kannada
English summary
2022 Bentley Flying Spur Unveiled. Read In Kannada.
Story first published: Wednesday, May 12, 2021, 21:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X