ಐಷಾರಾಮಿ ಆಡಿ ಕ್ಯೂ7 ಕಾರನ್ನು ಖರೀದಿಸಿದ ನಟ ಚಂದು ಗೌಡ

ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಕನ್ನಡಿಗರ ಮನಗೆದ್ದ ನಟ ಚಂದು ಬಿ ಗೌಡ ಅವರು ಸ್ಯಾಂಡಲ್‌ವುಡ್‌ನಲ್ಲಿಯು ಮಿಂಚುತ್ತಿದ್ದಾರೆ. ಈ ಜನಪ್ರಿಯ ನಟ ಇತ್ತೀಚೆಗೆ ಐಷಾರಾಮಿ ಆಡಿ ಕ್ಯೂ7 ಕಾರನ್ನು ಖರೀದಿಸಿದ್ದಾರೆ.

ಐಷಾರಾಮಿ ಆಡಿ ಕ್ಯೂ7 ಕಾರನ್ನು ಖರೀದಿಸಿದ ನಟ ಚಂದು ಗೌಡ

ನಟ ಚಂದು ಗೌಡ ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗಿನ ಸೂಪರ್ ಹಿಟ್ ತ್ರಿನಯನಿ ಧಾರಾವಾಹಿನಲ್ಲಿ ನಟಿಸಿದ್ದಾರೆ. ಈ ಮೂಲಕ ಬೇರೆ ಭಾಷೆಯಲ್ಲೂ ಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಧಾರಾವಾಹಿ ಮಾತ್ರವಲ್ಲದೆ ಸಿನಿಮಾಗಳಲ್ಲಿಯು ಮಿಂಚಿದ್ದಾರೆ. ಇತ್ತೀಚೆಗೆ ಬಿಡುಗಡೆಗೊಂಡ ದರ್ಶನ್ ನಟನೆಯ ರಾಬರ್ಟ್ ಸಿನಿಮಾದಲ್ಲಿ ಚಂದು ಅಭಿನಯಿಸಿದ್ದಾರೆ. ಇದರಲ್ಲಿ ಮೊದಲ ಬಾರಿಗೆ ಚಂದು ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಐಷಾರಾಮಿ ಆಡಿ ಕ್ಯೂ7 ಕಾರನ್ನು ಖರೀದಿಸಿದ ನಟ ಚಂದು ಗೌಡ

ಇನ್ನು ನಟ ಚಂದು ಗೌಡ ಅವರು ಕುಷ್ಕ, ಜಾಕ್ ಪಾಟ್, ಕಮರೊಟ್ಟು ಚಕ್ ಪೋಸ್ಟ್, ಶ್ರೀ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟ ಚಂದು ಗೌಡ ಅವರು ಇತ್ತೀಚೆಗೆ ಖರೀದಿಸಿದ ಹೊಸ ಆಡಿ ಕ್ಯೂ7 ಕಾರಿನ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಐಷಾರಾಮಿ ಆಡಿ ಕ್ಯೂ7 ಕಾರನ್ನು ಖರೀದಿಸಿದ ನಟ ಚಂದು ಗೌಡ

ಚಿತ್ರದಲ್ಲಿ ಬೋರಿಂಗ್ ಕಾರುಗಳನ್ನು ಓಡಿಸಲು ಜೀವನ ಬಹಳ ಚಿಕ್ಕದು ಎಂದು ಬರೆದುಕೊಂಡಿದ್ದಾರೆ. ಹೊಸ ಆಡಿ ಕ್ಯೂ7 ಎಸ್‍ಯುವಿ ಮಾದರಿಯ ಆರಂಭಿಕ ಬೆಲೆಯು ಎಕ್ಸ್ ಶೊರೂಂ ಪ್ರಕಾರ ರೂ.69.27 ಲಕ್ಷಗಳಾಗಿದೆ.

ಐಷಾರಾಮಿ ಆಡಿ ಕ್ಯೂ7 ಕಾರನ್ನು ಖರೀದಿಸಿದ ನಟ ಚಂದು ಗೌಡ

ನಟ ಚಂದು ಗೌಡ ಖರೀದಿಸಿದ ಆಡಿ ಕ್ಯೂ7 ಬಗ್ಗೆ ಹೇಳುವುದಾದರೆ, ಇದು ದೇಶಿಯ ಮಾರುಕಟ್ಟೆಯಲ್ಲಿ ಐಷಾರಾಮಿ ಎಸ್‍ಯುವಿ ವಿಭಾಗದಲ್ಲಿ ಬಹುಬೇಡಿಕೆಯ ಎಸ್‍ಯು‍ವಿಗಳಲ್ಲಿ ಅಗ್ರಸ್ಥಾನದಲ್ಲಿದೆ. ಆಡಿ ಕ್ಯೂ7 ಎಸ್‍ಯು‍ವಿಯು ಹೆಚ್ಚಾಗಿ ಸೆಲಬ್ರಿಟಿಗಳು ಮತ್ತು ಉದ್ಯಮಿಗಳ ಮೆಚ್ಚಿನ ಆಯ್ಕೆಯ ಎಸ್‍ಯು‍ವಿಯಾಗಿದೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಐಷಾರಾಮಿ ಆಡಿ ಕ್ಯೂ7 ಕಾರನ್ನು ಖರೀದಿಸಿದ ನಟ ಚಂದು ಗೌಡ

ಆಡಿ ಕ್ಯೂ7 ಕಾರಿನಲ್ಲಿ ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ 3.0 ಲೀಟರ್ ವಿ6 ಟರ್ಬೊ ಡೀಸೆಲ್ ಎಂಜಿನ್ 245.4 ಬಿ‍ಹೆಚ್‍‍ಪಿ ಪವರ್ ಮತ್ತು 600 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಐಷಾರಾಮಿ ಆಡಿ ಕ್ಯೂ7 ಕಾರನ್ನು ಖರೀದಿಸಿದ ನಟ ಚಂದು ಗೌಡ

ಇನ್ನು 2.0 ಲೀಟರ್ ನಾಲ್ಕು ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ 248 ಬಿ‍ಹೆಚ್‍‍ಪಿ ಪವರ್ ಮತ್ತು 370 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎರಡೂ ಎಂಜಿನ್‍‍ಗಳಲ್ಲಿ ಕ್ವಾಟ್ರೋ ಅಲ್-ವ್ಹೀಲ್ ಡ್ರೈವ್ ಸಿಸ್ಟಂನೊಂದಿಗೆ 8 ಸ್ಪೀಡ್ ಟಿಪ್ಟ್ರೋನಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಐಷಾರಾಮಿ ಆಡಿ ಕ್ಯೂ7 ಕಾರನ್ನು ಖರೀದಿಸಿದ ನಟ ಚಂದು ಗೌಡ

ಈ ಎಸ್‍‍ಯು‍ವಿಯು ಮಾದರಿಯ ಆಕರ್ಷಕ ವಿನ್ಯಾಸ ಮತ್ತು ಉನ್ನತ ಮಟ್ಟದ ವೈಶಿಷ್ಟ್ಯಗಳನ್ನು ಹೊಂದಿದೆ. ದೇಶಿಯ ಮಾರುಕಟ್ಟೆಯಲ್ಲಿರುವ ಪ್ರಸ್ತುತ ಮಾರಾಟವಾಗುವ ಆಡಿ ಕ್ಯೂ7 ಸ್ಟ್ಯಾಂಡರ್ಡ್ ಎಲ್‍ಇಡಿ ಲೈಟಿಂಗ್ ಅನ್ನು ಹೊಂದಿವೆ.

ಐಷಾರಾಮಿ ಆಡಿ ಕ್ಯೂ7 ಕಾರನ್ನು ಖರೀದಿಸಿದ ನಟ ಚಂದು ಗೌಡ

ಇದರೊಂದಿಗೆ ಅಲ್-ವೆದರ್ ಎಲ್ಇಡಿ ಹೆಡ್‍‍ಲ್ಯಾಂಪ್‍ಗಳು ಮತ್ತು ಡಿಆರ್‍ಎಲ್‍ಗಳನ್ನು ಹೊಂದಿದೆ. ಕಾರಿನಲ್ಲಿ ಅಲ್ಯೂಮಿನಿಯಂ ರೂಫ್ ರೈಲ್, ರೇರ್ ಸ್ಪಾಯ್ಲರ್, ಪನಾರೋಮಿಕ್ ಸನ್‍ರೂಫ್ ಸೇರಿದಂತೆ ಇತರ ವೈಶಿಷ್ಟ್ಯಗಳನ್ನು ಹೊಂದಿದೆ.

ಐಷಾರಾಮಿ ಆಡಿ ಕ್ಯೂ7 ಕಾರನ್ನು ಖರೀದಿಸಿದ ನಟ ಚಂದು ಗೌಡ

ಇಂಟಿರಿಯರ್‍‍ನಲ್ಲಿ ಕ್ಯಾಬಿನ್‍‍ನ ಪ್ರೀಮಿಯಂ ಲುಕ್ ಅನ್ನು ಹೆಚ್ಚಿಸಲು ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇದರಲ್ಲಿ ಟಚ್‍ ಸ್ಕ್ರೀನ್ ಇನ್ಪೋಟೇನ್‍‍ಮೆಂಟ್ ಸಿಸ್ಟಂ, ಮಲ್ಟಿಪಲ್ ಝೋನ್ ಕ್ಲೈಮೆಂಟ್ ಕಂಟ್ರೋಲ್ ಸಿಸ್ಟಂ ಮತ್ತು ಇತರ ವೈಶಿಷ್ಟ್ಯಗಳನ್ನು ಹೊಂದಿದೆ.

Most Read Articles

Kannada
English summary
Actor Chandu B Gowda Buys Audi Q7 Suv. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X