ಬೆಂಗಳೂರಿನಲ್ಲಿ ಪ್ರದರ್ಶನವಾದ ಬೆಂಟ್ಲಿ ಬೆಂಟಾಯ್ಗಾ ವಿ8, ಫ್ಲೈಯಿಂಗ್ ಸ್ಪರ್ ಡಬ್ಲ್ಯು12 ವಿಶೇಷತೆ ಏನು?

ವಿಶ್ವಾದ್ಯಂತ ಹಲವಾರು ಐಷಾರಾಮಿ ಕಾರುಗಳನ್ನು ಮಾರಾಟ ಮಾಡುತ್ತಿರುವ ಬೆಂಟ್ಲಿ ಕಂಪನಿಯು ತನ್ನ ಹೊಸ ಬೆಂಟಾಯ್ಗಾ ವಿ8 ಹಾಗೂ ಫ್ಲೈಯಿಂಗ್ ಸ್ಪರ್ ಡಬ್ಲ್ಯು12 ಆವೃತ್ತಿಗಳನ್ನು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಳಿಸಿದ್ದು, ಹೊಸ ಐಷಾರಾಮಿ ಕಾರು ಮಾದರಿಗಳನ್ನು ಬೆಂಟ್ಲಿ ಇಂಡಿಯಾ ಕಂಪನಿಯು ಇತ್ತೀಚೆಗೆ ನಮ್ಮ ಬೆಂಗಳೂರಿನಲ್ಲಿ ಪ್ರದರ್ಶನಗೊಳಿಸಿತು.

ಬೆಂಟ್ಲಿ ಹೊಸ ಕಾರುಗಳ ಬೆಲೆಯು ಭಾರತದಲ್ಲಿ ಎಕ್ಸ್ ಶೋರೂಂ ದರದಂತೆ ಆರಂಭಿಕವಾಗಿ ರೂ. 4.01 ಕೋಟಿಗಳಾಗಿದ್ದು, ಹೊಸ ಕಾರುಗಳು ಆಧುನಿಕ ತಂತ್ರಜ್ಞಾನ ಪ್ರೇರಿತ ಹಲವಾರು ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿವೆ.

ಬೆಂಟಾಯ್ಗಾ ವಿ8 ಕಾರು ಮಾದರಿಯು ಐಷಾರಾಮಿ ಕಾರುಗಳಲ್ಲೇ ಅತಿ ವೇಗದ ಆವೃತ್ತಿಯಾಗಿದ್ದು, ಈ ಕಾರಿನಲ್ಲಿ ಕಂಪನಿಯು 542 ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯದ 4.0-ಲೀಟರ್ ಟ್ವಿನ್ ಟರ್ಬೊ ಎಂಜಿನ್ ಜೋಡಣೆ ಮಾಡಿದೆ.

ಬೆಂಟ್ಲಿ ನಿರ್ಮಾಣದ ಮತ್ತೊಂದು ಐಷಾರಾಮಿ ಕಾರು ಮಾದರಿಯಾದ ಫ್ಲೈಯಿಂಗ್ ಸ್ಪರ್ ಡಬ್ಲ್ಯು12 ಮಾದರಿಯು 636-ಬಿಎಚ್‌ಪಿ ಮತ್ತು900 ಎನ್ಎಂ ಟಾರ್ಕ್ ಉತ್ಪಾದನೆಯ 6.0-ಲೀಟರ್ ಟರ್ಬೊ-ಟ್ವಿನ್ ಡಬ್ಲ್ಯು 12 ಎಂಜಿನ್ ಹೊಂದಿದೆ.

ಸುಮಾರು 2.5 ಟನ್ ತೂಕ ಹೊಂದಿರುವ ಹೊಸ ಕಾರುಗಳಿಗೆ ಅತ್ಯುತ್ತಮ ಎಂಜಿನ್ ಆಯ್ಕೆ ನೀಡಲಾಗಿದ್ದು, ಹೊಸ ಕಾರುಗಳು ಕೇವಲ 3.8 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಳ್ಳಲಿದ್ದು, ಟಾಪ್ ಸ್ಪೀಡ್ ಗಂಟೆಗೆ 333 ಕಿ.ಮೀ ತಲುಪಬಲ್ಲವು.

Most Read Articles

Kannada
English summary
2021 Bentley Bentayga & New Flying Spur Showcased In Bengaluru. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X