ಆಧುನಿಕ ಸೌಲಭ್ಯವುಳ್ಳ ಹೊಸ ಸರ್ವಿಸ್ ಸೆಂಟರ್ ತೆರೆದ ಆಡಿ ಇಂಡಿಯಾ

ಐಷಾರಾಮಿ ಕಾರುಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಆಡಿ ಇಂಡಿಯಾ ಕಂಪನಿಯು ಹೊಸ ಕಾರುಗಳ ಮಾರಾಟ ಹೆಚ್ಚಿದಂತೆ ಗ್ರಾಹಕ ಸೇವೆಗಳನ್ನು ತೀವ್ರಗೊಳಿಸುತ್ತಿದ್ದು, ವಿವಿಧ ರಾಜ್ಯಗಳಲ್ಲಿ ಗ್ರಾಹಕರ ಸಂಖ್ಯೆಗೆ ಅನುಗುಣವಾಗಿ ಹೊಸ ಸರ್ವಿಸ್ ಸೆಂಟರ್‌ಗಳನ್ನು ತೆರೆಯಲಾಗುತ್ತಿದೆ.

ಆಧುನಿಕ ಸೌಲಭ್ಯವುಳ್ಳ ಹೊಸ ಸರ್ವಿಸ್ ಸೆಂಟರ್ ತೆರೆದ ಆಡಿ ಇಂಡಿಯಾ

ಹೊಸ ಕಾರು ಮಾದರಿಗಳೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ಆಡಿ ಇಂಡಿಯಾ ಕಂಪನಿಯು ಇತ್ತೀಚೆಗೆ ಗ್ರಾಹಕರ ಸೇವೆಗಳನ್ನು ನಿಗದಿತ ಅವಧಿಯಲ್ಲಿ ಪೂರೈಸುವ ಉದ್ದೇಶದೊಂದಿಗೆ ಆಧುನಿಕ ತಂತ್ರಜ್ಞಾನ ಪ್ರೇರಿತ ಸರ್ವಿಸ್ ಸೆಂಟರ್ ಅನ್ನು ಮಧ್ಯಪ್ರದೇಶದ ಭೂಪಾಲ್‌ನಲ್ಲಿ ತೆರೆದಿದೆ. ಇಷ್ಟು ದಿನಗಳ ಕಾಲ ಇಂಧೋರ್‌ನಲ್ಲಿ ಗ್ರಾಹಕರ ಸೇವಾ ಕಾರ್ಯಾಚರಣೆ ಹೊಂದಿದ್ದ ಆಡಿ ಕಂಪನಿಯು ಮಧ್ಯಪ್ರದೇಶದಲ್ಲಿ ಇದೀಗ ಎರಡನೇ ಸರ್ವಿಸ್ ಸೆಂಟರ್ ಆರಂಭಿಸಿದೆ.

ಆಧುನಿಕ ಸೌಲಭ್ಯವುಳ್ಳ ಹೊಸ ಸರ್ವಿಸ್ ಸೆಂಟರ್ ತೆರೆದ ಆಡಿ ಇಂಡಿಯಾ

ಒಂದೇ ಸೂರಿನಡಿ ವಿವಿಧ ಗ್ರಾಹಕ ಸೇವೆಗಳನ್ನು ಪೂರೈಸುವ ಹೊಸ ಸರ್ವಿಸ್ ಸೆಂಟರ್‌ನಲ್ಲಿ ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಬಿಡಿಭಾಗಗಳ ಸೇವೆಗಳನ್ನು ಹೊಂದಿದ್ದು, ನುರಿತ ಉದ್ಯೋಗಿಗಳ ತಂಡವನ್ನು ನೇಮಕ ಮಾಡಲಾಗಿದೆ.

ಆಧುನಿಕ ಸೌಲಭ್ಯವುಳ್ಳ ಹೊಸ ಸರ್ವಿಸ್ ಸೆಂಟರ್ ತೆರೆದ ಆಡಿ ಇಂಡಿಯಾ

ಕೇವಲ ಆಡಿ ಕಾರುಗಳಿಗೆ ಮಾತ್ರ ತೆರೆಯಲಾಗಿರುವ ಹೊಸ ಸರ್ವಿಸ್ ಸೆಂಟರ್‌ನಲ್ಲಿ ಒಂದು ದಿನಕ್ಕೆ ಐದು ಕಾರುಗಳನ್ನು ಸರ್ವಿಸ್ ಮಾಡಬಹುದಾಗಿದ್ದು, ಪ್ರತಿಯೊಂದು ಬಿಡಿಭಾಗಗಳ ಸೇವೆಯು ಕಂಪನಿಯೇ ನೇರವಾಗಿ ನಿರ್ವಹಿಸುತ್ತದೆ.

ಆಧುನಿಕ ಸೌಲಭ್ಯವುಳ್ಳ ಹೊಸ ಸರ್ವಿಸ್ ಸೆಂಟರ್ ತೆರೆದ ಆಡಿ ಇಂಡಿಯಾ

ಈ ಮೂಲಕ ಗ್ರಾಹಕರಿಗೆ ನಿಗದಿತ ಅವಧಿಯಲ್ಲಿ ಮತ್ತು ವಿವಿಧ ನಗರಗಳಲ್ಲಿ ಗ್ರಾಹಕರನ್ನು ಸಂಪರ್ಕಿಸಲು ಹೊಸ ಸರ್ವಿಸ್ ಸೆಂಟರ್‌ಗಳನ್ನು ಸಾಕಷ್ಟು ಸಹಕಾರಿಯಾಗುತ್ತಿದ್ದು, ಶೀಘ್ರದಲ್ಲೇ ಆಡಿ ಕಂಪನಿಯು ಮತ್ತಷ್ಟು ಸರ್ವಿಸ್ ಸೆಂಟರ್‌ಗಳನ್ನು ತೆರೆಯುವ ಸಿದ್ದತೆಯಲ್ಲಿದೆ. ಇನ್ನು ಆಡಿ ಇಂಡಿಯಾ ಕಂಪನಿಯು ಜಾಗತಿಕ ಮಾರುಕಟ್ಟೆಯಲ್ಲಿನ ತನ್ನ ಪ್ರಮುಖ ಕಾರು ಮಾದರಿಗಳನ್ನು ಭಾರತದಲ್ಲೂ ಬಿಡುಗಡೆ ಮಾಡುತ್ತಿದ್ದು, ಗ್ರಾಹಕರ ಬೇಡಿಕೆಯು ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಏರಿಕೆಯಾಗಿದೆ.

ಆಧುನಿಕ ಸೌಲಭ್ಯವುಳ್ಳ ಹೊಸ ಸರ್ವಿಸ್ ಸೆಂಟರ್ ತೆರೆದ ಆಡಿ ಇಂಡಿಯಾ

ಎಂಕ್ಯೂಬಿ ಪ್ಲ್ಯಾಟ್‌ಫ್ಲಾಮ್ ಅಡಿ ಅಭಿವೃದ್ದಿಗೊಂಡಿರುವ ಕ್ಯೂ ಸರಣಿಯ ಕ್ಯೂ2 ಎಸ್‌ಯುವಿ ಕಾರು ಮಾದರಿಯು ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಎಂಟ್ರಿ ಲೆವಲ್ ಐಷಾರಾಮಿ ಕಾರುಗಳ ಮಾರಾಟದಲ್ಲಿ ಕ್ಯೂ2 ಕಾರು ಸದ್ಯ ಹೊಸ ಸಂಚಲನಕ್ಕೆ ಕಾರಣವಾಗಿದೆ.

MOST READ: ಹಳೆ ವಾಹನ ಮಾಲೀಕರಿಗೆ ಆಘಾತ ನೀಡಿದ ಕೇಂದ್ರ ಸಾರಿಗೆ ಇಲಾಖೆ

ಆಧುನಿಕ ಸೌಲಭ್ಯವುಳ್ಳ ಹೊಸ ಸರ್ವಿಸ್ ಸೆಂಟರ್ ತೆರೆದ ಆಡಿ ಇಂಡಿಯಾ

ಕ್ಯೂ2 ಕಾರು ಮಾದರಿಯು ಸಂಪೂರ್ಣವಾಗಿ ಸಿಬಿಯು ಆಮದು ನೀತಿ ಅಡಿ ಭಾರತದಲ್ಲಿ ಮಾರಾಟಗೊಳ್ಳಲಿದ್ದು, ಅಡ್ವಾನ್ಸ್ ಲೈನ್ ಮತ್ತು ಡಿಸೈನ್ ಲೈನ್ ಎರಡು ಮಾದರಿಗಳಲ್ಲಿ ಹೊಸ ಕಾರನ್ನು ಅಭಿವೃದ್ದಿಗೊಳಿಸಲಾಗಿದೆ.

ಆಧುನಿಕ ಸೌಲಭ್ಯವುಳ್ಳ ಹೊಸ ಸರ್ವಿಸ್ ಸೆಂಟರ್ ತೆರೆದ ಆಡಿ ಇಂಡಿಯಾ

ಗ್ರಾಹಕರು ಹೊಸ ಕ್ಯೂ2 ಕಾರನ್ನು ಸ್ಟ್ಯಾಂಡರ್ಡ್, ಪ್ರೀಮಿಯಂ, ಪ್ರೀಮಿಯಂ ಪ್ಲಸ್ 1, ಪ್ರೀಮಿಯಂ ಪ್ಲಸ್ 2 ಮತ್ತು ಟೆಕ್ನಾಲಜಿ ಎನ್ನುವ ಐದು ವೆರಿಯೆಂಟ್‌ಗಳಲ್ಲಿ ಖರೀದಿಸಬಹುದಾಗಿದ್ದು, ಹೊಸ ಕಾರು ಆರಂಭಿಕವಾಗಿ ರೂ. 34.99 ಲಕ್ಷದಿಂದ ಟಾಪ್ ಎಂಡ್ ಮಾದರಿಯನ್ನು ರೂ. 48.89 ಲಕ್ಷ ಬೆಲೆಗೆ ಖರೀದಿ ಮಾಡಬಹುದಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಆಧುನಿಕ ಸೌಲಭ್ಯವುಳ್ಳ ಹೊಸ ಸರ್ವಿಸ್ ಸೆಂಟರ್ ತೆರೆದ ಆಡಿ ಇಂಡಿಯಾ

2.0-ಲೀಟರ್ ಟಿಎಫ್ಎಸ್ಐ ಪೆಟ್ರೋಲ್ ಎಂಜಿನ್ ಜೋಡಣೆ ಹೊಂದಿರುವ ಹೊಸ ಕಾರು 7-ಸ್ಪೀಡ್ ಟ್ರಾನಿಕ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ 190-ಬಿಎಚ್‌ಪಿ ಮತ್ತು 320-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಕ್ಯೂ2 ಜೊತೆಗೆ ಎ4 ಸೆಡಾನ್ ಕೂಡಾ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

Most Read Articles

Kannada
Read more on ಆಡಿ audi
English summary
Audi Opens New Service Facility In Bhopal. Read in Kannada.
Story first published: Friday, March 19, 2021, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X