ಭಾರತದಲ್ಲಿ ಬಹುನಿರೀಕ್ಷಿತ Audi Q5 ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ

ಐಷಾರಾಮಿ ಕಾರು ತಯಾರಕ ಕಂಪನಿಯಾದ ಆಡಿ ಇಂಡಿಯಾ ತನ್ನ ಬಹುನಿರೀಕ್ಷಿತ ಕ್ಯೂ5 ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಆಡಿ ಕ್ಯೂ5(Audi Q5) ಫೇಸ್‌ಲಿಫ್ಟ್ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.58.93 ಲಕ್ಷಗಳಾಗಿದೆ.

ಭಾರತದಲ್ಲಿ ಬಹುನಿರೀಕ್ಷಿತ Audi Q5 ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ

ಹೊಸ ಆಡಿ ಕ್ಯೂ5 ಫೇಸ್‌ಲಿಫ್ಟ್ ಎಸ್‍ಯುವಿಯ ಟಾಪ್-ಎಂಡ್ ರೂಪಾಂತರದ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ,63.77 ಲಕ್ಷಗಳಾಗಿದೆ, ಈ ಹೊಸ ಆಡಿ ಕ್ಯೂ5 ಫೇಸ್‌ಲಿಫ್ಟ್ ಅನ್ನು ಭಾರತದಲ್ಲಿ ಸಂಪೂರ್ಣವಾಗಿ ನಾಕ್ಡ್ ಡೌನ್ (CKD) ಯುನಿಟ್ ಆಗಿ ನೀಡಲಾಗುವುದು ಮತ್ತು ಔರಂಗಾಬಾದ್‌ನಲ್ಲಿರುವ ಅದರ ಮೂಲ ಕಂಪನಿಯಾದ ವಿಡಬ್ಲ್ಯು ಗ್ರೂಪ್‌ನ ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (SAVWIPL) ಸ್ಥಾವರದಲ್ಲಿ ಸ್ಥಳೀಯವಾಗಿ ಜೋಡಿಸಲಾಗುತ್ತದೆ.

ಭಾರತದಲ್ಲಿ ಬಹುನಿರೀಕ್ಷಿತ Audi Q5 ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ

2020ರ ಏಪ್ರಿಲ್ ತಿಂಗಳಿನಲ್ಲಿ ಪ್ರಿ-ಫೇಸ್‌ಲಿಫ್ಟ್ ಮಾಡೆಲ್ ಅನ್ನು ಸ್ಥಗಿತಗೊಳಿಸಿದ ನಂತರ ಆಡಿ ಕ್ಯೂ5 18 ತಿಂಗಳ ವಿರಾಮದ ನಂತರ ಭಾರತಕ್ಕೆ ಹಿಂತಿರುಗುತ್ತಿದೆ. 2021ರ ಆಡಿ ಕ್ಯೂ5 ಫೇಸ್‌ಲಿಫ್ಟ್ ಎಸ್‍ಯುವಿಯು ಅದರ ಪೂರ್ವವರ್ತಿಗಿಂತ ಸ್ವಲ್ಪ ತೀಕ್ಷ್ಣವಾಗಿ ಮತ್ತು ದಪ್ಪವಾಗಿ ಕಾಣುತ್ತದೆ ಮತ್ತು ಹೆಚ್ಚಿನ ನವೀಕರಣಗಳು ಅದರ ಫಾಸಿಕದ ಮೇಲೆ ಕೇಂದ್ರೀಕೃತವಾಗಿವೆ.

ಭಾರತದಲ್ಲಿ ಬಹುನಿರೀಕ್ಷಿತ Audi Q5 ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ

ಕ್ರೋಮ್ ಬಾರ್ಡರ್‌ಗಳು ಮತ್ತು ಲಂಬವಾದ ಸ್ಲ್ಯಾಟ್‌ಗಳೊಂದಿಗೆ ಹೊಸ ದೊಡ್ಡ ಸಿಂಗಲ್-ಫ್ರೇಮ್ ಗ್ರಿಲ್ ಅದರ ಮಸ್ಕಲರ್ ಮುಂಭಾಗದ ತುದಿಯಲ್ಲಿ ನಿರ್ಮಿಸುತ್ತದೆ ಮತ್ತು ಚಂಕಿಯರ್ ಸಿಲ್ವರ್ ಸ್ಕಿಡ್ ಪ್ಲೇಟ್ ಸಹ ಇದೆ. ಈ ಎಸ್‍ಯುವಿ ದೊಡ್ಡದಾದ ಫಾಗ್‌ಲ್ಯಾಂಪ್ ಹೌಸಿಂಗ್‌ಗಳು, ಸಿಲ್ವರ್ ರೂಫ್ ರೈಲ್‌ಗಳು ಮತ್ತು ಸೈಡ್ ಸ್ಕರ್ಟ್‌ಗಳು, ಜೊತೆಗೆ ಪರಿಷ್ಕೃತ ಪೂರ್ಣ-ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು ಹೊಸ ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳನ್ನು ಪಡೆಯುತ್ತದೆ.

ಭಾರತದಲ್ಲಿ ಬಹುನಿರೀಕ್ಷಿತ Audi Q5 ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ

ಹೊಸ ಆಡಿ ಕ್ಯೂ5 ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ಹೊಸ 19-ಇಂಚಿನ 5 ಡಬಲ್-ಸ್ಪೋಕ್ ಸ್ಟಾರ್ ಶೈಲಿಯ ಅಲಾಯ್ ವ್ಹೀಲ್ ಗಳನ್ನು ಸಹ ಪಡೆಯುತ್ತದೆ, ಜೊತೆಗೆ ಹಿಂಭಾಗದಲ್ಲಿ ಹೊಚ್ಚ ಹೊಸ ಎಲ್ಇಡಿ ಟೈಲ್‌ಲೈಟ್‌ಗಳನ್ನು ಹೊಂದಿದೆ.

ಭಾರತದಲ್ಲಿ ಬಹುನಿರೀಕ್ಷಿತ Audi Q5 ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ

ಹೊಸ ಎಸ್‍ಯುವಿಯಲ್ಲಿ ನವೀಕರಿಸಿದ ಕ್ಯಾಬಿನ್ ಅನ್ನು ಪಡೆಯುತ್ತದೆ ಮತ್ತು ಒಟ್ಟಾರೆ ವಿನ್ಯಾಸವು ನವೀಕರಿಸಿದ ಎ4 ಫೇಸ್‌ಲಿಫ್ಟ್‌ನಂತಹ ಅದರ ಕೆಲವು ಹೊಸ ಮಾದರಿಗಳಲ್ಲಿ ನಾವು ನೋಡಿದಂತೆಯೇ ಇರುತ್ತದೆ. ಹೊಸ ಸ್ಟೀರಿಂಗ್ ವ್ಹೀಲ್, ಡ್ಯುಯಲ್-ಜೋನ್ ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್ ಮತ್ತು ಸಾಕಷ್ಟು ಸ್ಟೋರೇಂಜ್ ಆಯ್ಕೆಗಳೊಂದಿಗೆ ಹೊಸ ಸೀಟುಗಳು ಮತ್ತು ಸಜ್ಜು ಕೊಂಡಿವೆ.

ಭಾರತದಲ್ಲಿ ಬಹುನಿರೀಕ್ಷಿತ Audi Q5 ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ

ಆಡಿಯು ಮೂರನೇ ತಲೆಮಾರಿನ ಮಾಡ್ಯುಲರ್ ಇನ್ಫೋಟೈನ್‌ಮೆಂಟ್ ಪ್ಲಾಟ್‌ಫಾರ್ಮ್ ಅಥವಾ MIB 3 ನೊಂದಿಗೆ ಕ್ಯೂ5 ಅನ್ನು ಸಜ್ಜುಗೊಳಿಸಿದೆ .ಸಿಸ್ಟಮ್ ಅನ್ನು ಹೊಸ 10.1-ಇಂಚಿನ ಡಿಸ್ ಪ್ಲೇ ಯನ್ನು ಹೊಂದಿದ್ದು, ಇದು ಸ್ಟ್ಯಾಂಡರ್ಡ್ ಆಗಿದೆ. ಇದರೊಂದಿಗೆ ವೈರ್‌ಲೆಸ್ ಫೋನ್ ಚಾರ್ಜರ್, ಆಡಿ ಪಾರ್ಕ್ ಅಸಿಸ್ಟ್, ಕಂಫರ್ಟ್ ಕೀ ಸೆನ್ಸರ್-ಕಂಟ್ರೋಲ್ ಬೂಟ್-ಲಿಡ್ ಕಾರ್ಯಾಚರಣೆಯೊಂದಿಗೆ, ಬ್ಲ್ಯಾಕ್ ಪಿಯಾನೋ ಲ್ಯಾಕ್ಕರ್, ಆಡಿ ವರ್ಚುವಲ್ ಕಾಕ್‌ಪಿಟ್ ಪ್ಲಸ್ ಮತ್ತು ಬ್ಯಾಂಗ್ ಮತ್ತು ಒಲುಫ್ಸೆನ್ ಪ್ರೀಮಿಯಂ 3D ಸೌಂಡ್ ಸಿಸ್ಟಮ್‌ನಲ್ಲಿ ಆಡಿ ಎಕ್ಸ್‌ಕ್ಲೂಸಿವ್ ಇನ್ಲೇಸ್ ಅನ್ನು ಒಳಗೊಂಡಿದೆ.

ಭಾರತದಲ್ಲಿ ಬಹುನಿರೀಕ್ಷಿತ Audi Q5 ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ

ಹೊಸ ಆಡಿ ಕ್ಯೂ5 ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ 2.0 ಲೀಟರ್, ನಾಲ್ಕು-ಸಿಲಿಂಡರ್ ಬಿಎಸ್6 45 TFSI ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 5000 - 6000 ಆರ್‌ಪಿಎಂನಲ್ಲಿ 247 ಬಿಹೆಚ್‌ಪಿ ಪವರ್ ಮತ್ತು 1600 - 4300 ಆರ್‌ಪಿಎಂನಲ್ಲಿ 370 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 12-ವೋಲ್ಟ್ ಮೈಲ್ಡ್-ಹೈಬ್ರಿಡ್ ಸಿಸ್ಟಮ್‌ನೊಂದಿಗೆ ಬ್ರೇಕ್ ಎನರ್ಜಿ ರಿಕ್ಯುಪರೇಶನ್‌ನೊಂದಿಗೆ ಜೋಡಿಸಲಾಗಿದೆ.

ಭಾರತದಲ್ಲಿ ಬಹುನಿರೀಕ್ಷಿತ Audi Q5 ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ

ಎಂಜಿನ್ ನೊಂದಿಗೆ 7-ಸ್ಪೀಡ್ ಎಸ್- ಟ್ರಾನಿಕ್ ಆಟೋಮ್ಯಾಟಿಕ್ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್‌ಗೆ ಸಂಯೋಜಿತವಾಗಿದೆ. ಕ್ವಾಟ್ರೊ ಆಲ್-ವೀಲ್ ಡ್ರೈವ್ (AWD) ಸಿಸ್ತಂ ಹೊಸ ಆಡಿ ಕ್ಯೂ5 ಎಸ್‍ಯುವಿಯಲ್ಲಿ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಈ ಎಸ್‍ಯುವಿಯು 6.3 ಸೆಕೆಂಡುಗಳಲ್ಲಿ 0-100 ಕಿ.ಮೀ ಸ್ಪೀಡ್ ಅನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಎಸ್‍ಯುವಿಯು 237 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂಡಿದೆ.

ಭಾರತದಲ್ಲಿ ಬಹುನಿರೀಕ್ಷಿತ Audi Q5 ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ

ಭಾರತದಲ್ಲಿ ಐಷಾರಾಮಿ ಕಾರುಗಳ ಮೇಲೆ ವಿಧಿಸಲಾಗುತ್ತಿರುವ ಹೆಚ್ಚಿನ ತೆರಿಗೆ ದರಗಳು ಕಾರು ಮಾರಾಟದ ಮೇಲೆ ಪರಿಣಾಮ ಬೀರುತ್ತಿವೆ ಎಂದು ಐಷಾರಾಮಿ ಕಾರು ತಯಾರಕ ಕಂಪನಿಯಾದ ಆಡಿ ಕಂಪನಿ ಇತ್ತೀಚೆಗೆ ಹೇಳಿದೆ. ಐಷಾರಾಮಿ ಕಾರು ತಯಾರಕ ಕಂಪನಿಗಳಿಗೆ ನೆರವು ನೀಡಲು ಸರ್ಕಾರ ಸುಂಕವನ್ನು ಕಡಿತಗೊಳಿಸಬೇಕು ಎಂದು ಆಡಿ ಕಂಪನಿಯು ಮನವಿ ಮಾಡಿದೆ. ಐಷಾರಾಮಿ ಕಾರುಗಳ ವಿಭಾಗದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಆಡಿ ಕಂಪನಿಯು ದೇಶದಲ್ಲಿ ಐಷಾರಾಮಿ ಕಾರುಗಳ ಪಾಲು 2% ಗಿಂತ ಕಡಿಮೆಯಿದ್ದು, ಕಳೆದ ಒಂದು ದಶಕದಿಂದ ಇದೇ ಪರಿಸ್ಥಿತಿ ಇದೆ ಎಂದು ಹೇಳಿದೆ.

ಭಾರತದಲ್ಲಿ ಬಹುನಿರೀಕ್ಷಿತ Audi Q5 ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ

ಈ ಬಗ್ಗೆ ಮಾತನಾಡಿರುವ ಆಡಿ ಇಂಡಿಯಾದ ಮುಖ್ಯಸ್ಥ ಬಲ್ಬೀರ್ ಸಿಂಗ್ ಧಿಲ್ಲೋನ್, ಭಾರತದಲ್ಲಿ ನಮ್ಮ ಸಂಪೂರ್ಣ ಸಾಮರ್ಥ್ಯವನ್ನು ಪಡೆಯಲು ನಮಗೆ ಸಾಧ್ಯವಾಗುತ್ತಿಲ್ಲ. ದೇಶದಲ್ಲಿ ಐಷಾರಾಮಿ ಕಾರು ವಿಭಾಗವು ಸ್ಥಬ್ದವಾಗಿದೆ ಎಂದು ಹೇಳಿದರು. ಇತರ ಕಾರು ವಿಭಾಗಗಳು ವೇಗವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ಐಷಾರಾಮಿ ಕಾರುಗಳ ವಾರ್ಷಿಕ ಮಾರಾಟವು 40,000 ಯುನಿಟ್‌ಗಳನ್ನು ಮೀರಿ ಬೆಳೆಯುತ್ತಿಲ್ಲ. ಕರೋನಾ ಸಾಂಕ್ರಾಮಿಕ ಹಾಗೂ ಸೆಮಿ ಕಂಡಕ್ಟರ್ ಚಿಪ್‌ಗಳ ಕೊರತೆಯಿಂದಾಗಿ ಈ ವರ್ಷ ಮಾರಾಟ ಅಂಕಿ ಅಂಶವು ಇನ್ನಷ್ಟು ಕಡಿಮೆಯಾಗಬಹುದು ಎಂದು ಅವರು ಹೇಳಿದರು.

ಭಾರತದಲ್ಲಿ ಬಹುನಿರೀಕ್ಷಿತ Audi Q5 ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ

ಹೊಸ ಆಡಿ ಕ್ಯೂ5 ಫೇಸ್‌ಲಿಫ್ಟ್ ಎಸ್‍ಯುವಿ ಮಾದರಿಯು ಬಾರತೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ಜಿಎಲ್ಸಿ, ಬಿಎಂಡಬ್ಲ್ಯು ಎಕ್ಸ್3, ವೊಲ್ವೊ XC60, ಜಾಗ್ವಾರ್ ಎಫ್-ಪೇಸ್, ಲ್ಯಾಂಡ್ ರೋವರ್ ರೇಂಜ್ ರೋವರ್ ಇವೋಕ್ ಮತ್ತು ಲೆಕ್ಸಸ್ NX300h ನಂತಹ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ,

Most Read Articles

Kannada
Read more on ಆಡಿ audi
English summary
Audi launched 2021 q5 facelift suv in india price and new changes details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X