100 ವರ್ಷಗಳಲ್ಲಿ 2 ಲಕ್ಷ ಕಾರು ಉತ್ಪಾದಿಸಿ ಹೊಸ ಮೈಲಿಗಲ್ಲು ಸಾಧಿಸಿದ ಬೆಂಟ್ಲಿ

ಐಷಾರಾಮಿ ವಾಹನ ತಯಾರಕ ಕಂಪನಿಯಾದ ಬೆಂಟ್ಲಿ ಕಾರು ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಕಾರು ಉತ್ಪಾದನಾ ಕಂಪನಿಯಾದ ಬೆಂಟ್ಲಿ ಮೊದಲ ಬಾರಿಗೆ 1919ರಲ್ಲಿ ಸ್ಥಾಪಿಸಲಾಯಿತು. ಅಂದಿನಿಂದ ಇಲ್ಲಿಯವರೆಗೆ ಜನಪ್ರಿಯ ಐಷಾರಾಮಿ ಕಾರು ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ.

100 ವರ್ಷಗಳಲ್ಲಿ 2 ಲಕ್ಷ ಕಾರು ಉತ್ಪಾದಿಸಿ ಹೊಸ ಮೈಲಿಗಲ್ಲು ಸಾಧಿಸಿದ ಬೆಂಟ್ಲಿ

1919ರಲ್ಲಿ ಪ್ರಾರಂಭವಾಗಿ ಇಲ್ಲಿಯವರೆಗೆ ಬೆಂಟ್ಲಿ 2 ಲಕ್ಷ ಕಾರುಗಳನ್ನು ಉತ್ಪಾದಿಸಿದೆ. ಬೆಂಟ್ಲಿ ಅತ್ಯಂತ ಪ್ರಸಿದ್ಧ ಐಷಾರಾಮಿ ಕಾರು ತಯಾರಕರಲ್ಲಿ ಒಬ್ಬರು ಮತ್ತು ಇದು ಇಂಗ್ಲೆಂಡ್‌ನಲ್ಲಿದೆ. ಬೆಂಟ್ಲಿ ಕಂಪನಿಯು ಸುಮಾರು 68 ವಿವಿಧ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.ಬೆಂಟ್ಲಿ 100 ವರ್ಷಗಳ ಕಾಲಾವಧಿಯಲ್ಲಿ ಬ್ಲೋವರ್, ಅರ್ನೇಜ್, ಮುಲ್ಸನ್ನೆ, ಕಾಂಟಿನೆಂಟಲ್ ಜಿಟಿ, ಮುಂತಾದ ಹಲವಾರು ಅದ್ಭುತ ಕಾರುಗಳನು ತಯಾರಿ ಮಾರುಕಟ್ಟೆಗೆ ಪರಿಚಯಿಸಿದೆ.

100 ವರ್ಷಗಳಲ್ಲಿ 2 ಲಕ್ಷ ಕಾರು ಉತ್ಪಾದಿಸಿ ಹೊಸ ಮೈಲಿಗಲ್ಲು ಸಾಧಿಸಿದ ಬೆಂಟ್ಲಿ

2003ರಲ್ಲಿ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರನ್ನು ಬಿಡುಗಡೆಗೊಳಿಸಿತು. ಇದನ್ನು ಮೊದಲ ಆಧುನಿಕ ಆಧುನಿಕ ಬೆಂಟ್ಲಿ ಎಂದು ಪರಿಗಣಿಸಲಾಗುತ್ತದೆ ಮತ್ತು ಅಂದಿನಿಂದ ಬ್ರ್ಯಾಂಡ್‌ನ ಮಾರಾಟವು ಗಗನಕ್ಕೇರಿತು. ಬೆಂಟ್ಲಿ 2,00,000 ಕಾರುಗಳಲ್ಲಿ 1,55,582 ಕಾರುಗಳು ಕಾಂಟಿನೆಂಟಲ್ ಜಿಟಿ ಆಗಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

100 ವರ್ಷಗಳಲ್ಲಿ 2 ಲಕ್ಷ ಕಾರು ಉತ್ಪಾದಿಸಿ ಹೊಸ ಮೈಲಿಗಲ್ಲು ಸಾಧಿಸಿದ ಬೆಂಟ್ಲಿ

ಬೆಂಟ್ಲಿ ಕಂಪನಿಯ ಅಧ್ಯಕ್ಷ ಮತ್ತು ಸಿಇಒ ಆಡ್ರಿಯನ್ ಹಾಲ್ಮಾರ್ಕ್ ಅವರು ಮಾತನಾಡಿ, 1919ರಲ್ಲಿ ಸ್ಥಾಪನೆಯಾದಾಗಿನಿಂದ ಬೆಂಟ್ಲಿ ಅಸಾಧಾರಣ ಪ್ರಯಾಣದಲ್ಲಿ 2 ಲಕ್ಷ ಕಾರುಗಳ ಉತ್ಪಾದಿಸುವ ಮೂಲಕ ಮಹತ್ತರ ಮೈಲಿಗಲ್ಲು ತಲುಪಿದೆ.ನಾವು ನಮ್ಮ ಬಿಯಾಂಡ್ 100 ತಂತ್ರವನ್ನು ಅನುಸರಿಸುವ ಮೂಲಕ ಜಾಗತಿಕ ನಾಯಕರನ್ನಾಗಿ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದ್ದಾರೆ.

100 ವರ್ಷಗಳಲ್ಲಿ 2 ಲಕ್ಷ ಕಾರು ಉತ್ಪಾದಿಸಿ ಹೊಸ ಮೈಲಿಗಲ್ಲು ಸಾಧಿಸಿದ ಬೆಂಟ್ಲಿ

ಇನ್ನು ಬೆಂಟ್ಲಿ ಕಂಪನಿಯು ಪೆಟ್ರೋಲ್ ಹಾಗೂ ಡೀಸೆಲ್ ಚಾಲಿತ ವಾಹನಗಳ ಉತ್ಪಾದನೆಯನ್ನು ಶೀಘ್ರದಲ್ಲಿಯೇ ಸ್ಥಗಿತಗೊಳಿಸುವುದಾಗಿ ತಿಳಿಸಿದೆ. ಕಂಪನಿಯ ಈ ನಿರ್ಧಾರವು ಗ್ರಾಹಕರಿಗೆ ಅಚ್ಚರಿಯನ್ನುಂಟು ಮಾಡಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

100 ವರ್ಷಗಳಲ್ಲಿ 2 ಲಕ್ಷ ಕಾರು ಉತ್ಪಾದಿಸಿ ಹೊಸ ಮೈಲಿಗಲ್ಲು ಸಾಧಿಸಿದ ಬೆಂಟ್ಲಿ

ಇಂಧನ ಚಾಲಿತ ವಾಹನಗಳ ಉತ್ಪಾದನೆಯನ್ನು ಶೀಘ್ರದಲ್ಲೇ ಸ್ಥಗಿತಗೊಳಿಸುವುದಾಗಿ ಕಂಪನಿ ತಿಳಿಸಿದೆ. ಪೆಟ್ರೋಲ್ ಹಾಗೂ ಡೀಸೆಲ್ ಚಾಲಿತ ವಾಹನಗಳ ಬದಲು ಎಲೆಕ್ಟ್ರಿಕ್ ವಾಹನಗಳನ್ನು ಮಾತ್ರ ಉತ್ಪಾದಿಸುವುದಾಗಿ ಬೆಂಟ್ಲಿ ಹೇಳಿದೆ.

100 ವರ್ಷಗಳಲ್ಲಿ 2 ಲಕ್ಷ ಕಾರು ಉತ್ಪಾದಿಸಿ ಹೊಸ ಮೈಲಿಗಲ್ಲು ಸಾಧಿಸಿದ ಬೆಂಟ್ಲಿ

2030ರ ವೇಳೆಗೆ ಈ ಯೋಜನೆಯನ್ನು ಜಾರಿಗೆ ತರುವುದಾಗಿ ಕಂಪನಿ ಹೇಳಿದೆ. ಈ ಹಿಂದೆ 2026ರ ವೇಳೆಗೆ ಹೈಬ್ರಿಡ್ ಕಾರುಗಳನ್ನು ಬಿಡುಗಡೆಗೊಳಿಸುವುದಾಗಿ ಬೆಂಟ್ಲಿ ಕಂಪನಿ ಘೋಷಿಸಿತ್ತು. ಸಂಪೂರ್ಣ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆ ಮಾಡಲು ಯೋಜಿಸಿರುವುದಾಗಿ ಬೆಂಟ್ಲಿ ಹೇಳಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

100 ವರ್ಷಗಳಲ್ಲಿ 2 ಲಕ್ಷ ಕಾರು ಉತ್ಪಾದಿಸಿ ಹೊಸ ಮೈಲಿಗಲ್ಲು ಸಾಧಿಸಿದ ಬೆಂಟ್ಲಿ

ವಿಶ್ವಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಪ್ರಪಂಚದ ಬಹುತೇಕ ಎಲ್ಲಾ ಪ್ರಮುಖ ದೇಶಗಳು ಜನರಿಗೆ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವಂತೆ ಉತ್ತೇಜನ ನೀಡುತ್ತಿವೆ.

100 ವರ್ಷಗಳಲ್ಲಿ 2 ಲಕ್ಷ ಕಾರು ಉತ್ಪಾದಿಸಿ ಹೊಸ ಮೈಲಿಗಲ್ಲು ಸಾಧಿಸಿದ ಬೆಂಟ್ಲಿ

ಆದರೆ ಮೂಲಸೌಕರ್ಯಗಳ ಕೊರತೆ ಹಾಗೂ ದುಬಾರಿ ಬೆಲೆಯ ಕಾರಣಕ್ಕೆ ಜನರು ಎಲೆಕ್ಟ್ರಿಕ್ ವಾಹನ ಬಳಕೆಗೆ ಹಿಂದೇಟು ಹಾಕುತ್ತಿದ್ದಾರೆ. ಈ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರಗಳು ಮಾತ್ರವಲ್ಲದೆ ಕೆಲವು ವಾಹನ ತಯಾರಕ ಕಂಪನಿಗಳು ಸಹ ಮುಂದಾಗಿದೆ.

100 ವರ್ಷಗಳಲ್ಲಿ 2 ಲಕ್ಷ ಕಾರು ಉತ್ಪಾದಿಸಿ ಹೊಸ ಮೈಲಿಗಲ್ಲು ಸಾಧಿಸಿದ ಬೆಂಟ್ಲಿ

ಬೆಂಟ್ಲಿ ಕಂಪನಿಯ ಈ ನಿರ್ಧಾರವು ಕೆಲವರಿಗೆ ಆಘಾತವನ್ನುಂಟು ಮಾಡಿರಬಹುದಾದರೂ, ಪರಿಸರ ಸ್ನೇಹಿ ವಾಹನಗಳಿಗೆ ಆದ್ಯತೆ ನೀಡಲು ಈ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹಲವರು ಶ್ಲಾಘನೆ ಮಾಡಿದ್ದಾರೆ.. ಇನ್ನು ಬೆಂಟ್ಲಿ ಕಾರುಗಳು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಉತ್ತಮ ಬೇಡಿಯೊಂದಿಗೆ ಮಾರಾಟವಾಗುತ್ತಿದೆ.

Most Read Articles

Kannada
English summary
Bentley Produces 2,00,000 Cars; Celebrates Landmark Milestone. Read In Kannada.
Story first published: Monday, March 29, 2021, 21:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X